Search
 • Follow NativePlanet
Share
ಮುಖಪುಟ » ಸ್ಥಳಗಳು» ಕರ್ನಾಲಾ

ಕರ್ನಾಲಾ - ನಿಸರ್ಗದೊಡಲಿನಲ್ಲಿ ವಿಶ್ರಾಂತಿ

13

ಕೋಟೆಗಳಿಗಾಗಿ ಪ್ರಸಿದ್ಧವಾಗಿರುವ ನಗರ ಕರ್ನಾಲಾ ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 475 ಮೀ ಎತ್ತರದಲ್ಲಿದ್ದು ಸುತ್ತಲೂ ದಟ್ಟ ಹಸಿರಿನಿಂದ ಹಾಗೂ ಎತ್ತರದ ಬೆಟ್ಟಗಳಿಂದ ಕೂಡಿದೆ.

ಐತಿಹಾಸಿಕ ಹಿನ್ನೆಲೆ

ತುಘಲಕರ ಆಳ್ವಿಕೆಯ ವೇಳೆ ಕೊಂಕಣ ಜಿಲ್ಲೆಗೆ ಕರ್ನಾಲಾ ರಾಜಧಾನಿಯಾಗಿತ್ತು, ನಂತರ ಇದನ್ನು ಅಹ್ಮದ್ ನಗರದ ಸ್ಥಾಪನೆ ಮಾಡಿದ ನಿಜಾಮ್ ಶಾ ತನ್ನ ವಶಕ್ಕೆ ತೆಗೆದುಕೊಂಡನು. ನಿಜಾಮನು ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ ಹೊಂದಿದ ಕಾರಣ ಅವರು ಕರ್ನಾಲಾ ಕೋಟೆಯನ್ನು ಕೊಡುಗೆಯಾಗಿ ನೀಡಿದ್ದರು.

ಭಾರತದಲ್ಲಿ ತನ್ನ ಆಳ್ವಿಕೆ ಸ್ಥಾಪಿಸಿದ ನಂತರ ಈಸ್ಟ್ ಇಂಡಿಯಾ ಕಂಪನಿ ಈ ಕೋಟೆಯ ಪ್ರಾಮುಖ್ಯತೆಯನ್ನು ಅರಿತುಕೊಂಡಿತು. ಈ ಕೋಟೆಗಿರುವ ಭೌಗೋಳಿಕ ಲಕ್ಷಣಗಳು ಯುದ್ಧತಂತ್ರದ ಅನುಕೂಲತೆಗನುಗುಣವಾಗಿರುವುದನ್ನು ಅರಿಯಲು ಬಹಳ ಸಮಯ ಬೇಕಾಗಲಿಲ್ಲ.

ಕರ್ನಾಲಾ – ಪ್ರಕೃತಿಯ ಮಡಿಲಿನ ತಾಣ

ಇಲ್ಲಿರುವ ಪಕ್ಷಿಧಾಮ ಪ್ರಕೃತಿ ಪ್ರೇಮಿಗಳು ಮತ್ತು ಪಕ್ಷಿ ಪ್ರೇಮಿಗಳಿಗೆ ಇದನ್ನು ಒಂದು ಮಹತ್ವದ ಸ್ಥಳವನ್ನಾಗಿಸಿದೆ. ಈ ಪಕ್ಷಿಧಾಮ 150 ಭಾರತೀಯ ಪ್ರಭೇದಗಳಿಗೆ ಹಾಗೂ 37 ವಲಸೆ ಬರುವ ಪ್ರಭೇದಗಳಿಗೆ ನೆಲೆಯಾಗಿದೆ. ಇಲ್ಲಿ ಹಲವಾರು ಚಾರಣ ಅವಕಾಶಗಳೂ ಚಾರಣ ಪ್ರಿಯರಿಗೆ ಲಭ್ಯವಿವೆ.

ಪ್ರವಾಸಿಗರು ಗಿರಿಧಾಮದಲ್ಲಿರುವ ಹವಾಮಾನವನ್ನು ಬಯಸುತ್ತಾರೆ. ಇಲ್ಲಿ ಅಂತಹ ಹವಾಮಾನ ವರ್ಷಪೂರ್ತಿ ಇರುವ ಕಾರಣ ಪ್ರವಾಸಿಗರಿಗೆ ಇದು ಅತ್ಯಂತ ಮಹತ್ವವಾದ ಸ್ಥಳವಾಗಿದೆ. ಹೀಗಾಗಿ ಯಾವುದೇ ಋತುಮಾನದಲ್ಲಿ ಬನ್ನಿ.. ಮಳೆಯಿರಲಿ, ಬೇಸಗೆಯಿರಲಿ ಇಲ್ಲಿ ಆಹ್ಲಾದಕರ ಹವಾಮಾನ ಇರುತ್ತದೆ. ಮಳೆಗಾಲ ನೈಸರ್ಗಿಕ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ. ಚಳಿಗಾಲ ವಲಸೆ ಬರುವ ಹಕ್ಕಿಗಳನ್ನು ನೋಡಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.

ಕರ್ನಾಲಾ ರಜಾ ದಿನಗಳನ್ನು ಕಳೆಯಲು ಇರಬಹುದು ಅಥವಾ ವಾರಾಂತ್ಯ ಕಳೆಯಲು ಇರಬಹುದು ಅತ್ಯಂತ ಸರಿಯಾದ ಸ್ಥಳವಾಗಿದೆ. ಇಲ್ಲಿಗೆ ರಸ್ತೆ ಸಾರಿಗೆ ರೈಲು ಮಾರ್ಗ ಮತ್ತು ವಿಮಾನ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ, ಇದು ಮುಂಬಯಿಯಿಂದ ಕೇವಲ 60 ಕಿ.ಮೀ ದೂರದಲ್ಲಿದೆ ಹಾಗೂ ಪನ್ವೇಲ್ ನಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನೀವು ಸುಲಭವಾಗಿ ಬಸ್ಸನ್ನು ಹತ್ತಿ, ಇಲ್ಲವೆ ರೈಲು ಮಾರ್ಗವಾಗಿ ಅಥವಾ ಸ್ವಂತ ವಾಹನದಲ್ಲಿ  ತಲುಪಬಹುದು.  

ಕರ್ನಾಲಾ ಪ್ರಸಿದ್ಧವಾಗಿದೆ

ಕರ್ನಾಲಾ ಹವಾಮಾನ

ಕರ್ನಾಲಾ
25oC / 77oF
 • Clear
 • Wind: W 4 km/h

ಉತ್ತಮ ಸಮಯ ಕರ್ನಾಲಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕರ್ನಾಲಾ

 • ರಸ್ತೆಯ ಮೂಲಕ
  ಕರ್ನಾಲಾವನ್ನು ರಸ್ತೆ ಮಾರ್ಗವಾಗಿಯೂ ತಲುಪಬಹುದು. ಇದು ಮುಂಬಯಿಯಿಂದ ಕೇವಲ 60 ಕಿ.ಮೀ ದೂರದಲ್ಲಿದೆ ಹಾಗೂ ಪನ್ವೇಲ್ ನಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಪನ್ವೇಲ್ ತಲುಪಿದ ಬಳಿಕ ನೀವು ಗೋವಾ ಹೆದ್ದಾರಿಯನ್ನು ಅನುಸರಿಸಿ ಸುಲಭವಾಗಿ ಕರ್ನಾಲಾ ತಲುಪಬಹುದು. ಮಹಾರಾಷ್ಟ್ರದಿಂದ ಮತ್ತು ಬೇರೆ ರಾಜ್ಯಗಳಿಂದ ಕರ್ನಾಲಾ ತಲುಪಲು ರಾಜ್ಯ ಸರಕಾರಿ ಸಾರಿಗೆ ಹಾಗೂ ಖಾಸಗಿ ಬಸ್ ಸೌಲಭ್ಯವೂ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕರ್ನಾಲಾಗೆ ಪನ್ವೇಲ್ ಅತ್ಯಂತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ಕೇವಲ 10 ಕಿ.ಮೀ ದೂರದಲ್ಲಿದೆ. ಮಹಾರಾಷ್ಟ್ರದ ಲೋಕಲ್ ರೈಲು ಮಾರ್ಗಗಳಲ್ಲಿ ಪನ್ವೇಲ್ ಒಂದು ಪ್ರಮುಖವಾದ ರೈಲು ನಿಲ್ದಾಣವಾಗಿದೆ. ಇದು ಮಹಾರಾಷ್ಟ್ರದ ಬಹುತೇಕ ಎಲ್ಲಾ ರೈಲ್ವೆ ನಿಲ್ದಾಣಗಳ ಜೊತೆ ಸಂಪರ್ಕ ಸಾಧಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮುಂಬಯಿಯ ಛತ್ರಪತಿ ಶಿವಾಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನಾಲಾಗೆ ಅತ್ಯಂತ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 60 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣ ಭಾರತ ಎಲ್ಲಾ ವಿಮಾನ ನಿಲ್ದಾಣಗಳ ಜೊತೆಗೆ ಹೊರದೇಶದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಸಾಧಿಸುತ್ತದೆ. ವಿಮಾನ ನಿಲ್ದಾಣದಿಂದ ಸಾಕಷ್ಟು ಟಾಕ್ಸಿಗಳು ಕರ್ನಾಲಾಗೆ ಇವೆ. ಸಾಮಾನ್ಯ ದರಗಳು ರೂ 1200 ಆಗಿದೆ. ಪುಣೆಯಲ್ಲಿರುವ ಲೋಹೆಗಾವ್ ವಿಮಾನ ನಿಲ್ದಾಣ ಎರಡನೇ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು ನೂರು ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
21 Mar,Thu
Return On
22 Mar,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Mar,Thu
Check Out
22 Mar,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Mar,Thu
Return On
22 Mar,Fri
 • Today
  Karnala
  25 OC
  77 OF
  UV Index: 8
  Clear
 • Tomorrow
  Karnala
  26 OC
  78 OF
  UV Index: 8
  Sunny
 • Day After
  Karnala
  28 OC
  82 OF
  UV Index: 8
  Sunny