ಪಕ್ಕೆ ಬಜಾರ್, ಬಸ್ತಿ ಜಿಲ್ಲೆಯ ಮುಖ್ಯ ಮಾರುಕಟ್ಟೆಗೆ ಹೆಸರಾಗಿದೆ. ಇದು ಒಂದು ಕೇಂದ್ರೀಯ ಮಾರುಕಟ್ಟೆಯಾಗಿದ್ದು ನಗರದ ಜನರನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸಹ ಆಕರ್ಷಿಸುತ್ತದೆ. ಇದು ಅತ್ಯಂತ ಬಿಡುವಿಲ್ಲದ ಶಾಪಿಂಗ್ ಪ್ರದೇಶವಾಗಿದೆ ಮತ್ತು ಸದಾ ಜನರಿಂದ ತುಂಬಿರುತ್ತದೆ. ಮಾರುಕಟ್ಟೆ ವ್ಯಾಪಾರ ಸಾರ್ವಜನಿಕರ ಬಹುತೇಕ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸುತ್ತದೆ.
ಈ ಮಾರುಕಟ್ಟೆಯು ನಗರದ ಹಳೆಯ ವ್ಯಾಪಾರ ಪ್ರದೇಶಗಳಲ್ಲಿ ಒಂದಾಗಿದೆ. ಇದು ಎಲ್ಲಾ ಪ್ರಮುಖ ಅಂಗಡಿಗಳು ಮತ್ತು ಇತರೆ ವ್ಯಾಪಾರ ಸಂಸ್ಥೆಗಳು, ಆಸ್ಪತ್ರೆಗಳು, ಶುಶ್ರೂಷಾಲಯಗಳು, ಪೆಥಾಲಜಿ ಲ್ಯಾಬ್ (ರೋಗಪತ್ತೆ ಮಾಡುವ ಲ್ಯಾಬ್), ದಿನಸಿ ಅಂಗಡಿಗಳು, ಸ್ಟೇಶನರಿ ಅಂಗಡಿಗಳು, ಕ್ರೀಡಾ ಸರಕು ಮಾರಾಟಗಾರರು, ಆಭರಣ, ಬಟ್ಟೆ ವ್ಯಾಪಾರಿಗಳು, ಅತಿಥಿ ಗೃಹ, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ನೆಲೆಯಾಗಿದೆ.
ಮಾರುಕಟ್ಟೆಯು, ಭಾರಿ ಜನನಿಬಿಡತೆಯ ಪ್ರದೇಶವಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಪಾರ್ಕಿಂಗ್ ಸ್ಥಳದ ಕೊರತೆಯ ಕಾರಣ ನಾಲ್ಕು ಚಕ್ರದ ವಾಹನದ ಬದಲು, ರಿಕ್ಷಾ ಅಥವಾ ಒಂದು ಸೈಕಲ್ ತೆಗೆದುಕೊಂಡು ಹೋಗುವುದು ಒಳಿತು.