Search
 • Follow NativePlanet
Share
ಮುಖಪುಟ » ಸ್ಥಳಗಳು» ಯಲ್ಲಾಪುರ

ಯಲ್ಲಾಪುರ – ಕಾಡು ಜಲಪಾತಗಳ ಊರು.

16

ಯಲ್ಲಾಪುರ ಎಂದೆಂದಿಗು ಬದಲಾಗದ ಸಾಮಾನ್ಯ ಹಳೆಯಕಾಲದ ಊರಾದರು, ಅದರ ನಿಬ್ಬೆರಗಾಗುವ ಸೌಂದರ್ಯದಿಂದಾಗಿ ಪ್ರಸಿದ್ಧವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ನೆಲೆಗೊಂಡಿದ್ದು, ಸಮುದ್ರ ಮಟ್ಟದಿಂದ 1774 ಅಡಿಗಳಷ್ಟು ಎತ್ತರದಲ್ಲಿದೆ. ಈ ಊರಿನ ಸುತ್ತಲಿನ ಬೆಟ್ಟಗಳಲ್ಲಿ ರಭಸದಿಂದ ಧುಮ್ಮಿಕ್ಕುವ ಜಲಪಾತಗಳು ಇಲ್ಲಿನ ಕಣಿವೆಗಳನ್ನು ಅದ್ಭುತ ತಾಣಗಳಾಗಿ ಮಾರ್ಪಡಿಸಿವೆ.

 

ಯಲ್ಲಾಪುರದಲ್ಲಿ  ನೋಡಬೇಕಾದುದು ಮತ್ತು ಮಾಡಬೇಕಾದುದು.

ಇಲ್ಲಿನ ಸಾತೊಡ್ಡಿ ಜಲಪಾತ ಕರ್ನಾಟಕದ ಅತ್ಯಂತ ಆಕರ್ಷಕ ಜಲಪಾತಗಳಲ್ಲಿ ಒಂದು ಎಂದು ಕರೆಯಲ್ಪಟ್ಟಿದೆ. ಈ ಜಲಪಾತಕ್ಕೆ ಹೋಗುವ ಹಾದಿಯಲ್ಲಿ ನೀವು ಸುತ್ತಲಿನ ಅದ್ಭುತ ನಿಸರ್ಗ ಸೌಂದರ್ಯವನ್ನು ಸವಿಯಬಹುದು. ಇಲ್ಲಿನ ಮಾಗೋಡು ಜಲಪಾತವು ಸಹಾ ತನ್ನ ಅದ್ವಿತೀಯ ಸೊಬಗಿನಿಂದಾಗಿ ಜನರ ಆಕರ್ಷಣೆಗೆ ಪಾತ್ರವಾಗಿದೆ.

ಈ ಊರು ತನ್ನ ಜೀವ ವೈವಿಧ್ಯಗಳಿಗೆ ಹೆಸರಾದ ದಟ್ಟ ಕಾನನದ ನಡುವೆ ನೆಲೆಗೊಂಡಿದೆ. ಇಲ್ಲಿ ನೀವು ವಿಹಾರಕ್ಕೆ ಅಥವಾ ಚಾರಣಕ್ಕೆ ಹೋದರೆ ವಿವಿಧ ಬಗೆಯ ಪ್ರಾಣಿಗಳನ್ನು, ಪಕ್ಷಿಗಳನ್ನು ಮತ್ತು ಗಿಡಮರಗಳನ್ನು ಕಣ್ಣು ತುಂಬಿಕೊಳ್ಳಬಹುದು. ಈ ಕಾಡಿನ ನಡುವೆ ಇರುವ ಕವಿ ಕೆರೆಯು ತನ್ನ ನಿರ್ಮಲ ಮತ್ತು ನೀರವ ವಾತಾವರಣದಿಂದಾಗಿ ಮೈ ಮನಗಳಿಗೆ ಮುದನೀಡುತ್ತದೆ. ಯಲ್ಲಾಪುರದಿಂದ 30 ಕಿ.ಮೀ ದೂರದಲ್ಲಿ ಕಳಚೆ ಗ್ರಾಮವು ಇದ್ದು ಅಲ್ಲಿನ ದುರ್ಗಾ ದೇವಿ ದೇವಾಲಯ ನೋಡಲು ಪ್ರಶಸ್ತವಾಗಿರುವ ಸ್ಥಳಗಳಲ್ಲಿ ಒಂದಾಗಿದೆ.

ಇಲ್ಲಿಗೆ ಸಮೀಪದ ರೈಲ್ವೆ ನಿಲ್ದಾಣವು ಹುಬ್ಬಳ್ಳಿಯಲ್ಲಿದ್ದು, ಇದು ಬೆಂಗಳೂರು, ಮಂಗಳೂರು ಮತ್ತು ಚೆನ್ನೈಗಳೊಂದಿಗೆ ಉತ್ತಮ ರೈಲು ಸಂಪರ್ಕ ಸೇವೆಯನ್ನು ಹೊಂದಿದೆ. ಹುಬ್ಬಳ್ಳಿಯು ಯಲ್ಲಾಪುರದಿಂದ 71 ಕಿ.ಮೀ ದೂರದಲ್ಲಿದ್ದು , ಟ್ಯಾಕ್ಸಿಯಲ್ಲಿ ಇಲ್ಲಿಗೆ ತಲುಪಬಹುದು. ಆದರು ಈ ಜಲಪಾತ ವೀಕ್ಷಿಸಲು ಮಳೆಗಾಲದಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ನವೆಂಬರ್ ನಿಂದ ಫೆಬ್ರವರಿವರೆಗಿನ ಕಾಲ ಇಲ್ಲಿಗೆ ಭೇಟಿಕೊಡಲು ಸೂಕ್ತ ಸಮಯವಾಗಿದೆ.

ಯಲ್ಲಾಪುರ ಪ್ರಸಿದ್ಧವಾಗಿದೆ

ಯಲ್ಲಾಪುರ ಹವಾಮಾನ

ಯಲ್ಲಾಪುರ
25oC / 76oF
 • Partly cloudy
 • Wind: WSW 3 km/h

ಉತ್ತಮ ಸಮಯ ಯಲ್ಲಾಪುರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಯಲ್ಲಾಪುರ

 • ರಸ್ತೆಯ ಮೂಲಕ
  ಯಲ್ಲಾಪುರಕ್ಕೆ ಎಲ್ಲಾ ಪ್ರಮುಖ ನಗರಗಳಿಂದ ನಿಯಮಿತವಾಗಿ ಬಸ್ಸುಗಳ ಸೌಕರ್ಯವಿದ್ದು, ಅವುಗಳ ಮೂಲಕ ತಲುಪಬಹುದು. ಇದು ಮಿತವ್ಯಯಿ ಅಷ್ಟೆ ಅಲ್ಲದೆ ಸುರಕ್ಷಿತವು ಆಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹುಬ್ಬಳ್ಳಿ ರೈಲು ನಿಲ್ದಾಣವು ಯಲ್ಲಾಪುರಕ್ಕೆ ಅತ್ಯಂತ ಹತ್ತಿರದ ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ಇಲ್ಲಿಂದ 71ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿಯು ಬೆಂಗಳೂರು ಮತ್ತು ಮಂಗಳೂರು ಅಲ್ಲದೆ ದೇಶದ ಇತರ ಮಹಾನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಪ್ರವಾಸಿಗರು ಇಲ್ಲಿಂದ ಹವಾನಿಯಂತ್ರಿತ ಟ್ಯಾಕ್ಸಿಗಳನ್ನು ಮತ್ತು ಕ್ಯಾಬ್ ಹಾಗು ಬಸ್ಸುಗಳ ಮೂಲಕ ಯಲ್ಲಾಪುರ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹುಬ್ಬಳ್ಳಿಯು ಯಲ್ಲಾಪುರಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ದೇಶದ ಪ್ರಮುಖ ಮಹಾನಗರಗಳಾದ ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈಗಳೊಂದಿಗೆ ವಿಮಾನ ಯಾನ ಸಂಪರ್ಕ ಹೊಂದಿದೆ. ಇದು ಯಲ್ಲಾಪುರದಿಂದ 73 ಕಿ.ಮೀ ದೂರದಲ್ಲಿ ಇದೆ. ಇನ್ನು ಯೂರೋಪ್, ಏಶಿಯಾ, ಅಮೆರಿಕಾ ಮತ್ತು ಮಧ್ಯ ಪ್ರಾಚ್ಯದಂತಹ ದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಗೋವಾದ ಡಾಬೊಲಿಮ್ ವಿಮಾನ ನಿಲ್ದಾಣವು ವಿಮಾನ ಸಂಪರ್ಕ ಕಲ್ಪಿಸುತ್ತದೆ. ಕೆಲವೊಂದು ಚಾರ್ಟರ್ ವಿಮಾನಗಳು ನಿಯಮಿತವಾಗಿ ಈ ವಿಮಾನ ನಿಲ್ದಾಣಕ್ಕೆ ಕಾಲ ಕಾಲಕ್ಕೆ ಬರುತ್ತಿರುತ್ತವೆ. ಇದು ಯಲ್ಲಾಪುರದಿಂದ 194 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Oct,Wed
Return On
17 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Oct,Wed
Check Out
17 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Oct,Wed
Return On
17 Oct,Thu
 • Today
  Yellapur
  25 OC
  76 OF
  UV Index: 7
  Partly cloudy
 • Tomorrow
  Yellapur
  22 OC
  71 OF
  UV Index: 7
  Partly cloudy
 • Day After
  Yellapur
  21 OC
  70 OF
  UV Index: 7
  Partly cloudy