Search
 • Follow NativePlanet
Share
ಮುಖಪುಟ » ಸ್ಥಳಗಳು» ಕಲಿಂಪಾಂಗ್

ಕಾಲಿಂಪಾಂಗ್ : ಗಿರಿಧಾಮದಲ್ಲೊಂದು ಸುತ್ತಾಟ...

17

ಭಾರತದ ಪಶ್ಚಿಮ ಬಂಗಾಳದಲ್ಲಿರುವ ಹಿಮಾಚ್ಛಾದಿತ ಗಿರಿಧಾಮ ಕಾಲಿಂಪಾಂಗ್. ಇದು ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿದ್ದು ಗಾಳಿ ಬೀಸುತ್ತಿರುತ್ತದೆ. ಇದೊಂದು ಉತ್ತಮ ಪ್ರವಾಸಿ ತಾಣ. ಮನೆಯವರು ಮತ್ತು ಗೆಳೆಯರೊಂದಿಗೆ ರಜೆಯಮೋಜನ್ನು ಸವಿಯಲು ಸೂಕ್ತ ತಾಣ.

ಕಾಲಿಂಪಾಂಗ್ ಪಶ್ಚಿಮ ಬಂಗಾಳದ ಕಲೆ, ಆಹಾರ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಲು ಸೂಕ್ತ ತಾಣ. ಇಲ್ಲಿ ಬೌದ್ಧ ಮಠಗಳ ಪ್ರಭಾವವನ್ನು ಮತ್ತು ಮಹಾಭಾರತ ಕಾಲವನ್ನು ಒಟ್ಟಿಗೆ ನೆನಪು ಮಾಡಿಕೊಳ್ಳಬಹುದು.

ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ಕಾಲಿಂಪಾಂಗ್ನಲ್ಲಿ ಪ್ರಕೃತಿ ಪ್ರೇಮಿಗಳು ಚಿರತೆಗಳಿಂದ ಹಿಡಿದು ಕೆಂಪು ಪಾಂಡವರೆಗೆ ಮತ್ತು ಸೈಬೀರಿಯನ್ ವೆಸಲ್ನಿಂದ ಹಿಡಿದು ಜಿಂಕೆಯವರೆಗೆ ಹಲವು ಪ್ರಾಣಿಗಳನ್ನು ಕಾಣಬಹುದು. ಹಲವು ಜಾತಿಯ ಪಕ್ಷಿಗಳನ್ನು ಕೂಡ ನಗರದ ಸುತ್ತ ಮುತ್ತ ಕಾಣಬಹುದು. ನೀವು ನೆಒರ ವ್ಯಾಲಿ ನ್ಯಾಷನಲ್ ಪಾರ್ಕ್ ಅಥವ ರಿಷಿ ಬಂಕಿಂ ಚಂದ್ರ ಪಾರ್ಕ್ಗೆ ಕೂಡ ಭೇಟಿ ಪ್ರಕೃತಿಯ ಮಡಿಲಲ್ಲಿ ವಿಶ್ರಮಿಸಬಹುದು.

ಇಲ್ಲಿ ಪೈನ್ ಮರಗಳನ್ನು ಹೆಚ್ಚಾಗಿ ಕಾಣಬಹುದು. ಕಾಲಿಂಪಾಂಗ್ ನೂರಾರು ಜಾತಿಯ ಆರ್ಚಿಡ್ಗಳನ್ನು ಪ್ರಪಂಚದ ವಿವಿಧೆಡೆಗೆ ರಫ್ತು ಮಾಡುತ್ತವೆ. ನಿಮ್ಮ ಸಂಗಾತಿಯನ್ನು ಈ ತಾಜಾ ಹೂಗಳಿಂದ ಖುಷಿಗೊಳಿಸಬಹುದು.ನೀವು ಸಾಂಸ್ಕೃತಿಕತೆಯ ಬಗ್ಗೆ ಆಸಕ್ತಿ ಹೊಂದಿರುವವರಾದರೆ ಲೆಪ್ಚಾ ಸಂಗ್ರಹಾಲಯ ಅಥವ ಜಾಂಗ್ ಧೋಲ್ ಪಾಲ್ರಿ್ ಫೊದಾಂಗ್ ಮಠಕ್ಕೆ ಭೇಟಿ ನೀಡಬಹುದು. ಇದು ನಗರದಿಂದ ಕೇವಲ ಒಂದು ಕಿಮೀ ದೂರದಲ್ಲಿದೆ.

ನೀವು ಎಂತಹ ಪ್ರದೇಶಕ್ಕೆ ಪ್ರವಾಸ ಹೋಗಲು ಇಷ್ಟಪಡುವವರಾದರೂ ಕಾಲಿಂಪಾಂಗ್ ಮಾತ್ರ ಎಲ್ಲ ರೀತಿಯ ಪ್ರವಾಸಿಗರಿಗೆ ಇಷ್ಟವಾಗುವ ಸ್ಥಳ. ಈ ಸ್ಥಳವನ್ನು ಸುಲಭವಾಗಿ ತಲುಪಬಹುದು. ಇದು ಸಿಲಿಗುರಿ ವಿಮಾನನಿಲ್ದಾಣಕ್ಕೆ ಸಮೀಪದಲ್ಲಿದೆ. ಇಲ್ಲಿಂದ ನಗರಕ್ಕೆ ಹೋಗುವ ಮಾರ್ಗ ಪ್ರಕೃತಿ ಸೌಂದರ್ಯದಿಂದ ತುಂಬಿದೆ. ಇಲ್ಲಿ ಮಾಧ್ಯಮ ಸಂಪರ್ಕಗಳು ಕೂಡ ಉತ್ತಮವಾಗಿದೆ. ಒಳ್ಳೆಯ ಹೋಟೆಲ್ ಸೌಲಭ್ಯವಿದೆ.

ಹವಾಮಾನ

ಬೇಸಿಗೆ ಮತ್ತು ವಸಂತ ಮಾಸಗಳಲ್ಲಿ ಕಾಲಿಂಪಾಂಗ್ ಭೇಟಿ ನೀಡುವುದು ಮುದ ನೀಡುತ್ತದೆ. ಈ ಸಮಯದಲ್ಲಿ ಇಲ್ಲಿನ ಸ್ಥಳೀಯರಿಗೆ ಹಲವು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ. ಇದು ಭಾರತ ಮತ್ತು ನೇಪಾಳ, ಭಾರತ ಮತ್ತು ಚೀನಾ ನಡುವಿನ ಮುಖ್ಯ ವ್ಯಾಪಾರಿ ಜಂಕ್ಷನ್. ಕಾಲಿಂಪಾಂಗ್ನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿವೆ.

ಕಾಲಿಂಪಾಂಗ್ನಲ್ಲಿ ಋತು ಬದಲಾವಣೆಗಳು ಅಷ್ಟೇನೂ ತೀಕ್ಷ್ಣವಾಗಿರುವುದಿಲ್ಲ. ಬೇಸಿಗೆ ಮತ್ತು ಚಳಿಗಾಲಗಳು ತೀವ್ರ ಬದಲಾವಣೆಗಳನ್ನು ಹೊಂದುವುದಿಲ್ಲವಾದ್ದರಿಂದ ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ. ಆದರೆ ಮಳೆಗಾಲದಲ್ಲಿ ಭೂಕುಸಿತವಾಗುವ ಸಂಭವವಿರುತ್ತದೆಯಾದ್ದರಿಂದ ಆ ಕುರಿತು ಎಚ್ಚರಿಕೆ ಅಗತ್ಯ. ಮಳೆಗಾಲಕ್ಕೆ ಪ್ರವಾಸಕ್ಕೆ ಸೂಕ್ತ ಸಮಯವಲ್ಲ. ಕಾಲಿಂಪಾಂಗ್ನಲ್ಲಿನ ಸ್ಥಳೀಯ ನೇಪಾಳಿಗಳು ಸ್ವಾತಂತ್ರ ಪೂರ್ವದಲ್ಲಿ ಕೆಲಸದಬೇಟೆಯಲ್ಲಿ ಭಾರತಕ್ಕೆ ಬಂದು ನೆಲೆಸಿದವರು.

ಇವರು ವಿಶಾಲ ಮನೋಭಾವದವರು, ಸಂತೋಷ ಪ್ರಿಯ ಜನರು. ದೀಪಾವಳಿ, ದಸರಾ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಾಲಿಂಪಾಂಗ್ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಲ್ಲಿನ ಸ್ಥಳೀಯರ ಉಡುಗೆತೊಡುಗೆಗಳಲ್ಲಿ ವಿಭಿನ್ನತೆಯಿದೆ. ಲೆಪ್ಚಾ ಸಂಗ್ರಹಾಲಯ ಮತ್ತು ಜಂಗ್ ಧೊಕ್ ಪಾಲ್ರಿ ಫೊದಾಂಗ್ ದೇವಾಲಯಕ್ಕೆ ತಪ್ಪದೇ ಪ್ರವಾಸಿಗರು ಭೇಟಿ ನೀಡಬೇಕು.

ಕಾಲಿಂಪಾಂಗ್ನ ಆಹಾರ ವೈಶಿಷ್ಟ್ಯತೆ

ಇಲ್ಲಿನ ವಿಶಿಷ್ಟ ಆಹಾರಗಳನ್ನು ಸವಿಯುವ ಅವಕಾಶವನ್ನು ಪ್ರವಾಸಿಗರು ತಪ್ಪಿಸಿಕೊಳ್ಳುವಂತಿಲ್ಲ. ಇಲ್ಲಿ ಬೀದಿಬದಿಗಳಲ್ಲಿ ಮಾಡುವ ಮಾಂಸ, ಬೀಫ್, ಪೋರ್ಕ್ ಅಥವ ತರಕಾರಿಗಳಿಂದ ಮಾಡಿದ ಮೊಮೊಗಳ ರುಚಿ ನೋಡಲೇಬೇಕು. ಥುಕ್ಪಾ ಎನ್ನುವ ನೂಡಲ್ ಮಾದರಿಯ ತಿಂಡಿಯು ಚಳಿಗಾಲದ ಮಧ್ಯಾನಕ್ಕೆ ಹೇಳಿಮಾಡಿಸಿದ್ದು. ಕಾಡೆಮ್ಮೆಯ ಹಾಲಿನಿಂದ ಮಾಡಿದ ಚುರ್ಪಿ ಎನ್ನುವ ಚೀಸ್ ಅನ್ನು ಅಂಗಡಿಗಳಲ್ಲಿ ಕಾಣಬಹುದು. ಇವುಗಳೊಂದಿಗೆ ಡಾರ್ಜಿಲಿಂಗ್ ಟೀಯನ್ನು ತಪ್ಪದೇ ಆಸ್ವಾದಿಸಿ!

ಕಾಲಿಂಪಾಂಗ್ನಲ್ಲಿ ಗಾಲ್ಫ್

ಕಾಲಿಂಪಾಂಗ್ನಲ್ಲಿ 18 ತೂತುಗಳಿರುವ ಗಾಲ್ಫ್ಮೈದಾನವಿದೆ. ಗಾಲ್ಫ್ ಪ್ರಿಯರಿಗೆ ಇಷ್ಟವಾಗುವ ಸ್ಥಳವಿದು. ಗಾಲ್ಫ್ ಪ್ರೇಮಿಗಳ ಪ್ರಕಾರ ಇದು ವಿಶ್ವದ ಅತ್ಯುತ್ತಮ ಗಾಲ್ಫ್ ಮೈದಾನ! ಇದರ ಉಸ್ತುವಾರಿ ಭಾರತೀಯ ಸೇನೆಯವರದು.

ಕಲಿಂಪಾಂಗ್ ಪ್ರಸಿದ್ಧವಾಗಿದೆ

ಕಲಿಂಪಾಂಗ್ ಹವಾಮಾನ

ಕಲಿಂಪಾಂಗ್
28oC / 82oF
 • Sunny
 • Wind: ENE 12 km/h

ಉತ್ತಮ ಸಮಯ ಕಲಿಂಪಾಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಲಿಂಪಾಂಗ್

 • ರಸ್ತೆಯ ಮೂಲಕ
  ಕಾಲಿಂಪಾಂಗಿಗೆ ರಾಜ್ಯ ಹೆದ್ದಾರಿ 31ರಲ್ಲಿ ಸಿಲಿಗುರಿಯಿಂದ ತಲುಪಬಹುದು. ಇದು ಒಂದೂವರೆ ಗಂಟೆಯ ಪ್ರಯಾಣದ ಹಾದಿ. ಸಿಲಿಗುರಿಯ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಾಲಿಂಪಾಂಗಿಗೆ ಹತ್ತಿರದ ರೈಲು ನಿಲ್ದಾಣಗಳು ಸಿಲಿಗುರಿ ಮತ್ತು ಜಲಪೈಗುರಿಯಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕಾಲಿಂಪಾಂಗಿಗೆ ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಸಿಲಿಗುರಿ ಮತ್ತು ಕೊಲ್ಕತ್ತಾ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Oct,Thu
Return On
18 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Oct,Thu
Check Out
18 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Oct,Thu
Return On
18 Oct,Fri
 • Today
  Kalimpong
  28 OC
  82 OF
  UV Index: 6
  Sunny
 • Tomorrow
  Kalimpong
  24 OC
  76 OF
  UV Index: 7
  Partly cloudy
 • Day After
  Kalimpong
  25 OC
  77 OF
  UV Index: 6
  Moderate or heavy rain shower