Search
 • Follow NativePlanet
Share
ಮುಖಪುಟ » ಸ್ಥಳಗಳು» ಅಯೋಧ್ಯಾ

ಹಿಂದೂಗಳ ಪವಿತ್ರ ನಗರ ಅಯೋಧ್ಯಾ

20

ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ ಜನ್ಮಸ್ಥಳವಾಗಿದೆ. ರಾಮಾಯಣದಲ್ಲಿ ರಾಮನ ಬಗ್ಗೆ ಕಥೆಯಿದ್ದು, ಇದರಲ್ಲಿ ಆತನ ಹುಟ್ಟಿನಿಂದ ಹಿಡಿದು 14 ವರ್ಷದ ವನವಾಸ ಹಾಗೂ ಲಂಕೆಯನ್ನು ಗೆದ್ದು ಅಯೋಧ್ಯಾ ನಗರಕ್ಕೆ ಮರಳುವ ದಿನವನ್ನು ದೀಪಾವಳಿ ಎಂದು ಹಿಂದೂಗಳು ಆಚರಿಸುತ್ತಾರೆ.

ಧರ್ಮದಲ್ಲಿ ಅಯೋಧ್ಯಾ ಪ್ರವಾಸೋದ್ಯಮ

ಹಿಂದೂ ಧರ್ಮದ ಬೇರುಗಳನ್ನು ಹೊರತುಪಡಿಸಿ ಅಯೋಧ್ಯಾದಲ್ಲಿ ಬುದ್ದಿಸಂ, ಜೈನಿಸಂ ಮತ್ತು ಇಸ್ಲಾಂನ ಅಳಿದುಳಿದ ಭಾಗಗಳಿವೆ. ಮೊದಲ ಜೈನ ತೀರ್ಥಂಕರ ರಿಶಭದೇವ್ ಸಹಿತ ಐದು ಮಂದಿ ಜೈನ ತೀರ್ಥಂಕರರು ಅಯೋಧ್ಯಾದಲ್ಲಿ ಜನಿಸಿದ್ದಾರೆಂದು ನಂಬಲಾಗಿದೆ.

ಅಯೋಧ್ಯಾ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ರೋಚಕ ವಿಷಯಗಳಿವೆ. 1527ರಲ್ಲಿ ರಾಮ ಜನ್ಮಭೂಮಿಯಲ್ಲಿ ಮುಘಲ್ ದೊರೆ ಬಾಬರಿ ಮಸೀದಿಯನ್ನು ಕಟ್ಟಿದ್ದ. 1992ರಲ್ಲಿ ಈ ಮಸೀದಿಯನ್ನು ಧ್ವಂಸ ಮಾಡಲಾಯಿತು. ಇದರ ಹಿನ್ನೆಲೆಯಲ್ಲಿ ಭಯೋತ್ಪಾದನೆ ಮತ್ತು ಕೋಮುಗಲಭೆ ಹುಟ್ಟಿಕೊಂಡಿತೆಂದು ಪ್ರಸ್ತುತ ಇತಿಹಾಸ ಹೇಳುತ್ತಿದೆ.

ಅಯೋಧ್ಯಾ ಹಾಗೂ ಸುತ್ತಮುತ್ತಲು ಇರುವ ಪ್ರವಾಸಿ ತಾಣಗಳು

ಅಯೋಧ್ಯಾ ನಗರವು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳ. ಅಯೋಧ್ಯಾ ಪ್ರವಾಸೋದ್ಯವು ಆದ್ಯಾತ್ಮಿಕ ಮನಸ್ಸುಗಳಿಗೆ ಖುಷಿ ನೀಡಲು ಸಾಕಷ್ಟು ಯಾತ್ರಾ ಸ್ಥಳಗಳನ್ನು ಹೊಂದಿದೆ. ಕೆಲವೊಂದು ಪ್ರಮುಖ ಮಂದಿರಗಳಲ್ಲಿ ನಾಗೇಶ್ವರನಾಥ ಮಂದಿರವೂ ಒಂದು. ಇದನ್ನು ರಾಮನ ಮಗ ಕುಶ ನಿರ್ಮಿಸಿದನೆಂಬ ಪ್ರತೀತಿಯಿದೆ. ಚಕ್ರ ಹರ್ಜಿ ವಿಷ್ಣು ಮಂದಿರ, ರಾಮಾಯಣವನ್ನು ಮತ್ತೆ ಬರೆದ ತುಳಸಿದಾಸ್ ಹೆಸರಿನಲ್ಲಿ ಸರ್ಕಾರ ರಚಿಸಿರುವ ತುಳಸಿ ಸ್ಮಾರಕ ಭವನವಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಸ್ಥಳದಲ್ಲೇ ರಾಮಜನ್ಮಭೂಮಿಯಿದೆ.

ಕನಕ ಭವನದಲ್ಲಿ ರಾಮ ಮತ್ತು ಸೀತೆ ಸ್ವರ್ಣ ಕಿರೀಟಗಳನ್ನು ಧರಿಸಿದ ಚಿತ್ರಗಳನ್ನಿಡಲಾಗಿದೆ. ಇಲ್ಲೇ ಹನುಮಾನ್ ಗರ್ಹಿ ಇದ್ದು, ಇದು ನಾಲ್ಕು ಅಂಚುಗಳನ್ನು ಹೊಂದಿರುವ ಕೋಟೆಯ ಪ್ರತೀ ಮೂಲೆಯಲ್ಲಿ ವೃತ್ತಾಕಾರದ ಕೊತ್ತಲಗಳಿರುವ ರಚನೆಯಾಗಿದೆ. ಶ್ರೀರಾಮನ ತಂದೆ ರಾಜ ದಶರಥನ ಹೆಸರಿನಲ್ಲಿ ದಶರಥ ಭವನ, ಶ್ರೀರಾಮ ಅಶ್ವಮೇಧ ಯಾಗ ನಡೆಸಿದ ತ್ರೇತಾ-ಕೆ-ಠಾಕೂರ್ ಪ್ರದೇಶವೂ ಇಲ್ಲಿದೆ.

ಮದುವೆ ಬಳಿಕ ರಾಮನಿಗಾಗಿ ಸೀತೆ ಮೊದಲ ಬಾರಿ ಅಡುಗೆ ಮಾಡಿದ ಸ್ಥಳ ಸೀತಾ ಕಿ ರಸೋಯಿ ರಾಮಜನ್ಮಭೂಮಿ ಮಂದಿರದ ಸಮೀಪದಲ್ಲೇ ಇದೆ. ರಾಮ್ ಕಿ ಪೈದಿ, ಸರಾಯು ನದಿ ಸ್ನಾನ ಘಟ್ಟಕ್ಕೂ ಭೇಟಿ ನೀಡಿ. ಹಿಂದೆ ಬೌದ್ಧ ವಿಹಾರವಾಗಿದ್ದ ಮಣಿ ಪರ್ಬತ್ ಈಗ ಹಿಂದೂ ದೇಗುಲವಾಗಿ ಈ ಪ್ರದೇಶದಲ್ಲಿದೆ. ಇದರೊಂದಿಗೆ ನಗರದ ಹಲವಾರು ಅದ್ಭುತ ವೀಕ್ಷಣೆಗಳನ್ನು ಆನಂದಿಸಬಹುದು.

ಅಯೋಧ್ಯಾದ ಹವಾಮಾನ

ನವಂಬರ್ ನಿಂದ ಮಾರ್ಚ್ ತನಕ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ವರ್ಷದ ಇತರ ಸಮಯದಲ್ಲಿ ವಾತಾವರಣ ಬಿಸಿ ಹಾಗೂ ಶುಷ್ಕವಾಗಿರುತ್ತದೆ. ವಾತಾವರಣ ಹೀಗಿದ್ದರೂ ಅಯೋಧ್ಯಾ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಹಿನ್ನೆಲೆಯಲ್ಲಿ ವರ್ಷವಿಡೀ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಾರೆ.

ಅಯೋಧ್ಯಾಗೆ ತಲುಪುವುದು ಹೇಗೆಅಯೋಧ್ಯಾಗೆ ವಿಮಾನ, ರಸ್ತೆ ಮತ್ತು ರೈಲು ಮೂಲಕ ಪ್ರಯಾಣಿಸಬಹುದು.

ಅಯೋಧ್ಯಾ ಪ್ರಸಿದ್ಧವಾಗಿದೆ

ಅಯೋಧ್ಯಾ ಹವಾಮಾನ

ಅಯೋಧ್ಯಾ
35oC / 95oF
 • Sunny
 • Wind: WNW 14 km/h

ಉತ್ತಮ ಸಮಯ ಅಯೋಧ್ಯಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಯೋಧ್ಯಾ

 • ರಸ್ತೆಯ ಮೂಲಕ
  ಲಖನೌ, ಅಲಹಾಬಾದ್, ವಾರಣಾಸಿ, ಗೋರಖಪುರ್ ಮತ್ತು ಇತರ ನಗರಗಳಿಂದ ಅಯೋಧ್ಯಾಗೆ ಬಸ್ ವ್ಯವಸ್ಥೆಯಿದೆ. ಸರ್ಕಾರಿ ಸಾರಿಗೆ ಬಸ್ ಗಳು ಹಾಗೂ ಖಾಸಗಿ ಬಸ್ ಗಳಿವೆ. ದೆಹಲಿಯಿಂದ ವೋಲ್ವೋ ಮತ್ತು ಡಿಲಕ್ಸ್ ಬಸ್ ಸೇವೆಯೂ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಯೋಧ್ಯಾಗೆ ದೆಹಲಿ, ಲಖನೌ, ವಾರಣಾಸಿ ಮತ್ತು ಅಲಹಾಬಾದ್ ನಿಂದ ರೈಲು ಸೇವೆಯಿದೆ. ಅಲಹಾಬಾದ್ ನಿಂದ ಜಿಕೆಪಿ ದುರ್ಗಾ ಎಕ್ಸ್ ಪ್ರೆಸ್, ಕೊಲ್ಕತ್ತಾದಿಂದ ಡೂನ್ ಎಕ್ಸ್ ಪ್ರೆಸ್, ದೆಹಲಿಯಿಂದ ಸರಾಯು ಯಮುನಾ ಎಕ್ಸ್ ಪ್ರೆಸ್ ಮತ್ತು ಲಖನೌ ನಿಂದ ಕೈಫಿಯಾತ್ ಎಕ್ಸ್ ಪ್ರೆಸ್ ಮತ್ತು ವಾರಣಾಸಿಯಿಂದ ಮರುಧಾರ ಎಕ್ಸ್ ಪ್ರೆಸ್ ರೈಲುಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅಯೋಧ್ಯಾಗೆ ತುಂಬಾ ಸಮೀಪದ ವಿಮಾನ ನಿಲ್ದಾಣ ಲಖನೌ ವಿಮಾನ ನಿಲ್ದಾಣ. ಇದು ಅಯೋಧ್ಯಾಕ್ಕಿಂತ 130 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಖಾಸಗಿ ಟ್ಯಾಕ್ಸಿ ಅಥವಾ ಬಸ್ ಮೂಲಕ ಅಯೋಧ್ಯಾಗೆ ಪ್ರಯಾಣಿಸಬಹುದು. ಅಮೌಸಿ, ವಾರಣಾಸಿ ಮತ್ತು ಕಾನ್ಪುರದಲ್ಲಿರುವ ದೇಶೀಯ ವಿಮಾನ ನಿಲ್ದಾಣಗಳು ಅಯೋಧ್ಯಾಗೆ ಅನುಕೂಲಕರ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
06 Aug,Thu
Return On
07 Aug,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Aug,Thu
Check Out
07 Aug,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Aug,Thu
Return On
07 Aug,Fri
 • Today
  Ayodhya
  35 OC
  95 OF
  UV Index: 9
  Sunny
 • Tomorrow
  Ayodhya
  30 OC
  87 OF
  UV Index: 9
  Sunny
 • Day After
  Ayodhya
  31 OC
  88 OF
  UV Index: 9
  Sunny