ನಳಂದ :  ಶೈಕ್ಷಣಿಕ  ಕ್ಷೇತ್ರ

ಮುಖಪುಟ » ಸ್ಥಳಗಳು » ನಳಂದ » ಮುನ್ನೋಟ

ನಳಂದ ಎಂಬ ಹೆಸರು ಕಿವಿಗೆ ಬಿದ್ದ ಕೂಡಲೆ ಕೆಂಪು ವಸ್ತ್ರ ಧರಿಸಿದ ಬೌದ್ಧ ಭಿಕ್ಷುಕರ ಮಂತ್ರಪಠಣ, ಸ್ತೋತ್ರಗೀತ, ಬ್ರಹ್ಮಾಂಡದ ಬಗ್ಗೆ ಇದ್ದ ಜ್ಞಾನ, ಬುದ್ಧನ ಧ್ಯಾನ, ಇವು ನಮ್ಮ ಮನಸ್ಸಿನ ಚಿತ್ರ ಪರದೆಯ ಮೇಲೆ ಬರುತ್ತದೆ. ಈ ನಗರವನ್ನು ಕ್ರಿ.ಶ 5ನೆ ಶತಮಾನದಲ್ಲಿ ಸ್ಥಾಪಿಸಲಾಯಿತು. ಸಂಸ್ಕೃತದ ನಳಂದ ಎಂಬ ಶಬ್ದದಿಂದ ನಗರವನ್ನು ಹೆಸರಿಸಲಾಗಿದೆ. ಇದರ ಅರ್ಥ ಜ್ಞಾನವನ್ನು ಕೊಡುವವ ಎಂದು. ಹೆಸರಿಗೆ ತಕ್ಕ ಹಾಗೆ ನಳಂದ ವಿಶ್ವವಿದ್ಯಾಲಯವು ನಿಸ್ಸಂಶಯವಾಗಿ ಪ್ರಾಚೀನ ಭಾರತದ ಕಲಿಕೆಯ ಕೇಂದ್ರವಾಗಿತ್ತು ಎಂದರೆ ತಪ್ಪಾಗಲಾರದು.

ಟಿಬೆಟ್, ಚೀನಾ, ಟರ್ಕಿ, ಗ್ರೀಸ್, ಪರ್ಷಿಯಾ ಮುಂತಾದ ಕಡೆಗಳಿಂದ ವಿದ್ವಾಂಸರು, ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯೆಯನ್ನು ಕಲಿಯಲು ಬರುತ್ತಿದ್ದರು. ಈ ಒಂದು ಅಂಶ ನಳಂದ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ಸಾಬೀತು ಪಡಿಸುತ್ತದೆ. ವಿಶ್ವದ ಪ್ರಥಮ ನಿವಾಸಿ ವಿಶ್ವವಿದ್ಯಾಲಯಗಳಲ್ಲಿ ಇದೂ ಒಂದು ಎಂಬ ಹೆಮ್ಮೆಗೆ ಪಾತ್ರವಾಗಿದೆ. ವಿಶ್ವದಾದ್ಯಂತ ಇದು ಸುಮಾರು 2000 ಪ್ರಾಧ್ಯಾಪಕರಿಗೆ ಹಾಗು 10,000 ವಿದ್ಯಾರ್ಥಿಗಳಿಗೆ ಮನೆಯಾಗಿತ್ತು.

ಚೈನೀಸ್ ಪ್ರವಾಸಿಗನಾದ ಹುಯೆನ್ ಸ್ಸಾಂಗ್ 7ನೇ ಶತಮಾನದಲ್ಲಿ, ಇಲ್ಲಿಗೆ ಭೇಟಿ ನೀಡಿದ ನಂತರ, ನಳಂದ ವಿಶ್ವದ ಭೂಪಠದಲ್ಲಿ ಕಂಗೊಳಿಸಿತು. ಈತ ಇಂಥಹ ಒಂದು ವಿಶಿಷ್ಟವಾದ ಮತ್ತು ಅಸಾಮಾನ್ಯವಾದ ಶೈಕ್ಷಣಿಕ ವ್ಯೆವಸ್ಥೆಯನ್ನು ವಿಸ್ತಾರವಾಗಿ ಬರೆಯುವುದರ ಜೊತೆಗೆ ಅನೇಕ ಪುಸ್ತಕಗಳನ್ನು ಇಲ್ಲಿಂದ ತೆಗೆದುಕೊಂಡು ಹೋದನು. ನಂತರ ಅವುಗಳನ್ನು ಚೈನೀಸ್ ಭಾಷೆಗೆ ಅನುವಾದಿಸಿದನು.

ಬಿಹಾರ್ ರಾಜ್ಯದ ರಾಜಧಾನಿಯಾದ ಪಾಟ್ನಾದಿಂದ ಸುಮಾರು 90 ಕಿ.ಮಿ ದೂರದಲ್ಲಿ ನಳಂದ ಉಪಸ್ಥಿತವಿದೆ. ಇದನ್ನು ಒಂದು ಶಿಲ್ಪಶಾಸ್ತ್ರದ ಅಚ್ಚರಿ ಎಂದೇ ಪರಿಗಣಿಸಲಾಗಿತ್ತು. ನಳಂದ ಪ್ರವಾಸೋದ್ಯಮ ಇಲಾಖೆಯು ಇದನ್ನು ಚೆನ್ನಾಗಿ ಸಂರಕ್ಷಿಸಿಕೊಂಡು ಬಂದಿದೆ. ಕೆಂಪು ಇಟ್ಟಿಗೆಯಿಂದ ಕಟ್ಟಲಾಗಿದ್ದು, ಸಂಕೀರ್ಣದ ಒಟ್ಟು ವಿಸ್ತೀರ್ಣ 14 ಹೆಕ್ಟೇರಷ್ಟು ಇದೆ. ಇದು ಮಂದಿರಗಳನ್ನು, ಶಿಕ್ಷಾ ಕೊಠಡಿಗಳನ್ನು, ಧ್ಯಾನ ಮಂದಿರಗಳನ್ನು, ಕೊಳಗಳನ್ನು, ಉದ್ಯಾನವನಗಳನ್ನು ಹೊಂದಿತ್ತು.

ಒಂಭತ್ತು ಮಹಡಿ ಕಟ್ಟದಲ್ಲಿ ಗ್ರಂಥಾಲಯವು ಇತ್ತು. ಕೈಬರಹದಲ್ಲಿ ಬರೆದ ಧರ್ಮಗ್ರಂಥಗಳನ್ನು, ಪ್ರಾಚೀನ ಪುಸ್ತಕಗಳನ್ನು ಕಾಪಾಡಿಕೊಂಡು ಬಂದಿತ್ತು. ಆದರೆ ಪಾಶ್ಚಾತ್ಯರ ದಾಳಿಗೆ ಬಲಿಯಾದ ಮೇಲೆ ನಳಂದ ತನ್ನ ಪಾವಿತ್ರ್ಯತೆಯತನ್ನು ಕಳೆದುಕೊಂಡಿತು. ಇಡೀ ಸಂಸ್ಥೆಯನ್ನೇ ಹಾಳುಗೆಡವಿ, ಬೆಂಕಿ ಹಚ್ಚಿದರು. ಈ ಗ್ರಂಥಾಲಯವು ಸತತವಾಗಿ ಮೂರು ತಿಂಗಳಗಳ ಕಾಲ ಉರಿಯ ತೊಡಗಿತು ಎಂದು ಹೇಳಲಾಗಿದೆ. ವಿಶ್ವದ ಪ್ರಾಚೀನ ವಿಶ್ವವಿದ್ಯಾಲಯದ ಅಳಿದುಳಿದ ವಸ್ತುಗಳನ್ನು, ಅವಶೇಷಗಳನ್ನು ನಳಂದ ಪ್ರವಾಸೋದ್ಯಮ ಇಲಾಖೆಯು, ಬಹು ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿದೆ. ಇದು ಒಂದು ಕಾಲದ ವೈಭವದ ಇತಿಹಾಸಕ್ಕೆ ಸಾಕ್ಷಿಯಾಗಿದೆ.

ಬೇಸಿಗೆಯಲ್ಲಿ ಅತಿ ಹೆಚ್ಚು ಬಿಸಿಲು, ಚಳಿಗಾಲದಲ್ಲಿ ಕೊರೆಯುವ ಚಳಿ ಇರುತ್ತದೆ. ನಳಂದ ಪ್ರವಾಸಿಗರಿಗೆ ಕೈಬೀಸಿ ಕರೆಯುವಂಥಹ ಪ್ರವಾಸಿ ತಾಣ. ರಿಕ್ಷಾ ಅಥವಾ ಟಾಂಗಾ ಮಾತ್ರ ಲಭ್ಯವಿರುವ ಸಾರಿಗೆ ವ್ಯವಸ್ಥೆಯಾದ್ದರಿಂದ ಅದರ ಸಹಾಯದಿಂದ ನಳಂದವನ್ನು ಸುತ್ತುಹಾಕಿಕೊಂಡು ಬರಬಹುದು.

ನಳಂದ ಸುತ್ತಮುತ್ತಲಿನ ಸ್ಥಳಗಳು

ಪ್ರಸಿದ್ಧ ನಳಂದ ವಿಶ್ವವಿದ್ಯಾಲಯದ ಅವಶೇಷದ ಜೊತೆಗೆ ನಳಂದ ಪ್ರವಾಸೋದ್ಯಮ ಇಲಾಖೆ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಎಣೆ ಮಾಡಿಕೊಡುತ್ತದೆ. ಬಿಹಾರ ಷರೀಫನ ಗೋರಿ ಇರುವ ಮಲ್ಲಿಕ್ ಇಬ್ರಾಹಿಮ್ ಬಯಾದಲ್ಲಿ ವಾರ್ಷಿಕವಾಗಿ ಉರುಸ್ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ನಳಂದ ಸಂಗ್ರಹಾಲಯ ಮತ್ತು ನವ ನಳಂದ ಮಹವಿಹಾರ್ ಗೆ ಸಹ ಭೇಟಿ ಕೊಡಬಹುದು. ಬಾರಾಗಾಂವ್ ನಿಂದ 2 ಕಿ.ಮೀ ದೂರದಲ್ಲಿರುವ ಸನ್ ಟೆಂಪಲ್ ಛಥ್ ಪೂಜೆಗೆ ಪ್ರಸಿದ್ಧವಾಗಿದೆ. ಛಥ್ ಪೂಜೆಯ ಹಬ್ಬದ ಆಚರಣೆ ಛಾಯಾಚಿತ್ರಕಾರರಿಗೆ ರಸಹೌತಣ ನೀಡಿದಂತಿರುತ್ತದೆ. ಇದನ್ನು ಕ್ರಮವಾಗಿ ಮಾರ್ಚ್-ಏಪ್ರಿಲ್ ನಲ್ಲಿ ಹಾಗೂ ಅಕ್ಟೋಬರ್-ನವೆಂಬರ್ ನಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ.

1951ನೇ ಇಸವಿಯಲ್ಲಿ ಬೌದ್ಧ ಧರ್ಮದ ಅಧ್ಯಯನಕ್ಕಾಗಿ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲಾಯಿತು. ಪ್ರತಿ ವರ್ಷ ಅಕ್ಟೋಬರ್ 24ರಿಂದ 26ರವರೆಗೆ, ಬಿಹಾರ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯಿಂದ ರಂಗುರಂಗಿನ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಲಾವಿದರು ಶಾಸ್ತ್ರೀಯ ಹಾಗು ಜಾನಪದ ನೃತ್ಯದ ಪ್ರದರ್ಶನ ಮಾಡುತ್ತಾರೆ. ಕಲೆಯ ಆರಾಧಕರು, ಕರಕೌಶಲ್ಯವನ್ನು ಎತ್ತಿ ಹಿಡಿಯುವ ಮನೋಹರವಾದ ಮಧುಬನಿ ವರ್ಣಚಿತ್ರಗಳನ್ನು ಖರೀದಿಸಲೇಬೇಕು.

ಭೇಟಿ ಕೊಡಲು ಸೂಕ್ತ ಸಮಯ

ನಳಂದಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸೂಕ್ತ ಸಮಯ. ಈ ತಿಂಗಳುಗಳಲ್ಲಿ, ಹವಾಮಾನವು ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ.

Please Wait while comments are loading...