Search
 • Follow NativePlanet
Share
ಮುಖಪುಟ » ಸ್ಥಳಗಳು» ಫೈಜಾಬಾದ್

ಫೈಜಾಬಾದ್ - ನವಾಬರ ಹೆಮ್ಮೆಯ ನಾಡು

20

ಫೈಜಾಬಾದ್ ಉತ್ತರಪ್ರದೇಶ ರಾಜ್ಯದಲ್ಲಿದೆ, ಇದು ಗಾಘ್ರಾ ನದಿ ದಂಡೆಯಲ್ಲಿದೆ, ಇದು ಗಂಗಾನದಿಯ ಸಣ್ಣ ಉಪನದಿ. ಮಧ್ಯಮ ಗಾತ್ರದ ಪೈಕಿ ವಿಪರೀತವಾಗಿ ಬೆಳಿದಿರುವ ಈ ನಗರವನ್ನು 1730 ರಲ್ಲಿ ಬೆಂಗಾಲಿನ ನವಾಬ್ ಆಲಿ ವರ್ಧಿ ಖಾನ್ ನಿರ್ಮಿಸಿದ ಎನ್ನುವುದು ಇತಿಹಾಸ. ಕಾಲ ಕ್ರಮೇಣ ಇದನ್ನು ಶುಜಾ- ಉದ್-ದೌಲಾ ಅವಧ್‍ನ ರಾಜಧಾನಿಯೆಂದು ಘೋಷಿಸಿದ. ಈ ನಗರ ಅವನು ಹಾಕಿ ಕೊಟ್ಟ ದಾರಿಯಲ್ಲೇ ಈಗಲೂ ಅಧಿಕಾರ ನಡೆಸುತ್ತಿದೆ, ಫೈಜಾಬಾದ್ ತನ್ನ ಐತಿಹಾಸಿಕ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ನವಾಬರ ಕಾಲದ ಹಲವು ಐತಿಹಾಸಿಕ ಕಲಾ ಕೌಶಲ್ಯದ ಪಾರಂಪರಿಕ ಕಟ್ಟಡಗಳನ್ನು ಹೊಂದಿದ್ದು, ಅದರಲ್ಲಿ ಕೆಲವು ಈಗಲೂ ಸ್ಮಾರಕವಾಗಿ ಉಳಿದಿವೆ.

ಫೈಜಾಬಾದ್ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ಫೈಜಾಬಾದ್ ಹಲವು ಆಕರ್ಷಣೀಯ ಪ್ರದೇಶಗಳಿಗೆ ತವರೂರುನಂತಿದ್ದು, ಫೈಜಾಬಾದ್ ವಸ್ತು ಸಂಗ್ರಹಾಲಯ ಮತ್ತು ಕಲ್ಕತ್ತಾ ಕೋಟೆ ಪ್ರಮುಖವಾದದ್ದು. ಮೊಘಲರ ಸ್ಮಾರಕಗಳು ಪ್ರಮುಖವಾಗಿ ಬೇಗಂ ಕಾ ಮಕ್ಬಾರಾ ಮತ್ತು ಮೋತಿ ಮಹಲ್ ಭೇಟಿಗೆ ಯೋಗ್ಯವಾಗಿದ್ದುದು. ರಿಷಬ್ದೇವ್ ರಾಜಘಾಟ್ ಉದ್ಯಾನ್ ಸ್ಮಾರಕಗಳು ಪ್ರಥಮ ಜೈನ್ ತೀರ್ಥಂಕರ ಭಗವಾನ್ ರಿಷಬ್ದೇವ್ ಅವರ ಹೆಸರಿನಲ್ಲಿದೆ. ಗುಪ್ತಾರ್ ಘಾಟ್ ಬಗ್ಗೆ ಹಿಂದೂಗಳಲ್ಲಿ ಅತೀವ ನಂಬಿಕೆಯಿದೆ ಕಾರಣವೇನಂದರೆ ಪ್ರಭು ಶ್ರೀರಾಮಚಂದ್ರ ಈ ಪ್ರದೇಶದಲ್ಲಿ ಸ್ವರ್ಗ ಲೋಕಕ್ಕೆ ವಿಷ್ಣುವಿನ ಬಳಿ ಹೋಗಲು ಇಲ್ಲೇ ಜಲಸಮಾಧಿಯಾಗಿದ್ದ ಎನ್ನುವ ನಂಬಿಕೆಯಿಂದಾಗಿ.

ಫೈಜಾಬಾದ್ ತಲುಪುವುದು ಹೇಗೆ

ಫೈಜಾಬಾದ್ ರೈಲು ಮತ್ತು ರಸ್ತೆ ಮೂಲಕ ಉತ್ತಮ ಸಂಪರ್ಕದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಲಕ್ನೋ.

ಫೈಜಾಬಾದ್ ಭೇಟಿಗೆ ಯಾವ ಸಮಯ ಸೂಕ್ತ?

ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಫೈಜಾಬಾದ್ ನಗರಕ್ಕೆ ಭೇಟಿ ನೀಡುವುದು ಅತ್ಯಂತ ಸೂಕ್ತ.

ಫೈಜಾಬಾದ್ ಪ್ರಸಿದ್ಧವಾಗಿದೆ

ಫೈಜಾಬಾದ್ ಹವಾಮಾನ

ಉತ್ತಮ ಸಮಯ ಫೈಜಾಬಾದ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಫೈಜಾಬಾದ್

 • ರಸ್ತೆಯ ಮೂಲಕ
  ಫೈಜಾಬಾದ್ ನಗರಕ್ಕೆ ಪ್ರಮುಖ ನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳು ಮತ್ತು ಐಶಾರಾಮಿ ಖಾಸಾಗಿ ಬಸ್ ಸೌಲಭ್ಯವಿದೆ. ಖಾಸಗಿ ಬಸ್ಸುಗಳು ಸ್ವಲ್ಪ ದುಬಾರಿಯಾದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಿಗಿಂತ ಉತ್ತಮ ಗುಣಮಟ್ಟದ ಪ್ರಯಾಣದ್ದಾಗಿರುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಫೈಜಾಬಾದ್ ನಗರಕ್ಕೆ ಪ್ರಮುಖ ನಿಲ್ದಾಣಗಳಿಂದ ಉತ್ತಮ ರೈಲು ಸಂಪರ್ಕವಿದೆ. ದೆಹಲಿ, ಲಖನೌ, ವಾರಣಾಸಿ ಮತ್ತು ಅಲಹಾಬಾದ್ ನಗರದಿಂದ ಉತ್ತಮ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನ ನಿಲ್ದಾಣವೆಂದರೆ ಲಖನೌ. ಇದು ಫೈಜಾಬಾದ್ ನಗರದಿಂದ 130 ಕಿಲೋಮೀಟರ್ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Jan,Sat
Return On
29 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Jan,Sat
Check Out
29 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Jan,Sat
Return On
29 Jan,Sun