ಅಡೂರ್ : ಸಂಪ್ರದಾಯಗಳ ಮಿಶ್ರಣ
ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿರುವ ಅಡೂರ್ ಸಂಸ್ಕೃತಿ, ಮಂದಿರಗಳು, ಹಬ್ಬ ಮತ್ತು ಇಲ್ಲಿರುವ ಕೆಲವು ಪ್ರದೇಶಗಳಿಂದಾಗಿ ಸಾಂಪ್ರದಾಯಿಕ ನಗರ. ತಿರುವನಂತಪುರಂನಿಂದ 100 ಕಿ.ಮೀ. ಮತ್ತು ಎರ್ನಕುಲಂನಿಂದ 140 ಕಿ.ಮೀ. ದೂರದಲ್ಲಿರುವ ಅಡೂರ್ ಎರಡೂ ನಗರಗಳಿಗೆ ರಹದಾರಿ. ಹಲವಾರು ಪುರಾತನ ಮಂದಿರಳಿಂದಾಗಿಯೇ ಅಡೂರ್ ಪ್ರಸಿದ್ದಿ ಪಡೆದಿದೆ. ನಗರದ ವಿವಿಧ ಭಾಗಗಳಲ್ಲಿರುವ ಹಲವಾರು......
ಅಗರ್ತಲಾ - ಅರಮನೆ ಮತ್ತು ದೇವಾಲಯಗಳ ನೆಲೆ /ಭೂಮಿ
ಬಹಳಷ್ಟು ಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಬೆಟ್ಟದ ತಪ್ಪಲನ್ನು ಏರುವುದು, ಚಾರಣ ಇಂತಹ ಚಟುವಟಿಕೆಗಳಲ್ಲಿ ಇನ್ನಿಲ್ಲದ ಆಸಕ್ತಿ. ಅದಕ್ಕಾಗಿ ಅವರು ಯಾವುದೇ ಸ್ಥಳಕ್ಕೆ ಹೋಗಲು ಹಿಂಜರಿಯುವುದಿಲ್ಲ. ಇಂತಹ ಸಾಹಸಿಗಳಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ನಮ್ಮ ಸ್ಥಳದ ಆಯ್ಕೆ, ತ್ರಿಪುರಾದ ಅಗರ್ತಲಾ. ಇಲ್ಲಿ ಸಾಕೆಂದರೂ ಮುಗಿಯದಷ್ಟು ಪ್ರವಾಸಿ ತಾಣಗಳಿವೆ! ಮತ್ತೆ......
ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕಟ್ಟಡ. ಹಾಗೆಂದು ಇಲ್ಲಿ ಕೇವಲ ತಾಜ್ ಮಹಲ್ ಮಾತ್ರ ಇಲ್ಲ. ಆಗ್ರಾದಲ್ಲಿ ತಾಜ್ ಮಹಲ್ ಹೊರತಾಗಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳು......
ಅಗುವಾಡಾ : ಕೋಟೆಗಳು ಹಾಗು ಕಡಲ ತೀರಗಳು
ಭಾರತದಲ್ಲಿ ಸಮರ್ಪಕವಾಗಿ ನಿರ್ವಹಿಸಲ್ಪಡುತ್ತಿರುವ ಪಾರಂಪರಿಕ ಕಟ್ಟಡಗಳಲ್ಲಿ ಅಗುವಾಡಾ ಕೋಟೆಯು ಒಂದಾಗಿದೆ. 17 ನೇ ಶತಮಾನದಲ್ಲಿ ಪೋರ್ಚುಗೀಸರು ಡಚ್ ಹಾಗು ಮರಾಠರ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಇದರ ನಿರ್ಮಾಣವನ್ನು ಮಾಡಿದ್ದು, ಇಂದು ಇದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕೋಟೆ ಹಾಗು ಅದರ ದೀಪಗೃಹದಲ್ಲಿ ನಿಂತು ನೋಡಿದಾಗ ಅರೇಬಿಯನ್ ಸಮುದ್ರ,......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ ಉದ್ಯಮಶೀಲತೆಯನ್ನು ಬೆಳಗಿದ ಗುಜರಾತಿಗಳನ್ನು ನೋಡಿದರೆ ಮತ್ತೊಂದೆಡೆ ಸತ್ಯಾಗ್ರಹ ಹಾಗು ಅಹಿಂಸೆ ಎಂಬ ಆಯುಧಗಳನ್ನು ಜಗತ್ತಿಗೆ ಪರಿಚಯಿಸಿದ ಗಾಂಧೀಜಿಯವರನ್ನು ನಾವು......
ಅಹ್ಮದ್ ನಗರ - ಇತಿಹಾಸದ ಗರ್ಭದಲ್ಲೊಂದು ಪಯಣ
ಅಹ್ಮದ್ ನಗರವು ಮಹಾರಾಷ್ಟ್ರ ರಾಜ್ಯದ ಅಹ್ಮದ್ನಗರ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಸಿನಾ ನದಿಯ ಪಶ್ಚಿಮ ದಂಡೆಯ ಮೇಲಿರುವ ಈ ಪ್ರದೇಶವು ಸ್ವತಃ ಮಹಾರಾಷ್ಟ್ರದ ಅತಿದೊಡ್ಡ ಜಿಲ್ಲೆಯಾಗಿದೆ. ಅಹ್ಮದ್ನಗರವು ಮಹಾರಾಷ್ಟ್ರದ ಕೇಂದ್ರಸ್ಥಾನದಲ್ಲಿದ್ದುದರಿಂದ ಪುಣೆ ಮತ್ತು ಔರಂಗಾಬಾದ್ ನಿಂದ ಸಮಾನ ಅಂತರದಲ್ಲಿದೆ. ಅಹ್ಮದ್ ನಗರಕ್ಕೆ ಔರಂಗಾಬಾದ್, ನಾಸಿಕ್ ಗಳು......
ಐಹೊಳೆ-ವಾಸ್ತುಶಿಲ್ಪಗಳ ತೊಟ್ಟಿಲು
ಐಹೊಳೆಯ ವಾಸ್ತುಶಿಲ್ಪ ಎಂತಹ ಧಾರ್ಮಿಕರನ್ನು ಹಾಗೂ ಪುರಾತನ ಶೋಧಕರನ್ನೂ ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಈ ಪಟ್ಟಣವು ಚಾಲುಕ್ಯರು ನಿರ್ಮಿಸಿರುವ ಹಲವು ದೇವಾಲಯಗಳನ್ನು ಒಳಗೊಂಡಿದೆ . ನಮ್ಮ ಕಣ್ಣಿಗೆ ಕಾಣುವ ಹಾಗೆ ಐಹೊಳೆಯಲ್ಲಿನ ದೇವಲಯಗಳು ಚಾಲುಕ್ಯರ ಪರಿಶ್ರಮದಿಂದ ಅಂದಿಗೆ ವಿಕಸನಗೊಳ್ಳುವ ಹಾದಿಯಲ್ಲಿ ಚಾಲುಕ್ಯರ ಪ್ರತ್ಯೇಕ ವಾಸ್ತುಶಿಲ್ಪ ಶೈಲಿಗೆ......
ಐಜಾಲ್ : ಎತ್ತರದಲ್ಲಿರುವ ಸುಂದರ ಪ್ರದೇಶ
ಭಾರತ ದೇಶದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಒಂದಾದ ಮಿಜೋರಾಮ್ ರಾಜ್ಯಕ್ಕೆ ಐಜಾಲ್ ರಾಜಧಾನಿ. ಬೆಟ್ಟ, ಕಣಿವೆ, ಇಳಿಜಾರು ಪ್ರದೇಶದ ಮೇಲೆ ಸುಂದರವಾದ ಐಜಾಲ್ ನಗರ ಆವರಿಸಿದೆ. ಒಂದು ಶತಮಾನ ಹಳೆಯ ಇತಿಹಾಸ ಹೊಂದಿರುವ ಈ ರಾಜಧಾನಿ ನಗರ ಸಮುದ್ರ ಮಟ್ಟದಿಂದ ಸುಮಾರು 1132 ಮೀಟರ್ ಎತ್ತರದಲ್ಲಿದೆ. ಈ ನಗರದ ಉತ್ತರ ಭಾಗಕ್ಕೆ ದುರ್ತಲಾಂಗ್ ಶಿಖರವಿದೆ. ಈ ನಗರದಲ್ಲಿ ಹರಿಯುವ......
ಅಜಂತಾ - ವಿಶ್ವದ ಒಂದು ಪಾರಂಪರಿಕ ತಾಣ
ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿದೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಎಲ್ಲೋರ ಗುಹೆಗಳ ಜೊತೆಗೆ ಅಜಂತ ಗುಹೆಗಳೂ ಸಹ ಪ್ರಪಂಚದ ಒಂದು ಪ್ರಸಿದ್ದ ಪಾರಂಪರಿಕ ಕ್ಷೇತ್ರವೆಂದು ಯುನೆಸ್ಕೋ ಸಂಸ್ಥೆಯಿಂದ......
ಅಜ್ಮೇರ್ - ಇತಿಹಾಸದ ಒಂದು ಅದ್ಭುತ ತುಣುಕು
ಅಜ್ಮೇರ್, ರಾಜಸ್ಥಾನ ರಾಜ್ಯದ ಒಂದು ಜಿಲ್ಲೆಯಾಗಿದ್ದು, ರಾಜ್ಯದ ಐದನೇ ದೊಡ್ಡ ನಗರವಾಗಿದೆ ಮತ್ತು ರಾಜಧಾನಿ ಜೈಪುರದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ. ಇದನ್ನು ಹಿಂದೆ ಅಜ್ಮೇರೆ ಅಥವಾ ಅಜಯ್ಮೇರು ಎಂದು ಕರೆಯಲಾಗುತ್ತಿತ್ತು. ನಗರವು ಅರಾವಳಿ ಪರ್ವತಗಳಿಂದ ಸುತ್ತುವರಿದಿದೆ. ದೇಶದ ಅತಿ ಹಳೆಯ ಕೋಟೆಯಾದ ತಾರಾಗಢ ಕೋಟೆಯು, ಅಜ್ಮೇರದ ಆಕರ್ಷಕ ತಾಣವಾಗಿದೆ. ಏಳನೇ......
ಅಲಿಬಾಗ್ - ಸಣ್ಣ ಹಾಗೂ ಸುಂದರ ನಗರ
ಭಾರತ ವೈಶಿಷ್ಟ್ಯವನ್ನು ತುಂಬಿಕೊಂಡ ರಾಷ್ಟ್ರ. ಇಲ್ಲಿ ಎಲ್ಲವೂ ಇದೆ. ಸ್ಥಿರವಾಗಿ ನಿಂತ ಐತಿಹಾಸಿಕ ಕಟ್ಟಡಗಳಿಂದ ಹಿಡಿದು ಮನೋಲ್ಲಾಸ ನೀಡುವ ಕಡಲ ತೀರಗಳವರೆಗೆ ಸಹಸ್ರಾರು ಆಕರ್ಷಣೆಗಳಿವೆ. ಇಂತಹ ಹಲವಾರು ಸೌಂದರ್ಯಗಳನ್ನು ತನ್ನದಾಗಿಸಿಕೊಂಡ ಭಾರತದ ಪ್ರತಿಯೊಂದು ಜಿಲ್ಲೆಯೂ ವಿಶೇಷ!ಇಂತಹ ವಿಶೇಷಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಶಿವಾಜಿಯ ಆಳ್ವಿಕೆಯಿಂದ ಹಿಡಿದು......
ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು
ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯವು ಈ ಜಿಲ್ಲೆಯಲ್ಲಿದೆ. ಇಲ್ಲಿಯೇ ಫ್ರೆಂಚರು ಮತ್ತು ಬ್ರಿಟೀಷರ ನಡುವಿನ ಇತಿಹಾಸ ಪ್ರಸಿದ್ಧ ಅಲೀ ಘರ್ ಯುದ್ಧವು ನಡೆದಿತ್ತು. ಅಲೀಗಢವನ್ನು......
ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ
ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ ವಿಶೇಷವಾದ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ಅಲಹಾಬಾದ್ ಪ್ರಯಾಗ್ ಎಂದು ಕಲೆಯಲ್ಪಡುತ್ತಿತ್ತು. ಇದರ ಬಗ್ಗೆ ಭಾರತದ ಧರ್ಮಗ್ರಂಥಗಳಲ್ಲಿ, ಅಂದರೆ......
ಅಲೆಪ್ಪಿ ಎಂಬ ಪೂರ್ವದ ವೆನಿಸ್!
ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ ದಟ್ಟ ಕಾನು... ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಅಗಾಧ ಜಲಧಿ... ಹಿನ್ನೀರು! ಈ ಎಲ್ಲವೂ ಒಂದೇ ಕಡೆ ಕಲೆತು ಆಗಿದ್ದು ಅಲ್ಲೆಪ್ಪಿ. ಈ ಸೌಂದರ್ಯಕ್ಕೆ......
ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ
ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೈಸರ್ಗಿಕ ಸೌಂದರ್ಯ ಎಂತಹವರನ್ನಾದರೂ ಮೌನಿಯನ್ನಾಗಿಸಿ ಬಿಡುತ್ತದೆ! ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ.......
ಅಲುವಾ - ಹಬ್ಬಗಳ ಹೆಬ್ಬಾಗಿಲು
ಕೊಚ್ಚಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಅಲುವಾ ಶಿವ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಶಿವರಾತ್ರಿಯ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಆರು ದಿನಗಳವರೆಗೆ ಉತ್ಸವವು ಜಾರಿಯಲ್ಲಿರುತ್ತದೆ. ಇದನ್ನು ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ. ದೇವತೆಗಳು ಹಾಗೂ ಅಸುರರು ಅಮರತ್ವದ ಅಮೃತ ಅರಸಿಕೊಂಡು......
ಅಲ್ವಾರ್ – ಕೌತುಕಗಳ ಸಮ್ಮಿಶ್ರಣ
ರಾಜಸ್ತಾನ ರಾಜ್ಯದ ಅರಾವಳಿ ಶ್ರೇಣಿಯ ಒರಟಾದ ಕಲ್ಲುಗಳ ಮಧ್ಯೆ ಇರುವ ಪ್ರದೇಶ ಅಲ್ವಾರ್. ಈ ಪ್ರದೇಶವು ಅಲ್ವಾರ್ಣ ಜಿಲ್ಲೆಯ ಪ್ರಮುಖ ಕೇಂದ್ರವಾಗಿದೆ. ಪುರಾಣದ ಪ್ರಕಾರ ಇದನ್ನು ಮತ್ಸ್ಯ ದೇಶ ಎಂದು ಕರೆಯಲಾಗುತ್ತದೆ. ಪಾಂಡವರು ತಮ್ಮ ವನವಾಸದ 13ನೇ ವರ್ಷವನ್ನು ಇಲ್ಲೇ ಕಳೆದರು ಎಂಬುದು ಪ್ರತೀತಿ. ಐತಿಹಾಸಿಕವಾಗಿ ಈ ಪ್ರದೇಶವು ಮೇವಾರರ್ದ ಎಂದು ಕರೆಯಲ್ಪಡುತ್ತದೆ.......
ಅಮರಾವತಿ: ಇತಿಹಾಸದೊಳಗೊಂದು ನೆನಪಿನ ನಡಿಗೆ
ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಂಡೆಯ ಮೇಲೆ ಅಮರಾವತಿಯೆಂಬ ಪುಟ್ಟ ಪಟ್ಟಣವಿದೆ. ಇಲ್ಲಿರುವ ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಈ ಸ್ಥಳ ಗಮನ ಸೆಳೆಯುತ್ತದೆ. ಅಮರಾವತಿಯಲ್ಲಿರುವ ಬೌದ್ಧ ಸ್ತೂಪವೂ ಕೂಡ ಪ್ರಸಿದ್ದ. ಮೌರ್ಯ ಸಾಮ್ರಾಜ್ಯ ಸ್ಥಾಪನೆಗೂ ಮುಂಚೆ ಈ ಬೌದ್ಧ ಸ್ತೂಪವನ್ನು ಕಟ್ಟಲಾಗಿದೆ ಎಂಬ ನಂಬಿಕೆಯಿದೆ. ನಂತರ ಈ ಸ್ಥಳ......
ಅಂಬೋಲಿ - ಪ್ರಮುಖವಾದ ಐತಿಹಾಸಿಕ ಕೇಂದ್ರ
ಭಾರತದಲ್ಲಿ ಬ್ರಿಟೀಷರು ಆಡಳಿತ ನಡೆಸುತಿದ್ದ ಸಂದರ್ಭದಲ್ಲಿ ಅಂಬೋಲಿ ಪ್ರದೇಶವನ್ನು ರಕ್ಷಣಾ ಸೈನ್ಯದ ತರಬೇತಿ ಕೇಂದ್ರವನ್ನಾಗಿ ಬಳಕೆ ಮಾಡುತ್ತಿದ್ದರು ಹಾಗು ಇಲ್ಲಿಂದ ಕೇಂದ್ರ ಹಾಗೂ ದಕ್ಷಿಣ ಭಾರತದ ಪ್ರದೇಶಗಳಿಗೆ ಸೇನೆಯನ್ನು ಕಳುಹಿಸಲಾಗುತ್ತಿತ್ತು.1880 ರ ಸುಮಾರಿನಲ್ಲಿ ಅಂಬೋಲಿಯನ್ನು ಬೆಟ್ಟ ಪ್ರದೇಶವೆಂದು ಗುರುತಿಸಲಾಯಿತು. ಬ್ರಿಟಿಷರಿಗೂ ಮೊದಲು ಇಲ್ಲಿನ ಸ್ಥಳೀಯ......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು. ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಈ ನಗರದ ಕೆಲವು ಪೂರ್ವ ಭಾಗಗಳು ವಾರ್ಧಾ ಕಣಿವೆಯಲ್ಲಿ ಇವೆ. ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮ್ರಾವತಿಯು 12,626......
ಅಮೃತಸರ ಪ್ರವಾಸೋದ್ಯಮ - ದಿ ಕ್ರೇಡಲ್ ಆಫ್ ಗೋಲ್ಡನ್ ಟೆಂಪಲ್
ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ ನಂತರ ಹೆಸರಿಸಲಾಗಿದೆ. 16ನೇ ಶತಮಾನದಲ್ಲಿ 4ನೇ ಸಿಖ್ ಗುರುವಿನಿಂದ ಈ ನಗರ ಸ್ಥಾಪಿತಗೊಂಡಿತು. ಅವರೇ ಗುರು ರಾಮದಾಸರು. ಅವರ ನಂತರದ......
ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ
ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ ಕ್ರಾಂತಿಯ ಪರಿಣಾಮವೆಂದರೆ ಭಾರತ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ಅತಿ ದೊಡ್ಡ ದೇಶವಾಯಿತು. ಆನಂದ್ ನಗರ ಗುಜರಾತಿನ ರಾಜಧಾನಿ......
ಅಂತರಗಂಗೆ – ಅತ್ತ್ಯುನ್ನತ ಸಾಹಸಕ್ಕೆ ಕಟ್ಟಕಡೆಯ ಸ್ಥಳ
ಎಂತಹ ಸಾಹಸ ಪ್ರಿಯರ ಮನವನ್ನೇ ಆಗಲಿ ಸೆಳೆಯುವ ಶಕ್ತಿಯುಳ್ಳ ಸ್ಥಳ ಅಂತರಗಂಗೆ. ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಶಿಖರಗಳ ಮೇಲಿರುವ ಸದಾ ಹರಿವ ಸಣ್ಣ ಹೊಳೆಯಿಂದ ಅಂತರಗಂಗೆ ಎಂಬ ಹೆಸರು ಬಂದಿದೆ. ಬೃಹತ್ತಾದ ಬಂಡೆಗಳ ರಚನೆಗಳಿಂದ ಸೃಷ್ಟಿಯಾಗಿರುವ ಸಣ್ಣ ಮತ್ತು ದೊಡ್ಡ ಗುಹೆಗಳ ನಡುವೆ ಈ ಝರಿಯೂ ಹರಿಯುತ್ತಾ ಸಾಗುತ್ತದೆ. ಈ ಪರ್ವತ ಶ್ರೇಣಿಯ ಅಡಿಯಲ್ಲಿ......
ಅರಕು ಕಣಿವೆ - ಆಂಧ್ರ ಪ್ರದೇಶದ ಒಂದು ಗಿರಿಧಾಮ
ಅರಕು ಕಣಿವೆಯು ದಕ್ಷಿಣ ಭಾರತದಲ್ಲಿರುವ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಈ ಪಟ್ಟಣವು ಪೂರ್ವ ಘಟ್ಟದ ಪ್ರಶಾಂತವಾದ ಹಾಗು ಸುಂದರವಾದ ಪ್ರದೇಶದಲ್ಲಿ ನೆಲೆಗೊಂಡಿದ್ದು ತನ್ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಶ್ರೀಮಂತಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ಗಿರಿಧಾಮವು ಯಾವುದೇ ರೀತಿಯಲ್ಲಿ......
ಅರಿಟಾರ್ - ಮಿತಿಯಿಲ್ಲದ ಸೌಂದರ್ಯ !
ಕೆಲವು ಸ್ಥಳಗಳು ದೈವದತ್ತ. ಯಾಕೆಂದರೆ ಇಂತಹ ಸ್ಥಳಗಳಲ್ಲಿರುವ ಹಸಿರು ಸಿರಿ ಎಲ್ಲರ ಮೈಮನ ತಣಿಸುವಂತದ್ದು. ಇನ್ನೂ ಕೆಲವು ಸ್ಥಳಗಳು ಪ್ರಕೃತಿಯ ತುಂಬಿದ ಒಡಲು. ಇಂತಹ ಅದ್ಭುತ ಸ್ಥಳಗಳಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬನ್ನಿ, ಸಮೃದ್ಧ ಸೌಂದರ್ಯ ನಗರಿ ಅರಿಟಾರ್ ನ್ನೊಮ್ಮೆ ಸುತ್ತಿ ಬರೋಣ! ತನ್ನ ಸ್ವಾಭಾವಿಕ ಸೌಂದರ್ಯ ಮತ್ತು ಶ್ರೀಮಂತ......
ಅರ್ಕಿ - ದೇವಾಲಯಗಳು ಮತ್ತು ಗುಹೆಗಳ ನಡುವೆ
ಹಿಮಾಚಲ ಪ್ರದೇಶದ ಪ್ರವಾಸೀತಾಣಗಳ ಪಟ್ಟಿಯಲ್ಲಿ ಸೋಲನ್ ಜಿಲ್ಲೆಯಲ್ಲಿರುವ ಅರ್ಕಿ ಕೂಡಾ ಒಂದು. ಜಿಲ್ಲೆಯ ಅತೀ ಸಣ್ಣ ಪಟ್ಟಣ ಇದಾಗಿದ್ದರೂ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಹಲವು ವಿಶೇಷಗಳ ತವರಾಗಿದೆ. ಇತಿಹಾಸದ ಪುಸ್ತಕವನ್ನು ಮಗುಚಿದಾಗ ಈ ಪುಟ್ಟ ಪಟ್ಟಣವನ್ನು ಕ್ರಿ.ಶ 1660 -65 ರ ನಡುವಿನ ಅವಧಿಯಲ್ಲಿ ಬಗಲ್ ರಾಜ್ಯವನ್ನು ಆಳುತ್ತಿದ್ದ ರಾಜಾ ಅಜಯ್ದೇವ......
ಔರಂಗಾಬಾದ್ – ಇತಿಹಾಸ ಪುನರುಜ್ಜೀವನಗೊಳ್ಳುವ ಸ್ಥಳ.
ಔರಂಗಾಬಾದ್ ಮಹಾರಾಷ್ಟ್ರದ ಪ್ರಮುಖ ನಗರವಾಗಿದ್ದು, ಮುಘಲ್ ರ ಪ್ರಸಿದ್ಧ ದೊರೆ ಔರಂಗಜೇಬನಿಂದ ತನ್ನ ಹೆಸರು ಪಡೆಯಿತು. ಔರಂಗಬಾದ್ ಎಂದರೆ ’ಸಾಮ್ರಾಟನಿಂದ ನಿರ್ಮಾಣವಾದುದು’ ಎಂದರ್ಥ. ಔರಂಗಬಾದ್ ನಗರವು ಮಹಾರಾಷ್ಟ್ರ ರಾಜ್ಯದ ಉತ್ತರಭಾಗದಲ್ಲಿ ನೆಲೆಸಿದ್ದು, ಭಾರತದ ಪಶ್ಚಿಮ ಭಾಗದಲ್ಲಿ ಬರುತ್ತದೆ. ಖಾಮ್ ನದಿಯ ದಂಡೆಯಲ್ಲಿರುವ ಈ ಊರು ಜಿಲ್ಲಾಕೇಂದ್ರವಾಗಿ ಕಾರ್ಯ......
ಔರಂಗಾಬಾದ್ : ಬಿಹಾರಿನ ಅತ್ಯಂತ ಆಕರ್ಷಣೀಯ ನಗರ
ಔರಂಗಾಬಾದ್ ಬಿಹಾರಿನ ಅತ್ಯಂತ ಆಕರ್ಷಣೀಯ ನಗರಗಳಲ್ಲೊಂದು. ಔರಂಗಾಬಾದ್ ನಗರವು ಭವ್ಯ ಚಾರಿತ್ರಿಕ ಇತಿಹಾಸಗಳನ್ನು ಹೊಂದಿದೆ. ಔರಂಗಾಬಾದ್ ನಗರದ ಹಿಂದಿನ ಇತಿಹಾಸವನ್ನು ಅವಲೋಕಿಸಿದರೆ ಪ್ರವಾಸಿಗರಿಗೆ ನಗರದ ವೈಭವದ ಇತಿಹಾಸದ ಮೆಲುಕು ಹಾಕುವಂತಾಗುತ್ತದೆ. ಈ ನಗರವು ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಡಾ.ರಾಜೇಂದ್ರ ಪ್ರಸಾದ್ ಇಲ್ಲಿ ಬಹು......
ಹಿಂದೂಗಳ ಪವಿತ್ರ ನಗರ ಅಯೋಧ್ಯಾ
ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ ಜನ್ಮಸ್ಥಳವಾಗಿದೆ. ರಾಮಾಯಣದಲ್ಲಿ ರಾಮನ ಬಗ್ಗೆ ಕಥೆಯಿದ್ದು, ಇದರಲ್ಲಿ ಆತನ ಹುಟ್ಟಿನಿಂದ ಹಿಡಿದು 14 ವರ್ಷದ ವನವಾಸ ಹಾಗೂ ಲಂಕೆಯನ್ನು ಗೆದ್ದು......
ಬಾದಾಮಿ ಅಥವಾ ವಾತಾಪಿ – ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ
ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಒಂದು ಪ್ರಾಚೀನ ಪಟ್ಟಣವಾಗಿದೆ. ಈ ಪಟ್ಟಣವು ವಾತಾಪಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೂ ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿ ಅಥವಾ ವಾತಾಪಿಯ ಹಿಂದಿನ ಇತಿಹಾಸ ಬಾದಾಮಿಯು 2 ಶತಮಾನಗಳಿಗೂ ಹೆಚ್ಚು ಕಾಲ ಪೂರ್ವರ ಅಥವಾ ಮೊಟ್ಟ ಮೊದಲ ಚಾಲುಕ್ಯರ......