Search
 • Follow NativePlanet
Share
ಮುಖಪುಟ » ಸ್ಥಳಗಳು» ದಾರ್ಜೀಲಿಂಗ

ದಾರ್ಜೀಲಿಂಗ : ಭಾರತದ ಟೀ ಸ್ವರ್ಗ

28

ಭಾರತದ ಸಿನೆಮಾಗಳಲ್ಲಿ ಈಗಾಗಲೇ ಚಿರಸ್ಥಾಯಿಯಾಗಿರುವ ದಾರ್ಜೀಲಿಂಗ ನ ಬೆಟ್ಟ ಹಾಗೂ ಕಣಿವೆಗಳಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುವಂತಹ ಮಿನಿ ರೈಲು ಸೇವೆಯಾದ ವಿಶ್ವಪ್ರಸಿದ್ಧ ದಾರ್ಜೀಲಿಂಗ ಹಿಮಾಲಯನ್ ರೈಲು ಹಾಲಿವುಡ್ ನಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ.

ಭಾರತದ ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದಲ್ಲಿರುವ ದಾರ್ಜೀಲಿಂಗ ಗಿರಿಧಾಮವು ಹಿಮದಿಂದ ಆವೃತವಾದ ಶಿಖರಗಳು, ಸಣ್ಣ ಹಿಮಾಲಯ ಅಥವಾ ಮಹಾಭಾರತ ಪರ್ವತ ಶ್ರೇಣಿಯ ನಿಜವಾದ ಸ್ವರ್ಗ. ಉಪನಗರವಾಗಿರುವ ದಾರ್ಜೀಲಿಂಗ ನ್ನು ಬ್ರಿಟಿಷರ ಕಾಲದಿಂದಲೂ ಪ್ರವಾಸಿ ತಾಣವಾಗಿ ಪೋಷಿಸಲಾಗಿದೆ. ದಾರ್ಜೀಲಿಂಗ ನಲ್ಲಿನ ಟೀ ಎಸ್ಟೇಟ್ ಮತ್ತು ಅಲ್ಲಿನ ಟೀಯ ಗುಣಮಟ್ಟಕ್ಕೆ ಅದು ಇಂದು ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿದೆ. ದಾರ್ಜೀಲಿಂಗ ನಿಂದ ಪ್ರಮುಖವಾಗಿ ರಫ್ತಾಗುವ ವಸ್ತುವೆಂದರೆ ವಿವಿಧ ರೀತಿಯ ಹಾಗೂ ಗುಣಮಟ್ಟದ ಟೀ.

ಯುದ್ಧ ಸ್ಮಾರಕ

ಇಂದಿನ ತನ್ನ ಶಾಂತಿಯುವ ಮತ್ತು ಮೂಲರೂಪಕ್ಕೆ ವಿರುದ್ಧವಾಗಿ ಹಿಂದೆ ದಾರ್ಜೀಲಿಂಗ ನ ನಿಯಂತ್ರಣಕ್ಕಾಗಿ ಹಲವಾರು ಯುದ್ಧಗಳು ನಡೆದಿದೆ. ಇಂದೂ ಗೋರ್ಖಾಲ್ಯಾಂಡ್ ಹೋರಾಟವು ಕೆಲವೊಮ್ಮೆ ಹಿಂಸಾಚಾರ ಉಂಟುಮಾಡುತ್ತದೆ. ಹಿಮ ಆವರಿಸಿರುವ ಶಿಖರಗಳ ಭವ್ಯ ಸೊಬಗಿನ ನಡುವೆ ಇರುವ ದಾರ್ಜೀಲಿಂಗ ಯುದ್ಧ ಸ್ಮಾರಕವನ್ನು ಖಂಡಿತವಾಗಿಯೂ ವೀಕ್ಷಿಸಲೇಬೇಕು ಮತ್ತು ಇದು ಫೋಟೊಗ್ರಾಪರ್ ಗಳಿಗೆ ಕನಸಿನ ಕ್ಯಾನ್ವಾಸ್ ಕೂಡ.

ದಾರ್ಜೀಲಿಂಗ ನ ಪ್ರಕೃತಿ

ದಾರ್ಜೀಲಿಂಗ ನಲ್ಲಿನ ಸಮಶೀತೋಷ್ಣ ವಲಯದ ಕಾಡುಗಳಲ್ಲಿರುವ ಸಾಲ್ ಮತ್ತು ಓಕ್ ಮರಗಳನ್ನು ಹೊಂದಿರುವ ಉನ್ನತ ಪರ್ವತ ಪ್ರದೇಶವು ಪ್ರಕೃತಿ ಪ್ರೇಮಿಗಳಿಗೆ ಒಂದು ಅದ್ಭುತ ತಾಣ. ಹವಾಮಾನ ಬದಲಾಗುತ್ತಿದ್ದರೂ ದಾರ್ಜೀಲಿಂಗ ನ ಅರಣ್ಯವು ಯಾವಾಗಲೂ ಹಚ್ಚಹಸಿರಿನಿಂದ ಕಂಗೊಲಿಸುವುದು ದಾರ್ಜೀಲಿಂಗ ನ ಪ್ರವಾಸೋದ್ಯಮಕ್ಕೆ ಮೆರಗು ನೀಡಿದೆ.

ನಗರದಲ್ಲಿ ಪದ್ಮಜಾ ನಾಯ್ಡು ಹಿಮಾಲಯನ್ ಝಲಾಲಿಕಲ್ ಪಾರ್ಕ್ ಮತ್ತು ಲಾಯ್ಡ್ ಸಸ್ಯೋದ್ಯಾನದಲ್ಲಿ ಪ್ರಕೃತಿ ಪ್ರಿಯರು ಮತ್ತು ಫೋಟೊಗ್ರಾಪರ್ ಗಳು ಮಧ್ಯಾಹ್ನದ ಬಳಿಕ ಪ್ರಕೃತಿಯ ರಮಣೀಯ ದೃಶ್ಯಗಳನ್ನು ನೋಡಬಹುದು. ದಾರ್ಜೀಲಿಂಗ ನಲ್ಲಿ ರಫ್ತಾಗುವಂತಹ ವಿವಿಧ ರೀತಿಯ ಆರ್ಕಿಡ್ ಗಳಿವೆ. ದಂಪತಿ ಅಥವಾ ತಮ್ಮ ಗೆಳತಿಯೊಂದಿಗೆ ಈ ಬಣ್ಣಬಣ್ಣದ ಹೂಗಳ ಮಧ್ಯೆ ಸಮಯ ಕಳೆಯಬಹುದು.

ವನ್ಯಜೀವಿ

ಈ ಪ್ರದೇಶದಲ್ಲಿ ವನ್ಯಜೀವಿಗಳನ್ನು ರಕ್ಷಿಸುವ ಕೆಲಸವನ್ನು ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಮಾಡುತ್ತಿದೆ. ಈ ಪ್ರದೇಶದಲ್ಲಿ ಕಂಡುಬರುವಂತಹ ಸಾಮಾನ್ಯ ಪ್ರಭೇದವೆಂದರೆ ಒಂದು ಕೊಂಬಿನ ಖಡ್ಗಮೃಗ, ಆನೆ, ಭಾರತದ ಹುಲಿ, ಚಿರತೆ ಮತ್ತು ಒರಟು ಜಿಂಕೆ. ಕೆಲವು ಸುಂದರ ವಲಸೆ ಪಕ್ಷಿಗಳು ಸುತ್ತಮುತ್ತಲು ಇರುವುದರಿಂದ ದಾರ್ಜೀಲಿಂಗ ಪಕ್ಷಿಪ್ರಿಯರಿಗೆ ಒಂದು ಅತ್ಯುತ್ತಮ ತಾಣ.

ಇಲ್ಲಿರುವ ಮಾಲ್ ರಸ್ತೆಯಲ್ಲಿ ಕೆಲವು ಸ್ಥಳೀಯ ಮತ್ತು ಭಾರತೀಯ ವಸ್ತುಗಳನ್ನು ಖರೀದಿಸಬಹುದು. ಚೌಕಾಶಿ ಮಾಡಿದರೆ ಅಗ್ಗದ ಬೆಲೆಗೆ ಖರೀದಿ ಮಾಡಬಹುದು. ಸ್ಥಳೀಯರು ತುಂಬಾ ಸ್ನೇಹಜೀವಿಗಳು ಹಾಗೂ ವಿನೋದ ಸ್ವಭಾವದವರು. ದುರ್ಗಾ ಪೂಜೆ, ದೀಪಾವಳಿ ಮತ್ತು ಕಾಳಿ ಪೂಜೆ ಸಹಿತ ಹಲವಾರು ಭಾರತೀಯ ಹಬ್ಬಗಳನ್ನು ಸ್ಥಳೀಯರು ಆಚರಿಸುತ್ತಾರೆ. ಇದೆಲ್ಲವನ್ನು ಹೊರತುಪಡಿಸಿ ಕೆಲವು ಸ್ಥಳೀಯ ಹಬ್ಬಗಳನ್ನು ಆಚರಿಸಲಾಗುತ್ತದೆ.

ದಾರ್ಜೀಲಿಂಗ ಗೆ ಯಾವಾಗ ಭೇಟಿ ನೀಡಿದರೂ ಅಲ್ಲಿ ಯಾವುದಾದರೊಂದು ಸಂಭ್ರಮಾಚರಣೆ ಕಂಡುಬರುತ್ತದೆ. ಸ್ಥಳೀಯ ಸಂಸ್ಕೃತಿ ಬಗ್ಗೆ ತಿಳಿಯಲು ಬೌದ್ಧರ ಧಾರ್ಮಿಕ ಕೇಂದ್ರಗಳು ಸೂಕ್ತ ಸ್ಥಳ ಮತ್ತು ಬೌದ್ಧ ಬಿಕ್ಕುಗಳು ಪ್ರವಾಸಿಗಳಿಗೆ ಇಲ್ಲಿನ ಎಲ್ಲಾ ದೇವಸ್ಥಾನಗಳ ಮಾಹಿತಿಯನ್ನು ನೀಡುತ್ತಾರೆ.

ಆಹಾರ

ಆಹಾರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಮೊಮೊಸ್(ಕಣಕದ ಖ್ಯಾದ) ಸಹಿತ ಸ್ಥಳೀಯ ಆಹಾರಗಳ ರುಚಿ ನೋಡುವುದು ಯೋಗ್ಯ. ಈ ಕಣಕದ ಖ್ಯಾದವನ್ನು ಕೋಳಿ, ಬೀಫ್, ತರಕಾರಿ ಮತ್ತು ಹಂದಿ ಮಾಂಸದಿಂದ ಮಾಡಿ ಬಿಸಿಯಾದ ಸಾಸ್ ಜತೆ ಕೊಡುತ್ತಾರೆ. ಬೀದಿ ಬದಿಯಲ್ಲಿ ನೂಡಲ್ ನೊಂದಿಗೆ ಸಿಗುವ ಸೂಪ್ ಮತ್ತು ಅಕ್ಕಿಯ ಕೆಲವು ಆಹಾರಗಳು ತುಂಬಾ ರುಚಿಕರ.

ವಸಾಹತು ವಾಸ್ತುಶಿಲ್ಪ

ದಾರ್ಜೀಲಿಂಗ ನ್ನು ವಸಾಹತು ವಾಸ್ತುಶಿಲ್ಪದೊಂದಿಗೆ ರೂಪಿಸಲಾಯಿತು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ ಇದನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿತ್ತು. ವಸಾಹತು ಸಮಯದ ಹೆಚ್ಚಿನ ಎಲ್ಲಾ ಕಟ್ಟಡಗಳನ್ನು ಉಳಿಸಿಕೊಳ್ಳಲಾಗಿದ್ದು, ಈಗಲೂ ಅದು ಬ್ರಿಟಿಷರ ಕಾಲವನ್ನು ನೆನಪಿಸುತ್ತದೆ. ಗೋಥಿಕ್ ಶೈಲಿಯ ಚರ್ಚ್ ಗಳು ಫೋಟೊಗ್ರಾಪ್ ಮತ್ತು ಪೋಸ್ಟ್ ಕಾರ್ಡ್ ಗಳಿಗೆ ಅಮೋಘವಾಗಿದೆ.

ದಾರ್ಜೀಲಿಂಗ ನ ಜನರು ನಗರ ಭೇಟಿಯನ್ನು ಯೋಗ್ಯವನ್ನಾಗಿಸುತ್ತಾರೆ. ಅವರು ತುಂಬಾ ವಿನೋದ ಪ್ರಿಯರಾಗಿದ್ದು, ಹೆಚ್ಚಾಗಿ ಸಂಗೀತ ವಾದ್ಯಗಳನ್ನು ನುಡಿಸುತ್ತಿರುತ್ತಾರೆ. ಸಂಗೀತ ಪ್ರಿಯರು ಇಲ್ಲಿನ ಬೀದಿಗಳ ಸಣ್ಣ ಕ್ಲಬ್ ಗಳ ಬಗ್ಗೆ ಲೇಖನಗಳನ್ನು ಮತ್ತು ಬ್ಲಾಗ್ ನಲ್ಲಿ ಬರೆದಿದ್ದಾರೆ. ಇಲ್ಲಿನ ಸಂಸ್ಕೃತಿಯೊಂದಿಗೆ ಸಂಗೀತ ಬೆರೆತುಕೊಂಡಿರುವ ಬಗ್ಗೆ ಸ್ಥಳೀಯರು ಕೂಡ ಹೆಮ್ಮೆ ಪಟ್ಟುಕೊಳ್ಳುತ್ತಾರೆ.

ಮಾತ್ರವಲ್ಲದೆ ಸುತ್ತಮುತ್ತಲು ಹಲವಾರು ಸಣ್ಣ ಪಟ್ಟಣಗಳನ್ನು ಹೊಂದಿರುವ ದಾರ್ಜೀಲಿಂಗ ಛಾಯಾಗ್ರಾಹಕರಿಗೆ ಮತ್ತು ಕುಟುಂಬಗಳಿಗೆ ಪ್ರವಾಸಕ್ಕೆ ಒಂದು ಪರಿಪೂರ್ಣ ತಾಣ. ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಇತರ ಹಲವಾರು ಪಟ್ಟಣಗಳಿಗೆ ಭೇಟಿ ನೀಡಲು ದಾರ್ಜೀಲಿಂಗ ಸೂಕ್ತ ಸ್ಥಾನ

ದಾರ್ಜೀಲಿಂಗ ಮತ್ತು ಸುತ್ತಮುತ್ತಲು ಇರುವ ಪ್ರವಾಸಿ ತಾಣಗಳು

ಪ್ರವಾಸಿಗರಿಗೆ ದಾರ್ಜೀಲಿಂಗ ಪ್ರವಾಸೋದ್ಯಮದಲ್ಲಿ ಸಾಕಷ್ಟು ಆಕರ್ಷಣೀಯ ತಾಣಗಳಿವೆ. ಹ್ಯಾಪಿ ವ್ಯಾಲಿ ಟೀ ಎಸ್ಟೇಟ್, ಲಾಯ್ಡ್ ಸಸ್ಯೋದ್ಯಾನ, ದಾರ್ಜೀಲಿಂಗ ಹಿಮಾಲಯನ್ ರೈಲ್ವೆ, ಬತಾಸಿಯಾ ಲೂಪ್, ಯುದ್ಧ ಸ್ಮಾರಕ, ಕೇಬಲ್ ಕಾರ್, ಭೂಟಿಯಾ ಬಸ್ತಿ ಗೊಂಪಾ ಮತ್ತು ಹಿಮಾಲಯನ್ ಪರ್ವತಾರೋಹಣ ಸಂಸ್ಥೆ ಮತ್ತು ಮ್ಯೂಸಿಯಂ ಆಕರ್ಷಣೆಯ ಪ್ರಮುಖ ಕೇಂದ್ರಗಳು.

ದಾರ್ಜೀಲಿಂಗ ಹವಾಮಾನ

ದಾರ್ಜೀಲಿಂಗ ನ ಹವಾಮಾನವನ್ನು ಬೇಸಿಗೆ, ಮಳೆಗಾಲ ಮತ್ತು ಚಳಿಗಾಲವೆಂದು ವಿಂಗಡಿಸಬಹುದು. ಇಲ್ಲಿ ಬೇಸಿಗೆ ತುಂಬಾ ಹಿತಕರವಾಗಿದ್ದರೆ, ಚಳಿಗಾಲ ತುಂಬಾ ತಂಪಾಗಿರುತ್ತದೆ.

ದಾರ್ಜೀಲಿಂಗ ಪ್ರಸಿದ್ಧವಾಗಿದೆ

ದಾರ್ಜೀಲಿಂಗ ಹವಾಮಾನ

ಉತ್ತಮ ಸಮಯ ದಾರ್ಜೀಲಿಂಗ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ದಾರ್ಜೀಲಿಂಗ

 • ರಸ್ತೆಯ ಮೂಲಕ
  ದಾರ್ಜೀಲಿಂಗ ಗೆ ರಾಷ್ಟ್ರೀಯ ಹೆದ್ದಾರಿ 31 ಮತ್ತು ರಾಷ್ಟ್ರೀಯ ಹೆದ್ದಾರಿ 55ರ ಮೂಲಕ ತಲುಪಬಹುದು. ಇದು ಸಿಲಿಗುರಿ ಮತ್ತು ಕಲಿಂಪೊಂಗ್ ಗೆ ಸಮೀಪದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ದಾರ್ಜೀಲಿಂಗ ನಲ್ಲಿ ದಾರ್ಜೀಲಿಂಗ ರೈಲು ನಿಲ್ದಾಣವಿದೆ. ಸಿಲಿಗುರಿಗೆ ಸಮೀಪವಿರುವ ಜಲ್ಪೈಗುರಿ ಟರ್ಮಿನಸ್ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಾರ್ಜೀಲಿಂಗ ನ ಸಿಲಿಗುರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಹಲವು ನಗರ ಮತ್ತು ವಿದೇಶಗಳಿಗೆ ವಿಮಾನ ಸೇವೆಯನ್ನು ನೀಡುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun