ಕೆಚ್ಚಿನ ವಿನ್ಯಾಸ - ಕೊಡಚಾದ್ರಿ

ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ, ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನೆಲೆಯಾಗಿದೆ. ಕೊಡಚಾದ್ರಿ ಪರ್ವತ ಶಿಖರವು ದಟ್ಟವಾದ ಅರಣ್ಯದ ನಡುವಿನಿಂದ ಹುಟ್ಟಿಕೊಳ್ಳುತ್ತದೆ ಮತ್ತು ಈ ಸ್ಥಾನವು ಶಿವಮೊಗ್ಗ ಜಿಲ್ಲೆಯ ಮೂಕಾಂಬಿಕಾ ರಾಷ್ಟ್ರೀಯ ಅರಣ್ಯದ ಮಧ್ಯದಲ್ಲಿ ಇದೆ. ಇದು ಬೆಂಗಳೂರಿನಿಂದ 420 ಕಿಮೀ ದೂರದಲ್ಲಿದೆ.

ಜಾಡುಗಳು ಮತ್ತು ಇತರೆ ಆಕರ್ಷಣೆಗಳು

ಪದೇಪದೇ ಬೀಸುವ ತೀವ್ರವಾದ ಗಾಳಿಯ ಕಾರಣ ಬಂಜರಾಗಿರುವ ಶಿಖರದಲ್ಲಿ ದೇವತೆ ವಾಸವಾಗಿದ್ದಾಳೆ . ಅಳಿವಿನಂಚಿನಲ್ಲಿರುವ ಅಪಾರ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿರುವುದಲ್ಲದೇ, ಈ ಕಾಡು ದೊಡ್ಡ ಕಾಲ್ದಾರಿಗಳನ್ನೂ ಸಹ ಹೊಂದಿದೆ. ಇದು ಆರಂಭಿಕ ಚಾರಣಿಗರಿಗೆ ಈ ದಾರಿಗಳು ಮಾದರಿಯಾಗಿದ್ದರೂ ಇಲ್ಲಿ ಚಾರಣ , ಸ್ವಲ್ಪಮಟ್ಟಿಗೆ ಕಷ್ಟದಾಯಕವೇ. ಕೊಡಚಾದ್ರಿ ತನ್ನ ಆಕರ್ಷಕ ಸುತ್ತಮುತ್ತಲಿನಿಂದಲೇ ಹೆಸರುವಾಸಿಯಾಗಿದೆ ಮತ್ತು ಮಲಬಾರ್ ಲಂಗೂರ್ಗಳು, ಕಾಳಿಂಗ ಸರ್ಪಗಳು, ಹೈನಾಗಳು, ಕಾಡೆಮ್ಮೆ, ಮತ್ತು ಹೆಬ್ಬಾವುಗಳ ನೆಲೆಯಾಗಿದೆ.

ಕೊಡಚಾದ್ರಿಯ ಪ್ರಸಿದ್ದಿಗೆ ಮತ್ತೊಂದು ಕಾರಣವೆಂದರೆ ಇದು ’ಸರ್ವಜ್ಞಾನಪೀಠ'ವಾಗಿರುವುದು. ಶ್ರೇಷ್ಠ ತತ್ವಜ್ಞಾನಿ ಆದಿ ಶಂಕರಾಚಾರ್ಯರು ಇಲ್ಲಿಯೇ ಧ್ಯಾನಾಸಕ್ತರಾಗಿದ್ದರು ಎನ್ನಲಾಗುತ್ತದೆ. ಅಕ್ಟೋಬರ್-ಮಾರ್ಚ್ ತಿಂಗಳುಗಳು ಕೊಡಚಾದ್ರಿಯ ಭೇಟಿಗೆ ಸೂಕ್ತ ಸಮಯ ಎನ್ನಬಹುದು, ಮತ್ತು ಈ ಒರಟು ರಸ್ತೆಗಳ ಮೇಲೆ ಪ್ರಯಾಣಿಸಬೇಕೆಂದರೆ ಜೀಪುಗಳ ಪ್ರಯಾಣ ಉತ್ತಮ. ಬಾಡಿಗೆ ಜೀಪುಗಳು ಕೊಲ್ಲೂರಿನಿಂದ ಲಭ್ಯವಿರುತ್ತದೆ. ಇಲ್ಲಿ ಮಳೆಗಾಲಲ್ಲಿ ಜಿಗಣೆಗಳ ಕಾಟ ಅಪಾರ.

Please Wait while comments are loading...