Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗುಂಬೆ » ಆಕರ್ಷಣೆಗಳು » ಬರ್ಕಣ ಜಲಪಾತ

ಬರ್ಕಣ ಜಲಪಾತ, ಆಗುಂಬೆ

2

ಬರ್ಕಣ ಜಲಪಾತವು ಭಾರತದ ಅತಿ ಎತ್ತರದ ಜಲಪಾತಗಳಲ್ಲೊಂದಾಗಿದ್ದು 850 ಅಡಿ  ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಆಗುಂಬೆಯಿಂದ ಕೇವಲ 7 ಕಿ.ಮೀ ದೂರದಲ್ಲಿದ್ದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಈ ಪ್ರಾಂತ್ಯದಲ್ಲಿ ಹರಿಯುವ ಸೀತಾನದಿಯಿಂದ ಇದು ಹುಟ್ಟುತ್ತದೆ. ಇದು ಆಗುಂಬೆಗೆ ಬರುವವರೆಲ್ಲರು ನೋಡಲೇ ಬೇಕಾದ ತಾಣವೆಂದು ಹೆಸರಾಗಿದೆ.ಈ ಜಲಪಾತಕ್ಕೆ ’ಬರ್ಕ’ ಎಂಬ ಹೆಸರು  ಇಲ್ಲಿ ವಾಸಿಸುವ ಇಲಿ ಜಿಂಕೆ ಅಥವಾ ’ಬರ್ಕ’ದಿಂದ ಬಂದಿದೆ.

ಪ್ರವಾಸಿಗರು ಈ ಜಲಪಾತ ತಲುಪಲು ಪಶ್ಚಿಮ ಘಟ್ಟದಿಂದ ಗುಂಬೊ ಘಟ್ಟಗಳ ಕಡೆ ಹೋಗುವ ಅತ್ಯಂತ ಕಡಿದಾದ ಹಾದಿಯಲ್ಲಿ ಕಾಲ್ನಡಿಗೆ ಮೂಲಕ ತಲುಪಬಹುದು. ದ್ವಿಚಕ್ರ ವಾಹನ ಹೊಂದಿರುವವರು ವಾಹನಗಳಿಗೆ ಬಳಸುವ ರಸ್ತೆ ಮೂಲಕ ಸಹಾ ಬರ್ಕಣ ಜಲಪಾತ ತಲುಪಬಹುದು. ಚಳಿಗಾಲದ ಮುಂದಿನ ದಿನಗಳು ಈ ಜಲಪಾತ ನೋಡಲು ಪ್ರಶಸ್ತವಾದ ದಿನಗಳಾಗಿವೆ.ಪ್ರವಾಸಿಗರು ಪಶ್ಚಿಮ ಘಟ್ಟದ ಸುಂದರವಾದ ಗಿರಿ ಶಿಖರಗಳ ಸೌಂದರ್ಯವನ್ನು ಬರ್ಕನ ಜಲಪಾತದ ಸಮೀಪವಿರುವ ವೀಕ್ಷಣಾ ಗೋಪುರದಿಂದ ನೋಡಿ ಸವಿಯಬಹುದು. ಈ ಜಲಪಾತವು ಪಶ್ಚಿಮ ಘಟ್ಟದ ವಿವಿಧ ವನಸ್ಪತಿಗಳಿಂದ ಬಿದಿರಿನ ವರೆಗೆ ಬಗೆ ಬಗೆಯ ಸಸ್ಯಗಳಿಂದ ಕೂಡಿದ ಕಾಡಿನಿಂದ ಸುತ್ತುವರೆದಿದೆ. ಈ ಜಲಪಾತವನ್ನು ಹೊರತು ಪಡಿಸಿದರೆ ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಗುರುಜಿ ಗಿಡ. ಮೂಲಗಳ ಪ್ರಕಾರ, ಈ ಗಿಡ ಪ್ರತಿ 7 ವರ್ಷಗಳಿಗೊಮ್ಮೆ ಬೆಳೆಯುತ್ತದೆ ಮತ್ತು ಅನಾವೃಷ್ಟಿಯ ಸೂಚನೆಯನ್ನು ಕೊಡುತ್ತದೆಯಂತೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat