ಆಗುಂಬೆ- ಕಾಳಿಂಗ ಸರ್ಪಗಳ ರಾಜಧಾನಿ.
ಆಗುಂಬೆಯು ಮಲೆನಾಡು ಪ್ರಾಂತ್ಯದ ತೀರ್ಥಹಳ್ಳಿ (ರಾಷ್ಟ್ರಕವಿ ಕುವೆಂಪು ಅವರ ತವರು) ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು. ಆ ಸೂರ್ಯಾಸ್ತದ ದೃಶ್ಯಕ್ಕಾಗಿ ಈ ಜಾಗ ಪ್ರಸಿದ್ಧವಾಗಿದೆ. ಅಲ್ಲದೆ ಈ ಊರಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುತ್ತದೆ. ತನ್ನ ನಯನ ಮನೋಹರ ಪ್ರಾಕೃತಿಕ......
ಐಜಾಲ್ : ಎತ್ತರದಲ್ಲಿರುವ ಸುಂದರ ಪ್ರದೇಶ
ಭಾರತ ದೇಶದ ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಒಂದಾದ ಮಿಜೋರಾಮ್ ರಾಜ್ಯಕ್ಕೆ ಐಜಾಲ್ ರಾಜಧಾನಿ. ಬೆಟ್ಟ, ಕಣಿವೆ, ಇಳಿಜಾರು ಪ್ರದೇಶದ ಮೇಲೆ ಸುಂದರವಾದ ಐಜಾಲ್ ನಗರ ಆವರಿಸಿದೆ. ಒಂದು ಶತಮಾನ ಹಳೆಯ ಇತಿಹಾಸ ಹೊಂದಿರುವ ಈ ರಾಜಧಾನಿ ನಗರ ಸಮುದ್ರ ಮಟ್ಟದಿಂದ ಸುಮಾರು 1132 ಮೀಟರ್ ಎತ್ತರದಲ್ಲಿದೆ. ಈ ನಗರದ ಉತ್ತರ ಭಾಗಕ್ಕೆ ದುರ್ತಲಾಂಗ್ ಶಿಖರವಿದೆ. ಈ ನಗರದಲ್ಲಿ ಹರಿಯುವ......
ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ
ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೈಸರ್ಗಿಕ ಸೌಂದರ್ಯ ಎಂತಹವರನ್ನಾದರೂ ಮೌನಿಯನ್ನಾಗಿಸಿ ಬಿಡುತ್ತದೆ! ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ.......
ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ
ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ ಉಪನದಿಗಳಾದ ಯೊಮ್ಗೊ ಮತ್ತು ಸಿಪು ನದಿಗಳ ದಂಡೆಯಲ್ಲಿ, ಅಸ್ಸಾಂ ಮತ್ತು ಅರುಣಾಚಲ್ ಪ್ರದೇಶದ ಗಡಿಯಲ್ಲಿ ನೆಲೆಗೊಂಡಿದೆ. ಈ ಪಟ್ಟಣವು ಸಮುದ್ರ ಮಟ್ಟದಿಂದ......
ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ ಸಮರ್ಪಿತವಾಗಿವೆ. ಅಂಬಾಜಿ ಮಠದ ಪೀಠವು ಗಬ್ಬಾರ್ ಬೆಟ್ಟಗಳ ತುದಿಯಲ್ಲಿದ್ದು, ಬನಸ್ಕಂಥ (Banaskantha) ಜಿಲ್ಲೆಯ ದಂತ ತಲುಕದಲ್ಲಿದೆ. ಈ ಬನಸ್ಕಂಥ......
ಅಂಬೋಲಿ - ಪ್ರಮುಖವಾದ ಐತಿಹಾಸಿಕ ಕೇಂದ್ರ
ಭಾರತದಲ್ಲಿ ಬ್ರಿಟೀಷರು ಆಡಳಿತ ನಡೆಸುತಿದ್ದ ಸಂದರ್ಭದಲ್ಲಿ ಅಂಬೋಲಿ ಪ್ರದೇಶವನ್ನು ರಕ್ಷಣಾ ಸೈನ್ಯದ ತರಬೇತಿ ಕೇಂದ್ರವನ್ನಾಗಿ ಬಳಕೆ ಮಾಡುತ್ತಿದ್ದರು ಹಾಗು ಇಲ್ಲಿಂದ ಕೇಂದ್ರ ಹಾಗೂ ದಕ್ಷಿಣ ಭಾರತದ ಪ್ರದೇಶಗಳಿಗೆ ಸೇನೆಯನ್ನು ಕಳುಹಿಸಲಾಗುತ್ತಿತ್ತು.1880 ರ ಸುಮಾರಿನಲ್ಲಿ ಅಂಬೋಲಿಯನ್ನು ಬೆಟ್ಟ ಪ್ರದೇಶವೆಂದು ಗುರುತಿಸಲಾಯಿತು. ಬ್ರಿಟಿಷರಿಗೂ ಮೊದಲು ಇಲ್ಲಿನ ಸ್ಥಳೀಯ......
ಅಂತರಗಂಗೆ – ಅತ್ತ್ಯುನ್ನತ ಸಾಹಸಕ್ಕೆ ಕಟ್ಟಕಡೆಯ ಸ್ಥಳ
ಎಂತಹ ಸಾಹಸ ಪ್ರಿಯರ ಮನವನ್ನೇ ಆಗಲಿ ಸೆಳೆಯುವ ಶಕ್ತಿಯುಳ್ಳ ಸ್ಥಳ ಅಂತರಗಂಗೆ. ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಶಿಖರಗಳ ಮೇಲಿರುವ ಸದಾ ಹರಿವ ಸಣ್ಣ ಹೊಳೆಯಿಂದ ಅಂತರಗಂಗೆ ಎಂಬ ಹೆಸರು ಬಂದಿದೆ. ಬೃಹತ್ತಾದ ಬಂಡೆಗಳ ರಚನೆಗಳಿಂದ ಸೃಷ್ಟಿಯಾಗಿರುವ ಸಣ್ಣ ಮತ್ತು ದೊಡ್ಡ ಗುಹೆಗಳ ನಡುವೆ ಈ ಝರಿಯೂ ಹರಿಯುತ್ತಾ ಸಾಗುತ್ತದೆ. ಈ ಪರ್ವತ ಶ್ರೇಣಿಯ ಅಡಿಯಲ್ಲಿ......
ಅರಕು ಕಣಿವೆ - ಆಂಧ್ರ ಪ್ರದೇಶದ ಒಂದು ಗಿರಿಧಾಮ
ಅರಕು ಕಣಿವೆಯು ದಕ್ಷಿಣ ಭಾರತದಲ್ಲಿರುವ ಆಂಧ್ರ ಪ್ರದೇಶ ರಾಜ್ಯದಲ್ಲಿರುವ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಒಂದು ಗಿರಿಧಾಮವಾಗಿದೆ. ಈ ಪಟ್ಟಣವು ಪೂರ್ವ ಘಟ್ಟದ ಪ್ರಶಾಂತವಾದ ಹಾಗು ಸುಂದರವಾದ ಪ್ರದೇಶದಲ್ಲಿ ನೆಲೆಗೊಂಡಿದ್ದು ತನ್ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಶ್ರೀಮಂತಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ಗಿರಿಧಾಮವು ಯಾವುದೇ ರೀತಿಯಲ್ಲಿ......
ಅರಿಟಾರ್ - ಮಿತಿಯಿಲ್ಲದ ಸೌಂದರ್ಯ !
ಕೆಲವು ಸ್ಥಳಗಳು ದೈವದತ್ತ. ಯಾಕೆಂದರೆ ಇಂತಹ ಸ್ಥಳಗಳಲ್ಲಿರುವ ಹಸಿರು ಸಿರಿ ಎಲ್ಲರ ಮೈಮನ ತಣಿಸುವಂತದ್ದು. ಇನ್ನೂ ಕೆಲವು ಸ್ಥಳಗಳು ಪ್ರಕೃತಿಯ ತುಂಬಿದ ಒಡಲು. ಇಂತಹ ಅದ್ಭುತ ಸ್ಥಳಗಳಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬನ್ನಿ, ಸಮೃದ್ಧ ಸೌಂದರ್ಯ ನಗರಿ ಅರಿಟಾರ್ ನ್ನೊಮ್ಮೆ ಸುತ್ತಿ ಬರೋಣ! ತನ್ನ ಸ್ವಾಭಾವಿಕ ಸೌಂದರ್ಯ ಮತ್ತು ಶ್ರೀಮಂತ......
ಔಲಿ - ಸಖತ್ ಆಗಿ ಸ್ಕೇಟ್ ಮಾಡಿ
ಇಡೀ ವಿಶ್ವದಲ್ಲೇ ಔಲಿ ಸ್ಕೀಯಿಂಗ್ (ಹಿಮದ ಇಳಿಜಾರಿನಲ್ಲಿ ವಿಶೇಷವಾದ ಸಾಧನಗಳ ಮೂಲಕ ಜಾರುವುದು) ಗೆ ಅತ್ಯಂತ ಹೆಸರುವಾಸಿಯಾದ ಪ್ರದೇಶವಾಗಿದೆ. ಈ ಸುಂದರವಾದ ಪ್ರದೇಶವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿದ್ದು, ಓಕ್ ಹಾಗೂ ಕೋನಿಫೆರೋಸ್ ಮರಗಳ ಆಕರ್ಷಕವಾದ ನೋಟವನ್ನು ಒದಗಿಸುತ್ತದೆ. ಈ ಪ್ರದೇಶದ ಇತಿಹಾಸವು 8ನೇ ಶತಮಾನದಿಂದ ಆರಂಭವಾಗುತ್ತದೆ. ಗುರು......
ಬಿಳಿಗಿರಿರಂಗನ ಬೆಟ್ಟ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಬರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸುಂದರ ದೇವಸ್ಥಾನ ನೋಡಲು ಹಲವಾರು ಪ್ರವಾಸಿಗರು ಬರುತ್ತಾರೆ. ಈ ಪ್ರದೇಶವು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಮಧ್ಯ ಇರುವುದರಿಂದ ಮಹತ್ವದ ಪ್ರಾಕೃತಿಕ ಹಿನ್ನೆಲೆಯನ್ನೂ ಕೂಡ ಹೊಂದಿದೆ. ಈ ಬೆಟ್ಟದಲ್ಲಿ ರಂಗಸ್ವಾಮಿಯ ದೇವಸ್ಥಾನವಿದ್ದು ಇದು ಬಿಳಿ ಗುಡ್ಡದ ಮೇಲಿದೆ. ಆದ್ದರಿಂದಲೇ ಇದನ್ನು ಬಿಳಿಗಿರಿ......
ಬಾರಾಮುಲ್ಲಾ - ಆಧ್ಯಾತ್ಮಿಕತೆಯ ಸೆಳೆತ
ಜಮ್ಮು ಕಾಶ್ಮೀರದ 22 ಜಿಲ್ಲೆಗಳಲ್ಲಿ ಬಾರಾಮುಲ್ಲಾ ಕೂಡ ಒಂದು. ಸರಿಸುಮಾರು 4190 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯ 8 ತೆಹಸಿಲ್ ವಿಭಾಗಗಳು ಮತ್ತು 16 ಬ್ಲಾಕ್ ಗಳನ್ನು ಒಳಗೊಂಡಿದೆ. ಬಾರಾಮುಲ್ಲಾ ಜಿಲ್ಲೆಯ ಪಶ್ಚಿಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿಭಾಗವಿದೆ. ಕುಪ್ವಾರಾ ನಗರವು ದಕ್ಷಿಣಕ್ಕಿದ್ದರೆ, ಪೂಚ್-ಬದ್ಗಮ್ ನಗರಗಳು ಉತ್ತರಕ್ಕೆ ಮತ್ತು ಶ್ರೀನಗರ, ಲಡಾಖ್......
ಭಗ್ಸು (ಭಗ್ಸುನಾಗ್) - ಸೌಂದರ್ಯದ ಖನಿ!
ಹಿಮಾಚಲ ಪ್ರದೇಶದ ಸುಂದರ ಪ್ರವಾಸಿ ತಾಣವಾಗಿರುವ ಭಗ್ಸು ಮ್ಯಾಕ್ಲಿಯೋಗಂಜ್ ಗೆ ಹತ್ತಿರದಲ್ಲಿದೆ. ಈ ಪ್ರವಾಸಿ ಗಮ್ಯಸ್ಥಾನ ಮನೆಮಾತಾಗಿರುವುದು ಇಲ್ಲಿರುವ ಪ್ರಾಚಿನ ದೇವಸ್ಥಾನ ಮತ್ತು ಮನಮೋಹಕ ಜಲಪಾತದಿಂದ. ಧಾರ್ಮಿಕ ಮಹತ್ವದ ಸ್ಪರ್ಶವುಳ್ಳದ್ದರಿಂದ ಮತ್ತು ಧರ್ಮಶಾಲಾದ ಸನ್ನಿಧಿಯಲ್ಲಿರುವುದರಿಂದ ವರ್ಷಂಪ್ರತಿ ಪ್ರವಾಸಿಗರನ್ನು ಸೆಳೆಯುತ್ತದೆ. ಭಗ್ಸುವಿನಲ್ಲಿ......
ಭೀಮಾಶಂಕರದ ಒಂದು ಅವಲೋಕನ
ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಈ ಹನ್ನೆರಡು ಜೋತಿರ್ಲಿಂಗಗಳಲ್ಲಿ ಐದು ಮಹಾರಾಷ್ಟ್ರ ಒಂದರಲ್ಲೇ ಇವೆ. ಪುಣೆಯ ಹತ್ತಿರದ ಖೇಡಾದಿಂದ ವಾಯವ್ಯಕ್ಕೆ 50 ಕಿ.ಮೀ. ದೂರದಲ್ಲಿರುವ ಶಿರಾಧೊನ್ ಎಂಬ ಗ್ರಾಮದಲ್ಲಿ,......
ಭುಜ್ : ರಾಜಹಂಸಗಳ ವಿರಾಮದ ತಾಣ
ಭುಜ್ ಇದು ಆಳವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರವಾಗಿದ್ದು, ಕಚ್ ನ ಜಿಲ್ಲಾ ಮುಖ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಭುಜಿಯೋ ದುಂಗಾರ ಎಂಬ ಬೆಟ್ಟದ ಕಾರಣದಿಂದಾಗಿ ಮತ್ತು ಭುಜಂಗ ಎಂಬ ದೊಡ್ಡ ಸರ್ಪದ ಕಾರಣದಿಂದಾಗಿ ಈ ನಗರಕ್ಕೆ ಭುಜ್ ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ. ಭುಜಂಗ ನಾಗ ದೇವತೆಗೆ ಈ ಬೆಟ್ಟದ ಮೇಲೆ......
ಬೊಮ್ಡಿಲ : ಸುಂದರ ಪ್ರಾಕೃತಿಕ ನೋಟ
ಬೊಮ್ಡಿಲ ಅರುಣಾಚಲಪ್ರದೇಶದ ಒಂದು ಸಣ್ಣ ಪಟ್ಟಣ ಸಮುದ್ರಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಪೂರ್ವಹಿಮಾಲಯದ ಶ್ರೇಣಿಗಳಿಂದ ಆವೃತವಾಗಿರುವ ಈ ಸ್ಥಳವನ್ನು ನೋಡಲು ಪ್ರವಾಸಿಗರು ದೂರದೂರುಗಳಿಂದ ಬರುತ್ತಾರೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಇಲ್ಲಿ ಸೇಬಿನ ತೋಟಗಳು ಮತ್ತು ಬೌದ್ಧ ಮಂದಿರಗಳು ಇವೆ. ಚಾರಣಪ್ರಿಯರನ್ನು ಸಹ ಈ ಸ್ಥಳ......
ಬೋರ್ಡಿ: ಕಡಲಂಚಿನ ನಗರ!
ಮಹಾರಾಷ್ಟ್ರ ರಾಜ್ಯದ ಉತ್ತರ ಮುಂಬೈನ ದಹನು ಎಂಬ ಸಣ್ಣ ಪಟ್ಟಣದ ಬೋರ್ಡಿ ಎಂಬ ಊರು ನಿಸರ್ಗದ ಸಿರಿ ಸೊಬಗಿಗೆ ಹೆಸರುವಾಸಿ. ಕಡಲತಡಿಯ ಕೊಪ್ಪಲು ಎಂದೇ ಕರೆಯಲಾಗುವ ಬೋರ್ಡಿ ಒಡಲಿನಲ್ಲಿ ಇದೆ ಹೆಸರಿನ ಪ್ರಶಾಂತ, ನಿರ್ಮಲವಾದ ಸರೋವರವಿದೆ. ಇಂದಿಗೂ ತನ್ನ ನೈಸರ್ಗಿಕ ಗುಣ, ರಚನೆಯನ್ನೆ ಉಳಿಸಿಕೊಂಡಿರುವ ಕಡಲ ಕಿನಾರೆಯ ಮರಳು ಕಪ್ಪು ಬಣ್ಣದಲ್ಲಿದ್ದು, ಜಿಗುಟಾಗಿದೆ. ಸರೋವರದ......
ಚೈಲ್ : ಪಟಿಯಾಲಾ ರಾಜನ ಬೇಸಿಗೆ ಆಶ್ರಯಧಾಮ
ಹಿಮಾಚಲ ಪ್ರದೇಶವು ಪ್ರವಾಸಿ ತಾಣ ಎಂದೇ ಹೆಸರಾಗಿದೆ. ಇಲ್ಲಿನ ಸ್ಥಳೀಯ ಅಭಯಾರಣ್ಯವು ವೈವಿಧ್ಯಮಯ ಪ್ರಾಣಿ ಪಕ್ಷಿಗಳ ಸಂಕುಲವನ್ನು ಹೊಂದಿದ್ದು, ಅದನ್ನು ನೋಡಲೆಂದೆ ದೇಶದಾದ್ಯಂತ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿರುವ ಈ ಸುತ್ತಲಿನ ಪ್ರದೇಶವನ್ನು ನೋಡಿ ಪುಳಕಿತರಾಗದವರೇ ಇಲ್ಲ. ಹಿಮಾಚಲ ಪ್ರದೇಶದ ಚೈಲ್ ಪ್ರದೇಶವು ಅತ್ಯಂತ......
ಚೌಕೋರಿ - ಪವಿತ್ರ ಕ್ಷೇತ್ರಗಳ ತವರು
ಚೌಕೋರಿ ಕಣ್ಮನ ಸೆಳೆಯುವ ಸೌಂದರ್ಯವನ್ನು ಹೊಂದಿರುವ ಪರ್ವತ ಪ್ರದೇಶ. ಇದು ಸಮುದ್ರಮಟ್ಟದಿಂದ 2010 ಮೀಟರ್ ಎತ್ತರದಲ್ಲಿರುವ ಉತ್ತರಾಖಂಡ ರಾಜ್ಯದ ಪಿಥೋರಘರ್ನಲ್ಲಿದೆ. ಪಶ್ಚಿಮ ಹಿಮಾಲಯ ಸರಣಿಯ ಈ ಬೆಟ್ಟ ಸಾಲು ಟಿಬೇಟ್ನ ಉತ್ತರ ಹಾಗೂ ಟೇರೈನ ದಕ್ಷಿಣ ಗಡಿಭಾಗವೂ ಆಗಿದೆ. ಹಸಿರು ಪೈನ್, ಓಕ್, ರೋಡೋಡೆನ್ಡ್ರೋನ್ ಮರಗಳಿಂದ ಆವರಿಸಿರುವ ವಿಶೀಷ್ಟ ಕಾಡು ಇಲ್ಲಿನ ವಿಶೇಷ.......
ಚಿರಾಪುಂಜಿ: ಮಳೆಯೇ ಮನಮೋಹಕವೆನ್ನುವ ಅಪರಂಜಿ
ನಯನ ಮನೋಹರವಾದ ಪ್ರಾಕೃತಿಕ ಸೌಂದರ್ಯಕ್ಕೆ ಹಾಗು ಮಳೆಗೆ ಪ್ರಸಿದ್ಧಿ ಪಡೆದಿರುವ ತಾಣ. ಚಿರಾಪುಂಜಿ ಅಥವಾ ಸ್ಥಳೀಯರ ವಲಯದಲ್ಲಿ ಸೊಹ್ರಾ ಎಂದು ಕರೆಯಲ್ಪಡುವ ಈ ಊರು ಮೇಘಾಲಯದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಮೇಘಾಲಯ ರಾಜ್ಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಒಂದು ಕಾಲದಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚಿನ ಮಳೆ ಬೀಳುವ ಪ್ರದೇಶವಾಗಿ......
ಚಿಕ್ಕಬಳ್ಳಾಪುರ - ಸರ್.ಎಂ.ವಿಶ್ವೇಶ್ವರಯ್ಯನವರ ಹುಟ್ಟೂರು
ವಿಶ್ವಪ್ರಸಿದ್ಧ ವಾಸ್ತುಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಚಿಕ್ಕಬಳ್ಳಾಪುರ ಪಟ್ಟಣವು ಇತ್ತೀಚೆಗೆ ಜಿಲ್ಲೆಯಾಗಿ ಘೋಷಿಸಲ್ಪಟ್ಟಿದೆ. ಈ ಮೊದಲು ಕೋಲಾರ ಜಿಲ್ಲೆಯೊಂದಿಗಿದ್ದ ಚಿಕ್ಕಬಳ್ಳಾಪುರವನ್ನು ಹೊಸ ಜಿಲ್ಲೆಯನ್ನಾಗಿ ವಿಭಜಿಸಲಾಗಿದೆ. ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರವು ಹಲವಾರು ಪ್ರೇಕ್ಷಣೀಯ ಮತ್ತು ಐತಿಹಾಸಿಕ......
ಚಿಕಲ್ದಾರಾ – ಒಂದು ಪೌರಾಣಿಕ ಕಥೆ
ಇಂದು ಹಲವಾರು ಪ್ರಾಣಿ ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳು ಎಲ್ಲಿಯೂ ನೋಡಲು ಸಿಗುತ್ತಿಲ್ಲ. ಆದ್ದರಿಂದಲೇ ಎಲ್ಲಾ ರಾಜ್ಯ ಸರ್ಕಾರಗಳು ಅಂತಹ ಜೀವಿಗಳನ್ನು ಉಳಿಸುವತ್ತ ಯೋಜನೆಗಳನ್ನು ರೂಪಿಸಿವೆ. ಇಂಥ ಕೆಲವು ಸಂರಕ್ಷಿತ ಅರಣ್ಯಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿಯೂ ಕಾಣಬಹುದಾಗಿದೆ. ವನ್ಯಮೃಗ ರಕ್ಷಣೆಯಲ್ಲಿ ಇಲ್ಲಿನ ರಾಜ್ಯ ಸರ್ಕಾರದ ಕೊಡುಗೆ ಅನನ್ಯ. ಚಿಕಲ್ದಾರಾ......
ಚಿಕ್ಕಮಗಳೂರು - ಅವಿಶ್ರಾಂತರಿಗೆ ವಿರಾಮ ನೀಡುವಂತಹ ತಾಣ
ಚಿಕ್ಕಮಗಳೂರು ಪಟ್ಟಣವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳನ್ನು ಹೊಂದಿರುವದರಿಂದ ಜನಪ್ರಿಯವಾಗಿದೆ. ಚಿಕ್ಕಮಗಳೂರು ಪಟ್ಟಣವು ರಾಜ್ಯದ ಮಲೆನಾಡು ಪ್ರದೇಶದಲ್ಲಿದ್ದು ಗುಡ್ಡಗಾಡು ಮತ್ತು ಗದ್ದೆಗಳನ್ನು ಹೊಂದಿದೆ. ಚಿಕ್ಕಮಗಳೂರು ಎಂದರೆ 'ಚಿಕ್ಕ ಮಗಳ ನೆಲ' ಎಂದರ್ಥ. ಈ ನೆಲವನ್ನು ಇಲ್ಲಿನ ಮುಖ್ಯಸ್ಥನ ಕಿರಿಯ ಪುತ್ರಿಯ......
ಚೋಪ್ಟಾದ - ಉತ್ತರಾಖಂಡದ ಮಿನಿ ಸ್ವಿಟ್ಜರ್ ಲ್ಯಾಂಡ್!
ಸಮುದ್ರ ಮಟ್ಟದಿಂದ 2680 ಮೀಟರ್ ಎತ್ತರದಲ್ಲಿರುವ, ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಚೋಪ್ಟಾ ಒಂದು ಸುಂದರ ಗಿರಿಧಾಮ. ಇಲ್ಲಿನ ಅದ್ಭುತ ಪ್ರಾಕೃತಿಕ ಸೌಂದರ್ಯ ಮತ್ತು "ಬುಗ್ಯಾಲ್ಸ್" ಎಂದು ಕರೆಯಲ್ಪಡುವ ಸಮೃದ್ಧ ಹಸಿರು ಹುಲ್ಲುಗಾವಲುಗಳಿಂದಾಗಿ ಈ ಗಿರಿಧಾಮವನ್ನು 'ಮಿನಿ ಸ್ವಿಜರ್ಲ್ಯಾಂಡ್' ಎಂದೂ ಸಹ ಸಂಭೋದಿಸಲಾಗುತ್ತದೆ. ಚೋಪ್ಟಾ ಗಿರಿಧಾಮವು......
ಚುಂಗ್ ಥಾಂಗ್ - ಪವಿತ್ರ ಕಣಿವೆ
ಚುಂಗ್ ಥಾಂಗ್ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ. ಪ್ರಸ್ತುತ ಯುಮಥಾಂಗ್ ಹೋಗುವ ದಾರಿಯಲ್ಲಿ ಚುಂಗ್ ಥಾಂಗ್ ಕಣಿವೆಯನ್ನು, ಲಾಚುಂಗ್ ಚು ಮತ್ತು ಲಾಚೆನ್ ನದಿಗಳ ಸಂಗಮದ ಬಳಿ ಕಾಣಬಹುದು. ಸಿಕ್ಕಿಂನ ಈ ಸಣ್ಣ ಪಟ್ಟಣ ಸಾಕಷ್ಟು ಪವಿತ್ರವಾಗಿದ್ದು ಸಿಕ್ಕಿಂನ ಪ್ರಸಿದ್ಧ ಪೋಷಕ ಸಂತ ಗುರು ಪದ್ಮಸಂಭವನ ಅನುಗ್ರಹವನ್ನು ಪಡೆದಿದೆ ಎಂದು......
ಕುಣ್ಣೂರು ಪ್ರವಾಸೋದ್ಯಮ - ಎಂದೂ ಮಲಗದ ಕಣಿವೆ
ಪ್ರತಿಯೊಬ್ಬ ಸಂದರ್ಶನಕಾರನಿಗೆ ಕುಣ್ಣೂರ್ ಪ್ರವಾಸ, ಬಾಲ್ಯದ ಮುಗ್ಧತೆ, ಅಚ್ಚರಿಯನ್ನೊಳಗೊಂಡ ನೆನಪುಗಳನ್ನು ತರುತ್ತದೆ. ವಿಸ್ಮಯಭರಿತ ಈ ಗಿರಿಧಾಮ, ವಿಶ್ವ ಪ್ರಸಿದ್ಧ ಉದಕಮಂಡಲ (ಊಟಿ) ಹಿಲ್ ಸ್ಟೇಶನ್ ಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1850 ಮೀ. ಎತ್ತರದಲ್ಲಿರುವ ಪುಟ್ಟ ಪಟ್ಟಣದ ಒಟ್ಟಾರೆ ಪರಿಸರ ಪ್ರವಾಸಿಗರನ್ನು ಆಕರ್ಷಿಸಿ ತನ್ನತ್ತ......
ಕೊಡಗು- ಗುಡ್ಡ ಮತ್ತು ಎಸ್ಟೇಟ್ ನಾಡು
ಕರ್ನಾಟಕದಲ್ಲಿ ಕೂರ್ಗ್ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು ೯೦೦ ಮೀಟರಿನಿಂದ ೧೭೧೫ ಮೀಟರು ಎತ್ತರಕ್ಕಿದೆ. ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ.......
ಡಾಲ್ಹೌಸಿ: ಸುಂದರ ಬೆಟ್ಟ, ಗುಡ್ಡಗಳ ಮನಮೋಹಕ ತಾಣ
ಹಿಮಾಚಲ ಪ್ರದೇಶ ರಾಜ್ಯದ ದೌಲಾಧರ್ ಭಾಗದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಡಾಲ್ಹೌಸಿ. 1854 ರಲ್ಲಿ ಈ ಪಟ್ಟಣ ಆವಿಷ್ಕರಿಸಿತು. ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಡಾಲ್ಹೌಸಿ ಅವರ ಹೆಸರನ್ನೇ ಪಟ್ಟಣಕ್ಕೆ ಇಡಲಾಗಿದೆ. ಲಾರ್ಡ್ ಡಾಲ್ಹೌಸಿ ತನ್ನ ಬೇಸಿಗೆ ದಿನಗಳನ್ನು ಕಳೆಯಲು ಈ ತಾಣವನ್ನು ಆಶ್ರಯಿಸಿದ್ದ. ಅಲ್ಲದೇ ಈ ಪ್ರದೇಶವು ಅತ್ಯಂತ ಜನಪ್ರಿಯ......
ದಾರ್ಜೀಲಿಂಗ : ಭಾರತದ ಟೀ ಸ್ವರ್ಗ
ಭಾರತದ ಸಿನೆಮಾಗಳಲ್ಲಿ ಈಗಾಗಲೇ ಚಿರಸ್ಥಾಯಿಯಾಗಿರುವ ದಾರ್ಜೀಲಿಂಗ ನ ಬೆಟ್ಟ ಹಾಗೂ ಕಣಿವೆಗಳಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುವಂತಹ ಮಿನಿ ರೈಲು ಸೇವೆಯಾದ ವಿಶ್ವಪ್ರಸಿದ್ಧ ದಾರ್ಜೀಲಿಂಗ ಹಿಮಾಲಯನ್ ರೈಲು ಹಾಲಿವುಡ್ ನಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದಲ್ಲಿರುವ ದಾರ್ಜೀಲಿಂಗ ಗಿರಿಧಾಮವು......
ದೇವರಾಯನದುರ್ಗ – ಘಟ್ಟಗಳ ಗುಂಟ ನಡೆದಾಡಿ
ದಟ್ಟಕಾಡಿನ ಸುತ್ತ ಸುತ್ತುವರೆದಿರುವ ದೇವರಾಯನದುರ್ಗದ ಬೆಟ್ಟಗಳು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರ ಮೈ ಮನಸ್ಸುಗಳಿಗೆ ಮುದ ನೀಡುತ್ತದೆ. ಇಲ್ಲಿನ ವಾಯುಗುಣ ಚೇತೋಹಾರಿಯಿಂದ ಕೂಡಿದೆ. ಈ ಪ್ರದೇಶ ಸಮುದ್ರ ಮಟ್ಟದಿಂದ 3940 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ದೇವರಾಯನ ದುರ್ಗವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ನೆಲೆಸಿದೆ. ಈ ಸ್ಥಳವು ಇಲ್ಲಿನ......