Search
 • Follow NativePlanet
Share

ಪುಣೆ - ಕಾಲಗರ್ಭದಲ್ಲಿ ಮತ್ತೊಮ್ಮೆ ಮರಳಿದಾಗ

46

ಪಶ್ಚಿಮ ಘಟ್ಟದಲ್ಲಿನ ವೈಭವಯುತ ನಗರ ಪುಣೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 560 ಮೀಟರ್ ಎತ್ತರದಲ್ಲಿದೆ. ಪುಣೆ ಹೆಸರಿನ ಮೂಲ ಪುಣ್ಯನಗರ ಎಂದಾಗಿದೆ. ರಾಷ್ಟ್ರಕೂಟರು ಈ ನಗರವನ್ನು ಪುಣ್ಯ-ವಿಷಯ ಅಥವಾ ಪೂಣಕ್‌-ವಿಷಯ ಎಂದು ಕರೆದಿದ್ದರು.

 

ಮೂಲದಲ್ಲಿ ಪುಣೆವಾಡಿಯಾಗಿದ್ದ ಈಗಿನ ಪುಣೆಯು ಹಿಂದೊಮ್ಮೆ ಮರಾಠಾ ರಾಜನಾಗಿದ್ದ ಛತ್ರಪತಿ ಶಿವಾಜಿ ಮಹಾರಾಜನ ಮನೆಯಾಗಿತ್ತು. ನಂತರದಲ್ಲಿ ಪುಣೆಯು ಪೇಷ್ವೆಯರ ಆಡಳಿತಕ್ಕೆ ಒಳಪಟ್ಟಿತು. ಇದರಿಂದಾಗಿ ಭಾರತದ ರಾಜಕೀಯಕ್ಕೆ ಕೇಂದ್ರಸ್ಥಾನವಾಗಿತ್ತು. ಬ್ರಿಟಿಷರು ಈ ನಗರವನ್ನು ವಶಪಡಿಸಿಕೊಂಡ ನಂತರದಲ್ಲಿ ಪುಣೆಯು ಮಳೆಗಾಲದ ರಾಜಧಾನಿಯಾಗಿ ಮಾರ್ಪಟ್ಟಿತು.

ಪ್ರವಾಸಿಗರಿಗೆ ಪುಣೆಯಲ್ಲಿ ಏನಿದೆ..?

ವಾಸ್ತುಶಿಲ್ಪ ಪ್ರಿಯರು ಪುಣೆಯಲ್ಲಿನ ಆಗಾ ಖಾನ್‌ ಅರಮನೆ, ಶಿಂಧೆಯ ಛತ್ರಿ ಮತ್ತು ಸಿನ್ಹಗಢದ ಪುರಾತನ ಕೋಟೆಯನ್ನು ನೋಡಬಹುದು. ಶನಿವಾರ್ ವಾಡಾ ಕೂಡಾ ಇನ್ನೊಂದು ಪ್ರಮುಖ ಐತಿಹಾಸಿಕ ಪ್ರದೇಶವಾಗಿದೆ. ಆದರೆ ದುರಾದೃಷ್ಟವಶಾತ್ ಈ ಪ್ರದೇಶ ಈಗ ಅವಸಾನಗೊಂಡಿದೆ.

ಒಶೋ ಕಮ್ಯೂನ್ ಇಂಟರ್ನ್ಯಾಷನಲ್‌ ಪುಣೆಯಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಧ್ಯಾನವನ್ನು ಹೇಳಿಕೊಡಲಾಗುತ್ತದೆ. ಇದನ್ನು ಓಶೊ ರಜನೀಶರು ಸ್ಥಾಪನೆ ಮಾಡಿದ್ದರು. ಸಮೀಪದಲ್ಲಿರುವ ಬೌದ್ಧ ಗುಹೆಗಳಾದ ಕಾರ್ಲಾ ಮತ್ತು ಭಾಜಾ ಕೂಡಾ ಭೇಟಿ ನೀಡಲು ಸೂಕ್ತವಾದ ಜಾಗ. ಪಟಾಲೇಶ್ವರ ದೇಗುಲವು ತುಂಬಾ ಪುರಾತನ ದೇವಸ್ಥಾನವಾಗಿದ್ದು, ಕಲ್ಲಿನಿಂದ ಸುಂದರವಾಗಿ ಕೆತ್ತಲ್ಪಟ್ಟಿದೆ, ಇಲ್ಲಿ ಹಲವು ಮೂರ್ತಿಗಳು, ಶಿಲ್ಪಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನವು ಸುಮಾರು 1,400 ವರ್ಷಗಳಷ್ಟು ಹಳೆಯದು.ಪರಿಸರ ಪ್ರಿಯರು ಎಂಪ್ರೆಸ್‌ ಬೊಟಾನಿಕಲ್‌ ಗಾರ್ಡನ್‌ಗೆ ಮನಸೋಲುತ್ತಾರೆ. ಸರಸ್ ಬಾಗ್‌ ಮತ್ತು ಬಂಡ್‌ ಗಾರ್ಡನ್‌ಗಳು ನಿಮ್ಮ ಕುಟುಂಬದ ಜೊತೆಗೆ ಒಂದು ಸಂಜೆಯನ್ನು ಕಳೆಯಲು ಮತ್ತು ಗಾಳಿ ಸೇವನೆಗೆ ಅತ್ಯುತ್ತಮ ಸ್ಥಳ.ಪುಣೆಯಲ್ಲಿದ್ದಾಗ ಅಲ್ಲಿನ ರುಚಿಯನ್ನು ಸವಿಯದೇ ಇರಬೇಡಿ. ಪೂರಣ್‌ ಪೊಳಿ, ಪಿತ್ಲಾ, ಚಾಟ್‌, ಪಾವ್‌ ಭಾಜಿ ಮತ್ತು ಮಿಸಳ್‌ ಪಾವ್‌ ಇಲ್ಲಿ ಜನಪ್ರಿಯ. ಬಹುಶಹ ಇದರಲ್ಲಿಯ ಕೊನೆಯ ತಿಂಡಿಯು ನಿಮ್ಮ ನಾಲಿಗೆಗೆ ತುಸು ಖಾರವಾಗಬಹುದಾದರೂ ಅದರ ರುಚಿಗೆ ಮನಸೋತು ಬೆರಳುಗಳನ್ನು ಚಪ್ಪರಿಸದೆ ಇರಲಾರಿರಿ. ಸೊರ್ಘಮ್(ಜೋಳ) ಮತ್ತು ಪರ್ಲ್‌ ಮಿಲೆಟ್‌(ಸಜ್ಜಿಗೆ ಅಥವಾ ಸಜ್ಜೆ)ಗಳನ್ನು ಇಲ್ಲಿ ಸಾಂಪ್ರದಾಯಿಕವಾಗಿ ಮಾಡುವ ಎಲ್ಲಾ ತಿಂಡಿಗಳಲ್ಲೂ ಬಳಸಲಾಗುತ್ತದೆ.ಡಿಸೆಂಬರಿನಲ್ಲಿ ನೀವು ಪುಣೆಗೆ ಪ್ರಯಾಣ ಮಾಡುತ್ತೀರಿ ಅಂತಾದರೆ, ಪ್ರತಿ ವರ್ಷ ನಡೆಯುವ ಸವಾಯಿ ಗಂಧರ್ವ ಶಾಸ್ತ್ರೀಯ ಸಂಗೀತ ಮಹೋತ್ಸವವನ್ನು ಆಸ್ವಾದಿಸಲು ಮರೆಯದಿರಿ.

ಕೆಲವು ಹೆಚ್ಚಿನ ಮಾಹಿತಿಗಳು

ಪುಣೆಗೆ ಪ್ರವಾಸ ಮಾಡುವುದಾದರೆ ವರ್ಷಪೂರ್ತಿ ಉತ್ತಮವಾದ ವಾತಾವರಣವಿರುತ್ತದೆ. ಹವಾಮಾನವು ಅತಿಯಾದ ಉಷ್ಣವೂ ಅಲ್ಲ ಮತ್ತು ಅತಿಯಾದ ಶೀತವೂ ಅಲ್ಲ ಎಂಬಂತಹ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ಹಗಲಿನ ಸಮಯದಲ್ಲಿನ ಶಾಖವನ್ನು ತಡೆದುಕೊಳ್ಳುವುದು ಒಂದು ಸವಾಲೇ ಸರಿ. ಆದರೆ ರಾತ್ರಿಯಲ್ಲಿ ಉಷ್ಣಾಂಶವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ಸುತ್ತಲಿನ ಪರಿಸರವನ್ನು ತಂಪಾಗಿಸುತ್ತದೆ ಮತ್ತು ಹೆಚ್ಚು ಆರಾಮದಾಯಕವಾಗಿರುತ್ತದೆ. ಮಳೆಗಾಲದಲ್ಲಿನ ವಾತಾವರಣವು ತುಂಬಾ  ಉತ್ತಮವಾಗಿರುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಪರಿಸರ ಸಂಪೂರ್ಣವಾಗಿ ಹಸಿರಾಗಿರುತ್ತದೆ. ಪುಣೆಗೆ ಪ್ರವಾಸ ಕೈಗೊಳ್ಳಲು ಚಳಿಗಾಲವು ಸೂಕ್ತ ಸಮಯ. ಇದು ಹೆಚ್ಚು ಪ್ರವಾಸಿಗರು ಬರುವ ಸಮಯವಾದ್ದರಿಂದ ವಸತಿ ಶುಲ್ಕವು ಹೆಚ್ಚಾಗಿರುತ್ತದೆ.ಮಹಾರಾಷ್ಟ್ರದ ಪ್ರಮುಖ ನಗರವಾದ ಪುಣೆಯು ರಾಜ್ಯ ಮತ್ತು ಹೊರ ರಾಜ್ಯಗಳಿಂದ ನೇರವಾಗಿ ಸಂಪರ್ಕವನ್ನು ಹೊಂದಿದೆ. ಲೋಹೆಗಾಂವ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ, ಅಹ್ಮದಾಬಾದ್‌, ಚೆನ್ನೈ, ಹೈದರಾಬಾದ್‌ ಮತ್ತು ಕೊಲ್ಲಾಪುರದಿಂದ ದಿನನಿತ್ಯ ವಿಮಾನ ಸಂಚಾರವನ್ನು ಹೊಂದಿದೆ. ಪುಣೆ ನಗರದಿಂದ ವಿಮಾನ ನಿಲ್ದಾಣಕ್ಕೆ 10 ಕಿ.ಮೀ ದೂರವಿದೆ. ನೀವು ರೈಲಿನ ಮೂಲಕ ಪ್ರಯಾಣ ಮಾಡುತ್ತೀರಾದರೆ, ಶತಾಬ್ದಿ ಎಕ್ಸ್‌ಪ್ರೆಸ್‌ನಂತಹ ಹಲವು ರೈಲುಗಳು ಮುಂಬೈನಿಂದ ಸಂಪರ್ಕವನ್ನು ಹೊಂದಿವೆ. ಈ ಮೂಲಕ 170 ಕಿಲೋಮೀಟರನ್ನು ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದು. ರಸ್ತೆಯ ಮೂಲಕ ಪ್ರಯಾಣಿಸುತ್ತೀರಾದರೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೈವೆಯು ಒಂದು ವರದಾನವಾಗಿದ್ದು , ಸುಮಾರು ಎರಡು ಘಂಟೆಗಳಷ್ಟು ಕಾಲ ಪ್ರಯಾಣದ ಅವಧಿಯನ್ನು ಕಡಿತಗೊಳಿಸಬಲ್ಲುದು.ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾದ ಪುಣೆಯು ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳ ವಿಷಯಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಹೊಂದುತ್ತಿದೆ. ಶಾಸ್ತ್ರೀಯ ಸಂಗೀತ, ರಂಗಭೂಮಿ, ಸಾಹಿತ್ಯ (ವಿಶೇಷವಾಗಿ ಮರಾಠಿ ಸಾಹಿತ್ಯ) ಮತ್ತು ಆಧ್ಯಾತ್ಮಿಕ - ಈ ಎಲ್ಲವೂ ಕೂಡಾ ಪುಣೆಯಲ್ಲಿ ನಿಮಗೆ ಸಿಗುತ್ತದೆ. ಭಾರತದ ಎಲ್ಲಾ ಭಾಗದ ಜನರೂ ಕೂಡಾ ಶಿಕ್ಷಣಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಪುಣೆಗೆ ಬರುತ್ತಲೇ ಇರುತ್ತಾರೆ. ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರವಾಗಿದೆ.

ಪುಣೆಗೆ ಅತ್ಯಂತ ಮರ್ಯಾದೆಯ ಗಾಮಾ ಗ್ಲೋಬಲ್‌ ಸಿಟಿ ಎಂಬ ಮನ್ನಣೆಯೂ ದೊರೆತಿದೆ.

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಪುಣೆಯನ್ನು ನೋಡುವ ಅವಕಾಶವನ್ನು ನೀವು ಭಾರತದಲ್ಲಿರುವಾಗ ತಪ್ಪಿಸಿಕೊಳ್ಳಲೇಬಾರದು, ವಿಶೇಷವಾಗಿ ಮಹಾರಾಷ್ಟ್ರದಲ್ಲಿದ್ದಾಗ ಖಂಡಿತವಾಗಿಯೂ ಇಲ್ಲ. ಮುಂಬೈನ ಹಾಗೆ ವಾಣಿಜ್ಯ ನಗರಿಯಾಗುವ ಎಲ್ಲಾ ಅವಕಾಶಗಳನ್ನೂ ಪುಣೆಯು ಬಾಚಿಕೊಳ್ಳುತ್ತಲಿದೆ. ಸಂಸ್ಕೃತಿ, ತಾಂತ್ರಿಕತೆ ಮತ್ತು ಮೂಲಭೂತ ಸೌಕರ್ಯಗಳೆಲ್ಲವೂ ಸಂಯೋಗಗೊಂಡಿರುವುದನ್ನು ನೋಡಲು ನೀವು ಪುಣೆಗೆ ಭೇಟಿಕೊಡಬೇಕು. ಇಂತಹ ವೈವಿಧ್ಯತೆಯ ದರ್ಶನವನ್ನು ನೀವು ತಪ್ಪಿಸಿಕೊಳ್ಳಲೇಬಾರದು.

ಪುಣೆ ಪ್ರಸಿದ್ಧವಾಗಿದೆ

ಪುಣೆ ಹವಾಮಾನ

ಪುಣೆ
26oC / 79oF
 • Partly cloudy
 • Wind: WNW 10 km/h

ಉತ್ತಮ ಸಮಯ ಪುಣೆ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪುಣೆ

 • ರಸ್ತೆಯ ಮೂಲಕ
  ಮಹಾರಾಷ್ಟ್ರದ ಎಲ್ಲಾ ನಗರಗಳಿಗೂ, ಪ್ರಮುಖ ನಗರವಾದ ಪುಣೆಯು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೈವೆಯು ಎರಡೂ ನಗರಗಳ ಸಂಚಾರಾವಧಿಯನ್ನು ಸುಮಾರು 2 ಘಂಟೆಗಳಷ್ಟು ಕಡಿತಗೋಳಿಸಿದೆ. ಹಲವಾರು ರಾಜ್ಯ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಮಹಾರಾಷ್ಟ್ರದಿಂದ ಪುಣೆಗೆ ಮತ್ತು ಹೊರಭಾಗದಿಂದ ಪುಣೆಗೆ ಸಂಪರ್ಕವನ್ನು ಹೊಂದಿವೆ. ಪಶ್ಚಿಮ ಘಟ್ಟದ ರಸ್ತೆಯಲ್ಲಿ ಸಂಚರಿಸುವಾಗ ಮಳೆಗಾಲದಲ್ಲಿ ಅತ್ಯುತ್ತಮ ದೃಶ್ಯ ಲಭ್ಯ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪುಣೆಯು ಪ್ರಮುಖ ರೈಲ್ವೇ ನಿಲ್ದಾಣವಾಗಿದೆ. ಉತ್ತಮ ರೈಲು ಮಾರ್ಗದಿಂದ ಇಡೀ ದೇಶಕ್ಕೆ ಸಂಪರ್ಕವನ್ನು ಹೊಂದಿದೆ. ಮುಂಬೈ ಇಲ್ಲಿಂದ ಸುಮಾರು 170 ಕಿ.ಮೀ ದೂರದಲ್ಲಿದೆ. ಡೆಕ್ಕನ್‌ ಕ್ವೀನ್, ಶತಾಬ್ದಿ ಎಕ್ಸ್‌ಪ್ರೆಸ್‌ ಮತ್ತು ಇಂದ್ರಯಾನಿ ಎಕ್ಸ್‌ಪ್ರೆಸ್‌ ಹಾಗೂ ಇನ್ನೂ ಹಲವು ರೈಲುಗಳು ಪುಣೆಯಿಂದ ಮುಂಬೈಗೆ ಸಂಚರಿಸುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮಹಾರಾಷ್ಟ್ರದ ಮತ್ತು ದೇಶದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಪುಣೆಯ ಲೋಹೆಗಾಂವ್‌ ವಿಮಾನ ನಿಲ್ದಾಣವು ಈ ಸುತ್ತಮುತ್ತಲಿನಲ್ಲಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ದೆಹಲಿ, ಚೆನ್ನೈ, ಮುಂಬೈ, ಕೊಲ್ಕತ್ತಾ, ಬೆಂಗಳೂರು ಮತ್ತು ದುಬೈ ಹಾಗೂ ಸಿಂಗಾಪುರಕ್ಕೆ ಕೂಡಾ ಇಲ್ಲಿಂದ ನೇರ ವಿಮಾನ ಹಾರಾಡುತ್ತದೆ. ಪುಣೆ ನಗರವು ವಿಮಾನ ನಿಲ್ದಾಣದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ

ಪುಣೆ ಲೇಖನಗಳು

One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Pune
  26 OC
  79 OF
  UV Index: 8
  Partly cloudy
 • Tomorrow
  Pune
  24 OC
  74 OF
  UV Index: 8
  Partly cloudy
 • Day After
  Pune
  23 OC
  73 OF
  UV Index: 7
  Partly cloudy