ಭಾಗಲ್ಪುರ್ : ಭಾರತದ ರೇಷ್ಮೆ ನಾಡು

ಬಿಹಾರದಲ್ಲಿರುವ ಭಾಗಲ್ಪುರ್, ಭಾರತದ ರೇಷ್ಮೆ ನಗರ, ಇಲ್ಲಿ ಉತ್ಪಾದಿಸುವ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪನ್ನಗಳಿಗೆ ಪ್ರಖ್ಯಾತವಾಗಿದೆ. ಇದು ಬಿಹಾರದ ದೊಡ್ಡ ನಗರಗಳಲ್ಲಿ ಒಂದಾಗಿದ್ದು, ಸಾಧಾರಣ ಒಳ್ಳೆಯ ಮಟ್ಟದ ಅಭಿವೃದ್ಧಿ ಹೊಂದಿದ ನಗರವಾಗಿದೆ. ಭಾಗಲ್ಪುರ್ ಚರಿತ್ರಾಪ್ರಧಾನ ಸ್ಥಳವಾಗಿದ್ದು,  7 ನೇ ಶತಮಾನದ ಚರಿತ್ರೆಯಲ್ಲಿ ಕೂಡಾ ಇದರ ಬಗ್ಗೆ ಉಲ್ಲೇಖ ಮಾಡಲಾಗಿದೆ. ಹಿಂದಿನ ಕಾಲದಲ್ಲಿ ಈ ಪಟ್ಟಣವು ಗಂಗಾ ನದಿಯ ತೀರದಲ್ಲಿನ ಒಂದು ಖ್ಯಾತ ಬಂದರು ಆಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ, ಈ ಸ್ಥಳದಲ್ಲಿ ನಡೆಸಿದ ಉತ್ಖನನದಲ್ಲಿ, ಮಧ್ಯಪೂರ್ವ ಹಾಗೂ ಪೂರ್ವದ ಸ್ಥಳಗಳಿಗೆ ಸಂಬಂಧಪಟ್ಟ ನಾಣ್ಯಗಳು ಹಾಗೂ ಹಳೆಯ ದೋಣಿಗಳು ಪತ್ತೆಯಾಗಿವೆ. ಭಾಗಲ್ಪುರದ ಬಗ್ಗೆ ಭಾರತೀಯ ಪುರಾಣಕೃತಿಗಳಾದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಉಲ್ಲೇಖವಿದ್ದು, ಇದನ್ನು ಅಂಗನ ರಾಜ್ಯ ಎಂದು ವರ್ಣಿಸಲಾಗಿದೆ.

ಭಾಗಲ್ಪುರ್ ಪ್ರವಾಸೋದ್ಯಮ ಯಾತ್ರಿಗಳಿಗೆ ಹಲವು ಆಕರ್ಷಣೀಯ ಸ್ಥಳಗಳ ಪರಿಚಯ ಮಾಡಿಕೊಡುತ್ತದೆ. ಇವುಗಳಲ್ಲಿ ಯಾತ್ರಿಗಳನ್ನು ಆಕರ್ಷಿಸುವ ಮುಖ್ಯ ಸ್ಥಳಗಳೆಂದರೆ- ಲಜಪತ್ ಪಾರ್ಕ್, ಬುದನಾಥ್ ಶಿವ ದೇವಸ್ಥಾನ, ಚಂಪಗ್ನಗರ್ ಜೈನ ದೇವಸ್ಥಾನ, ಘಂಟ ಘರ್, ಗುರಣ್ ಬಾಬಾ ದರ್ಗಾ , ರಬೀಂದ್ರ ನಾಥ ಭವನ್, ತೆಗ್ಹ್ ಬಹದ್ದೂರ್ ಗುರುದ್ವಾರ್, ಸಂದಿಶ್ ಕಾಂಪೌಂಡ್, ದುರ್ಗಾ ಹಾಗೂ ಕಾಳಿ ದೇವಸ್ಥಾನ, ರಾಜಮಹಲ್ ಫಾಸಿಲ್ ಸಾಂಕ್ಚುವರಿ ಹಾಗೂ ಸಂಜಯ್ ಉದ್ಯಾನ್ ಪಾರ್ಕ್.

ಭಾರತೀಯ ಸಂಸ್ಕೃತಿಯ ಲಾಕ್ಷಣಿಕವಾದ ಭಾಗಲ್ಪುರ್ ಪ್ರವಾಸೋದ್ಯಮವು, ಇಲ್ಲಿನ ಧಾರ್ಮಿಕ ಹಬ್ಬಗಳಿಂದ ಇನ್ನಷ್ಟು ಕಂಗೊಳಿಸುತ್ತದೆ. ಇಲ್ಲಿ ಹಿಂದೂಗಳ ಪ್ರಮುಖ ಹಬ್ಬಗಳಾದ ಲಕ್ಷ್ಮಿ ಪೂಜೆ,ಕಾಳಿ ಪೂಜಾ, ಚತ್ ಪೂಜಾ ಹಾಗೂ ದಸರಾಗಳೊಂದಿಗೆ ಮುಸಲ್ಮಾನರ ಹಬ್ಬವಾದ ಮೊಹರಂನ್ನು ಕೂಡ ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನಗರದ ಹೆಸರಾದ 'ಭಾಗಲ್ಪುರ್' ನ ಉಗಮ ' ಭಾಗದತ್ಪುರಂ' ಎಂಬ ಶಬ್ದದಿಂದಾಯಿತು. 'ಅದೃಷ್ಟ' ಎಂದು ಈ ಶಬ್ದದ ಅರ್ಥ. ಭಾಗಲ್ಪುರ್ ನ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿನ ರೇಷ್ಮೆ ಬಟ್ಟೆಗಳು. ಹಲವಾರು ಪೀಳಿಗೆಗಳಿಂದ ಇಲ್ಲಿನ ಜನರು ರೇಷ್ಮೆ ಉದ್ಯೋಗದಲ್ಲಿ ತೊಡಗಿದ್ದಾರೆ. ಸರಕಾರವು ಈ ಪಟ್ಟಣದ ಹಲವಾರು ಕಡೆಗಳಲ್ಲಿ ರೇಷ್ಮೆ ಸಂಘಗಳನ್ನು ಸ್ಥಾಪಿಸಿ, ಈಗಾಗಲೇ ಪರಿಪೂರ್ಣವಾದ ರೇಷ್ಮೆ ನೇಯ್ಗೆ ಕಲೆಯನ್ನು ಇನ್ನಷ್ಟು ಪ್ರೋತ್ಸಾಹಿಸುತ್ತದೆ. ಭಾಗಲ್ಪುರ್ ನ ರೇಷ್ಮೆ ಉದ್ಯಮವು ಸುಮಾರು  200 ವರ್ಷಗಳಷ್ಟು ಹಳೆಯದಾಗಿದ್ದು, ಇದು ರೇಷ್ಮೆಕೃಷಿಗೆ ಪ್ರಖ್ಯಾತವಾಗಿದೆ. ಭಾಗಲ್ಪುರದ ರೇಷ್ಮೆ ತುಸ್ಸಹ್ ಅಥವಾ ತುಸ್ಸರ್ ಎಂದು ಖ್ಯಾತವಾಗಿದೆ. ನಸುಹಸಿರು ಛಾಯೆಯಿರುವ ಗಂಗಾ ನದಿಯು ರಾ.ಹೆ -80 ರ ಸಮಾನಾತರ ಹರಿಯುತ್ತಿದ್ದು, ಭಾಗಲ್ಪುರ್ ಅನ್ನು ಪಾಟ್ನಾ ಹಾಗೂ ಇತರ ಮುಖ್ಯ ನಗರಗಳೊಂದಿಗೆ ಸಂಪರ್ಕ ಕಲ್ಪಿಸುವುದಲ್ಲದೆ ಒಂದು ಒಳ್ಳೆಯ ದೃಶ್ಯ ವಿಸ್ಮಯವನ್ನು ಕೊಡುತ್ತದೆ.

ನದಿಯ ಬೆಳ್ಳಿಯ ಬಣ್ಣದ ತೀರಗಳು ಭಾಗಲ್ಪುರ್ ಗೆ ಫಲವತ್ತಾದ ಭೂಮಿಯನ್ನು ಅನುಗ್ರಹಿಸಿದ್ದು, ಇಲ್ಲಿ ಸಮೃದ್ಧವಾದ ಮಾವಿನ ತೋಪು, ಲಿಚಿ ಮರಗಳು ಹಾಗೂ ವಿಶಾಲವಾಗಿ ಹರಡಿರುವ ಜೋಳದ ಗದ್ದೆಗಳನ್ನು ಕಾಣಬಹುದು. ದಂಡೆಯ ಮೇಲೆ ಸಾಲಾಗಿ ನಿಂತು ಹೊಗೆಯುಗುಳುತ್ತಿರುವ ಇಟ್ಟಿಗೆ ಕಾರ್ಖಾನೆಯ ಚಿಮಿಣಿಗಳು ಕಾಣಸಿಗುತ್ತವೆ. ಭಾಗಲ್ಪುರ್ ಪಟ್ಟಣ ರಾಜ್ಯದ ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ರಸ್ತೆ ವ್ಯವಸ್ಥೆ ಹೊಂದಿದ್ದು, ಭಾಗಲ್ಪುರ್ ಗೆ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದಾಗಿದೆ. ಭಾಗಲ್ಪುರ ತಲುಪಲು ರೈಲನ್ನು ಕೂಡಾ ಅವಲಂಬಿಸಬಹುದು. ಇಲ್ಲಿನ ಅದ್ಭುತ ಭೂಸೌಂದರ್ಯದ ಫಲವಾಗಿ, ಇಲ್ಲಿ ಗಂಗಾಜಲ್, ರೈನ್ಕೋಟ್  ಹಾಗೂ ಗಾಂಗ್ಸ್ ಆಫ್ ವಸ್ಸೇಯ್ಪುರ್ - ಪಾರ್ಟ್ ೨ ಮುಂತಾದ ಹಲವಾರು ಬಾಲಿವುಡ್ ಸಿನೆಮಾಗಳ ಚಿತ್ರೀಕರಣಗಳೂ ನಡೆದಿವೆ.

ಸಾರಿಗೆ ವ್ಯವಸ್ಥೆ - ಭಾಗಲ್ಪುರ್ ಗೆ ತಲುಪುವ ಬಗೆ

ಭಾಗಲ್ಪುರ್ ಸರಕಾರವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಹಾಗೂ ಇಲ್ಲಿನ ಸ್ಥಳೀಯರಿಗೆ ಸುಖ ಪ್ರಯಾಣವನ್ನು ಒದಗಿಸಲು, ಸಾರಿಗೆ ವ್ಯವಸ್ಥೆಯ ಕಡೆ ಹೆಚ್ಚಿನ ಗಮನ ವಹಿಸಿದೆ.

ಸೂಕ್ತ ಸಮಯ

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಭಾಗಲ್ಪುರ್ ಪ್ರವಾಸಿ ಚಟುವಟಿಕೆಗಳು ಬಿರುಸಾಗಿರುತ್ತದೆ. ಭಾಗಲ್ಪುರ್ ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಕಾಲ ಸೂಕ್ತವಾಗಿರುತ್ತದೆ.

Please Wait while comments are loading...