ಪೂರ್ವ ಚಂಪಾರಣ್ : ಒಂದು ಅಂದದ ಪ್ರವಾಸಿ ತಾಣ

ಪೂರ್ವ ಚಂಪಾರಣ್ ಬಿಹಾರ್ ರಾಜ್ಯದ ಎರಡನೇ ಹೆಚ್ಚು ಪ್ರಸಿದ್ಧಿ ಪಡೆದ ಜಿಲ್ಲೆಯಾಗಿದೆ. ಈ ಹೆಸರನ್ನು ಎರಡು ಪದಗಳ ಜೊತೆಗೂಡುವಿಕೆಯಿಂದ ಪಡೆಯಲಾಗಿದೆ ಅವುಗಳೆಂದರೆ ಚಂಪಾ ಮತ್ತು ಅರಣ್ಯ. ಇದರಲ್ಲಿ ಚಂಪಾ ಎಂದರೆ ಸುಗಂಧಯುಕ್ತ ಹೂವುಗಳು ಮತ್ತು ಅರಣ್ಯ ಎಂದರೆ ಮನೆ ಅಥವಾ ವಾಸ ಸ್ಥಳ ಎಂಬುದಾಗಿದೆ. ಈ ಹೆಸರು ಒಂದಾನೊಂದು ಕಾಲದಲ್ಲಿ  ಈ ಸ್ಥಳವು ಮಗ್ನೋಲಿಯಾ (ಚಂಪಾ) ಮರಗಳಿಂದ ಆವೃತವಾದಾಗ ಪಡೆದ ಹೆಸರಾಗಿದೆ.

ಇದು ಬಿಹಾರ್ ನ ಹೆಚ್ಚು ಹಸಿರು ವನಗಳುಳ್ಳ ಒಂದು ಜಿಲ್ಲೆಯಾಗಿದೆ. ಗಂಧಕ್, ಬುರಿ ಗಂಧಕ್ ಮತ್ತು ಬಾಗ್ಮತಿ ಇಲ್ಲಿನ ಪ್ರಮುಖ ನದಿಗಳಾಗಿವೆ. ನೇಪಾಳದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದ್ದು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳೊಂದಿಗೆ ಉತ್ತಮ ಸಂಪರ್ಕ ವನ್ನು ಸಾಧಿಸುವ ಈ ಪ್ರದೇಶ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ. ಹೀಗೆ ಚಂಪಾರಣ್ ಎಲ್ಲಾ ಕಡೆಯಲ್ಲೂ ಉತ್ತಮ ಸಂಪರ್ಕವನ್ನು ಹೊಂದಿದೆ.

ಚಂಪಾರಣ್ ನ ಮೋತಿಹಾರಿ ನಗರ ಜಿಲ್ಲೆಯ ಪ್ರಧಾನ ಸ್ಥಳವಾಗಿ ಗುರುತಿಸಿಕೊಂಡಿದೆ. ಇದು ಹಲವು ಕ್ರಾಂತಿಗಳಿಗೆ ಸಾಕ್ಷಿಯಾಗಿದೆ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ. ಮಹಾತ್ಮಾ ಗಾಂಧಿಯವರ ಸತ್ಯಾಗ್ರಹ ಮೊದಲ ಬಾರಿಗೆ ಇಲ್ಲೇ ಆರಂಭವಾಯಿತು. ಇಲ್ಲಿ ಕೇಸರಿಯಾ ಸ್ತೂಪ, ರಾಕ್ಸೌಲ್ ಮತ್ತು ಸೋಮೇಶ್ವರ ಶಿವ ದೇವಾಲಯ ಪ್ರಮುಖ ಪ್ರವಾಸಿ  ಆಕರ್ಷಣೆಗಳಾಗಿವೆ. ರೈಲು ಮತ್ತು ರಸ್ತೆ ಸಂಪರ್ಕ ಇಲ್ಲಿನ ಜೀವನಾಡಿಯಾಗಿದೆ.

ಸಾಂಪ್ರದಾಯಿಕ ಜಾನಪದ ನೃತ್ಯಗಳಿಗೆ ಈ ಸ್ಥಳವು ಪ್ರಸಿದ್ಧವಾಗಿದೆ. ಈ ಜಾನಪದ ನೃತ್ಯಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಆಯಾ ಸಂದರ್ಭಗಳಲ್ಲಿ ಇವುಗಳನ್ನು ಪ್ರದರ್ಷಿಸಲಾಗುತ್ತದೆ. ಝುಮೆರಿ ನೃತ್ಯ ಪೂರವ ಚಂಪಾರಣ್ ನ ಅತ್ಯಂತ ಪ್ರಸಿದ್ಧ ನೃತ್ಯವಾಗಿದೆ ಇದನ್ನು ಮದುವೆಯಾದ ಮಹಿಳೆಯರು ನಡೆಸುತ್ತಾರೆ. ಇಲ್ಲಿನ ಬಗೆ ಬಗೆಯ ಆಹಾರಗಳೂ ಬಹಳ ಮೆಚ್ಚುಗೆ ಪಡೆದ ಸಂಗತಿಯಾಗಿದೆ. ಇಲ್ಲಿನ ಚೆನಾ ಮುರ್ಕಿ, ಕೇಸರಿಯಾ ಪೇಡಾ, ಖಾಜಾ, ಮಾಲ್ ಪುವಾ, ಕೂರ್ಮಾ, ಥೆಕುವಾ, ತಿಲ್ ಕುಟ್, ಮುರಾಬಟ್ಟಾಟ್ ಪ್ರಸಿದ್ಧ ಮತ್ತು ಸ್ವಾದಿಷ್ಟ ತಿನಿಸುಗಳಾಗಿವೆ.

ಎಲ್ಲಾ ಸಂಸ್ಕೃತಿಗಳಂತೆ ಇಲ್ಲೂ ಕೂಡ ತನ್ನದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳಿವೆ ಹಾಗೂ ಇಲ್ಲಿನ ಹಬ್ಬಗಳಿಗೆ ಇದು ಪ್ರಸಿದ್ಧವಾಗಿದೆ. ಪ್ರಸಿದ್ಧವಾದ ಚಟ್ ಪೂಜಾ ಇಲ್ಲಿನ ಪ್ರಮುಖ ಹಿಂದೂ ಉತ್ಸವವಾಗಿದೆ. ಇದನ್ನು ಸೂರ್ಯ ದೇವರಿಗೆ ಅರ್ಪಿಸಿ ನಡೆಸಲಾಗುತ್ತದೆ. ಇದನ್ನು ಒಮ್ಮೆ ಚೈತ್ರ ಮಾಸದಲ್ಲಿ (ಮಾರ್ಚ್) ಹಾಗೂ ಮತ್ತೊಮ್ಮೆ ಕಾರ್ತಿಕ ಮಾಸದಲ್ಲಿ (ನವೆಂಬರ್) ನಲ್ಲಿ ಆಚರಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳು ಮಕರ ಸಂಕ್ರಾಂತಿ, ಹೋಳಿ ಹಾಗೂ ರಾಮನವಮಿಯಂತಹ ಹಬ್ಬಗಳ ಸಮಯದಲ್ಲಿ ತಮ್ಮ ಭೇಟಿಯನ್ನು ಯೋಚಿಸಬಹುದಾಗಿದೆ.

ಈ ಎಲ್ಲಾ ಹಬ್ಬಗಳು ಜಿಲ್ಲೆಯಾದ್ಯಂತ ಹೆಚ್ಚಿನ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಚಳಿಗಾಲ ಇಲ್ಲಿನ ಭೇಟಿಗೆ ಅತ್ಯಂತ ಸೂಕ್ತವಾದ ಅವಧಿಯಾಗಿದೆ. ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳಲ್ಲಿ ಭೇಟಿ ನೀಡಬಹುದಾಗಿದೆ. ಈ ಅವಧಿಯ ತಾಪಮಾನ ಮತ್ತು ಆಹ್ಲಾದಕರ ವಾತಾವರಣ ಇದಕ್ಕೆ ಕಾರಣವಾಗಿದೆ.

ಪೂರ್ವ ಚಂಪಾರಣ್ ತಲುಪುವುದು ಹೇಗೆ

ಪೂರ್ವ ಚಂಪಾರಣ್ ಅತ್ಯಂತ ಉತ್ತಮವಾದ ಸಂಪರ್ಕ ಮಾರ್ಗಗಳನ್ನು ಹೊಂದಿದೆ.

ಚಂಪಾರಣ್ ಭೇಟಿಗೆ ಉತ್ತಮವಾದ ಅವಧಿ

ಎಲ್ಲಾ ವಿಧದ ವಾಯುಗುಣಗಳೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದ್ದರೂ ಅಕ್ಟೋಬರ್ ನಿಂದ ಮಾರ್ಚ ತನಕ ಇರುವ ಚಳಿಗಾಲ ಇಲ್ಲಿನ ಭೇಟಿಗೆ ಅತ್ಯುತ್ತಮವಾದ ಅವಧಿಯಾಗಿದೆ. ಈ ಅವಧಿಯಲ್ಲಿ ವಾಯುಗುಣ ಆಹ್ಲಾದಕರವಾಗಿದ್ದು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿರುತ್ತದೆ.

Please Wait while comments are loading...