Search
 • Follow NativePlanet
Share
ಮುಖಪುಟ » ಸ್ಥಳಗಳು» ಅಷ್ಟವಿನಾಯಕ

ಅಷ್ಟವಿನಾಯಕ - ಗಣಪತಿಗಳ ಕ್ಷೇತ್ರ

12

ಆಷ್ಟವಿನಾಯಕ ಎಂದರೆ ಎಂಟು ಗಣಪತಿಗಳು ಎಂದರ್ಥ. ಈ ಪದವು  ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಹರಡಿರುವ ಎಂಟು ಪ್ರತ್ಯೇಕ ದೇವಾಲಯಗಳ ಕ್ಷೇತ್ರ ದರ್ಶನವನ್ನು ವಿವರಿಸಲು ಬಳಸಲಾಗುತ್ತದೆ. ಅವುಗಳು ಯಾವೆಂದರೆ ಮೊರಗಾಂವ್ ನ ಮಯೂರೇಶ್ವರ್, ಸಿದ್ಧತೆಕ್ ನ ಸಿದ್ಧಿವಿನಾಯಕ, ಪಾಲಿಯ ಬಲ್ಲಾಳೇಶ್ವರ, ಲೇನ್ಯಾದ್ರಿ ಯ ಗಿರಿಜಾತ್ಮಕ್, ಥೇಯೂರ್ ನ  ಚಿಂತಾಮಣಿ, ಒಜ್ಹರ್ ನ ವಿಘ್ನೇಶ್ವರ್, ರಂಜನಗಾಂವ್ ನ ಮಹಾಗಣಪತಿ ಮತ್ತು ಕೊನೆಯದಾಗಿ  ಮಹಡ್ ನ  ವರದ ವಿನಾಯಕ.

ಅಷ್ಟವಿನಾಯಕದ ಎಲ್ಲಾ ಎಂಟು ದೇವಾಲಯಗಳೂ ಬಹಳ ಪುರಾತನ ಮತ್ತು ಹಿಂದಿನದಾಗಿವೆ. ಈ ಎಲ್ಲ ದೇವಾಲಯಗಳ ಉಲ್ಲೇಖವನ್ನು ಹಿಂದು ಧರ್ಮದ  ಪೂಜ್ಯ ಗ್ರಂಥಗಳಾದ ಗಣೇಶ ಪುರಾಣ ಮತ್ತು  ಮುದ್ಗಲ ಪುರಾಣದಲ್ಲಿ ಕಾಣಬಹುದು. ಈ ದೇವಾಲಯಗಳು ಕಾಲ ಕಾಲಕ್ಕೆ ಸರಿಯಾದ ಮಾರ್ಪಾಡುಗಳನ್ನು ಕಂಡಿರುವ ಮತ್ತು  ಸುಂದರವಾದ ವಾಸ್ತು ಶೈಲಿಯನ್ನು ಹೊಂದಿರುವ ವಿಶೇಷವಾಗಿ ಗಣಪತಿಯ ಪರಮ ಆರಾಧಕರಾಗಿದ್ದ ಪೆಶ್ವರ ಆಳ್ವಿಕೆಯ ಸಮಯದಲ್ಲಿ ಹೆಚ್ಚು ಅಭೀವೃದ್ಧಿಯನ್ನು ಹೊಂದಿವೆ. ಹಿಂದು ಧರ್ಮದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ನೋಡಿ ಕೊನೆಯ ಕಾಲದ ನೆಮ್ಮದಿ ಮತ್ತು ಮಹದಾನಂದವನ್ನು ಪಡೆಯುವ ಉದ್ದೇಶಕ್ಕೆ ತಕ್ಕವಾಗಿರುವಂತಹ ದೇವಾಲಯವಾಗಿದೆ.

ಈ ಎಲ್ಲ ದೇವಾಲಯಗಳಲ್ಲಿನ ವಿಶೇಷತೆ ಎಂದರೆ, ಇವೆಲ್ಲವೂ ಸ್ವಯಂಭು ಅಂದರೆ ಉಧ್ಭವ ಮೂರ್ತಿಗಳಾಗಿದ್ದು ಯಾವುದರಲ್ಲೇ ಆಗಲಿ ಮನುಷ್ಯ ನಿರ್ಮಿತ ಪ್ರಭಾವವಿಲ್ಲ. ಸ್ವಾಮಿ ಗಣಪತಿ ತನ್ನಿಂತಾನೇ ಈ ಸ್ಥಳಗಳಲ್ಲಿ ಉದ್ಭವ ವಾಗಿಹನೆಂದು ನಂಬಲಾಗಿದೆ.

ಎಂಟು ದೇವಾಲಯಗಳ  ಪುಣ್ಯಕ್ಷೇತ್ರ ದರ್ಶನ

ಈ ಎಂಟೂ ದೇವಾಲಯಗಳಲ್ಲಿ ಗಣಪತಿಯು, ವಿಘ್ನ ನಿವಾರಕ ನಿಂದ ಹಿಡಿದು ಅಭಿವೃದ್ಧಿ ಹಾಗೂ ವಿದ್ಯಾರ್ಜನೆಯಲ್ಲಿ ತೊಡಕುಗಳಿರದಂತೆ ದಾರಿ ತೋರಿಸುವವನೆಂದು ಒಂದಲ್ಲ ಮತ್ತೊಂದು ರೀತಿಯಲ್ಲಿ ಪೂಜಿಸಲಾಗುತ್ತದೆ. ಪ್ರತಿ ದೇವಾಲಯವು ವಿಭಿನ್ನತೆಯಿಂದ ಕೂಡಿದ್ದು ಅದೇ ರೀತಿಯಲ್ಲಿ ಎಲ್ಲ ದೇವಾಲಯಗಳಲ್ಲಿಯೂ ಒಂದು ಬಿಡಿಸಲಾರದಂತಹ ಸಮಾನತೆಯನ್ನು ಕಾಣಬಹುದು.

ಇಲ್ಲಿನ ಪ್ರತಿಯೊಂದು ದೇವಾಲಯದ ಗಣಪತಿ ವಿಗ್ರಹದ ಭಂಗಿ ಮತ್ತು ಸೊಂಡಿಲು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಉದಾಹರಣೆಗಾಗಿ ಎಲ್ಲ ದೇವಾಲಯಗಳಲ್ಲಿ ಗಣಪತಿಯ ಸೊಂಡಿಲು ಎಡಗಡೆಯ ಹಿಡಿಕೆಯಲ್ಲಿರುತ್ತದೆ ಆದರೆ ಸಿದ್ಧ ತೆಕ್ ನ ಸಿದ್ಧಿ ವಿನಾಯಕನಲ್ಲಿ ಮಾತ್ರ ಸೊಂಡಿಲು ಬಲಗಡೆಯಲ್ಲಿರುವುದನ್ನು ಕಾಣಬಹುದು.  

ಮೊರಗಾಂವ್ ಗ್ರಾಮದಲ್ಲಿ ನೆಲೆಸಿರುವುದು ಮಯೂರೇಶ್ವರ್ ದೇವಾಲಯ. ಈ ದೇವಾಲಯದಲ್ಲಿ ಪ್ರತಿಯೊಂದು ಭಾಗದಲ್ಲಿ ಒಂದರಂತೆ ನಾಲ್ಕು ಸ್ತಂಭಗಳ ಸಹಕಾರದೊಂದಿಗೆ ನಿಂತಿರುವ 50 ಅಡಿ ಎತ್ತರದ ಗೊಮ್ಮಟವಿದೆ. ಅದರ ಸಮೀಪದಲ್ಲೇ ಕಲ್ಲಿನಿಂದ ಮಾಡಿರುವ ಎಣ್ಣೆಯ ದೀಪದ ಕಂಬದ ದೀಪಮಾಲವಿದೆ.

ಸಿದ್ಧಿ ವಿನಾಯಕ ದೇವಾಲಯವು ಸಿದ್ಧತೇಕ್ ನಲ್ಲಿದೆ. ಇಲ್ಲಿ ಮಾಡುವ ಒಂದು ಪ್ರದಕ್ಷಿಣೆಯು ಬಹಳ ಮಹತ್ವವನ್ನು ಹೊಂದಿದೆ, ಕಾರಣ ಈ ದೇವಾಲಯವು ಒಂದು ಬೆಟ್ಟಕ್ಕೆ ಸೇರಿಕೊಂಡೆ ಇರುವುದರಿಂದ ಇದರ ಸುತ್ತಳತೆ ಅಂದಾಜು 5 ಕಿ ಮೀ ಉದ್ದವಿದೆ.

ಪಾಲಿ ಗ್ರಾಮವು ಬಲ್ಲಾಳೇಶ್ವರ್ ದೇವಾಲಯಕ್ಕೆ ನೆಲೆಯಾಗಿದೆ. ಎಂಟು ಗಣಪತಿ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯ ತನ್ನ ಹೆಸರನ್ನು ಬ್ರಾಹ್ಮಣ ನ ರೂಪದಲ್ಲಿ ಬಂದಂತಹ ಓರ್ವ ಭಕ್ತನಿಂದ ಪಡೆದಿದೆ.  

ಗಿರಿಜಾತ್ಮಕ್ ದೇವಾಲಯವನ್ನು ಬೆಟ್ಟದ ಮೇಲಿರುವ ಹಲವು ಗುಹೆಗಳಲ್ಲಿರುವ ಒಂದು ಗುಹೆಯಲ್ಲಿ ಕಾಣಬಹುದಾಗಿದೆ. ತುದಿಯನ್ನು ತಲುಪಲು ಭಕ್ತರು 300 ಮೆಟ್ಟಿಲುಗಳನ್ನು ಹತ್ತಬೇಕಿದ್ದು ಮೇಲೆ ನೋಡಸಿಗುವ ದೃಶ್ಯ ಅಷ್ಟೇ ಸುಂದರವಾಗಿರುತ್ತದೆ.

ಥೇಯೂರ್ ನಲ್ಲಿರುವ ಚಿಂತಾಮಣಿ ದೇವಾಲಯ ಒಂದು ಕಾಲದಲ್ಲಿ ಗಣಪತಿಯು ಚಿಂತಾಮಣಿಯ ರೂಪದಲ್ಲಿ ಬಂದು ಬ್ರಹ್ಮನನ್ನು ತನ್ನ ಚಿಂತೆಗಳಿಂದ ದೂರಗೊಳಿಸಿದ ಸ್ಥಳ ಎಂಬ ನಂಬಿಕೆಗೆ ಪಾತ್ರವಾಗಿದೆ.

ಒಜ್ಹರ್ ನಲ್ಲಿರುವ ವಿಘ್ನೇಶ್ವರ ದೇವಾಲಯವು ಸುಂದರವಾದ ಗೊಮ್ಮಟ ಮತ್ತು ಬಂಗಾರದಿಂದ ಮಾಡಿದ ಶೃಂಗವನ್ನು ಹೊಂದಿದ್ದು, ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಮಹಾಗಣಪತಿಯ ದೇವಾಲಯವು ಪೂರ್ವದಿಕ್ಕಿಗೆ ಮುಖಮಾಡಿದ್ದು ಅದ್ಭುತವಾದ ಪ್ರವೇಶ ದ್ವಾರದಿಂದ ಅಲಂಕೃತವಾಗಿದೆ. ಪ್ರವೇಶದ ಬಳಿ ಜೈ ಮತ್ತು ವಿಜಯ್ ಎಂಬ ಇಬ್ಬರು ದ್ವಾರಪಾಲಕರ ಮೂರ್ತಿಗಳನ್ನು  ಕಾಣಬಹುದು, ಇದು ರಂಜನಗಾಂವ್ ನಲ್ಲಿ ನೆಲೆಸಿದೆ.

ಕೊನೆಯದಾದ ವರದ ವಿನಾಯಕ ದೇವಾಲಯವನ್ನು ಮಹಡ್ ಗ್ರಾಮದಲ್ಲಿ ಕಾಣಬಹುದು. ಈ ಸ್ಥಳದಲ್ಲಿರುವ ದೇವನ ಮೂರ್ತಿಯು ಮೊದಲು ನದಿಯ ಆಸುಪಾಸಿನಲ್ಲಿ ದೊರೆತಿತ್ತು ನಂತರ ಇದನ್ನು ದೇವಾಲಯದಲ್ಲಿ ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ. ನಾವು ಇಂದು ಕಾಣುವ ವರದ ವಿನಾಯಕ ದೇವಾಲಯವು ಪೆಶ್ವ ಅರಸರಿಂದ ಮರು ಕೆತ್ತನೆ ಹಾಗೂ ಮರು ನಿರ್ಮಿತವಾದಂತಹುದು.

ಕ್ಷೇತ್ರ ದರ್ಶನ ಮಾಡಲು ಕಾರಣ

ಹಲವು ಬಸ್ಸುಗಳು ಈ ಎಂಟು ದೇವಾಲಯಗಳ ಒಮ್ಮೆಲೇ ನೋಡಲು ಅವಕಾಶ ಕಲ್ಪಿಸಲು ಮೂರು ದಿನಗಳ ಪ್ರವಾಸವನ್ನು ಆಯೋಜಿಸುತ್ತಿರುತ್ತವೆ. ನಿಮ್ಮ ಸ್ಥಳೀಯ ಪ್ರಸಿದ್ಧ ಖಾಸಗಿ ಬಸ ಪ್ರವಾಸ ಆಯೋಜಕರ ಬಳಿ ಹೋಗಿ ಮೂರು ದಿನಗಳ ಮಹದಾನಂದವನ್ನು ಕಾಯ್ದಿರಿಸಬಹುದು. ನೀವು ಪ್ರತ್ಯೇಕರಾಗಿ ಅಥವಾ ಕುಟುಂಬ ಸಮೇತರಾಗಿಯೂ ಹೋಗಬಹುದು.

ಈ ಎಂಟು ಗಣಪತಿಯ ದೇವಾಲಯಗಳು, ತಮ್ಮದೆ ಆದಂತಹ ದೈವ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ. ಈ ಪ್ರವಾಸವು ಸ್ವಲ್ಪ ಮಟ್ಟಿಗೆ ಆಯಸಕರ ಮತ್ತು ಶ್ರಮದಾಯಕವಾಗಿದ್ದರೂ, ಈ ಎಂಟು ಸ್ಥಳಗಳನ್ನು ಸಂದರ್ಶಿಸುವುದು, ಹಲವು ಧರ್ಮಗಳಲ್ಲಿ ಹಲವು ನಾಮದಿಂದ ಪ್ರಸಿದ್ಧನಾಗಿರುವ ಜಗತ್ತಿನ ಏಕೈಕ ಶಕ್ತಿಯಾದ ಪರಮಾತ್ಮನಲ್ಲಿ ನಿಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಮಹಾರಾಷ್ಟ್ರದ ಸುತ್ತ ಎಂಟು ವಿನಾಯಕರಲ್ಲಿ ಆರನ್ನು ಹೊಂದಿರುವ ಪುಣೆ ಜಿಲ್ಲೆಯಿಂದ ಪ್ರಯಾಣಿಸುತ್ತಾ ಮತ್ತೆರಡು ದೇವಾಲಯಗಳುಳ್ಳ ರಾಯಗಡ್ ಜಿಲ್ಲೆಗೆ ಹೋಗಿ ನಂತರ ಹಿಂದಿರುಗುವುದು ಕೊಂಚ ಕಷ್ಟದಿಂದ ಕೂಡಿದ್ದರೂ ಎಲ್ಲ ಸ್ಥಳಗಳನ್ನು ನೋಡಿದ ಮೇಲಷ್ಟೇ ನಿಮಗೆ ಮನಶಾಂತಿ ದೊರೆತು ದೇವರ ಸಾನಿಧ್ಯಕ್ಕೆ ಹೋಗಿಬಂದ ತೃಪ್ತಿ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಅಷ್ಟವಿನಾಯಕ ಪ್ರಸಿದ್ಧವಾಗಿದೆ

ಅಷ್ಟವಿನಾಯಕ ಹವಾಮಾನ

ಅಷ್ಟವಿನಾಯಕ
26oC / 78oF
 • Partly cloudy
 • Wind: WNW 11 km/h

ಉತ್ತಮ ಸಮಯ ಅಷ್ಟವಿನಾಯಕ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಷ್ಟವಿನಾಯಕ

One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Ashtavinayak
  26 OC
  78 OF
  UV Index: 8
  Partly cloudy
 • Tomorrow
  Ashtavinayak
  23 OC
  74 OF
  UV Index: 8
  Partly cloudy
 • Day After
  Ashtavinayak
  23 OC
  73 OF
  UV Index: 7
  Partly cloudy