ಗೋಕರ್ಣ - ದೇವಾಲಯ ಮತ್ತು ಬಿಳೀಯ ಮರಳಿನ ಸ್ಥಳ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ  ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ  ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು  ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ  ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ.

ಗೋಕರ್ಣದಲ್ಲಿನ ಮಹಾಬಲೇಶ್ವರ ಶಿವನ ದೇವಾಲಯವು  ದೇಶದ ಎಲ್ಲ ಹಿಂದೂ ಭಕ್ತರಿಗೂ (ಹೆಚ್ಚಾಗಿ ಶಿವನ ಆರಾಧಕರಿಗೆ ) ಇದನ್ನು ಪುಣ್ಯ ಸ್ಥಳವಾಗಿ ಮಾಡಿದೆ. ಈ ದೇವಾಲಯದ ಉಲ್ಲೇಖವನ್ನು ತಮಿಳು ಕವಿಗಳಾದ ಅಪ್ಪಾರ್ ಮತ್ತು ಸಂಬಂದಾರ್  ರವರ ರಚನೆಗಳಲ್ಲಿ ಕಾಣಬಹುದು ಇವರ ಕೀರ್ತನೆಗಳು ತುಳು ನಾಡಿನ ಒಡೆಯನ ಹೊಗಳಿಕೆಗೆ ಸಾಕ್ಷಿಯಾಗಿವೆ. ಈ ಸ್ಥಳವು ಮೂಲವಾಗಿ ವಿಜಯನಗರ ಅರಸರಾದ ಕದಂಬರ ಆಳ್ವಿಕೆಯಲ್ಲಿದ್ದ  ಇದನ್ನು ನಂತರದಲ್ಲಿ ಪೋರ್ಚುಗೀಸರು ಆಕ್ರಮಿಸಿಕೊಂಡರು .

ಇತಿಹಾಸದ ಸಣ್ಣ ಮೆಲುಕು

ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿರುವ ಶಿವಲಿಂಗವನ್ನು ರಾವಣನು ಇಲ್ಲಿಗೆ ತಂದನೆಂಬುದು ನಂಬಿಕೆ. ಆತನಲ್ಲಿ ವಿಶೇಷ ಶಕ್ತಿಯನ್ನು ತುಂಬುವುದಲ್ಲದೆ ಆತನನ್ನು ಅತ್ಯಂತ ಬಲಿಷ್ಠವಾಗಿಸಬಲ್ಲ ಲಿಂಗವಾದ ಆತ್ಮಲಿಂಗವನ್ನು ಆತ ಪಡೆದು ತಂದಿದ್ದನು. ಈಗಾಗಲೇ ದುಷ್ಟನಾಗಿದ್ದ ರಾಜನು ಮತ್ತಷ್ಟು ಬಲಿಷ್ಠನಾಗಬಾರದೆಂಬ ಕಾರಣದಿಂದ  ದೇವತೆಗಳು  ಗಣೇಶನ ಸಹಕಾರದೊಂದಿಗೆ ಆತ ಲಿಂಗವನ್ನು ಇಲ್ಲಿಯೇ ಬಿಡುವಂತೆ ತಂತ್ರ ಹೂಡಿದರು .

ಮಹಾಬಲೇಶ್ವರ ದೇವಾಲಯವನ್ನು ಹೊರತುಪಡಿಸಿ  ಇತರೆ ಗಮನ ಸೆಳೆಯುವ ದೇವಾಲಯಗಳಾದ ಮಹಾ ಗಣಪತಿ ದೇವಾಲಯ , ಭದ್ರಕಾಳಿ ದೇವಾಲಯ, ವರದರಾಜ ದೇವಾಲಯ ಮತ್ತು  ವೆಂಕಟರಮಣ ದೇವಾಲಯಗಳೂ ಇಲ್ಲಿವೆ.

ಗೋಕರ್ಣದಲ್ಲಿನ ಸಮುದ್ರ ತೀರ ಮತ್ತು ಮರಳಿನ ಪ್ರದೇಶಗಳು

ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು  ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ  ಸಮುದ್ರ ತೀರ, ಗೋಕರ್ಣ ತೀರ, ಅರ್ಧ ಚಂದಿರ ಸಮುದ್ರ ತೀರ, ಪ್ಯಾರಾಡೈಸ್ ತೀರ  ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಸಮುದ್ರ ಪ್ರದೇಶದ ಆಕರ್ಷಣೆಗಳಾಗಿವೆ.

ಈ ಪಟ್ಟಣದ ಪ್ರಮುಖ ಸಮುದ್ರ ತೀರವಾದ ಗೋಕರ್ಣ ತೀರದಲ್ಲಿ  ಭಕ್ತಾದಿಗಳು  ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸೇರುತ್ತಾರೆ ಕುಡ್ಲೆ ಕರಾವಳಿ ಪ್ರದೇಶವು ಅತ್ಯಂತ ದೊಡ್ಡ ತೀರವಾಗಿದ್ದು  ಸೂಕ್ತ ಸಮಯವಾದ ನವೆಂಬರ್ ನಿಂದ ಫೆಬ್ರವರಿಯಲ್ಲಿ ಜನಭರಿತವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದು ಈಜುವುದಕ್ಕೆ ಬಹಳ ಅಪಾಯಕಾರಿ ಸ್ಥಳವಾಗಿದೆ.

ಓಂ ಸಮುದ್ರ ತೀರವು ಹಿಂದೂಗಳ ಚಿಹ್ನೆ ಯಾದ ಓಂ ಆಕಾರದಲ್ಲಿರುವ ಸುಂದರವಾದ ಕರಾವಳಿ ರೇಖೆಯನ್ನು ಹೊಂದಿದೆ. ಈ ಬೃಹತ್ ಚಿಹ್ನೆಯ ಸುತ್ತಾಕಾರ ಸಣ್ಣ ಕೊಳವನ್ನು ನಿರ್ಮಿಸಿದ್ದು ಇದು ಈಜು ಬಾರದ ಜನರಿಗೂ ಜಳಕ ಮಾಡಲು ಸುರಕ್ಷಿತ ಸ್ಥಳವಾಗಿದೆ.

ಹಾಫ್ ಮೂನ್ ಸಮುದ್ರ ತೀರವು ಓಂ ತೀರದಿಂದ ಕೇವಲ 20 ನಿಮಿಷಗಳ ನಡಿಗೆಯ ಅಂತರದಲ್ಲಿದ್ದು ಇಲ್ಲಿಗೆ ತಲುಪಲು ನೀವು ಸಣ್ಣ ಗುಡ್ಡೆಯ ಮಾರ್ಗವಾಗಿ ಸಾಗಿ ತಲುಪಬೇಕು.

ಪ್ಯಾರಾಡೈಸ್ ಸಮುದ್ರ ತೀರವು  ಕಲ್ಲು ಬಂಡೆಗಳಿಂದ ಕೂಡಿದ ಕರಾವಳಿ ಪ್ರದೇಶವಾಗಿದ್ದರೂ  ಪ್ರಶಾಂತ ಮತ್ತು ಚೆಲುವಿನ ಸ್ಥಳವೆನಿಸಿದೆ  ಇದೇ ಕಾರಣದಿಂದ ತನ್ನ ಹೆಸರನ್ನು ಪಡೆದಿದೆ. ಸಮುದ್ರದ ಅಲೆಗಳು  ಸತತವಾಗಿ ಬಂಡೆಗಳಿಗೆ ಜೋರಾಗಿ ಅಪ್ಪಳಿಸುವುದರಿಂದ ಈ ಸ್ಥಳವು ಈಜುಗಾರರಿಗೆ  ಸೂಕ್ತವಲ್ಲ.

ಗೋಕರ್ಣವು ಅಸಾಧಾರಣ ಸ್ಥಳಗಳಲ್ಲಿ ಒಂದಾಗಿದ್ದು ಪುಣ್ಯಕ್ಷೇತ್ರದ ಜೊತೆಗೆ ಸಮಯ ಕಳೆಯ ಬಯಸುವ ಪ್ರವಾಸಿಗರನ್ನು  ಸುಲಭವಾಗಿ ಆಕರ್ಷಿಸುತ್ತದೆ. ಸುಂದರವಾದ ದೇವಾಲಯಗಳು ಮತ್ತು ಆಕರ್ಷಣೀಯ ಸಮುದ್ರ ತೀರಗಳು ಗೋಕರ್ಣವನ್ನು  ಗಮನಾರ್ಹ ಪ್ರವಾಸೀ ತಾಣವನ್ನಾಗಿ ಮಾಡಿವೆ .

Please Wait while comments are loading...