ಸಿಂಧುದುರ್ಗ - ಒಂದು ಐತಿಹಾಸಿಕ ಕೋಟೆ

ಸಿಂಧುದುರ್ಗವು, ಮಹಾರಾಷ್ಟ್ರದ ಕೊಂಕಣ್ ಪ್ರದೇಶದಲ್ಲಿದೆ. ಈ ಕೋಟೆಯು ಮಾಲ್ವಾನ್ ನ ಸಮುದ್ರ ಕಿನಾರೆಯಿಂದ ಬೇರ್ಪಟ್ಟಿರುವ ಮಾಲ್ವಾನ್ ಎಂಬ ದ್ವೀಪದಲ್ಲಿದ್ದು ರತ್ನಾಗಿರಿ ಜಿಲ್ಲೆಯಿಂದ ರೂಪಿತವಾಗಿದೆ. ಒಂದು ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದ್ದು, ಇನ್ನೊಂದೆಡೆಗೆ ಅರಬ್ಬೀ ಸಮುದ್ರವನ್ನು ಹೊಂದಿರುವ ಸಿಂಧುದುರ್ಗವು, ತನ್ನ ಬೀಚುಗಳು, ಹಿನ್ನೀರು, ಜಲಪಾತಗಳು, ಕೋಟೆಗಳು ಮತ್ತು ತೀರ್ಥಯಾತ್ರೆ ಕೇಂದ್ರಗಳು, ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ.

ಸಿಂಧುದುರ್ಗ ಇತಿಹಾಸ

ಸಿಂದುದುರ್ಗದ ಹೆಸರು ಎರಡು ಪದಗಳ ಸಂಯೋಜನೆಯಾಗಿದೆ. ಸಿಂಧು ಎಂದರೆ ಸಮುದ್ರ ಮತ್ತು ದುರ್ಗ ಎಂದರೆ ಕೋಟೆ ಎನ್ನುವುದು ಇದರ ಅನುವಾದ. ಇದು ಮಹಾನ್ ಮರಾಠಾ ಯೋಧನಾಗಿದ್ದ, ರಾಜ ಛತ್ರಪತಿ ಶಿವಾಜಿ ನಿರ್ಮಿಸಿದ ಕೋಟೆ. ಆತನು ತನ್ನ ಕಾರ್ಯತಂತ್ರ ಬಳಸಿ ವಿದೇಶಿ ಪಡೆಗಳನ್ನು ಬಗ್ಗುಬಡೆಯಲು ಮತ್ತು ಮುರುದ್ ಜಂಜೀರದ ಸಿದ್ದಿಗಳನ್ನು ಸುರಕ್ಷಿತವಾಗಿಡಲು ಈ ಕಲ್ಲು ಬಂಡೆಗಳಿಂದ ಕೂಡಿದ ದ್ವೀಪವನ್ನು ಆಯ್ಕೆಮಾಡಿಕೊಂಡನು. ಈ ಕೋಟೆಯ ವಿಶೇಷತೆಯೆಂದರೆ, ಅರಬ್ಬೀ ಸಮುದ್ರದಿಂದ ಬರುವ ಶತ್ರುಗಳಿಗೆ ಇದು ಸುಲಭಾವಾಗಿ ತೋರದ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಇಲ್ಲಿಯ ಪ್ರಮುಖ ಆಕರ್ಷಣೆಗಳು, ಬೀಚ್ ಗಳು ಮತ್ತು ಹಲವಾರು ಕೋಟೆಗಳು. 17 ನೇ ಶತಮಾನದ ಹಿಂದಿನಲ್ಲಿ ನಿರ್ಮಿಸಿದ ಸಿಂಧುದುರ್ಗವು ಮಹಾರಾಷ್ಟ್ರದ ಪ್ರಧಾನ ಸಮುದ್ರ ತೀರದ ಕೋಟೆಗಳಲ್ಲಿ ಅತ್ಯಂತ ಪ್ರಮುಖವಾದುದು. ಸಿಂಧುದುರ್ಗ ಕೋಟೆಯು ಅಂಕುಡೊಂಕಾದ ಆಕಾರದಲ್ಲಿ 42 ರಕ್ಷಣಾ ಗೋಡೆಗಳನ್ನು ಹೊಂದಿದೆ. ಕಟ್ಟಡ ಸಾಮಗ್ರಿಗಳೇ ಸ್ವತಃ 73000 ಕೆಜಿ ತೂಕ ಕಬ್ಬಿಣದಿಂದ ಕೂಡಿದೆ. ಒಂದು ಕಾಲದಲ್ಲಿ ಸಮುದ್ರ ಪ್ರಯಾಣವನ್ನು ಪವಿತ್ರ ಹಿಂದು ಗ್ರಂಥಗಳು ನಿಷೇಧಿಸಿದಾಗಲೂ, ಈ ಬೃಹತ್ ನಿರ್ಮಾಣ ಮರಾಠಾ ರಾಜನ ಕ್ರಾಂತಿಕಾರಿ ಮನೋಭಾವವನ್ನು ಪ್ರತಿನಿಧಿಸುತ್ತದೆ. ಇಲ್ಲಿಯವರೆಗೆ ಜಗತ್ತಿನ ವಿವಿಧ ಕಡೆಗಳಿಂದ ಪ್ರವಾಸಿಗರು ಈ ಮರಾಠಾ ವೈಭವ ವೀಕ್ಷಿಸುವ ಸಲುವಾಗಿ ಪದ್ಮಾ ಗರ್ ಕೋಟೆಗೆ ಭೇಟಿ ನೀಡುತ್ತಾರೆ. ದೇವ್ ಬಾಗ್ ನಲ್ಲಿರುವ  ವಿಜಯದುರ್ಗ ಕೋಟೆ, ತಿಲಾರಿ ಆಣೆಕಟ್ಟು, ನವದುರ್ಗಾ ದೇವಾಲಯ,  ಈ ಪ್ರದೇಶದಲ್ಲಿರುವ ಕೆಲವು ತಪ್ಪಿಸಿಕೊಳ್ಳಬಾರದಂತಹ ಆಕರ್ಷಣೆಗಳು. ಸಿಂಧುದುರ್ಗ ಭಾರತದ ಒಂದು ಅತ್ಯಂತ ಹಳೆಯ ಸಾಯಿ ಬಾಬಾ ದೇವಾಲಯಕ್ಕೂ ನೆಲೆಯಾಗಿದೆ.

ಸಿಂಧುದುರ್ಗ - ಇತಿಹಾಸ, ಪ್ರಕೃತಿ ಮತ್ತು ಇತರೆ ಚೆಂದದ ವಿಷಯಗಳು

ಭವ್ಯ ಪರ್ವತಗಳು, ಒಂದು ವಿಲಕ್ಷಣ ಸಮುದ್ರ ತೀರ, ಮತ್ತು ಹೆಸರಾಂತ ದೃಶ್ಯಾವಳಿಗಳ ಜೊತೆಗೆ ಕೂಡಿದ, ಈ ಸ್ಥಳವು ಆಲ್ಫೊನ್ಸೊ ಮ್ಯಾಂಗೋಸ್, ಗೋಡಂಬಿ, ನೇರಳೆ, ಇತ್ಯಾದಿ ಗಳಿಗೆ ಜನಪ್ರಿಯವಾಗಿದೆ. ನಿರ್ಮಲವಾದ ವಾತಾವರಣವಿದ್ದಾಗ ಸುಮಾರು 20 ಅಡಿ ಆಳದವರೆಗೆ ಸ್ಪಷ್ಟವಾಗಿ ಕಡಲ ಹಾಸಿಗೆಯನ್ನು ಕಾಣಬಹುದು. ಭಾರತೀಯ ಮತ್ತು ವಿದೇಶಿ ಪ್ರವಾಸಿಗರು ಪ್ರದೇಶವನ್ನು ಅನ್ವೇಷಿಸಲು ಇಚ್ಚಿಸುವುದಲ್ಲದೆ ದ್ವೀಪದ ಹೊರವಲಯದಲ್ಲಿರುವ  ಹವಳದ ಬಂಡೆಗಳ ದೃಶ್ಯ ವೈಭವವನ್ನು ಸವಿಯಲು ಬರುತ್ತಾರೆ. ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕಲಿಂಗ್ ಹೋಗುವುದು ಇಲ್ಲಿ ಸಾಮಾನ್ಯ.

ಜಿಲ್ಲೆಯ ಬಹುತೇಕ ಪ್ರದೇಶವು ದಟ್ಟವಾದ ಕಾಡಿನಿಂದ ಕೂಡಿದ್ದು ಯಾರೆ ಪ್ರಕೃತಿ ಪ್ರಿಯರನ್ನು ಮನವೊಲಿಸುವಷ್ಟು, ಸಸ್ಯ  ಹಾಗೂ ಜೀವ ರಾಶಿಗಳಿಂದ ಸಂಪದ್ಭರಿತವಾಗಿದೆ. ಚಿರತೆ, ಕಾಡು ಹಂದಿ, ಮುಂಗುಸಿಗಳು, ಕಾಡಿನಮೊಲ, ಆನೆ, ಕಾಡುಕೋಣಗಳು ಮತ್ತು ಕೋತಿಗಳಂತಹ ಕಾಡು ಪ್ರಾಣಿಗಳಿಗೆ ಇದು ನೆಲೆಯಾಗಿರುವುದನ್ನು ಕಾಣಬಹುದು.

ಈ ಪ್ರದೇಶವು ತನ್ನ ವಿಶಿಷ್ಟವಾದ ಮಾಲ್ವಾನಿ ತಿನಿಸಿನಿಂದ ಬಹಳ ಹೆಸರುವಾಸಿಯಾಗಿದೆ. ಖಂಡಿತವಾಗಿಯೂ ಇದನ್ನು ದೇಶೀಯರೆ ಆಗಲಿ, ವಿದೇಶಿಯರೆ ಆಗಲಿ ಒಮ್ಮೆ ಪ್ರಯತ್ನಿಸಲೇಬೇಕು. ಇಲ್ಲಿನ ತಿನಿಸು ಆಹ್ಲಾದಕರ ಸಮುದ್ರ ಆಹಾರ ಭಕ್ಷ್ಯಗಳನ್ನು ಒಳಗೊಂಡಿದ್ದು ಪ್ರಮುಖವಾಗಿ ಮೀನು ಮತ್ತು ಸೀಗಡಿಗಳನ್ನು ಸ್ಥಳೀಯ ಸ್ವಾದದಲ್ಲಿ ತಿಂದು ಆನಂದಿಸಬಹುದು.

ಸಿಂಧುದುರ್ಗ ಹಿತಕರ ತಂಗುದಾಣ.  ಕಾರಣ ?

ಸಿಂಧುದುರ್ಗ ಪ್ರದೇಶ ತಂಪಿನ ಹವಾಮಾನವನ್ನು ಅನುಭವಿಸುತ್ತದೆ. ಬೇಸಿಗೆ ಸಾಮಾನ್ಯವಾಗಿ ಬಿಸಿ ಮತ್ತು ಉಷ್ಣತೆಯಿಂದ ಕೂಡಿದ್ದು ಈ ಸಮಯದ ಬದಲು ಪ್ರವಾಸಿಗರು ಚಳಿಗಾಲವಾದ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಭೇಟಿ ನೀಡಿದರೆ ಹಿತಕರ ಅನುಭವವನ್ನು ಆನಂದಿಸಬಹುದು.

ಮುಂಬೈ ನಿಂದ 400 ಕಿಮೀ ದೂರದಲ್ಲಿರುವ ಸಿಂಧುದುರ್ಗವನ್ನು ವಾಯು, ರಸ್ತೆ, ಮತ್ತು ರೈಲು ಮಾರ್ಗವಾಗಿ ತಲುಪಬಹುದಾಗಿದೆ. ಮಹಾರಾಷ್ಟ್ರದ  ಹಲವು ನಗರಗಳಿಂದ ಬಸ್ಸುಗಳ ಸೌಲಭ್ಯವಿದ್ದು, ಇಲ್ಲಿಗೆ ತಲುಪಲು ಮಹಾರಾಷ್ಟ್ರದ ಹೊರಗಿನಿಂದಲೂ ಬಸ್ ಇವೆ. ರಾಷ್ಟ್ರೀಯ ಹೆದ್ದಾರಿ 17, ಈ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಮುಂಬೈ, ಗೋವಾ ಮತ್ತು ಮಂಗಳೂರು ಗಳಂತಹ ಪ್ರಮುಖ ಸ್ಥಳಗಳಿಂದ ರೈಲು ಅಥವಾ ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು. ಗೋವಾ ಏರ್ಪೋರ್ಟ್ 80 ಕಿಮೀ ದೂರದಲ್ಲಿದ್ದು, ಅದುವೇ ಸಿಂಧುದುರ್ಗಕ್ಕೆ  ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ.

ಸುಂದರ ಕಡಲ ತೀರದಲ್ಲಿ ನಡೆಯುತ್ತಾ ಐತಿಹಾಸಿಕ ಅದ್ಭುತವನ್ನು ಅನ್ವೇಷಿಸಿರಿ. ಸಿಂಧುದುರ್ಗವು ಎಲ್ಲಾ ರೀತಿಯ ಪ್ರವಾಸಿಗನಿಗೆ ವಿಶೇಷವಾದ ಅನುಭವ ನೀಡುತ್ತದೆ. ಈ ಪ್ರದೇಶವು ನಿಮಗೋಸ್ಕರ ಒದಗಿಸುವ ಅದ್ಭುತ ಘಳಿಗೆಗಳನ್ನು ಮರೆಯದಿರಿ.

Please Wait while comments are loading...