Search
  • Follow NativePlanet
Share

ಬಸ್ತಿ - ಬಿದಿರು ಮತ್ತು ಮಾವಿನ ತೋಪುಗಳ ರಮ್ಯ ತಾಣ!

10

ನಮಗೆ ಸ್ವಾತಂತ್ರ್ಯವನ್ನು ತಂದು ಕೊಡಲು ಹೋರಾಡಿದವರ ಬಗ್ಗೆ ಪುಸ್ತಕಗಳಲ್ಲಿ ಮಾತ್ರವಲ್ಲದೇ ನಮ್ಮ ಸುತ್ತಲಿನ ಪ್ರದೇಶಗಳ ಮೂಲಕವೂ ತಿಳಿದುಕೊಳ್ಳಬಹುದು. ಚರಿತ್ರೆಯ ಪುಟಗಳಲ್ಲಿ ಹೆಸರು ಮೂಡದಿದ್ದರೂ ತಮ್ಮ ಜೀವವನ್ನೇ ಮುಡುಪಾಗಿಟ್ಟ ಹಲವು ಹಳ್ಳಿಗಳು ಇಂದು ಸ್ಮಾರಕಗಳಾಗಿ ಮಾರ್ಪಟ್ಟಿವೆ. ಅಂತಹ ಮಹಾನ್ ಹೆಮ್ಮೆಯ ಸ್ಥಳಕ್ಕೆ ಬಸ್ತಿ ಕೂಡ ಸೇರುತ್ತದೆ!

ಬಸ್ತಿ, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ, ಪ್ರಾಚೀನ ಅವಧಿಯಲ್ಲಿ, ಪ್ರದೇಶದ ಸಂಸ್ಕೃತಿಯ ಬಗ್ಗೆ ಅಳಿಸಲಾಗದ  ಛಾಪನ್ನು ಮೂಡಿಸಿದ ಹಲವಾರು ಪ್ರಭುತ್ವಗಳು ಇಲ್ಲಿ ಆಳ್ವಿಕೆ ಮಾಡಿವೆ. ಅಧಿಕೃತವಾಗಿ 1865 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಸ್ತಿ ಪಟ್ಟಣವು, ಬಿದಿರು ಕಾಡುಗಳು ಮತ್ತು ಮಾವಿನ ತೋಪುಗಳಿಂದ ಆವೃತವಾಗಿದೆ. ವಾಸ್ತವವಾಗಿ,  ದಟ್ಟ ಸಸ್ಯವರ್ಗದಿಂದ ಆವರಿಸಲ್ಪಟ್ಟ ಬಸ್ತಿ ಪಟ್ಟಣ ಗದ್ದಲದ ಬದುಕಿಗೆ ತುಸು ವಿಶ್ರಾಂತಿಯನ್ನು ನೀಡಲು ಕಾಯುತ್ತಿದೆ.

ಬಸ್ತಿಯಲ್ಲಿನ ಮತ್ತು ಸುತ್ತಲಿನ ಪ್ರವಾಸಿ ತಾಣಗಳು

ಬಸ್ತಿ, ಚಂದೂ ತಾಲ್  ಸೇರಿದಂತೆ ಅನೇಕಾನೇಕ ಪ್ರವಾಸಿ ಸ್ಥಳವನ್ನು ಹೊಂದಿದೆ. ಮತ್ತೊಂದು ಕುತೂಹಲಕಾರಿ ಸ್ಥಳ, ಬಸ್ತಿ ಬಳಿಯಿರುವ ಬಾರಾಹ್  ಗ್ರಾಮ. ಈ ಸಣ್ಣ ಹಳ್ಳಿಯು ಪುರಾಣ ಕೃತಿಗಳಲ್ಲಿ ಕಂಡುಬರುತ್ತದೆ ಮತ್ತು ಇಲ್ಲಿ  ಶಿವ ದೇವನನ್ನು ಪೂಜಿಸುವ  ಹಳೆಯ ದೇವಸ್ಥಾನ ಇದೆ. ಅಲ್ಲದೇ ಕುವಾನಾ ನದಿ ದಡದಲ್ಲಿರುವ ಬಡೇಶ್ವರನಾಥ್/ಬದೇಶ್ವರನಾಥ್ ದೇವಾಲಯ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬಸ್ತಿಗೆ ಭೇಟಿ ನೀಡುವ ಸಂದರ್ಭದಲ್ಲಿ, ನೀವು ರಾಷ್ಟ್ರೀಯ ವನ್ ಚೇತನ ಕೇಂದ್ರ ಮತ್ತು ತೋಟಗಾರಿಕೆ ಆರ್ & ಡಿ ತರಬೇತಿ ಕೇಂದ್ರಕ್ಕೂ ಭೇಟಿ ಮಾಡಬಹುದು. ಬಟ್ಟೆಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸಬಹುದಾದ ಪಕ್ಕೆ ಬಜಾರ್ ಅತ್ಯಂತ ಪ್ರಸಿದ್ಧವಾಗಿದೆ.

ಬಸ್ತಿ ತಲುಪುವುದು ಹೇಗೆ?

ಬಸ್ತಿ ವಿಮಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಬಸ್ತಿಗೆ ಭೇಟಿ ನೀಡಲು ಉತ್ತಮ ಸಮಯ

ಬಸ್ತಿಗೆ ಭೇಟಿ ನೀಡಲು ಉತ್ತಮವಾದ ಅವಧಿಯೆಂದರೆ ನವೆಂಬರ್ ನಿಂದ ಮಾರ್ಚ್ ತಿಂಗಳುಗಳ ನಡುವಿನ ಅವಧಿ.

ಬಸ್ತಿ ಪ್ರಸಿದ್ಧವಾಗಿದೆ

ಬಸ್ತಿ ಹವಾಮಾನ

ಉತ್ತಮ ಸಮಯ ಬಸ್ತಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಸ್ತಿ

  • ರಸ್ತೆಯ ಮೂಲಕ
    ರಾಜ್ಯ ಸಾರಿಗೆ ಬಸ್ ಗಳು ಬಸ್ತಿಗೆ ಮತ್ತು ಬಸ್ತಿಯಿಂದ ಹೊರಡಲು ಲಭ್ಯ. ಬಸ್ತಿ ನಗರವು ಲಖನೌ, ವಾರಣಾಸಿ, ಸಾರನಾಥ್ ಮತ್ತು ಅಯೋಧ್ಯ ಮೊದಲಾದ ಪ್ರಮುಖ ನಗರಗಳಿಗೆ ಬಸ್ ಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬಸ್ತಿಯಲ್ಲಿ ರೈಲ್ವೆ ಸಂಪರ್ಕ ಉತ್ತಮವಾಗಿದ್ದು ದೆಹಲಿ, ಜಮ್ಮು, ಮುಂಬೈ ಮತ್ತು ಹೌರಾ ನಗರಗಳಿಗೆ ನಿಯಮಿತ ರೈಲು ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಸ್ತಿಗೆ ಹತ್ತಿರವಾದ ವಿಮಾನ ನಿಲ್ದಾಣ, ಲಖನೌ ವಿಮಾನ ನಿಲ್ದಾಣ. ಇಲ್ಲಿಂದ ಬಸ್ತಿಯನ್ನು ತಲುಪಲು ಟ್ಯಾಕ್ಸಿ ಸೌಲಭ್ಯವನ್ನು ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat