Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಆಕರ್ಷಣೆಗಳು » ತ್ರೇತಾ-ಕೆ-ಠಾಕೂರ್

ತ್ರೇತಾ-ಕೆ-ಠಾಕೂರ್, ಅಯೋಧ್ಯಾ

1

ಧರ್ಮಗ್ರಂಥಗಳ ಪ್ರಕಾರ ರಾವಣನ ವಿರುದ್ಧ ಗೆಲುವು ಪಡೆದ ಸಂಭ್ರಮದಲ್ಲಿ ಶ್ರೀರಾಮ ಅಯೋಧ್ಯಾದಲ್ಲಿ ಅಶ್ವಮೇಧ ಯಾಗವನ್ನು ಕೈಗೊಂಡ. ಈ ಯಾಗ ಕೈಗೊಂಡ ಸ್ಥಳದಲ್ಲಿ ತ್ರೇತಾ-ಕೆ-ಠಾಕೂರ್ ಮಂದಿರವನ್ನು ನಿರ್ಮಿಸಲಾಗಿದೆ. ಸತ್ಯುಗ್ ಬಳಿಕ ತ್ರೇತಾ ಯುಗದ ಭಗವಂತ ಶ್ರೀರಾಮನನ್ನು ತ್ರೇತಾ ಕೆ ಠಾಕೂರ್ ಎಂದು ಕರೆಯಲಾಗುತ್ತಿತ್ತು.

ಅಯೋಧ್ಯಾದ ನಯಾ ಘಾಟ್ ನಲ್ಲಿ 300 ವರ್ಷ ಮೊದಲು ಹಿಮಾಚಲ ಪ್ರದೇಶದ ಕುಲುವಿನ ರಾಜ ಇದೇ ಹೆಸರಿನ ಮಂದಿರವನ್ನು ನಿರ್ಮಿಸಿದ. ಬಳಿಕ ಇದನ್ನು ಮರಾಠರ ರಾಣಿ ಅಹಿಲ್ಯ ಬೈ ಹೊಲ್ಕರ್ ನವೀಕರಿಸಿದರು. ಈ ಮಂದಿರದಲ್ಲಿ ಶ್ರೀರಾಮ ಮತ್ತು ಸೀತಾ ಮಾತೆ, ರಾಮನ ಸೋದರರಾದ ಲಕ್ಷ್ಮಣ, ಭರತ, ಶತ್ರುಘ್ನ, ಕಾವಲುಗಾರರಾದ ಜೈ-ವಿಜಯ್, ಗುರು ವಶಿಷ್ಠ, ರಾಜ ಸುಗ್ರೀವ ಮತ್ತು ರಾಮನ ನಿಷ್ಠಾವಂತ ಭಕ್ತ ಹಾಗೂ ಬಂಟ ಹನುಮಂತನ ಮೂರ್ತಿಗಳಿವೆ.

ಸರಾಯು ನದಿ ದಡದಲ್ಲಿರುವ ಮೂಲ ಮಂದಿರದಿಂದಲೇ ಶ್ರೀರಾಮ, ಆತನ ಮೂವರು ಸೋದರರು ಮತ್ತು ಸೀತೆಯ ಮೂರ್ತಿಗಳನ್ನು ತರಲಾಗಿದೆಯೆಂದು ನಂಬಲಾಗುತ್ತಿದೆ. ಒಂದೇ ಕಪ್ಪು ಕಲ್ಲಿನಿಂದ ಈ ಮೂರ್ತಿಗಳನ್ನು ಕೆತ್ತಲಾಗಿದೆ. ಏಕದಶಿ ದಿನ ಅಥವಾ ಕಾರ್ತಿಕ ಮಾಸದ 11ನೇ ದಿನದಂದು ಮಂದಿರದ ಬಾಗಿಲು ತೆರೆಯಲಾಗುತ್ತದೆ. ಈ ವೇಳೆ ಸಾವಿರಾರು ಮಂದಿ ಭಕ್ತರು ಶ್ರೀರಾಮನ ಅನುಗ್ರಹ ಪಡೆಯಲು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri