Search
  • Follow NativePlanet
Share
ಮುಖಪುಟ » ಸ್ಥಳಗಳು» ಚಾಂದೌಲಿ

ಚಂದೌಲಿ : ಏಷಿಯನ್ ಸಿಂಹಗಳ ತಾಣ

3

ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು ನಂತರ ಕೋಟೆಯನ್ನು ಕಟ್ಟಿಸಿದರು. ಅವೇಶಷಗಳ ನಡುವೆಯೂ ಈ ಕೋಟೆ ಹಲವಾರು ಪ್ರವಾಸಿಗರನ್ನು ಸೆಳೆಯುತ್ತದೆ.

ಚಂದೌಲಿ ಸುತ್ತಮುತ್ತಲಿನ ಪ್ರವಾಸಿತಾಣಗಳು:

ಹಕಿಯಾ ಕಾಲಿ ಮಂದಿರ, ಬಾಬಾ ಲತಿಫ್ ಶಾ ಗೋರಿ ಸೇರಿದಂತೆ ಹಲವು ಪ್ರವಾಸಿ ತಾಣಗಳು ಇಲ್ಲಿವೆ. ಅದರಲ್ಲೂ ಮುಖ್ಯವಾಗಿ ಗಮನ ಸೆಳೆಯುವುದು ಚಂದೌಲಿ ಅಭಯಾರಣ್ಯ. ಭಾರತದಲ್ಲಿಯೇ ಕಡಿಮೆ ಪ್ರಚಲಿತದಲ್ಲಿರುವ ಅಭಯಾರಣ್ಯ ಇದಾಗಿದ್ದು ಹಲವಾರು ತಳಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಜನ ಸಂಪರ್ಕದಿಂದ ದೂರವಿರುವ ಈ ಅಭಯಾರಣ್ಯ ತನ್ನ ಹೊಳಪನ್ನು ಉಳಿಸಿಕೊಂಡಿದೆ. ಅವಸಾನದ ಅಂಚಿನಲ್ಲಿರುವ ಏಷಿಯಾದ ಸಿಂಹಗಳು ಇಲ್ಲಿವೆ. ಅಭಯಾರಣ್ಯದ ಒಳಭಾಗದಲ್ಲಿ ಹಲವಾರು ಪಿಕ್ನಿಕ್ ಸೈಟ್ ಗಳು ಮತ್ತು ದಟ್ಟ ಮರಗಳಿವೆ. ಮನಮೋಹಕ ಜಲಪಾತಗಳಾದ ರಾಜದರಿ ಮತ್ತು ದೇವದರಿ ಇಲ್ಲಿವೆ.

ಚಂದ್ರಪ್ರಭಾ ಧಾಮ:

ಚಂದ್ರಪ್ರಭಾ ಅಭಯಧಾಮ ಒಂದು ಐತಿಹಾಸಿಕ ಕ್ಷೇತ್ರ. ವಾರಣಾಸಿಯಿಂದ 70 ಕಿ.ಮೀ ದೂರದಲ್ಲಿದೆ. ರಾಜದರಿ ಮತ್ತು ದೇವದರಿಯಂಥ ಜಲಪಾತಗಳು, ದಟ್ಟವಾದ ಅರಣ್ಯ ಹಾಗೂ ಹಲವು ಮನಮೋಹಕ ವಿಹಾರ ತಾಣಗಳು ಇಲ್ಲಿವೆ. ಏಷಿಯಾದ ಸಿಂಹಗಳನ್ನು ಸಂರಕ್ಷಿಸುವ ಸಲುವಾಗಿ 1957 ರಲ್ಲಿ ಈ ಅಭಯಧಾಮವನ್ನು ಸ್ಥಾಪಿಸಲಾಯಿತು. ಸಿಂಹಗಳ ಜೊತೆಗೆ ಬೇರೇ ಬೇರೇ ಪ್ರಭೇದದ ಪ್ರಾಣಿಗಳೂ ಇಲ್ಲಿವೆ. ಚೀತಲ್, ಬ್ಲ್ಯಾಕ್ ಬಕ್ಸ್, ವೈಲ್ಡ್ ಬೋರ್, ಸಾಂಬಾರ್, ನೀಲಘಾಯ್ ಮತ್ತು ಇಂಡಿಯನ್ ಗೇಜೇಲ್ ಗಳ ಇಲ್ಲಿ ಕಾಣಬಹುದಾಗಿದೆ. ಸುಮಾರು 150 ಸ್ಥಳೀಯ ಮತ್ತು ವಲಸೆ ಬರುವ ಪಕ್ಷಿಗಳು ಅಧ್ಯಯನಕಾರರಿಗೆ ಸೂಕ್ತ ವಾತಾವರಣ ಕಲ್ಪಿಸುತ್ತವೆ.

ವಿಂಧ್ಯ ಪರ್ವತದ ಸಾಲಿನಲ್ಲಿ ನೌಘರ್ ಮತ್ತು ವಿಜಯಘರ್ ಬೆಟ್ಟಗಳ ನಡುವೆ ಸುಮಾರು 78 ಸ್ಕ್ವೇರ್ ಕಿ.ಮೀ ವಿಸ್ತೀರ್ಣದಲ್ಲಿ ಈ ಅಭಯಧಾಮ ಹರಡಿಕೊಂಡಿದೆ. ಇಲ್ಲಿಗೆ ಭೇಟಿ ನೀಡುವುದಕ್ಕೆ ಅಕ್ಟೋಬರ್ ನಿಂದ ಫೇಬ್ರವರಿ ಸೂಕ್ತವಾದ ಸಮಯ. ಆದರೆ ಇಲ್ಲಿ ಯಾವುದೇ ವಸತಿ ಸೌಕರ್ಯಗಳಿಲ್ಲ. ತಿಂಡಿ ತಿನಿಸು ಪಾನೀಯದ ಅಂಗಡಿಗಳಿವೆ.

ರಾಜದರಿ ದೇವದರಿ ಜಲಪಾತ:

ರಾಜದರಿ ಮತ್ತು ದೇವದರಿ ಜಲಪಾತಗಳು ಚಂದ್ರಪ್ರಭಾ ಅಭಯಧಾಮದಲ್ಲಿ ಕಾಣಿಸುತ್ತವೆ. ಏಷಿಯಾದ ಸಿಂಹಗಳನ್ನು ಸಂರಕ್ಷಿಸಲು ಈ ಅಭಯಧಾಮವನ್ನು ನಿರ್ಮಿಸಲಾಗಿದೆ. ಈ ಅಭಯಧಾಮದಲ್ಲಿ ಪ್ರಾಣಿ ಪಕ್ಷಿಗಳ ಜೊತೆಗೆ ರಾಜದರಿ ಮತ್ತು ದೇವದರಿ ಜಲಪಾತಗಳು ಮುಖ್ಯ ಆಕರ್ಷಣೆ. ಸ್ಪಟಿಕ ಶುಧ್ದ ನೀರು ಕಲ್ಲು ಬಂಡೆಗಳ ಮಧ್ಯೆ ಹರಿಯುವುದರಿಂದ ನೋಡುವುದಕ್ಕೆ ಚಂದ. ಐತಿಹಾಸಿಕ ನಗರ ವಾರಣಾಸಿಯಿಂದ ಕೇವಲ 55ಕಿಮೀ ದೂರದಲ್ಲಿದೆ. ದಿನದ ಪ್ರವಾಸಕ್ಕೆಂದು ಇದು ಹೇಳಿಮಾಡಿಸಿದ ತಾಣವಾಗಿದ್ದು, ಜನರು ಬರುತ್ತಿರುತ್ತಾರೆ. ಆದರೆ ಯಾವುದೇ ವಸತಿ ಸೌಕರ್ಯವಿಲ್ಲ.

ಚಾಂದೌಲಿ ಪ್ರಸಿದ್ಧವಾಗಿದೆ

ಚಾಂದೌಲಿ ಹವಾಮಾನ

ಉತ್ತಮ ಸಮಯ ಚಾಂದೌಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಾಂದೌಲಿ

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ -2 ಚಂದೌಲಿಯ ಮೂಲಕ ಸಾಗಿ ಹೋಗುತ್ತದೆ. ಉತ್ತರ ಪ್ರದೇಶದ ಪ್ರಮುಖ ನಗರಗಳಿಗೆ ಚಂದೌಲಿಯ ಸಂಪರ್ಕವಿದೆ. ಖಾಸಗಿ ಬಸ್ ಕೂಡ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಂದೌಲಿಗೆ ರೈಲ್ವೇ ಸಂಪರ್ಕವಿರುವುದು ಮುಘಲ್ ಸಾರಾಯ್- ಸಾಸಾರಾಮ್ ಮಾರ್ಗದಲ್ಲಿ. ದೆಹಲಿ, ವಾರಣಾಸಿ, ಕೋಲ್ಕತ್ತಾ ಮತ್ತು ಆಗ್ರಾದಿಂದ ರೈಲು ಸಂಚಾರವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ವಿಮಾನ ನಿಲ್ದಾಣ ಇರುವುದು ವಾರಣಾಸಿಯಲ್ಲಿದ್ದು, ಕೇವಲ 50 ಕೀಮೀ ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಹತ್ತಿ ಚಂದೌಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri