Search
  • Follow NativePlanet
Share
ಮುಖಪುಟ » ಸ್ಥಳಗಳು» ಬಿಥೂರ್

ಬಿಥೂರ್ : ಪುರಾಣ, ಇತಿಹಾಸದ ಸಮ್ಮಿಶ್ರಣ

10

ಕಾನ್ಪುರದಿಂದ 22 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಪ್ರಾಕೃತಿಕ ಮತ್ತು ಸುಂದರವಾದ ಪಟ್ಟಣ ಬಿಥೂರ್, ಗಂಗಾ ದಡದ ಮೇಲಿದೆ. ಕಾನ್ಪುರದ  ಗೌಜು ಗದ್ದಲಗಳಿಂದ ಬೇಸತ್ತ ಜನರಿಗೆ ಸ್ವಲ್ಪ ದೂರದಲ್ಲಿರುವ, ಬಿಥೂರ್ ಪುನರ್ಯೌವನಗೊಳಿಸುವ ಮತ್ತು ವಿಶ್ರಾಂತಿ ನೀಡುವ ಸುಂದರ ತಾಣ. ಬಿಥೂರ್ ಹಿಂದೂಗಳಿಗೆ ಪ್ರಮುಖ ಯಾತ್ರಾ ಕೇಂದ್ರವಾಗಿದೆ ಮತ್ತು ಮಹಾನ್ ಐತಿಹಾಸಿಕ ಮಹತ್ವವನ್ನು ಹೊಂದಿದೆ.

ಬಿಥೂರ್ ಇತಿಹಾಸ - ಆಸಕ್ತಿದಾಯಕ ಸಂಗತಿಗಳು ಮತ್ತು ದಂತಕಥೆಗಳು

ಪಟ್ಟಣವು ಪ್ರಾಚೀನ ಕಾಲದ್ದಾಗಿದ್ದು,  ಅನೇಕ ದಂತಕಥೆಗಳು ಮತ್ತು ನೀತಿಗಳು ಈ ಪಟ್ಟಣದ ಕುರಿತಿರುವುದನ್ನು ಕೇಳಬಹುದು. ದಂತಕಥೆಯ ಪ್ರಕಾರ,  ಒಂದೊಮ್ಮೆ ಭಗವಾನ್ ವಿಷ್ಣುವು ನಕ್ಷತ್ರಪುಂಜವನ್ನು ನಾಶ ಮಾಡಿ ಮರುನಿರ್ಮಾಣ ಮಾಡಿದ ಸಂದರ್ಭದಲ್ಲಿ, ಬ್ರಹ್ಮ ದೇವನು ಬಿಥೂರ್ ಅನ್ನು ತನ್ನ ವಾಸಸ್ಥಾನವಾಗಿ ಆಯ್ಕೆ ಮಾಡಿಕೊಂಡ ಎಂದು ಹೇಳಲಾಗಿದೆ. ಇಲ್ಲಿ ಭಗವಂತನು ಮೊದಲ ಬಾರಿಗೆ ಮಾನವರನ್ನು ಸೃಷ್ಟಿಸಿದ ಮತ್ತು ಅಶ್ವಮೇಧಯಾಗವನ್ನು ಪೂರ್ಣಗೊಳಿಸಿದ ಎಂದು ಹೇಳಲಾಗುತ್ತದೆ. ಈ ಘಟನೆಗಳ ನಂತರ ವ್ಯುತ್ಪತ್ತಿಗೊಂಡ ಈ ಸ್ಥಳವು ಬ್ರಹ್ಮವರ್ತ ಎಂದು ಪ್ರಸಿದ್ಧವಾಯಿತು. ನಂತರ, ಬಿಥೂರ್ ಎಂಬ ಹೆಸರು ಪಡೆಯಿತು. ತದನಂತರ ಬ್ರಹ್ಮದೇವನನ್ನು ಸಮಾಧಾನಗೊಳಿಸಲು ತಪಸ್ಸು ಮಾಡಿದ್ದ ಧ್ರುವನ ತಂದೆಯಾದ ಚಕ್ರವರ್ತಿ ಉತ್ತಾನಪಾದನ ಆಳ್ವಿಕೆಯಲ್ಲಿ ಬಿಥೂರ್ ಪ್ರಗತಿ ಹೊಂದಿತು. ಬಿಥೂರ್, ರಾಮಾಯಣದ ಕಥೆಯೊಂದಿಗೂ ಕೂಡ ನಿಕಟ ಸಂಬಂಧವನ್ನು ಹೊಂದಿದೆ. ಅದೇನೆಂದರೆ ಶ್ರೀರಾಮಚಂದ್ರನು ಇಲ್ಲಿಯೇ ಸೀತೆಯನ್ನು ಬಿಟ್ಟು ಹೋಗಿದ್ದ. ಅಲ್ಲದೆ ಇಲ್ಲಿಯೆ ಋಷಿ ವಾಲ್ಮೀಕಿ ಕುಳಿತು ಅನಿರ್ದಿಷ್ಟಾವಧಿಯ ಮಹಾಕಾವ್ಯ ರಾಮಾಯಣವನ್ನು ರಚಿಸಿದರು ಎಂದು ಹೇಳಲಾಗುತ್ತದೆ.

ಬಿಥೂರ್ ನಲ್ಲಿಯೇ ಸೀತೆ ತನ್ನ ಅವಳಿ ಮಕ್ಕಳಾದ ಲವ ಮತ್ತು ಕುಶರಿಗೆ ಜನ್ಮ ನೀಡಿದಳು ಮತ್ತು  ಅವರು ಸಂತ ವಾಲ್ಮೀಕಿ ಮಾರ್ಗದರ್ಶನದಲ್ಲಿ ತಮ್ಮ ಬಾಲ್ಯವನ್ನು ಕಳೆದರು ಎಂದು ಹೇಳಲಾಗಿದೆ.  ಈ ಅವಳಿ ಮಕ್ಕಳು ವಾಸ್ತವವಾಗಿ, ಯುದ್ಧಕಲೆ ಮತ್ತು ರಾಜಕೀಯದ ತಂತ್ರಗಳನ್ನು ಆರಂಭಿಸಿದ್ದು ಇಲ್ಲೇ!  ಅಂತಿಮವಾಗಿ, ಅವರು ತಮ್ಮ ತಂದೆಯೊಂದಿಗೆ ಒಂದಾದರು. ಆದ್ದರಿಂದಲೇ ಬಿಥೂರ್ ನನ್ನು ರಾಮಲೇ ಎಂದೂ ಕರೆಯಲಾಗುತ್ತದೆ.

ಇಷ್ಟೇ ಅಲ್ಲದೇ ಇನ್ನೂ ಹಲವಾರು ದಂತಕಥೆಗಳು ಬಿಥೂರ್ ಹೆಸರಿನೊಂದಿಗೆ ಹಾಸುಹೊಕ್ಕಾಗಿದೆ. ಧ್ರುವ ಎಂಬ ಹುಡುಗನ ಬಗ್ಗೆ ಇರುವ ದಂತಕಥೆಯೆಂದರೆ ಧ್ರುವನು ಇಲ್ಲಿಯೇ ಸಂತನಾಗಿ ನಂತರ ಉಜ್ವಲ ತಾರೆಯಾಗಿ ಕಂಗೊಳಿಸಿದ ಎಂಬ ಕಾರಣಕ್ಕೂ ಬಿಥೂರ್ ಪ್ರಸಿದ್ಧವಾಗಿದೆ

ಆಧುನಿಕತೆಯಲ್ಲಿ ಬಿಥೂರ್

ಆಧುನಿಕ ಯುಗಕ್ಕೆ ಮರಳಿದರೆ, ಬಿಥೂರ್ ಹಲವು ಚಾರಿತ್ರಿಕ ವ್ಯಕ್ತಿಗಳ ಮತ್ತು ಭಾತರದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಝಾನ್ಸಿ ರಾಣಿ ಎಂದು ಕರೆಯುವ ರಾಣಿ ಲಕ್ಷ್ಮಿ ಬಾಯಿ, ಮತ್ತು ಸಾಹೇಬ್ ಪೇಶ್ವಾ: ಸ್ವಾತಂತ್ರ್ಯ ಹೋರಾಟಗಾರ ಹುಟ್ಟಿದ ಸ್ಥಳವಾಗಿದೆ.  ದೇಶಭಕ್ತಿ ಮತ್ತು ಶೌರ್ಯ ಮೈಗೂಡಿಸಿಕೊಂಡಿದ್ದ ಈ ಹೋರಾಟಗಾರರನ್ನು ಇಂದಿಗೂ ನೆನಪಿನಲ್ಲಿಟ್ಟುಕೊಳ್ಳಲಾಗಿದೆ.  ಬಿಥೂರ್‌‌‌‌‌‌‌‌ನಲ್ಲೆ,  ಇವರು ತಮ್ಮ ಬಾಲ್ಯದ ಕೆಲ ವರ್ಷಗಳನ್ನು ಕಳೆದರು ಮಾತು ಯುದ್ಧ ನೀತಿಗಳನ್ನು ಕಲೆತರು.  1857 ರ ಮಹಾನ್  ಸಿಪಾಯಿದಂಗೆಯಲ್ಲಿ ತಾವು ಕಲಿತ ತಂತ್ರಗಾರಿಕೆಯನ್ನು ಬಳಸುವಲ್ಲಿ ಯಶಸ್ವಿಯೂ ಆದರು!

ಬಿಥೂರಿನ ಪ್ರವಾಸಿ ತಾಣಗಳು

ಈ ಪಟ್ಟಣವು ಇತಿಹಾಸದ ಹಿನ್ನೆಲೆಯಲ್ಲಿ ಮಾತ್ರ ಭೇಟಿ ಮಾಡಬಹುದಾದ ಸ್ಥಳ ಮಾತ್ರವಲ್ಲದೇ ನೆಮ್ಮದಿಯ ಸಮಯವನ್ನು ಕಳೆಯುತ್ತ ಧಾರ್ಮಿಕ ದೇವಾಲಯಗಳು ಮತ್ತು ನದಿಯುದ್ದಕ್ಕೂ ಒಂದು  ದೋಣಿ ಸವಾರಿ  ಮಾಡಬಹುದಾದಂತಹ ಪ್ರಕೃತಿಯ ಸೌಂದರ್ಯವನ್ನು ಹೊಂದಿರುವ ರಮಣೀಯ ತಾಣವಾಗಿದೆ.  ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ, ರಾಮಾಯಣ ಮಹಾಕಾವ್ಯವನ್ನು ರಚಿಸಿದ ಸಂತ ವಾಲ್ಮೀಕಿ ಆಶ್ರಮವೂ ಸೇರಿವೆ. ನಂತರ, ವರ್ಷಪೂರ್ತಿ ಆರಾಧಕರನ್ನು ಆಕರ್ಷಿಸುವ ಬ್ರಹ್ಮ ಘಾಟ್, ಬಿಥೂರ್‌‌‌‌‌‌‌‌‍ನ ಒಂದು ಪವಿತ್ರ ಘಾಟ್ ಆಗಿದೆ.  ಅಲ್ಲ್ಲದೆ ಮತ್ತೊಂದು ಪೂಜನೀಯ ಸ್ಥಳವೆಂದರೆ ಪತ್ತರ್ ಘಾಟ್, ಇದರ ಅಡಿಗಲ್ಲಿನ ಶಂಖುಸ್ಥಾಪನೆಯನ್ನು  ಔಧ್‍ನ ಮಂತ್ರಿಯಾದ, ತಿಕೈತ್ ರೈ ನಿಂದ ನೆರವೇರಿಸಲಾಗಿದೆ.

ಧ್ರುವ ತೀಲಾ ಮತ್ತೊಂದು ಪವಿತ್ರ ಸ್ಥಳವಾಗಿದ್ದು, ಇಲ್ಲಿಯೆ ಧ್ರುವನು ತನ್ನ ಬಾಲ್ಯದಲ್ಲಿ ಒಂದೆ ಕಾಲಿನಲ್ಲಿ ನಿಂತು ತಪಸ್ಸು ಆಚರಿಸಿದ್ದನೆಂದು ಹೇಳಲಾಗಿದೆ. ಇವುಗಳನ್ನು ಹೊರತುಪಡಿಸಿ, ಜಹಾಂಗೀರ್ ಮಸೀದಿ, ಹರಿಧಾಮ್ ಆಶ್ರಮ, ರಾಮ್ ಜಾನಕಿ ದೇವಸ್ಥಾನ, ಲವ-ಕುಶ ದೇವಸ್ಥಾನ ಮತ್ತು ನಾನಾ ಸಾಹೇಬ್ ಸ್ಮಾರಕ್ ಮೊದಲಾದವು ಭೇಟಿ ನೀಡಬಹುದಾದ ಮೌಲ್ಯಯುತ ಸ್ಥಳಗಳಾಗಿವೆ.

ಅಂದ ಹಾಗೆ ಬಿಥೂರ್, ಹಿಂದೂಗಳ ಪ್ರಮುಖ ಯಾತ್ರಾಸ್ಥಳವಾಗಿದೆ ಮತ್ತು ಕಾರ್ತಿಕ ಪೂರ್ಣಿಮಾ, ಮಾಘ ಪೂರ್ಣಿಮಾ ಮತ್ತು ಮಕರ ಸಂಕ್ರಾಂತಿಯಂತಹ ಹಲವಾರು ಉತ್ಸವಗಳು ಇಲ್ಲಿ ನಡೆಯುತ್ತವೆ. ಸಾವಿರಾರು ಜನರು ಗಂಗಾ ನದಿಯಲ್ಲಿ ಮಿಂದು ಈ ವಿಶೇಷ ದಿನಗಳಲ್ಲಿ ಭಾಗವಹಿಸಲು ಬರುತ್ತಾರೆ.

ಬಿಥೂರ್ ಪ್ರಸಿದ್ಧವಾಗಿದೆ

ಬಿಥೂರ್ ಹವಾಮಾನ

ಉತ್ತಮ ಸಮಯ ಬಿಥೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಿಥೂರ್

  • ರಸ್ತೆಯ ಮೂಲಕ
    ಬಿಥೂರ್ ಉತ್ತಮ ರಸ್ತೆ ಮಾರ್ಗವನ್ನು ಹೊಂದಿದ್ದು ಕಾನ್ಪುರ್, ಲಖ್ನೋ, ಆಗ್ರಾ ಮತ್ತು ಅಯೋಧ್ಯೆ ಸೇರಿದಂತೆ ಉತ್ತರಪ್ರದೇಶದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಂದ ಬಸ್ ಸೇವೆಯನ್ನು ಹೊಂದಿದೆ. ಸಾರ್ವಜನಿಕ ಸಾರಿಗೆ ಬಸ್ ದೆಹಲಿಯಿಂದ ಸಹ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪ್ಯಾಸೆಂಜರ್ ಟ್ರೈನ್ ಸೌಲಭ್ಯವಿರುವ, ನಗರದಿಂದ 22 ಕಿ.ಮೀ ದೂರದಲ್ಲಿರುವ ಕಾನ್ಪುರ್ ರೈಲ್ವೆ ನಿಲ್ದಾಣ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಬಿಥೂರ್ ತಲುಪಲು ಟ್ಯಾಕ್ಸಿ ಅಥವಾ ಸಾರ್ವಜನಿಕ ಸಾರಿಗೆ ಬಸ್ ಗಳು ಲಭ್ಯ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಿಥೂರಿಗೆ ಹತ್ತಿರದ ವಿಮಾನಾ ನಿಲ್ದಾಣವೆಂದರೆ 87 ಕಿ.ಮೀ ದೂರದಲ್ಲಿರುವ ಲಖ್ನೋ ವಿಮಾನ ನಿಲ್ದಾಣ. ಇಲ್ಲಿಂದ ಬಿಥೂರ್ ಅನ್ನು ತಲುಪಲು ಟ್ಯಾಕ್ಸಿ ಅಥವಾ ಸಾರ್ವಜನಿಕ ಸಾರಿಗೆ ಬಸ್ ಗಳ ಮೂಲಕ ಪ್ರಯಾಣ ಮುಂದುವರೆಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri