Search
 • Follow NativePlanet
Share
ಮುಖಪುಟ » ಸ್ಥಳಗಳು» ಅಲಿಬಾಗ್

ಅಲಿಬಾಗ್ - ಸಣ್ಣ ಹಾಗೂ ಸುಂದರ ನಗರ

27

ಭಾರತ ವೈಶಿಷ್ಟ್ಯವನ್ನು ತುಂಬಿಕೊಂಡ ರಾಷ್ಟ್ರ. ಇಲ್ಲಿ ಎಲ್ಲವೂ ಇದೆ. ಸ್ಥಿರವಾಗಿ ನಿಂತ ಐತಿಹಾಸಿಕ ಕಟ್ಟಡಗಳಿಂದ ಹಿಡಿದು ಮನೋಲ್ಲಾಸ ನೀಡುವ ಕಡಲ ತೀರಗಳವರೆಗೆ ಸಹಸ್ರಾರು ಆಕರ್ಷಣೆಗಳಿವೆ. ಇಂತಹ ಹಲವಾರು ಸೌಂದರ್ಯಗಳನ್ನು ತನ್ನದಾಗಿಸಿಕೊಂಡ ಭಾರತದ ಪ್ರತಿಯೊಂದು ಜಿಲ್ಲೆಯೂ ವಿಶೇಷ!ಇಂತಹ ವಿಶೇಷಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಶಿವಾಜಿಯ ಆಳ್ವಿಕೆಯಿಂದ ಹಿಡಿದು ಬ್ರಿಟೀಷರ ವರೆಗೆ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದರೂ ಇಲ್ಲಿನ ಕಡಲ ಕಿನಾರೆಗಳು ಮಾತ್ರ ಬತ್ತದೆ, ತನ್ನ ಪರಿಶುದ್ಧತೆಯನ್ನು ಕಳೆದುಕೊಳ್ಳದೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅಲಿಬಾಗ್ ನ ಬೀಚ್ ಅನ್ನು ಇಷ್ಟಪಡದವರೆ ಇಲ್ಲ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೆ ಅದ್ಭುತ ಅನುಭವವನ್ನು ಪಡೆಯುತ್ತಾರೆ. ಇಂತಹ ಮಾಯಾನಗರಿ ಅಲಿಬಾಗ್ ಪಟ್ಟಣದ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ಮಹಾರಾಷ್ಟ್ರದ ಪಶ್ಚಿಮ ಕರಾವಳಿಯ ಒಂದು ಸಣ್ಣ ಪಟ್ಟಣ ಅಲಿಬಾಗ್. ಕೊಂಕಣ ಪ್ರದೇಶದಲ್ಲಿರುವ ಅಲಿಬಾಗ್  ರಾಯಗಡ್ ಜಿಲ್ಲಾ ವ್ಯಾಪ್ತಿಯಲ್ಲಿದೆ. ಇದು ಪ್ರಸಿದ್ಧ ಮುಂಬೈ ಮೆಟ್ರೋ ಕ್ಕೆ ಹತ್ತಿರದಲ್ಲಿದೆ. ಅಲಿ ಉದ್ಯಾನದ ನಂತರ ಈ ನಗರಕ್ಕೆ ಅಲಿಬಾಗ ಎಂದು ಹೆಸರಿಡಲಾಯಿತು. ’ಅಲಿ’ಯಲ್ಲಿ ಬಹಳಷ್ಟು ಮಾವು ಹಾಗೂ ತೆಂಗಿನ ಮರಗಳನ್ನು ನೆಡಲಾಗಿದೆ ಎಂದು ಹೇಳಲಾಗುತ್ತದೆ.

ಈ ಸ್ಥಳವು 17 ನೇ ಶತಮಾನದ ಹಿಂದೆ ಶಿವಾಜಿ ಮಹಾರಾಜನಿಂದ ಅಭಿವೃದ್ಧಿ ಹೊಂದಿದ ಮೊದಲ ಸ್ಥಳ. ನಂತರ 1852 ರಲ್ಲಿ ಅಲಿಬಾಗ, ಬೆನಿ ಇಸ್ರೇಲಿ ಯಹೂದಿಗಳ ನೆಲೆಯಾಯಿತು.

ಐತಿಹಾಸಿಕವಾಗಿ ಹೇಳುವುದಾದರೆ

ಇಲ್ಲಿರುವ ಕುಲಾಬಾ(ಕೊಲಾಬಾ) ಕೋಟೆಯು, ಈ ಹಿಂದೆ ಮರಾಠರು ಭಾರತದ ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ. ಶಿಥಿಲ ಸ್ಥಿತಿಯಲ್ಲಿರುವ ಕುಲಾಬಾ ಕೋಟೆಯು ಅಲಿಬಾಗ್ ಬೀಚ್ ನಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಸಮುದ್ರದ ಅಲೆಗಳು ಕಡಿಮೆ ಇರುವ ಸಂದರ್ಭದಲ್ಲಿ ಕೋಟೆಗೆ ಭೇಟಿ ನೀಡಬಹುದು.

ಖಾಂಡೇರಿ ಕೋಟೆಯು ಮೂರು ಶತಮಾನಗಳಷ್ಟು ಹಳೆಯದಾದ ಕೋಟೆಯಾಗಿದೆ. ಈ ಕೋಟೆಯು ಪೇಶ್ವಾ /ಪೇಶ್ವೆ ರಾಜವಂಶದವರಿಂದ ನಿರ್ಮಿಸಲ್ಪಟ್ಟಿತು. ಆನಂತರ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅವರಿಗೆ ಹಸ್ತಾಂತರಿಸಲಾಯಿತು.

ಇಲ್ಲಿರುವ ಕನೇಶ್ವರ ಹಾಗೂ ಸೋಮೆಶ್ವರ ಈ ಎರಡು ಪೂಜ್ಯನೀಯ ಸಾಂಪ್ರದಾಯಿಕ ದೇವಾಲಯಗಳು ಯಾತ್ರಾರ್ಥಿಗಳನ್ನು ಭಕ್ತಿ ಪರವಶರನ್ನಾಗಿ ಮಾಡುತ್ತದೆ. ಈ ಎರಡೂ ದೇವಾಲಯಗಳು ಭಗವಾನ್ ಶಿವನಿಗೆ ಮೀಸಲಾಗಿದ್ದು ಅತ್ಯದ್ಭುತ ವಿನ್ಯಾಸಗಳನ್ನು ಒಳಗೊಂಡಿದೆ.

ಈ ಸಣ್ಣ ನಗರವು ವಾಣಿಜ್ಯ ಕೇಂದ್ರಗಳ ನೆಲೆಯಾಗಿದೆ. ಸ್ಥಳೀಯರು ಕುಟೀರಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಾರೆ.

ಮಹಾರಾಷ್ಟ್ರದ ಗೋವಾ

ನಾಲ್ಕು ದಿಕ್ಕುಗಳಲ್ಲಿ ಮೂರು ದಿಕ್ಕುಗಳೂ ನೀರಿನಿಂದ ಆವೃತವಾಗಿರುವ ಅಲಿಬಾಗ ಹಲವಾರು ಸುಂದರವಾದ ಬೀಚ್ ಗಳ ತಾಣವಾಗಿದೆ. ಈ ಎಲ್ಲಾ ಬೀಚ್ ಗಳೂ ಮನಮೋಹಕವಾದ ತೆಂಗಿನ ಮರಗಳು ಹಾಗೂ ಅಡಿಕೆ ಮರಗಳಿಂದ (ತೆಂಗು-ಕಂಗು) ಸುತ್ತುವರಿದಿದ್ದು ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿವೆ. ಇದರಿಂದಾಗಿ ಇಲ್ಲಿನ ಸುತ್ತಲಿನ ಪ್ರದೇಶ ಉಷ್ಣವಲಯದ ಬೀಚ್ ನ ಅನುಭವವನ್ನು ಉಂಟುಮಾಡುತ್ತವೆ. ಇಲ್ಲಿನ ಪ್ರಕೃತಿ ಅತ್ಯುತ್ತಮವಾಗಿದೆ. ಆಧುನಿಕತೆಗೆ ಒಳಗಾಗದ ಮತ್ತು ಪರಿಶುದ್ಧವಾದ ಇಲ್ಲಿನ ಕಡಲ ಕಿನಾರೆಗಳಿಂದಾಗಿ ಇಲ್ಲಿನ ನಿಸರ್ಗ ಅತ್ಯಂತ ಸುಂದರವಾಗಿದೆ ಮತ್ತು ಅತ್ಯದ್ಭುತವಾಗಿದೆ. ಇಲ್ಲಿನ ಉಸಿರಾಡುವ ಗಾಳಿ ಪರಿಶುದ್ಧ ಹಾಗೂ ತಾಜಾತನದಿಂದ ಕೂಡಿರುತ್ತದೆ. ಈ ಬೀಚ್ ಗಳಲ್ಲಿನ ವಿಲಕ್ಷಣ/ ಅದ್ಭುತ ದೃಶ್ಯಾವಳಿಗಳು ಸ್ವರ್ಗಕಿಂತ ಕಡಿಮೆಯೇನಿಲ್ಲ!

ಅಲಿಬಾಗಿನ ಬೀಚ್ ಗಳಲ್ಲಿನ ರಮಣೀಯವಾದ ಕಪ್ಪು ಮರಳುಗಳು ಪ್ರವಾಸಿಗರಲ್ಲಿ ಆಶ್ವರ್ಯವನ್ನುಂಟುಮಾಡುತ್ತವೆ. ಕಿಹಿಮ್ ಬೀಚ್ ಹಾಗೂ ನಗೋನ್ ಬೀಚ್ ಗಳು ಬೆಳ್ಳಿ – ಬಿಳಿ ಮರಳುಗಳಿಂದ ತುಂಬಿವೆ. ಅಕ್ಷಿ ಬೀಚ್ ಇಲ್ಲಿನ ನೋಡಲೆ ಬೇಕಾದ ಇನ್ನೊಂದು ಪ್ರಮುಖ ಬೀಚ್!

ಹಲವಾರು ಜಾಹೀರಾತು, ಧಾರವಾಹಿ ಹಾಗೂ ಸಿನಿಮಾಗಳನ್ನು ಅಲಿಬಾಗ್ ನ ಈ ಬೀಚ್ ಗಳಲ್ಲಿಯೆ ಚಿತ್ರೀಕರಣ ಮಾಡಲಾಗಿದೆ. ಅನೇಕ ಬಾಲಿವುಡ್ ಸಿನಿಮಾ ತಾರೆಯರ ಬಂಗಲೆಗಳು, ತೋಟದ ಮನೆಗಳು( farmhouses ) ಗಳು ಇಲ್ಲಿದ್ದು ನೀವು ಅದೃಷ್ಟಶಾಲಿಗಳಾಗಿದ್ದಲ್ಲಿ ಇವುಗಳೊಂದರಲ್ಲಿ ಹೋಗಲು ನಿಮಗೆ ಅವಕಾಶ ದೊರೆಯಬಹುದು.

ಅಲಿಬಾಗ್ ಬೀಚ್ ಗಳ ಪಟ್ಟಣವಾದ್ದರಿಂದ ಇಲ್ಲಿನ ಸ್ಥಳೀಯ ತಿಂಡಿ ತಿನಿಸುಗಳು ಮೀನನ್ನು ಆಧರಿಸಿವೆ. ಇವುಗಳಲ್ಲಿ ಪೊಂಪರ್ಟ್ ಹಾಗೂ ಸುರಮೈ / ಸುರಮಾಯಿ ಖಾದ್ಯಗಳೊಂದಿಗೆ ಸೊಲ್ ಕದಿ (ಕಡಿ) ಭಕ್ಷ್ಯಕ್ಕೂ ಅಪಾರ ಬೇಡಿಕೆಯಿದೆ.

ನಿಮ್ಮ ಪ್ರೀತಿಪಾತ್ರರೊಂದಿಗೆ ರಜಾ ದಿನಗಳನ್ನುಕಳೆಯಲು ಅಲಿಬಾಗ್ ಬೀಚ್ ಅತ್ಯಂತ ಸೂಕ್ತವಾದ ಜಾಗ. ಬೀಚ್ ನಲ್ಲಿ ನಡೆಯುವುದು, ನೀರಿನಲ್ಲಿ ಆಟವಾಡುವುದು ಅಥವಾ ಸಂಜೆಯ ಹೊತ್ತು ಬೀಚ್ ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುವುದಕ್ಕೆ ಅಲಿಬಾಗ್ ಬೀಚ್ ಗಳೆ ಸರಿ!

ಅಲಿಬಾಗ್ ಗೆ ಹೇಗೆ ಮತ್ತು ಯಾವಾಗ ಭೇಟಿ ನೀಡಬಹುದು?

ಅಲಿಬಾಗ್ ನಲ್ಲಿ ಆತಿಥ್ಯವನ್ನು ನೀಡುವ ಹವಾಮಾನವನ್ನು ಖುಷಿಯಾಗಿ ಅನುಭವಿಸಬಹುದು. ಇಲ್ಲಿನ ತಾಪಮಾನ ಯಾವುದೆ ಸಮಯದಲ್ಲಿ ಅತಿ ಹೆಚ್ಚು ಅಥವಾ ಅತಿ ಕಡಿಮೆಯಾದ್ದದ್ದಿಲ್ಲ. ಭಾರತದ ಇತರ ಪ್ರದೇಶಗಳಲ್ಲಿರುವಂತೆ ಬೇಸಿಗೆ ಕಾಲವು ಇಲ್ಲಿ ಅಧಿಕ ಬಿಸಿಯಿಂದ ಕೂಡಿರುವುದಿಲ್ಲ. ಉಷ್ಣಾಂಶವು ಸಾಮಾನ್ಯವಾಗಿ ಗರಿಷ್ಠ 35 ಸೆ. ಡಿ ನಷ್ಟು ದಾಖಲಾಗುತ್ತದೆ. ಮಳೆಗಾಲವು ಅಧ್ಭುತವಾದ ಅನುಭವವನ್ನು ಕೊಡುತ್ತದೆ. ಆದರೆ ಸಾಮಾನ್ಯವಾಗಿ ಇಲ್ಲಿನ ಎಲ್ಲಾ ಪ್ರದೇಶಗಳನ್ನು ನೋಡಲು/ಅನ್ವೇಷಿಸಲು ಸ್ವಲ್ಪ ಕಷ್ಟವೆನಿಸಬಹುದು. ಇಲ್ಲಿನ ಸ್ಥಳಗಳಲ್ಲಿ ಮಳೆಗಾಲವು ಆಹ್ಲಾದಕರ ಹಾಗೂ ಸುಂದರವಾಗಿರುತ್ತದೆ. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಳೆ ಎಂಬ ಕಾರಣಕ್ಕೆ ಸುತ್ತಾಡಲು ಹೋಗದಿದ್ದರೆ ದಿನವಿಡಿ ಹೋಟೆಲ್ ರೂಮ್ ನಲ್ಲಿಯೆ ಇರಬೇಕಾದೀತು! ಅಲಿಬಾಗ್ ಗೆ ಬರಲು ಅತ್ಯುತ್ತಮವಾದ ಸಮಯವೆಂದರೆ ತಂಪಾದ ಹಾಗೂ ಆಹ್ಲಾದಕರ ವಾತಾವರಣವಿರುವ ಚಳಿಗಾಲ. ಈ ಸ್ಥಳಕ್ಕೆ ಭೇಟಿ ನೀಡಿ, ನಿಮ್ಮ ಸಮಯವನ್ನು ಸುಂದರವಾಗಿಸುವುದಷ್ಟೆ ಅಲ್ಲದೆ ನೆನಪಿನಲ್ಲಿ ಉಳಿಯುವಂತಹ ದಿನಗಳನ್ನಾಗಿ ಮಾಡಿಕೊಳ್ಳಿ. ಅಲ್ಲದೆ ಕ್ರಿಸ್ ಮಸ್ ಹಾಗೂ ಹೊಸವರ್ಷದ ಆಚರಣೆಯ ಸಂದರ್ಭದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಇನ್ನೂ ಸೂಕ್ತ.

ಅಲಿಬಾಗ್ ನಗರವು ಮುಂಬೈ ನಿಂದ ಕೇವಲ 30 ಕೀ. ಮಿ ದೂರದಲ್ಲಿದ್ದು, ವಿಮಾನ, ರೈಲ್ವೆ ಹಾಗೂ ರಸ್ತೆ ಎಲ್ಲಾ ಸಾರಿಗೆ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಮುಂಬೈನ  ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಅಲಿಬಾಗ್ ಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ನೀವು ರೈಲು ಮಾರ್ಗವನ್ನು ನಿಮ್ಮ ಪ್ರಯಾಣಕ್ಕಾಗಿ ಆಯ್ದುಕೊಂಡಿದ್ದರೆ ಪೆನ್ ರೈಲು ಮಾರ್ಗವೂ (ಹಿಂದಿಯಲ್ಲಿ ಪೆಣ್ ಎನ್ನುತ್ತಾರೆ) ಹತ್ತಿರದಲ್ಲಿಯೆ ಇದೆ. ರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಮಹಾರಾಷ್ಟ್ರದ ಎಲ್ಲಾ ನಗರಗಳನ್ನು ಹಾಗೂ ರಾಜ್ಯದ ಹೊರಗಿನ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿರುವುದರಿಂದ ಅಲಿಬಾಗ್ ಗೆ ಎಲ್ಲಾ ನಗರಗಳಿಂದಲೂ ಪ್ರಯಾಣಿಕರು ಭೇಟಿ ನೀಡಬಹುದು. ಅಲ್ಲದೆ ಪ್ರವಾಸಿಗರು, ಮುಂಬೈನಿಂದ ಅಲಿಬಾಗ್ ನಗರಕ್ಕೆ  ಅರೇಬಿಯನ್ ಸಮುದ್ರದಲ್ಲಿ ಬೋಟ್ ಗಳ ಮೂಲಕವೂ ಪ್ರಯಾಣ ಮಾಡಬಹುದು. ಪ್ರವಾಸಿಗರಿಗೆ ಇದೊಂದು ಮರೆಯಲಾಗದಂತಹ ಹೊಸ ಅನುಭವವನ್ನು ನೀಡುತ್ತದೆ. ರೋಮಾಂಚನವನ್ನುಂಟು ಮಾಡುತ್ತದೆ.

ವಾರಾಂತ್ಯವನ್ನು ಕಳೆಯುವುದಕ್ಕೆ ಯೋಗ್ಯವಾದ ಅಲಿಬಾಗ್ ತಾಣಗಳು ಎಲ್ಲಾ ಬಗೆಯಲ್ಲಿ ಪ್ರವಾಸಿಗರ ಬಯಕೆಯನ್ನು ಈಡೇರಿಸುವಂತಹ ಶಕ್ತಿಯನ್ನು ಹೊಂದಿವೆ! ಪ್ರಾಚೀನ ಕಡಲ ತೀರಗಳು, ಐತಿಹಾಸಿಕ ಕೋಟೆಗಳು ಹಾಗೂ ಸ್ಥಳೀಯ ದೇವಾಲಯಗಳನ್ನು ಹೊಂದಿರುವ ಅಲಿಬಾಗ್ ಎಂಬ ಪುಟ್ಟ ಪಟ್ಟಣವು ನಿಧಾನವಾಗಿ ಬೆಳೆಯುತ್ತಿದೆ. ಮಹಾರಾಷ್ಟ್ರದ ಗೋವಾ ಎಂದು ಕರೆಯಲ್ಪಡುವ  ಈ ಉತ್ತಮ ಬೀಚ್ ಹುಡುಗ ಹುಡುಗಿಯರಿಗೆ ನೆಚ್ಚಿನ ತಾಣವಾಗಿದೆ. ಇನ್ನೇಕೆ ತಡ? ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ವಾರಾಂತ್ಯವನ್ನು ಕಳೆಯಲು ಇಲ್ಲಿಗೆ ಭೇಟಿ ನೀಡಿ. ಇಲ್ಲಿನ ಸೊಬಗು ಜೀವನ ಪರ್ಯಂತ ನಿಮ್ಮ ಮನಸ್ಸಿನ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಸಂಶಯವಿಲ್ಲ.

ಅಲಿಬಾಗ್ ಪ್ರಸಿದ್ಧವಾಗಿದೆ

ಅಲಿಬಾಗ್ ಹವಾಮಾನ

ಅಲಿಬಾಗ್
31oC / 88oF
 • Haze
 • Wind: N 0 km/h

ಉತ್ತಮ ಸಮಯ ಅಲಿಬಾಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಲಿಬಾಗ್

 • ರಸ್ತೆಯ ಮೂಲಕ
  ನಿಮ್ಮ ಪ್ರಯಾಣಕ್ಕಾಗಿ ರಸ್ತೆ ಮಾರ್ಗವನ್ನು ಆಯ್ದುಕೊಂಡರೆ ಅಲಿಬಾಗ್ ನಿಂದ 30 ಕೀ. ಮಿ ದೂರದಲ್ಲಿರುವ ಪೆನ್ ಮಾರ್ಗ ಉತ್ತಮವಾದುದು. ಮುಂಬೈ – ಗೋವಾ ರಸ್ತೆ ಪ್ರಯಾಣಕ್ಕೆ ಅನುಕೂಲಕರವಾಗಿದೆ. ಇಲ್ಲಿಂದ ಮುಂಬೈ ನಗರವು 110 ಕೀ. ಮಿ ಗಳಷ್ಟೆ. ಪ್ರವಾಸಿಗರ ಹಣದ ಅನುಕೂಲಕ್ಕೆ ತಕ್ಕಂತೆ ರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪೆನ್ ನಿಲ್ದಾಣ ಅಲಿಬಾಗ್ ನಿಂದ 30 ಕೀ. ಮಿ ಅಂತರದಲ್ಲಿದೆ. ಹಲವಾರು ಅಂತರ ರಾಜ್ಯ ಹಾಗೂ ಹೊರಗಿನ ರೈಲುಗಳು ಮುಂಬೈ, ಚೆನೈ, ದೆಹಲಿ ಹಾಗೂ ಇನ್ನೂ ಕೆಲವು ಪಟ್ಟಣಗಳಿಂದ ಪೆನ್ ನಿಲ್ದಾಣಕ್ಕೆ ರೈಲುಗಳು ಬರುತ್ತವೆ. ಪೆನ್ ನಿಂದ ಅಲಿಬಾಗ್ ಪಟ್ಟಣಕ್ಕೆ ಕ್ಯಾಬ್ ವಾಹನಗಳ ಮೂಲಕ ಪ್ರಯಾಣ ಮಾಡಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅಲಿಬಾಗ್ ಉತ್ತಮ ವಿಮಾನ ಯಾನ ಸಂಪರ್ಕವನ್ನು ಹೊಂದಿದೆ. ಅಲಿಬಾಗ್ ನಿಂದ 113 ಕೀ. ಮಿ ದೂರದಲ್ಲಿರುವ ಮುಂಬೈ ನ ಛತ್ರಪತಿ ಶಿವಾಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಭರಿಸಬಹುದಾದ ವೆಚ್ಚದೊಂದಿಗೆ ಸಾಕಷ್ಟು ಕ್ಯಾಬ್ (ವಾಹನಗಳು ) ವಿಮಾನ ನಿಲ್ದಾಣದಿಂದ ಅಲಿಬಾಗ್ ಪಟ್ಟಣಕ್ಕೆ ಹೋಗಲು ಲಭ್ಯವಿದೆ. ಇದರಿಂದ ನಿಶ್ಚಿಂತರಾಗಿ ಪ್ರಯಾಣಿಕರು ಅಲಿಬಾಗ್ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Alibag
  31 OC
  88 OF
  UV Index: 7
  Haze
 • Tomorrow
  Alibag
  26 OC
  79 OF
  UV Index: 7
  Partly cloudy
 • Day After
  Alibag
  27 OC
  80 OF
  UV Index: 6
  Patchy rain possible