Search
 • Follow NativePlanet
Share
ಮುಖಪುಟ » ಸ್ಥಳಗಳು» ಚಿಕ್ಕಮಗಳೂರು

ಚಿಕ್ಕಮಗಳೂರು - ಅವಿಶ್ರಾಂತರಿಗೆ ವಿರಾಮ ನೀಡುವಂತಹ ತಾಣ

48

ಚಿಕ್ಕಮಗಳೂರು ಪಟ್ಟಣವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳನ್ನು ಹೊಂದಿರುವದರಿಂದ ಜನಪ್ರಿಯವಾಗಿದೆ. ಚಿಕ್ಕಮಗಳೂರು ಪಟ್ಟಣವು ರಾಜ್ಯದ ಮಲೆನಾಡು ಪ್ರದೇಶದಲ್ಲಿದ್ದು ಗುಡ್ಡಗಾಡು ಮತ್ತು ಗದ್ದೆಗಳನ್ನು ಹೊಂದಿದೆ.

ಚಿಕ್ಕಮಗಳೂರು ಎಂದರೆ 'ಚಿಕ್ಕ ಮಗಳ ನೆಲ' ಎಂದರ್ಥ. ಈ ನೆಲವನ್ನು ಇಲ್ಲಿನ ಮುಖ್ಯಸ್ಥನ ಕಿರಿಯ ಪುತ್ರಿಯ ಮದುವೆಯ ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಹೇಳಲಾಗುತ್ತದೆ, ಮತ್ತು ಇಲ್ಲಿ ಹಿರೇಮಗಳೂರು ಎಂಬ ಇನ್ನೋಂದು ಪ್ರದೇಶವಿದ್ದು ಈಗ ಚಿಕ್ಕಮಗಳೂರು ಜಿಲ್ಲೆಯ ಒಂದು ಭಾಗವಾಗಿರುವ ಅದು "ಹಿರೇ ಮಗಳ ನೆಲ"ವಾಗಿದೆ.

ಪಟ್ಟಣ ಹಾಗೂ ಅದರ ರಮಣೀಯತೆ

ಚಿಕ್ಕಮಗಳೂರು ಪಟ್ಟಣವು ಅತಿ ಪುರಾತನ ರೀತಿಯದ್ದಾದರೂ ಇದನ್ನು ಅತ್ಯುತ್ತಮ ವಿಶ್ರಾಂತಿ ನೆಲೆ ಎಂದು ವರ್ಣಿಸಬಹುದಾಗಿದೆ. ಇದರ ಸುತ್ತಮುತ್ತಲಿನ ಪ್ರದೇಶವು ವಿವಿಧ ಸ್ವರೂಪದ ಭೂಚಿತ್ರಣವನ್ನು ಹೊಂದಿದೆ - ಇಳಿಜಾರಿನ ಸಮತಟ್ಟಾದ ಭೂಮಿಯಿಂದ ಹಿಡಿದು ಮಲೆನಾಡಿನ ಬೆಟ್ಟದ ಪ್ರದೇಶಗಳು ಇಲ್ಲಿವೆ. ಜಿಲ್ಲೆಯಲ್ಲಿನ ಬೃಹತ್ ಸಂಖ್ಯೆಯ ಕಾಫಿ ತೋಟಗಳನ್ನು ನೇರವಾಗಿ ಕರ್ನಾಟಕದ ಕಾಫಿ ಬಂಡವಾಳವೆಂದು ಪರಿಗಣಿಸಲಾಗಿದೆ.

ಪ್ರಸಿದ್ಧ ಮಹಾತ್ಮ ಗಾಂಧಿ ಉದ್ಯಾನವನವು ಪಟ್ಟಣದ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಮುಖ್ಯವಾಗಿ ದಸರಾ(ನವರಾತ್ರಿ ನಂತರದ) ಅವಧಿಯಲ್ಲಿ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತಾರೆ, ಏಕೆಂದರೆ ಈ ಸಮಯದಲ್ಲಿ ಜರುಗುವ ಜಾನಪದ ಪ್ರದರ್ಶನ ಮತ್ತು ಸಾಂಸ್ಕೃತಿಕ ದೃಶ್ಯಗಳು ಪ್ರತಿಯೊಬ್ಬರ ಮನಸ್ಸಿಗೆ ನಾಟುವಂತಹದ್ದಾಗಿರುತ್ತದೆ. ಶಾಪಿಂಗ್ ಪ್ರಿಯರು ಎಂ.ಜಿ.ರಸ್ತೆಯಲ್ಲಿ ಉತ್ತಮವಾಗಿ ಕಾಲ ಕಳೆಯಬಹುದು ಮತ್ತು ಸಾಹಸಿಗಳು  ಸುತ್ತಮುತ್ತಲಿನ ಸ್ಥಳಗಳನ್ನು ಪರಿಶೋಧಿಸಬಹುದು.

ಕಾಂಕ್ರೀಟ್ ಕಾಡಿನಿಂದ ಬಚಾವಾಗಲು ಒಳ್ಳೆಯ ತಾಣ

ಚಿಕ್ಕಮಗಳೂರು ಎಲ್ಲಾ ಪ್ರವಾಸಿಗರಿಗೆ ಸ್ವರ್ಗವಿದ್ದಂತೆ ಏಕೆಂದರೆ, ತೀರ್ಥಯಾತ್ರಾ ತಾಣಗಳಿಂದ ಹಿಡಿದು  ಕಾಫಿ ನೆಡುತೋಪುಗಳವರೆಗೆ ರಜೆ ಮತ್ತು ವನ್ಯಜೀವಿ ಪ್ರವಾಸೋದ್ಯಮಗಳಿಂದ ಹಿಡಿದು ಸಾಹಸ ಕ್ರೀಡಾ ಸ್ಥಳಗಳವರೆಗೆ ಎಲ್ಲ ಬಗೆಯ ಪ್ರವಾಸೀ ತಾಣಗಳೂ ಇಲ್ಲಿಗೆ ಹತ್ತಿರದಲ್ಲಿವೆ. ಬೆಟ್ಟ ಪ್ರದೇಶಗಳು, ದೇವಸ್ಥಾನ - ಪಟ್ಟಣಗಳು, ಜಲಪಾತಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು - ಚಿಕ್ಕಮಗಳೂರು ಎಲ್ಲವನ್ನೂ ಹೊಂದಿದೆ.

ಕೆಮ್ಮಣ್ಣುಗುಂಡಿ, ನಾಲ್ಕನೇ  ಕೃಷ್ಣರಾಜ ಒಡೆಯರ್ ಅವರ ನೆಚ್ಚಿನ ರಜಾ ತಾಣವಾಗಿತ್ತು, ಇದು ಒಂದು ಮೋಡಿಮಾಡುವಂತಹ ಗಿರಿಧಾಮ. ಗುಲಾಬಿ ವನ ಮತ್ತು ಸುಂದರ ಜಲಪಾತಗಳಂತಹ ಅನೇಕ ಆಕರ್ಷಣೆಗಳನ್ನು ಒಳಗೊಂಡಿದ್ದು ಪಟ್ಟಣದಿಂದ ಅನತಿ ದೂರದಲ್ಲಿದೆ.

ಸೊಂಪಾದ ಹುಲ್ಲುಗಾವಲುಗಳು ಮತ್ತು ದಟ್ಟ ಕಾಡುಗಳನ್ನು ಹೊಂದಿರುವ ಕುದುರೆಮುಖ ಚಿಕ್ಕಮಗಳೂರು ಪಟ್ಟಣದ ಬಳಿ ಇರುವ ಮತ್ತೊಂದು ಸುಂದರ ಪರ್ವತ ಶ್ರೇಣಿ. ಒಂದು ನಿರ್ದಿಷ್ಟ ಕೋನದಲ್ಲಿ ನೋಡಿದಾಗ ಇಲ್ಲಿನ ಒಂದು ಬೆಟ್ಟವು  ಕುದುರೆಯ ಮುಖವನ್ನು ಹೋಲುವದರಿಂದ ಈ ಸ್ಥಳವು ಕುದುರೆಮುಖ ಎಂಬ ಹೆಸರನ್ನು ಪಡೆದುಕೊಂಡಿದೆ ಮತ್ತು ಕುದುರೆಮುಖವನ್ನು ನೇರವಾಗಿ ಕುದುರೆಯ ಮುಖ ಎಂದು ಭಾಷಾಂತರಿಸಬಹುದು .

ಬಾಬಾ ಬುಡನ್ ಗಿರಿ ಬೆಟ್ಟಗಳ ಸಾಲಿಗೆ ಸೇರಿದ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರದ ಶಿಖರವಾಗಿದೆ. ಬೆಟ್ಟದ ಎತ್ತರ 1930 ಮೀಟರ್  ಮತ್ತು ಇದು ಚಾರಣಕ್ಕೆ ಉತ್ತಮ ತಾಣವಾಗಿದೆ. ಶಿಖರದಿಂದ ಗೋಚರಿಸುವ ರುದ್ರರಮಣೀಯ ಒಂದೆ ಒಂದು ನೋಟವು ಪ್ರವಾಸದ ಮೌಲ್ಯವನ್ನು ಸರಿದೂಗಿಸಿ ಬಿಡುತ್ತದೆ. ಈ ಪ್ರದೇಶವು ಕಳತಗಿರಿ ಜಲಪಾತ ಅಥವಾ ಕಾಳಹಸ್ತಿ ಜಲಪಾತ ದಿಂದ ಹೆಬ್ಬೆಜಲಪಾತದವರೆಗೆ ಬಹಳಷ್ಟು ಜಲಪಾತಗಳನ್ನು ಹೊಂದಿದ್ದು ಇವು ಎರಡು ಹಂತಗಳಲ್ಲಿ ಹರಿಯುತ್ತದೆ.

ಇತರೆ ಜಲಪಾತಗಳಾದ ಮಾಣಿಕ್ಯಧಾರಾ, ಶಾಂತಿ  ಮತ್ತು ಕಡಾಂಬಿ ಜಲಪಾತಗಳನ್ನೂ ಸಹ ಈ ಪ್ರದೇಶದಲ್ಲಿ ಭೇಟಿ ನೀಡಬಹುದು.

ವನ್ಯ ಮತ್ತು ಆಧ್ಯಾತ್ಮಿಕತೆಯ ಉಳಿಕೆ  

ಶೃಂಗೇರಿಯಿಂದ ಹೊರನಾಡು ಮತ್ತು ಕಳಸ ದವರೆಗೆ ಹಲವಾರು ಆಧ್ಯಾತ್ಮಿಕ ಕ್ಷೇತ್ರಗಳು ಚಿಕ್ಕಮಗಳೂರಿಗೆ ಸಮೀಪದಲ್ಲಿವೆ. ಭದ್ರ ಅಭಯಾರಣ್ಯ ಚಿಕ್ಕಮಗಳೂರು ಪಟ್ಟಣದಿಂದ 38 ಕಿಮೀ ದೂರದಲ್ಲಿದ್ದು  ನೆಚ್ಚಿನ ತಾಣವಾಗಿದೆ. ಗುಂಡಿಗೆ ಗಟ್ಟಿ ಇರುವವರು ಅತ್ಯುತ್ತಮ ಪ್ರಕೃತಿ ಅನುಭವಕ್ಕಾಗಿ ಈ ಸ್ಥಳಕ್ಕೆ  ಪ್ರವಾಸ ಕೈಗೊಳ್ಳಬಹುದು.

ಒಟ್ಟಾರೆ, ಈ ಪಟ್ಟಣ ಮತ್ತು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಅವರವರ ಅಭಿರುಚಿಗೆ ತಕ್ಕಂತಹ ನೋಡತಕ್ಕ ಸ್ಥಳಗಳಿದ್ದು ವಿಶ್ರಾಂತವಾಗಿ ರಜೆಕಳೆಯಲು ಅನುಕೂಲಕರವಾಗಿರುವದರ ಮೂಲಕ  ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.

ಚಿಕ್ಕಮಗಳೂರು ಪ್ರಸಿದ್ಧವಾಗಿದೆ

ಚಿಕ್ಕಮಗಳೂರು ಹವಾಮಾನ

ಉತ್ತಮ ಸಮಯ ಚಿಕ್ಕಮಗಳೂರು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚಿಕ್ಕಮಗಳೂರು

 • ರಸ್ತೆಯ ಮೂಲಕ
  ಚಿಕ್ಕಮಗಳೂರಿಗೆ ಹತ್ತಿರದ ಪ್ರಮುಖ ನಗರಗಳಾದ ಬೆಂಗಳೂರು (240 ಕಿಮೀ), ಮಂಗಳೂರು (170 ಕಿಮೀ), ಹುಬ್ಬಳ್ಳಿ (239 ಕಿಮೀ) ಮತ್ತು ತಿರುಪತಿ, ಇವುಗಳಿಗೆ ರಸ್ತೆ ಸಂಪರ್ಕವಿದೆ. ಈ ಪ್ರದೇಶಗಳಿಂದ ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಮತ್ತು ಐಷಾರಾಮಿ ಡೀಲಕ್ಸ್ ಬಸ್ ಗಳು ಚಿಕ್ಕಮಗಳೂರು ತಲುಪಲು ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಡೂರು (40 ಕಿಮೀ) ಮತ್ತು ಹಾಸನ (60 ಕಿಮೀ) ಚಿಕ್ಕಮಗಳೂರಿನ ಹತ್ತಿರದ ರೈಲ್ವೇ ನಿಲ್ದಾಣಗಳು. ಆದರೆ, ಸುಮಾರು 239 ಕಿಮೀ ದೂರದಲ್ಲಿರುವ ಹುಬ್ಬಳ್ಳಿ ಚಿಕ್ಕಮಗಳೂರಿನ ಹತ್ತಿರದ ಪ್ರಮುಖ ರೈಲುಮಾರ್ಗದ ತುದಿಯಾಗಿದೆ. ಕಡೂರು ಮತ್ತು ಹಾಸನ ರೈಲ್ವೆ ನಿಲ್ದಾಣಗಳಿಂದ ಚಿಕ್ಕಮಗಳೂರಿಗೆ ಟ್ಯಾಕ್ಸಿಗಳು ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣವು ಚಿಕ್ಕಮಗಳೂರಿನ ಹತ್ತಿರದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಹಿಂದೆ ಇದನ್ನು ಬಜ್ಪೆ ಏರ್ಪೋರ್ಟ್ ಎಂದು ಕರೆಯಲಾಗುತ್ತಿತ್ತು, ಇದು ಗಮ್ಯಸ್ಥಾನ ದಿಂದ 170 ಕಿಮೀ ದೂರದಲ್ಲಿದೆ. ವಿಮಾನಗಳು ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಭಾರತದ ಪ್ರಮುಖ ನಗರಗಳು ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವೆ. ವಿಮಾನನಿಲ್ದಾಣ ತಲುಪಿದ ಮೇಲೆ, ಪ್ರವಾಸಿಗರು ಚಿಕ್ಕಮಗಳೂರು ತಲುಪಲು ಟ್ಯಾಕ್ಸಿಗಳನ್ನು ಪಡೆದುಕೊಳ್ಳಬಹುದು.
  ಮಾರ್ಗಗಳ ಹುಡುಕಾಟ

ಚಿಕ್ಕಮಗಳೂರು ಲೇಖನಗಳು

One Way
Return
From (Departure City)
To (Destination City)
Depart On
24 Sep,Fri
Return On
25 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Sep,Fri
Check Out
25 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Sep,Fri
Return On
25 Sep,Sat