Search
 • Follow NativePlanet
Share
ಮುಖಪುಟ » ಸ್ಥಳಗಳು» ಗೋರಖ್ಪುರ್

ಗೋರಖ್ಪುರ್ : ಭಗವದ್ಗೀತೆಯ ಪ್ರಚಾರದಲ್ಲಿ ಮುಖ್ಯ ಪಾತ್ರವಹಿಸಿದ ತಾಣ

14

ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಖ್ನೋ ನಗರದಿಂದ ಪೂರ್ವಕ್ಕೆ ಸುಮಾರು ಇನ್ನೂರೈವತ್ತು ಕಿ.ಮೀ. ದೂರವಿರುವ ಗೋರಖ್ಪುರ ಒಂದು ಸುಂದರ ನಗರ. ಇತಿಹಾಸವನ್ನು ಕೆದಕಿದರೆ ಮೌರ್ಯರು, ಶುಂಗ, ಕುಶಾನಾ ಮತ್ತು ಗುಪ್ತ ರಾಜವಂಶಗಳು ಗೋರಖ್ಪುರವನ್ನು ಆಡಳಿತ ಕೇಂದ್ರವಾಗಿಸಿರುವುದನ್ನು ಗಮನಿಸಬಹುದು. ಸಂತ ಗೋರಕ್ಷನಾಥರಿಂದ ಗೋರಖಪುರ ಅಥವಾ ಗೋರಖ್ಪುರ ಎಂಬ ಹೆಸರು ಬಂದಿದೆ. ಪೂರ್ವ ಉತ್ತರಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಗೋರಖ್ಪುರದಲ್ಲಿ ಭಾರತದ ಈಶಾನ್ಯ ರೈಲ್ವೇ ಯ ಪ್ರಧಾನ ಕಾರ್ಯಾಲಯವೂ ಇದೆ. ಅಲ್ಲದೇ ಖುಷಿನಗರ, ಕಪಿಲವಾಸ್ತು ಮತ್ತು ನೇಪಾಳಕ್ಕೆ ಪಯಣಿಸಬೇಕಾದರೆ ಗೋರಖ್ಪುರದಿಂದಲೇ ಹೊರಡುವುದು ವಾಡಿಕೆಯಾಗಿದೆ. ಹಿಂದೂಗಳಿಗೆ ಪವಿತ್ರವಾದ ಭಗವದ್ಗೀತೆಯನ್ನು ಅತಿ ಹೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸುವ ಗೋರಖ್ಪುರ್ ಪ್ರೆಸ್ ಸಹಾ ಇಲ್ಲಿದೆ.

ಗೋರಖ್ಪುರದ ಪ್ರಮುಖ ಆಕರ್ಷಣೀಯ ತಾಣಗಳು

ನಗರದಲ್ಲಿರುವ ಹಲವಾರು ದೇಗುಲಗಳಲ್ಲಿ ಗೋರಖ್ಪುರ ಮಂದಿರ ಅತ್ಯಂತ ಸುಂದರವಾದ, ಪ್ರಮುಖ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಸೂಫಿ ಸಂತರ ಸಮಾಧಿಯಾಗಿರುವ ಇಮಾಂಬಾರಾ ಎಂಬ ಮುಸ್ಲಿಂ ಧಾರ್ಮಿಕ ಸ್ಥಳವೂ ಇಲ್ಲಿದೆ.  ಅಲ್ಲದೇ ನೈಸರ್ಗಿಕ ವಿಧಾನಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸೇವೆಗಳನ್ನು ಒದಗಿಸುವ ಆರೋಗ್ಯ ಮಂದಿರವೂ ಇಲ್ಲಿದೆ. ಅಲ್ಲದೇ ಹಲವಾರು ನೈಸರ್ಗಿಕ ಆಕರ್ಷಣೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಅವುಗಳಲ್ಲಿ ಪ್ರಮುಖವಾದುದು ರಾಮ್ ಘಡ್ ತಾಲ್ . ಇದು ಸುಮಾರು  ಏಳುನೂರು ಹೆಕ್ಟೇರ್ ಗೂ ಹೆಚ್ಚು ಪ್ರದೇಶವನ್ನು ವ್ಯಾಪಿಸಿರುವ ಮಹಾಸರೋವರವಾಗಿದೆ. ನೂರಾರು ವರ್ಷ ಬಾಳುವ ಸಲ್ ಮಾತ್ತು ಸಿಕ್ವೋಯಾ ( Sal and Sequoia) ಮರಗಳು ಹೇರಳವಾಗಿರುವ ಕುಶ್ಮಿ ಅರಣ್ಯವಲಯವೂ ಅನತಿ ದೂರದಲ್ಲಿದೆ. ಅಲ್ಲದೇ ವೀರ್ ಬಹಾದುರ್ ತಾರಾಲಯ ಮಕ್ಕಳ ಸಹಿತ ಹಿರಿಯರಿಗೂ ಖಗೋಳದ ವಿಸ್ಮಯಗಳನ್ನು ಪರಿಚಯಿಸುತ್ತದೆ.

ಗೋರಖ್ಪುರ್ ನಗರದ ಸಂದರ್ಶನಕ್ಕೆ ಅತ್ಯಂತ ಸೂಕ್ತ ಸಮಯ

ನವೆಂಬರ್ ನಿಂದ ಮಾರ್ಚ್ ತಿಂಗಳವರೆಗೆ ನಗರದ ಹವಾಮಾನ ಅಪ್ಯಾಯಮಾನವಾಗಿದ್ದು ಭೇಟಿಗೆ ಸಕಾಲವಾಗಿದೆ.

ಗೋರಖ್ಪುರ್ ಪ್ರಸಿದ್ಧವಾಗಿದೆ

ಗೋರಖ್ಪುರ್ ಹವಾಮಾನ

ಗೋರಖ್ಪುರ್
32oC / 90oF
 • Sunny
 • Wind: W 7 km/h

ಉತ್ತಮ ಸಮಯ ಗೋರಖ್ಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗೋರಖ್ಪುರ್

 • ರಸ್ತೆಯ ಮೂಲಕ
  ನಗರದಿಂದ ಇಡಿಯ ಉತ್ತರ ಪ್ರದೇಶದ ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸೌಲಭ್ಯವಿದ್ದು ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಭಾರತದ ಈಶಾನ್ಯ ರೈಲ್ವೇಯ ಪ್ರಧಾನ ಕಾರ್ಯಾಲಯವೇ ಇಲ್ಲಿರುವುದರಿಂದ ಗೋರಖ್ಪುರ ಜಂಕ್ಷನ್ ದೇಶದ ಎಲ್ಲಾ ನಗರಗಳಿಗೆ ನೇರ ಸಂಪರ್ಕ ಹೊಂದಿದೆ. ಮುಂಬೈ, ದೆಹಲಿ, ಲಖ್ನೋ, ಅಲಹಾಬಾದ್, ಕೊಚಿನ್, ಕೊಲ್ಕಾತಾ, ಆಗ್ರಾ, ಜೈಪುರ ಮೊದಲಾದ ನಗರಗಳಿಂದ ಗೋರಖ್ಪುರಕ್ಕೆ ನೇರ ರೈಲುಯಾನಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಗರದಿಂದ ಸುಮಾರು ಆರು ಕಿ.ಮೀ ದೂರವಿರುವ ಗೋರಖ್ಪುರ ವಿಮಾನನಿಲ್ದಾಣ ವಾಸ್ತವವಾಗಿ ಭಾರತೀಯ ವಾಯಸೇನೆಗೆ ಸೇರಿದ್ದರೂ ಸೀಮಿತ ಸಂಖ್ಯೆಯಲ್ಲಿ ಅಂತರ್ದೇಶೀಯ ವಿಮಾನಗಳು ದೆಹಲಿ, ಮುಂಬೈ ಕೊಲ್ಕಾತಾಗಳಿಂದ ಆಗಮಿಸುತ್ತವೆ. ಇಲ್ಲಿಂದ ನಗರಕ್ಕೆ ಅಥವಾ ನಾಲ್ಕು ಕಿ.ಮೀ ದೂರವಿರುವ ರೈಲ್ವೇ ನಿಲ್ದಾಣ ತಲುಪಲು ಟ್ಯಾಕ್ಸಿ ಸೇವೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Sep,Fri
Return On
21 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Sep,Fri
Check Out
21 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Sep,Fri
Return On
21 Sep,Sat
 • Today
  Gorakhpur
  32 OC
  90 OF
  UV Index: 9
  Sunny
 • Tomorrow
  Gorakhpur
  28 OC
  83 OF
  UV Index: 9
  Sunny
 • Day After
  Gorakhpur
  28 OC
  83 OF
  UV Index: 9
  Sunny