ಒನಕೆ ಅಬ್ಬಿ ಜಲಪಾತವು ಆಗುಂಬೆಯ ಪ್ರವಾಸಿ ತಾಣಗಳಲ್ಲಿಯೇ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಜಲಪಾತಕ್ಕೆ ಮನೆಗಳಲ್ಲಿ ಕುಟ್ಟಲು ಬಳಸುವ ಒನಕೆಯಂತೆ ಕಾಣುವುದರಿಂದ ಒನಕೆ ಹೆಸರು ಬಂದಿದೆ. ಈ ಜಲಪಾತ ಆಗುಂಬೆಯಿಂದ 8 ಕಿ,ಮೀ ದೂರದಲ್ಲಿದ್ದು ಚಾರಣದ ಮೂಲಕ ತಲುಪಬಹುದು. ಅಲ್ಲದೆ ಕಾಲುದಾರಿಯ ಮೂಲಕ ಸಹಾ ಹೋಗಬಹುದು. ಜಲಪಾತದ ಕವಲಿನ ತುದಿ ತಲುಪಲು ಮೆಟ್ಟಿಲುಗಳನ್ನು ಸಹಾ ಕೊರೆದಿದ್ದು ಪ್ರವಾಸಿಗರು ಹತ್ತಿ ಅಲ್ಲಿಂದ ಜಲಪಾತದ ನಯನ ಮನೋಹರ ಸೌಂದರ್ಯವನ್ನು ಸವಿಯಬಹುದು.