Search
 • Follow NativePlanet
Share
ಮುಖಪುಟ » ಸ್ಥಳಗಳು» ಸಿಲಿಗುರಿ

ಸಿಲಿಗುರಿ - ಇಬ್ಬನಿ ತಬ್ಬಿದ ಬೆಟ್ಟಗಳ ಪ್ರಾಂತ್ಯ

15

ಪಶ್ಚಿಮ ಬಂಗಾಳದಲ್ಲಿನ ಈ ಪಟ್ಟಣವು ಗಿರಿಧಾಮವಾಗಿ ಪ್ರಸಿದ್ಧವಾಗಿದೆ. ಬಾಗ್ದೊಗ್ರಾದಲ್ಲಿನ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ರೈಲು ನಿಲ್ದಾಣವು ಸಿಲಿಗುರಿಯ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಿದೆ.ಸಿಲಿಗುರಿಯು ಹಿಮಾಲಯ ಶ್ರೇಣಿಗಳ ತಪ್ಪಲಿನಲ್ಲಿದೆ. ಇಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿರುವುದರಿಂದ ಭಾರತದ ವಿವಿಧ ಭಾಗಗಳಿಂದ ಕೂಡ ವಿದ್ಯಾರ್ಥಿಗಳು ಓದಲು ಬರುತ್ತಾರೆ.

ಭೌಗೋಳಿಕವಾಗಿ ಸಿಲಿಗುರಿಯ ಒಂದು ಬದಿಯಲ್ಲಿ ನೇಪಾಳ ಮತ್ತೊಂದು ಬದಿಯಲ್ಲಿ ಬಾಂಗ್ಲಾದೇಶವಿದೆ. ಸಿಲಿಗುರಿಯ ಭಾರತದ ವಿವಿಧ ಈಶಾನ್ಯ ರಾಜ್ಯಗಳನ್ನು ಬೆಸೆಯುವ ಕಾರಿಡಾರ್ ಮಾದರಿಯಲ್ಲಿದೆ. ಸಿಲಿಗುರಿಯು ರಾಜ್ಯದ ಉತ್ತರಭಾಗದಲ್ಲಿರುವ ಹಲವು ಪ್ರವಾಸಿ ತಾಣಗಳಿಗೆ ನಿಲ್ದಾಣವಾಗಿದೆ. ಹಾಗಾಗಿ ಇದೊಂದು ಕೇಂದ್ರಸ್ಥಳವಾಗಿ ಕೂಡ ಮುಖ್ಯವಾದುದು. ಸಿಲಿಗುರಿಯಿಂದ ಈ ಪ್ರದೇಶಗಳಿಗೆ ಕೆಲವೇ ಗಂಟೆಗಳಲ್ಲಿ ತಲುಪಬಹುದು.

ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ಸಿಲಿಗುರಿಯಲ್ಲಿ ನೋಡಬೇಕಾದ ಹಲವು ಸ್ಥಳಗಳಿವೆ. ಅವುಗಳಲ್ಲಿ ಇಸ್ಕಾನ್ ದೇವಾಲಯ, ಮಹಾನಂದ ವನ್ಯಜೀವಿಧಾಮ, ಸೈನ್ಸ್ ಸಿಟಿ, ಕೊರೊನೇಶನ್ ಬ್ರಿಡ್ಜ್, ಸಲುಗಾರಾ ಮಠ ಮಧುಬನ್ ಪಾರ್ಕ್ ಮತ್ತು ಉಮ್ರಾವ್ ಸಿಂಗ್ ಬೋಟ್ ಕ್ಲಬ್.

ಹಬ್ಬಗಳು ಮತ್ತು ಜಾತ್ರೆಗಳು

ದೀಪಾವಳಿ, ಭಾಯಿಟಿಕಾ, ದುರ್ಗಾ ಪೂಜಾ, ಕಾಳಿ ಪೂಜಾ ಮತ್ತು ಗಣೇಶ ಪೂಜಾ ಹಬ್ಬಗಳನ್ನು ಭಾರತದೆಲ್ಲೆಡೆಯಂತೆ ಇಲ್ಲಿ ಕೂಡ ಆಚರಿಸಲಾಗುತ್ತದೆ. ಹಬ್ಬಗಳ ಸಮಯದಲ್ಲಿ ಫ್ಯಾಷನ್ ಶೋಗಳು ಮತ್ತು ಮೇಳಗಳನ್ನು ಆಯೋಜಿಸಲಾಗುತ್ತದೆ. ಹಾಸ್ಟ್ ಶಿಲ್ಪ್ ಮೇಳ, ಪುಸ್ತಕ ಮೇಳ ಮತ್ತು ಲೆಕ್ಸಪೋ ಮೇಳ ಇವುಗಳಲ್ಲಿ ಮುಖ್ಯವಾದುದು. ಕಾಂಚನಜುಂಗಾ ಸ್ಟೇಡಿಯಂನಲ್ಲಿ ಸಾಮಾನ್ಯವಾಗಿ ಇವುಗಳನ್ನು ಆಯೋಜಿಸಲಾಗುತ್ತದೆ.

ಆಹಾರ ವಿಶೇಷಗಳು

ಸಿಲಿಗುರಿಯ ಜನ ಸಂತೋಷ ಪ್ರಿಯರು. ಇತ್ತೀಚೆಗೆ ಇಲ್ಲಿಗೆ ಪಕ್ಕದ ರಾಜ್ಯಗಳಿಂದ ಮತ್ತು ದೇಶಗಳಿಂದ ಜನ ಹೆಚ್ಚಾಗಿ ವಲಸೆ ಬಂದಿದ್ದಾರೆ. ಇವು ನಗರದ ಸ್ವರೂಪವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿದೆ. ಆದರೂ ಇಲ್ಲಿನ ವಿಶೇಷ ತಿಂಡಿಗಳನ್ನು ಸವಿಯುವ ಅವಕಾಶ ತಪ್ಪಿಸಿಕೊಳ್ಳುವಂತಿಲ್ಲ. ಇಲ್ಲಿನ ಬೀದಿಬದಿಯ ಅಂಗಡಿಗಳಲ್ಲಿ ರುಚಿಯಾದ ತಿಂಡಿಗಳನ್ನು ಸವಿಯಬಹುದು.

ಇಲ್ಲಿ ಒಮ್ಮೆ ರುಚಿ ನೋಡಲೇಬೇಕಾದ ತಿಂಡಿಯೆಂದರೆ ಚಿಕನ್, ಬೀಫ್, ಪೋರ್ಕ್ ಅಥವ ತರಕಾರಿಗಳಿಂದ ಮಾಡಿದ ಮೊಮೊಸ್ ಎನ್ನುವ ತಿಂಡಿ. ಈಶಾನ್ಯ ಭಾರತದ ನೈಜ ಟೀಯನ್ನು ಇಲ್ಲಿ ಸವಿಯಬಹುದು. ಇದು ಮಳೆಗಾಲ ಮತ್ತು ಚಳಿಗಾಲಗಳಿಗೆ ಉತ್ತಮ ಆಯ್ಕೆ.

ಸಂಪರ್ಕ

ಸಿಲಿಗುರಿಯು ಉತ್ತಮ ಮಾಧ್ಯಮ ಸಂಪರ್ಕ ಮತ್ತು ಆತಿಥ್ಯ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿ ಪ್ರಪಂಚದಲ್ಲಿನ ಅತ್ಯುತ್ತಮ ಹೋಟಲುಗಳು ತಮ್ಮ ಶಾಖೆಯನ್ನು ಹೊಂದಿದೆ. ಇಲ್ಲಿ ಗೆಸ್ಟ್ಹೌಸ್ಗಳಿಂದ ಹಿಡಿದು 5 ಸ್ಟಾರ್ ಹೋಟೆಲುಗಳವರೆಗೆ ವಿವಿಧ ಶ್ರೇಣಿಗಳನ್ನು ಕಾಣಬಹುದು.  ಈ ನಗರವು ಸುರಕ್ಷಿತವಾಗಿದ್ದು ಇಲ್ಲಿ ಭಾರತೀಯ ಸೇನೆ ಮತ್ತಿತರ ಪಾರ್ಲಿಮೆಂಟರಿ ಫೋರ್ಸ್ಗಳು ಇಲ್ಲಿವೆ.

ಮಾಲ್ ಸಂಸ್ಕೃತಿ

ಮಾಲ್ ಸಂಸ್ಕೃತಿ ಸಿಲಿಗುರಿಗೆ ತಡವಾಗಿ ಕಾಲಿಟ್ಟಿತು. ಕಾಸ್ಮೊಸ್ ಮತ್ತು ಆರ್ಬಿಟ್ ಇಲ್ಲಿನ 2 ದೊಡ್ಡಮಾಲ್ಗಳು. ಈ ಮಾಲ್ಗಳಲ್ಲಿ ಮಲ್ಟಿಪ್ಲೆಕ್ಸ್ ಸೌಲಭ್ಯವಿದ್ದು ಹೊಸ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳನ್ನು ಇಲ್ಲಿ ನೋಡಬಹುದು. ಇಲ್ಲಿ ಟೆಕ್ನಾಲಜಿ ಪಾರ್ಕಿದೆ. ಸಿಲಿಗುರಿಯನ್ನು ಸುತ್ತಲು ಉತ್ತಮ ವಿಧಾನವೆಂದರೆ ರಿಕ್ಷಾ ಅಥವ ಸೈಕಲ್! ಇಲ್ಲಿ ಆಟೋ ಹತ್ತುವಾಗ ಮೀಟರ್ ಬಗ್ಗೆ ಎಚ್ಚರದಿಂದಿರಬೇಕು. ಇಲ್ಲಿ ಸ್ಥಳೀಯ ಬಸ್ ಸೇವೆ ಕೂಡ ಇದೆ.

ಹೋಗುವುದು ಹೇಗೆ?

ಸಿಲಿಗುರಿಯು ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವಿದೆ.

ಸಿಲಿಗುರಿ ಪ್ರಸಿದ್ಧವಾಗಿದೆ

ಸಿಲಿಗುರಿ ಹವಾಮಾನ

ಸಿಲಿಗುರಿ
28oC / 82oF
 • Sunny
 • Wind: ENE 12 km/h

ಉತ್ತಮ ಸಮಯ ಸಿಲಿಗುರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಿಲಿಗುರಿ

 • ರಸ್ತೆಯ ಮೂಲಕ
  ಪಶ್ಚಿಮ ಬಂಗಾಳದ ವಿವಿಧ ನಗರಗಳಿಂದ ಸಿಲಿಗುರಿಗೆ ಬಸ್ ಸೌಲಭ್ಯವಿದೆ. ಕೊಲ್ಕತ್ತಾಗೆ ಇಲ್ಲಿಂದ ನಿಯಮಿತ ಬಸ್ ಸಂಚಾರವಿದೆ. ಖಾಸಗಿ ಬಸ್ ಸೇವೆ ಕೂಡ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಿಲಿಗುರಿಗೆ ಸಮೀಪದ ರೈಲು ನಿಲ್ದಾಣ ಹೊಸ ಜಲ್ಪೈಗುರಿ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಿಲಿಗುರಿಯ ಡೊಮ್ಯಾಸ್ಟಿಕ್ ವಿಮಾನ ನಿಲ್ದಾಣ ಬಾಗ್ದೊಗ್ರಾದಲ್ಲಿದ್ದು ಇದು ನಗರದಿಂದ 12 ಕಿಮೀ ದೂರದಲ್ಲಿದೆ. ಸಿಲಿಗುರಿಯು ದೆಹಲಿ, ಕೊಲ್ಕತ್ತಾ ಮತ್ತು ಮುಂಬೈಗಳೊಂದಿಗೆ ವಾಯು ಸಂಪರ್ಕವನ್ನು ಹೊಂದಿದೆ. ಗ್ಯಾಂಗ್ಟಾಕ್ನೊಂದಿಗೆ ಹೆಲಿಕ್ಯಾಪ್ಟರ್ ಸೌಲಭ್ಯವಿದೆ. 588ಕಿಮೀ ದೂರದಲ್ಲಿರುವ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅಂತರ ರಾಷ್ಟ್ರೀಯ ವಿಮಾನ ಸೌಲಭ್ಯ ಪಡೆಯಬಹುದು. ಕೊಲ್ಕತ್ತಾ ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Oct,Tue
Return On
23 Oct,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Oct,Tue
Check Out
23 Oct,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Oct,Tue
Return On
23 Oct,Wed
 • Today
  Siliguri
  28 OC
  82 OF
  UV Index: 6
  Sunny
 • Tomorrow
  Siliguri
  24 OC
  76 OF
  UV Index: 7
  Partly cloudy
 • Day After
  Siliguri
  25 OC
  77 OF
  UV Index: 6
  Moderate or heavy rain shower