ಸಾಹೇಬಗಂಜ್ - ಸುಂದರ ನಗರ

ಜಾರ್ಖಂಡ್ ರಾಜ್ಯದ ಆಡಳಿತ ಕೇಂದ್ರವಾಗಿರುವ ಸಾಹೇಬಗಂಜ್ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಸಂತಾಲ ಪರಗಣ ಜಿಲ್ಲೆ ವಿಭಜನೆಗೊಂಡು ರಾಜಮಹಲ್ ಮತ್ತು ಪಕುರ್ ಉಪವಿಭಾಗಗಳಾಗಿ ಮಾರ್ಪಟ್ಟಾಗ ಮೇ 17,1983 ರಲ್ಲಿ ಸಾಹೇಬಗಂಜ್ ಆಗಿ ರೂಪುಗೊಂಡಿತು ಎಂದು ಇತಿಹಾಸ ತಿಳಿಸುತ್ತದೆ. ಇಂದಿನ ಸಾಹೇಬಗಂಜ್ ಮೊಘಲರ ಸಾಮ್ರಾಜ್ಯದ ಬಂಗಾಳ ಸುಬಹರ ಆಳ್ವಿಕೆಗೆ ಒಳಪಟ್ಟಿತ್ತು. ಸುಂದರವಾದ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯನ್ನು ಹೊಂದಿರುವ ಸಾಹೇಬಗಂಜ್ ನಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪ್ರದೇಶ ಫಲವತ್ತಾದ ಭೂಮಿಯನ್ನು ಹೊಂದಿದ್ದು ಕೃಷಿ ಪ್ರಾಮುಖ್ಯತೆ ಹೊಂದಿದೆ. ಇಲ್ಲಿನ ಸ್ಥಳೀಯರು ಮೆಕ್ಕೆಜೋಳ ಮತ್ತು ಬಾರ್ಬತ್ತಿಯನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಸಾಹೇಬಗಂಜ್ ನ ಜನರು ಪಹಾರಿಯಾಗಳು ಮತ್ತು ಸಂತಾಲ ಎಂಬ ಜಾತಿಗೆ ಸೇರಿದವರಾಗಿದ್ದಾರೆ.

ಸಾಹೇಬಗಂಜ್ - ಭೂಗೋಳ

ಭೌಗೋಳಿಕ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂದು ಸಾಹೇಬಗಂಜ್ ಅನ್ನು 2 ಪ್ರಮುಖ ನೈಸರ್ಗಿಕ ವಿಭಾಗಗಳನ್ನಾಗಿ ವಿಂಗಡಿಸಿದರು. ಅದರಲ್ಲಿ ಮೊದಲ ಪ್ರದೇಶ ದಮಿನ್-ಇಲ್-ಕೊಹ್, ಇದು ವ್ಯಾಪಕವಾದ ಕಾಡು, ಬೆಟ್ಟಗುಡ್ಡಗಳು ಮತ್ತು ಇಳಿಜಾರುಗಳನ್ನು ಒಳಗೊಂಡಿದೆ. ಈ ಪ್ರದೇಶವು ಬೊರಿಯೊ,ಮಂಡ್ರೋ,ಬರ್ಹಿತ್, ಪಾಟ್ನಾ ಮತ್ತು ತಲ್ಝಾರಿಗಳನ್ನು ಒಳಗೊಂಡಿದೆ. ಎರಡನೇ ನೈಸರ್ಗಿಕ ವಿಭಾಗವನ್ನು ಇಳಿಜಾರು ಕುಸಿತದ ಭಾಗಗಳು, ಮಲೆನಾಡು ಮತ್ತು ಸಾಲುಗಳಿರುವ ಪ್ರದೇಶವನ್ನು ಎರಡನೇ ವಿಭಾಗವಾಗಿ ಮಾಡಲಾಗಿದೆ, ಸಹಾಬಗಂಜ್, ರಾಜಮಹಲ್, ಉದ್ವಾ, ಬರ್ಹಾರ ಇವುಗಳು ಈ ವಿಭಾಗಕ್ಕೆ ಸೇರುತ್ತವೆ. ಇದಲ್ಲದೆ ಗಂಗಾ, ಗಮುನಿ ಮತ್ತು ಬಂಸೋಲೈ ನದಿಗಳು ಈ ಜಿಲ್ಲೆಯಲ್ಲಿ ಹರಿಯುತ್ತವೆ.

ಸಾಹೇಬಗಂಜ್ ಸಮೃದ್ಧ ಅರಣ್ಯಪ್ರದೇಶವನ್ನು ಹೊಂದಿದೆ.ಮರಗಳನ್ನು ಬೀಳಿಸುವ ಕಾರಣದಿಂದಾಗಿ ಈಗ ದಟ್ಟತೆ ಕಡಿಮೆ ಆಗುತ್ತಿದೆ. ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಅರಣ್ಯವನ್ನು ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಈ ಪ್ರದೇಶದಲ್ಲಿ ಸಾಲ್ ಮರಗಳು ಹೆಚ್ಚು ಕಂಡು ಬರುತ್ತವೆ. ಜೊತೆಗೆ ಸಾಹೇಬಗಂಜ್ ನಲ್ಲಿ ಹಲಸು, ಮುರ್ಗ, ಸಿಮಲಾ, ಬಿದಿರು, ಅಸಾನ್ ಮತ್ತು ಸತ್ಸಲ್, ಸಾಗವಾನಿ ಮರಗಳನ್ನು ಹೆಚ್ಚಾಗಿ ಕಾಣಬಹುದು.ಇಲ್ಲಿನ ಜನರು ಇತರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಹಲಸು, ಸಾಲ್ ಮತ್ತು ಸಿಮಲ್ ಮರಗಳನ್ನು ರಫ್ತು ಮಾಡುತ್ತಾರೆ. ಸಾಹೇಬಗಂಜ್ ನಲ್ಲಿ ಹಸುಗಳ ಜೊತೆಗೆ ಗಂಗಾ ನದಿಯ ದಡದಲ್ಲಿ ವಿವಿಧ ರೀತಿಯ ಮೀನು ಮತ್ತು ಮೀನಿನ ತಳಿಗಳಾದ ರೋಹು, ಕಾಟ್ಲಾ, ಮಿರ್ಗಾ, ಕಾತ್ಫಿಶ್, ಬರ್ಹಿತ್ ಕಣಿವೆಯ ಹಿಲ್ಸಾ ಇವುಗಳನ್ನು ಇಲ್ಲಿ ಕಾಣಬಹುದು.

ಸಾಹೇಬಗಂಜ್ - ಶ್ರೀಮಂತ ಸಂಸ್ಕೃತಿ

ಸಾಹೇಬಗಂಜ್ ಶ್ರೀಮಂತ ಸಾಂಪ್ರದಾಯಿಕ ಪರಂಪರೆಯನ್ನು ಹೊಂದಿದೆ.ಜಾರ್ಖಂಡ್ ಭಾಗಗಳಲ್ಲಿ ಇರುವ ಸಂತಲಾಗಳು ಮತ್ತು ಪಹಡಿಯಾ ಜನರು ಹಳ್ಳಿ ಕೈಗಾರಿಕೆಗಳಾದ ತಸರ್ ಸಾಕಣೆ,ಹಳ್ಳಿಯ ಕಪ್ಪು ಕುಲುಮೆ, ಮರಗೆಲಸ, ನೇಯ್ಗೆ, ಹಗ್ಗ ತಯಾರಿಕೆ, ಬೀಡಿ ತಯಾರಿಕೆ, ಮಣ್ಣಿನ ಸಾಮಾನು ತಯಾರಿಕೆ, ಕಲ್ಲು ಸಾಮಾನು ತಯಾರಿಕೆ ಮತ್ತು ಹೀಗೆ ಕೈಮಗ್ಗಗಳನ್ನೂ ಮಾಡುತ್ತಾರೆ. ಜೊತೆಗೆ ಇಲ್ಲಿ ಸಣ್ಣ ಪ್ರಮಾಣದ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಯನ್ನು ಕೂಡ ಮಾಡಲಾಗುತ್ತದೆ.

ಜಾರ್ಖಂಡ್ ನ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಸಾಹೇಬಗಂಜ್ ದವಸಧಾನ್ಯಗಳನ್ನು ಕೂಡ ಸಗಟು ವ್ಯಾಪಾರ ಮಾಡುತ್ತದೆ. ಈ ಜಿಲ್ಲೆಯು ನಾರಗಸೆ, ಗೋಣಿ ಚೀಲಗಳು, ತಂಬಾಕು, ಕಚ್ಚಾ ಹತ್ತಿ, ಸಕ್ಕರೆ, ಸೀಮೆ ಎಣ್ಣೆ ತೈಲ, ಕೋಲ್ ಗ್ರಾಂ, ಗೋಧಿ ಮತ್ತು ಮುಸುಕಿನ ಜೋಳ,ಇವುಗಳನ್ನು ಆಮದು ಮಾಡಿಕೊಂಡರೆ,ಭತ್ತ,ಜೋಳ,ಸಾಬೈ,ಹುಲ್ಲು ಮುಂತಾದವುಗಳನ್ನು ರಫ್ತು ಮಾಡುತ್ತದೆ.

ಸಾಹೇಬಗಂಜ್ ಹವಾಮಾನ

ಜಾರ್ಖಂಡ್ ನ ಉಳಿದ ಭಾಗಗಳಂತೆ ಸಾಹೆಬಗಂಜ್ ನಲ್ಲೂ ಬೇಸಿಗೆ,ಮಳೆಗಾಲ ಮತ್ತು ಚಳಿಗಾಲ ಎಂಬ 3 ರೀತಿಯ ಕಾಲಗಳಿವೆ.ಬೇಸಿಗೆ ಶುಷ್ಕತೆಯಿಂದ ಕೂಡಿದ್ದರೆ,ಚಳಿಗಾಲ ಅತಿ ಹೆಚ್ಚು ತಂಪಾಗಿರುತ್ತದೆ.ಬೇಸಿಗೆಯಲ್ಲಿ ಇಲ್ಲಿ ಹೆಚ್ಚು  ಪ್ರವಾಸಿಗರು ಆಗಮಿಸುತ್ತಾರೆ.

ಸಾಹೇಬಗಂಜ್ ನ ಸುತ್ತಮುತ್ತಲ ಪ್ರವಾಸಿ ಸ್ಥಳಗಳು

ಸಾಹೇಬಗಂಜ್ ನಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳು ಇರುವುದರಿಂದ ಇಲ್ಲಿ ಆಗಮಿಸಿದ ಪ್ರವಾಸಿಗರು ಆಹಾದಿಸುವುದು ಖಂಡಿತ.ಯಾತ್ರಾಸ್ಥಳಗಳಾದ ಕನಯ್ಯಾ ಸ್ಥಾನ,ರಾಜಮಹಲ್,ಜಿಮಾಮಸೀದಿ,ಮತ್ತು ಶಿವದೇವಾಲಯಗಳನ್ನು ನೋಡಬಹುದು.ನಿಸರ್ಗ ಸೌಂದರ್ಯವನ್ನು ಸವಿಯ ಬಯಸುವವರು ಉದ್ವಾ ಕೊಳ,ಉದ್ವಾ ಪಕ್ಷಿಧಾಮ,ಬಿಂದುಧಾಮ ಮತ್ತು ಮಾಗಿ ಮೇಳಗಳನ್ನು ಭೇಟಿ ನೀಡಬಹುದು.

ಸಾಹೇಬಗಂಜ್ ತಲುಪುವ ಮಾರ್ಗ

ಸಾಹೇಬಗಂಜ್ ಅನ್ನು ತಲುಪಲು ರಸ್ತೆ,ರೈಲು ಮತ್ತು ವಿಮಾನ ಮಾರ್ಗಗಳು ಲಭ್ಯವಿದ್ದು ಪ್ರವಾಸಿಗರಿಗೆ ಇಲ್ಲಿ ತಲುಪುವುದು ಸುಲಭವಾಗಿದೆ.

Please Wait while comments are loading...