ಆಗುಂಬೆ- ಕಾಳಿಂಗ ಸರ್ಪಗಳ ರಾಜಧಾನಿ.

 

 

ಆಗುಂಬೆಯು ಮಲೆನಾಡು ಪ್ರಾಂತ್ಯದ ತೀರ್ಥಹಳ್ಳಿ (ರಾಷ್ಟ್ರಕವಿ ಕುವೆಂಪು ಅವರ ತವರು) ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು. ಆ ಸೂರ್ಯಾಸ್ತದ ದೃಶ್ಯಕ್ಕಾಗಿ ಈ ಜಾಗ  ಪ್ರಸಿದ್ಧವಾಗಿದೆ. ಅಲ್ಲದೆ ಈ ಊರಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುತ್ತದೆ. ತನ್ನ ನಯನ ಮನೋಹರ ಪ್ರಾಕೃತಿಕ ಸೊಬಗಿಗೆ ಇದು ಹೆಸರುವಾಸಿ.

ಆಗುಂಬೆಯ ಕುರಿತು

ಆಗುಂಬೆಯಲ್ಲಿ ಕಾಣಸಿಗುವ  ಪ್ರಾಣಿ ಮತ್ತು ಸಸ್ಯಸಂಕುಲಗಳಿಗಾಗಿ ನಾವು ಮಲೆನಾಡಿಗೆ ವಿಶೇಷ ಧನ್ಯವಾದವನ್ನು ಅರ್ಪಿಸಬೇಕು. ಹಾಗಾಗಿಯೇ ಆಗುಂಬೆಯು ಭಾರತದ ಮಲೆನಾಡು ಸಂಶೋಧನಾ ಕೇಂದ್ರವಾಗಿದೆ. ಅಲ್ಲದೆ ಆಗುಂಬೆಯು ಆಯುರ್ವೇದ ಗಿಡಮೂಲಿಕೆಗಳ ಸಂರಕ್ಷಿತ ಪ್ರದೇಶವಾಗಿರುವುದರಿಂದ ಪ್ರವಾಸಿಗರು ವಿವಿಧೆಡೆಗಳಿಂದ ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಲು ಆಗುಂಬೆಗೆ ಆಗಮಿಸುತ್ತಾರೆ. ಅಲ್ಲದೆ ಈ ಪ್ರಾಂತ್ಯ ಹಲವು ಸುಂದರವಾದ ಜಲಪಾತಗಳನ್ನು ಸಹಾ ಒಳಗೊಂಡಿದೆ.

ಆಗುಂಬೆಯು 3 ಚ ,ಕಿ.ಮೀ ವಿಸ್ತೀರ್ಣವೊಂದಿದ್ದು 500 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದೆ. ಇವರು ಮುಖ್ಯವಾಗಿ ಅಡಿಕೆ ತೋಟಗಳನ್ನು ಮತ್ತು ಕಾಡಿನ ಉತ್ಪನ್ನಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ. ಕಾಡಿನಲ್ಲಿ ನಿಬಿಡವಾಗಿರುವ ವೃಕ್ಷಸಮೂಹ ಮತ್ತು ಅದರೆಡೆ ವಾಸಿಸುವ ಜೀವಿಗಳ ಹೊರತಾಗಿಯು, ಆಗುಂಬೆ ಪರಿಸರ ಪ್ರಿಯರಿಗೆ ಒಂದು ಉತ್ತಮ ಚಾರಣದ ಅವಕಾಶವನ್ನು ಒದಗಿಸುತ್ತದೆ. ಆಗುಂಬೆಯು ಅತಿ ಉದ್ದವಾದ ಮತ್ತು ವಿಷಪೂರಿತವಾದ ಕಾಳಿಂಗ ಸರ್ಪಗಳ ತವರಾಗಿದೆ, ಈ ಸರ್ಪಗಳು ಇಲ್ಲಿನ ಹೆಗ್ಗುರುತು.

ನೀವು ಆಗುಂಬೆಗೆ ಭೇಟಿಕೊಟ್ಟಾಗ ಬರ್ಕನ ಜಲಪಾತ, ಕುಂಚಿಕಲ್ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿ ಗುಂಡಿ ಮತ್ತು ಕೂಡ್ಲು ತೀರ್ಥ ಜಲಪಾತಗಳನ್ನು ವೀಕ್ಷಿಸಬಹುದು. ಆಗುಂಬೆಗೆ ರಸ್ತೆ ಮತ್ತು ರೈಲಿನ ಮೂಲಕ ತಲುಪಬಹುದು( ಹತ್ತಿರದ ರೈಲ್ವೆ ಜಂಕ್ಷನ್ ಉಡುಪಿಯಲ್ಲಿದೆ). ಇಲ್ಲಿ ನೀವು ಸ್ಥಳೀಯ ಆಹಾರದ ರುಚಿ ಸವಿಯಬಹುದು. ಪ್ರವಾಸಿಗರಿಗೆ ಉಳಿದುಕೊಳ್ಳಲು ಪ್ರವಾಸಿ ಬಂಗಲೆ ಮತ್ತು ಅತಿಥಿಗೃಹ ಎರಡು ಸ್ಥಳ ಮಾತ್ರ ಇಲ್ಲಿ ಸಿಗುತ್ತದೆ. ಅದಕ್ಕೆ ಹಣ ನೀಡಬೇಕು.

Please Wait while comments are loading...