Search
 • Follow NativePlanet
Share

ತಪೋಲ - ಇದು ಮಿನಿ ಕಾಶ್ಮೀರ!

12

ತಪೋಲ ಮಹಾಬಲೇಶ್ವರದ ಹತ್ತಿರವಿರುವ ಒಂದು ಸುಸಜ್ಜಿತ ಹಳ್ಳಿ. ಇದು ಗಿರಿ ಧಾಮದಿಂದ ಸುಮಾರು 25 ಕಿಲೋಮೀಟರು ದೂರದಲ್ಲಿದ್ದು ಮಹಾರಾಷ್ಟ್ರದ ಮಿನಿ ಕಾಶ್ಮೀರ ಎಂದೇ ಪ್ರಸಿದ್ಧವಾಗಿದೆ. ಅಷ್ಟೇನೂ ನಾಜೂಕಾಗಿರದ ಈ ಹಳ್ಳಿ, ಪ್ರಕೃತಿ ಪ್ರಿಯರು, ವಿಶ್ರಾಂತಿ ಬಯಸುವವರು ಹಾಗು ಪ್ರಕೃತಿಯ ಮಡಿಲಲ್ಲಿ   ಒಂದಾಗ ಬಯಸುವವರಿಗೆ ಬಹಳ ಪ್ರಿಯವಾದ ಸ್ಥಳ. ಈ ಹಳ್ಳಿಗೆ  ಪ್ರಯಾಣಿಸುವಾಗ ರಸ್ತೆಯ ಇಕ್ಕೆಲಗಳೂ ರುದ್ರ ರಮಣೀಯ ದೃಶ್ಯಗಳಿಂದ ಆವೃತವಾಗಿರುವುದನ್ನು ನೋಡುವುದೇ ಒಂದು ಸೊಬಗು. ಇಲ್ಲಿನ ಸುತ್ತಮುತ್ತಲಿನ ಕಾಡಿನ ಪರಿಸರ ಚಾರಣಿಗರಿಗೆ ಸವಾಲೊಡ್ಡುವ ಹಾಗಿರುವುದರಿಂದ, ತಪೋಲ ಸಾಹಸಪ್ರಿಯ ಚಾರಣಿಗರ ಎಲ್ಲ ಚಟುವಟಿಕೆಗಳಿಗೂ ಕೇಂದ್ರ ಸ್ಥಾನ.

ತಪೋಲ - 'ಕೃಷಿ' ಪ್ರವಾಸಕ್ಕೆ  ಅತ್ಯುತ್ತಮ ಸ್ಥಳ

ತಪೋಲದ ವಾತಾವರಣ ಆಹ್ಲಾದಕರ ಹಾಗು ಮಾಲಿನ್ಯ ರಹಿತವಾಗಿದ್ದು, ಇಂದ್ರಿಯಗಳನ್ನು ಪುನರ್ಯೌವನಗೊಳಿಸುತ್ತದೆ! ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಇನ್ನಷ್ಟು ಹತ್ತಿರದಿಂದ ಕಣ್ತುಂಬಿಕೊಳ್ಳ ಬಯಸುವ ಚಾರಣಿಗರಿಗೆ ಹಾಗು ಪ್ರವಾಸಿಗರಿಗೆ ಬಹಳಷ್ಟು ಶಿಬಿರದಾಣಗಳಿವೆ. ಇದಲ್ಲದೆ ನೀವೇನಾದರೂ ಜಲ ಕ್ರೀಡೆಯ ಹುಚ್ಚು ಅಭಿಮಾನಿಯಾಗಿದ್ದರೆ, ತಪೋಲದ ಸುಮಾರು 90 ಕಿಲೋಮೀಟರು ಉದ್ದದ ಶಿವಸಾಗರ ನದಿ ಪಾತ್ರದ ಉದ್ದಕ್ಕೂ ಈಜಬಹುದು ಅಥವಾ ಹಾಗೆ ಸುಮ್ಮನೆ ತೊಗಲು ದೋಣಿಯಲ್ಲಿ ನೀರಿನಲ್ಲಿ ವಿಹರಿಸಬಹುದು. ವಾಟರ್ ಸ್ಕೂಟರ್ ಹಾಗು ಮೋಟಾರ್ ಚಾಲಿತ ದೋಣಿ ಇಲ್ಲಿ ದೊರಕುವ ಇನ್ನಿತರ ಸೌಲಭ್ಯಗಳು.

ಚಾರಣ ನಿಮ್ಮ ಉತ್ಸಾಹ ಚಿಮ್ಮಿಸುವ ಹವ್ಯಾಸವಾಗಿದ್ದರೆ, ನೀವು ಅತ್ಯಂತ ಕಠಿಣ ಹಾಗು ಸವಾಲೆನಿಸುವ ವಸೋಟ ಕೋಟೆಗೆ ಚಾರಣ ಹೋಗಬಹುದು. ಆದರೆ ಇದಕ್ಕೆ ನೀವು ಅರಣ್ಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯಬೇಕು ಇಲ್ಲವಾದರೆ ಇಲ್ಲಿಗೆ ತಲುಪಲು ಕೇವಲ ದೋಣಿಯಾನವನ್ನು ಅವಲಂಬಿಸಬೇಕು. ಆದರೂ ಈ ಕೋಟೆ ಹತ್ತುವುದು ಅತ್ಯಂತ ಕಠಿಣವಾದ ಕಾರ್ಯ ಆದರೆ ಅಂತಿಮವಾಗಿ ಇದನ್ನು ಹತ್ತಿದವರು ಖಂಡಿತ ಪಶ್ಚಾತ್ತಾಪ ಪಡಲಾರರು! ನೀವೇನಾದರೂ ಸುಮ್ಮನೆ ಹಾಗೆ ಪ್ರಕೃತಿಯ ಮಡಿಲಲ್ಲಿ ಅದರ ಸೊಬಗನ್ನು ಸವಿಯುತ್ತಾ ನಡೆಯಲು ಬಯಸುವಿರಾದರೆ, ನೀವು ಇಲ್ಲಿರುವ ಸ್ಟ್ರಾಬೆರಿ ತೋಟಗಳಿಗೆ ಭೇಟಿ ಕೊಡಬಹುದು. ಇಲ್ಲಿನ ಇಡೀ ಕಸ್ ಪ್ರಸ್ಥಭೂಮಿ ಮುಂಗಾರು ಕಳೆದ ಮೇಲೆ ಸಂಪೂರ್ಣವಾಗಿ ಪುಷ್ಪಗಳಿಂದ ಆವೃತವಾಗುವ ಅಧ್ಬುತ ದೃಶ್ಯವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಹಾಗೆಯೆ, ಇಲ್ಲಿ ಸುಮಾರು 150 ಕ್ಕೂ ಹೆಚ್ಚಿನ ಬಗೆಯ ಹೂಗಳನ್ನು ನೋಡಬಹುದು.

ತಪೋಲಾ ಪ್ರಸಿದ್ಧವಾಗಿದೆ

ತಪೋಲಾ ಹವಾಮಾನ

ತಪೋಲಾ
33oC / 91oF
 • Partly cloudy
 • Wind: WNW 13 km/h

ಉತ್ತಮ ಸಮಯ ತಪೋಲಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತಪೋಲಾ

 • ರಸ್ತೆಯ ಮೂಲಕ
  ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆಯು, ಮುಖ್ಯ ನಗರಗಳಾದ ಮುಂಬೈ, ನಾಶಿಕ್, ಪಂಚಗಣಿ ಹಾಗು ಸತಾರಾದಿಂದ ಸಾಕಷ್ಟು ಬಸ್ಸುಗಳ ಸೌಲಭ್ಯ ಒದಗಿಸಿದ್ದು ನೀವು ತಪೋಲಕ್ಕೆ ಸುಲಭವಾಗಿ ಬಂದು ಸೇರಬಹುದು. ಆಸನದ ದರವು ನೀವು ಆಯ್ಕೆ ಮಾಡುವ ಬಸ್ಸಿನ ಮಾದರಿಯನ್ನು ಅವಲಂಬಿಸಿದ್ದು, ಸರಾಸರಿ 75 ರೂಪಾಯಿ ಇಂದ ಸುಮಾರು 250 ರೂಪಾಯಿವರೆಗೆ ಇದೆ. ಇದಲ್ಲದೆ ಭಾರತದ ಬಹಳಷ್ಟು ಪ್ರಮುಖ ನಗರದಿಂದ ಖಾಸಗಿ ಪ್ರವಾಸ ಆಯೋಜಕರೂ ಕೂಡ ತಪೋಲಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದಾರೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪುಣೆ ಹಾಗು ವತಾರ್ ರೈಲು ನಿಲ್ದಾಣಗಳೇ ತಪೋಲಗೆ ಹತ್ತಿರದ ರೈಲು ನಿಲ್ದಾಣಗಳು. ಇಲ್ಲಿಂದ ಬಹಳಷ್ಟು ಸ್ಥಳೀಯ ಹಾಗು ಇತರೆ ನಗರ ಪ್ರದೇಶಗಳಿಗೆ ಹೊರಡುವ ರೈಲುಗಳಿವೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ, ಅಥವಾ ಬಸ್ಸಿನ ಮೂಲಕ ತಪೋಲ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತಪೋಲದ ಸಮೀಪವಿರುವ ದೇಶೀಯ ವಿಮಾನ ನಿಲ್ದಾಣವೆಂದರೆ ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣ. ಇದು ಸುಮಾರು 140 ಕಿಲೋಮೀಟರು ದೂರದಲ್ಲಿದೆ. ವಿದೇಶಿ ಪ್ರಯಾಣಿಕರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ. ಎರಡೂ ವಿಮಾನ ನಿಲ್ಧಾಣಗಳು ಭಾರತದ ಎಲ್ಲ ನಗರಗಳಿಗೂ ಸಂಪರ್ಕ ಹೊಂದಿದೆ. ಈ ನಿಲ್ದಾಣಗಳಿಂದ ಟ್ಯಾಕ್ಸಿ ಸೇವೆಗಳಿದ್ದು ವಿಮಾನ ನಿಲ್ದಾಣದಿಂದ ನೇರವಾಗಿ ಕೈಗೆಟುಕುವ ದರದಲ್ಲಿ ತಪೋಲ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
21 Apr,Sun
Return On
22 Apr,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Apr,Sun
Check Out
22 Apr,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Apr,Sun
Return On
22 Apr,Mon
 • Today
  Tapola
  33 OC
  91 OF
  UV Index: 7
  Partly cloudy
 • Tomorrow
  Tapola
  27 OC
  80 OF
  UV Index: 7
  Thundery outbreaks possible
 • Day After
  Tapola
  26 OC
  79 OF
  UV Index: 6
  Moderate or heavy rain shower