ಕಾರವಾರ - ಕೊಂಕಣ ಕೊಲ್ಲಿಯ ರಾಣಿ 

ಭಾರತ ದ್ವೀಪಕಲ್ಪದ ಪಶ್ಚಿಮ ಭಾಗದಲ್ಲಿರುವ ಕಾರವಾರ ಜಿಲ್ಲೆಯು ಗೋವಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ 520 ಕಿ.ಮೀ ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿರುವ ಕಾರವಾರವು 15 ನೇ ಶತಮಾನದಲ್ಲೆ ವ್ಯಾಪಾರ ಕ್ಷೇತ್ರದ ಮುಖ್ಯ ಗುರುತಾಗಿ ಗುರುತಿಸಿಕೊಂಡಿದ್ದು, ಐತಿಹಾಸಿಕ ಮಹತ್ವವುಳ್ಳ ಪಟ್ಟಣವೂ ಆಗಿದೆ.  ಕಾರವಾರಿನ ಸ್ವಾಭಾವಿಕವಾಗಿ ರೂಪಗೊಂಡಂತಹ ಬಂದರು ಪ್ರದೇಶವು, ಸಾಂಬಾರು ಪದಾರ್ಥಗಳ ಖಜಾನೆಯಾದ ಕೇರಳಕ್ಕೆ ಸನ್ನಿಹಿತವಾಗಿದ್ದು, ಕೇವಲ ಪೋರ್ಚುಗೀಸರು, ಬ್ರಿಟೀಷರು, ಅರೇಬಿಯನ್ನರು ಮಾತ್ರವೆ ಅಲ್ಲದೆ ಇತ್ತಿಚಿಗೆ ಭಾರತೀಯ ನೌಕಾದಳವು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದೆ. ಕಾಳಿ ನದಿಯು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುವ ಸ್ಥಳವನ್ನು ಕಾರವಾರಿನಲ್ಲಿ ಕಾಣಬಹುದಾಗಿದ್ದು, ಈ ಸ್ಥಳವು ಪ್ರಸಿದ್ಧ ಸದಾಶಿವಗಡ ಕೋಟೆ ಮತ್ತು ಕಾಳಿ ನದಿ ಸೇತುವೆಗೆ ಹತ್ತಿರದಲ್ಲಿದೆ. ಈ ಮೂರು ಅದ್ಭುತಗಳ ಮಿಶ್ರಣವು ನೋಡುಗರ ಮೈಮನ ಪುಳುಕಿಸದೆ ಇರಲಾರದು.

ಸ್ಥಳೀಯ ಸಂಸ್ಕೃತಿ

ಕಾರವಾರಿನಲ್ಲಿ ಬಹು ಸಂಖ್ಯೆಯಲ್ಲಿ ಮುಸ್ಲಿಮ ಮತ್ತು ಕ್ರಿಶ್ಚಿಯನ್ನರನ್ನು ಕಾಣಬಹುದಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೊದಲನೆಯದಾಗಿ ಇದು ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟಿತ್ತು ಹಾಗು ಎರಡನೆಯದಾಗಿ ಗೋವಾ ಇದಕ್ಕೆ ಹತ್ತಿರವಿರುವುದರಿಂದ ಪೋರ್ಚುಗೀಸರು ಮತ್ತು ಬ್ರಿಟೀಷರ ಆಳ್ವಿಕೆಯಲ್ಲಿ ಅನೇಕ ಕ್ರೈಸ್ತ ಮಿಶನರಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದುದು. ಇನ್ನು ಉಳಿದ ಸ್ಥಳೀಯ ಜನರನ್ನು 'ಉತ್ತರ ಕನ್ನಡದ ಮೂಲನಿವಾಸಿಗಳು' ಎಂದು ಕರೆಯಲಾಗುತ್ತದೆ. ಇವರಲ್ಲಿ ಸುಮಾರು 55 ಪ್ರತಿಶತ ಜನರು ಕೇವಲ ಕೊಂಕಣಿ ಮಾತನಾಡಬಲ್ಲವರಾಗಿದ್ದಾರೆ. ಇವರು ದೇಶದ ಏಕೈಕ ಕೊಂಕಣಿ ರಾಜ್ಯವಾದ ಗೋವಾದ ಹತ್ತಿರದಲ್ಲಿ ನೆಲೆಸಿದ್ದರೂ ಕೂಡ ಕರ್ನಾಟಕದ ಭಾಗವಾಗೆ ಇರಲು ಆಯ್ದುಕೊಂಡಿದ್ದಾರೆ.

ಇನ್ನಷ್ಟು ಮಾಹಿತಿ

ಬಂದರನ್ನು ಹೊರತು ಪಡಿಸಿದರೆ ಕಾರವಾರಿನಲ್ಲಿರುವ ಇನ್ನೆರಡು ಪ್ರಮುಖ ಉದ್ಯಮಗಳೆಂದರೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ. ಇಲ್ಲಿರುವ ನಯನಮನೋಹರವಾದ ಕಡಲ ತೀರಗಳು ಬಂಗಾರದ ಮರಳನ್ನು ತುಂಬಿಸಿಕೊಂಡು, ನರ್ತಕಿಯರ ಹಾಗೆ ನಲಿದಾಡುತ್ತಿರುವ ತೆಂಗಿನ ಮರಗಳನ್ನು ಬೆಳೆಸಿಕೊಂಡು ನೋಡುಗರಿಗೆ ಸಾಕ್ಷಾತ್ ಸ್ವರ್ಗದ ಅನುಭವವನ್ನೆ ಒದಗಿಸುತ್ತದೆ. ಇಷ್ಟೆ ಅಲ್ಲದೆ ದೇವಬಾಗ್, ಕೂಡಿ ಹಾಗು ಕಾಜುಬಾಗ್ ನಂತಹ ಸುಂದರ ಬಿಚ್ ಗಳು ಸಾಹಸಮಯ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ. ಹಲವು ಐತಿಹಾಸಿಕ ದೇವಾಲಯಗಳು, ಚರ್ಚ್ ಗಳು ಹಾಗು ಮಸೀದಿಗಳನ್ನು ಇಲ್ಲಿ ಕಾಣಬಹುದಾಗಿದ್ದು ಪುರಾತನ ಶೈಲಿಯ ವಾಸ್ತು ಶಿಲ್ಪ ಕಲೆಯ ರಸದೌತಣವನ್ನು ಪಡೆಯಬಹುದು.ಕಳೆದ ದಶಕದಲ್ಲೆ ಭಾರತೀಯ ನೌಕಾ ಪಡೆಯು ಇಲ್ಲಿ ಒಂದು ಬೇಸ್ ನ್ನು ಸ್ಥಾಪಿಸಿದ್ದು, ಸುರಕ್ಷತೆಯ ಕಾರಣಗಳಿಂದ ಸಾರ್ವಜನಿಕರಿಗೆ ಇದನ್ನು ಮುಚ್ಚಲಾಗಿದೆ. ಆದರೂ ಕೂಡ ಪ್ರತಿ ವರ್ಷ ಆಚರಿಸಲಾಗುವ 'ನೌಕಾ ಪಡೆಯ ವಾರ' ಸಮಯದಲ್ಲಿ ಸಂದರ್ಶಕರಿಗೆ ಭೇಟಿ ನೀಡಲು ಇದನ್ನು ತೆರೆಯಲಾಗುತ್ತಿದ್ದು, ಕೇವಲ ದೇಶೀಯರೆ ಅಲ್ಲದೆ ವಿದೇಶೀಯರೂ ಕೂಡ ನೈಸರ್ಗಿಕವಾಗಿ ರೂಪಗೊಂಡಂತಹ ಬಂದರದ ಅದ್ಭುತ ನೋಟವನ್ನು ಸವಿಯುಬಹುದು.

Please Wait while comments are loading...