ರೊಹ್ತಾಸ್: ವೈಭವದ ಸ್ಮಾರಕಗಳೂರು

ಐತಿಹಾಸಿಕವಾಗಿ ರೊಹ್ತಾಸ್ 5ರಿಂದ 6ನೆ ಶತಮಾನದಲ್ಲಿ ಮಗಧ ಸಾಮ್ರಾಜ್ಯದ ಭಾಗವಾಗಿತ್ತು. ಇಲ್ಲಿ ಮೌರ್ಯರ ಆಳ್ವಿಕೆ ಸಹ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಸಾಮ್ರಾಟ ಅಶೋಕನ ಶಿಲಾಶಾಸನವಿದೆ. 1857ರ ದಂಗೆ ರೊಹ್ತಸ್ನಲ್ಲಿ ದೊಡ್ಡ ಅಲೆಗಳನ್ನು ಎಬ್ಬಿಸಿತು. ಭಾರತದ ಸ್ವಾತಂತ್ರ್ಯಾನಂತರದಲ್ಲಿ ಶಹಾದಾಬಾದ್ನ ಭಾಗವಾಗಿದ್ದ ಈ ಜಿಲ್ಲೆ 1972ರಲ್ಲಿ ಸ್ವತಂತ್ರವಾಯಿತು.

ರೊಹ್ತಾಸ್ಗಢದ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಮೊಗಲರ ಕಾಲದ ವಾಸ್ತಶೈಲಿಯ ಕಟ್ಟಡ. ತಾರಾಚಾಂದಿಯಲ್ಲಿ ಸುಂದರ ದೇವಾಲಯವಿದೆ. ಸಾಸರಂನಲ್ಲಿ ಶೇರ್ ಷಾ ಸುರಿ ಎನ್ನುವ ಗುಮ್ಮಟವಿದೆ. ಶೇರ್ಗರ್ ಕೋಟೆಯನ್ನು ಹಸನ್ ಷಾ ಸುರ್ ಕಟ್ಟಿಸಿದನು. ಐತಿಹಾಸಿಕ ಮಹತ್ವದ ಸ್ಥಳಗಳಲ್ಲದೆ ರೊಹ್ತಸ್ಗರ್ನಲ್ಲಿ ಕೆಲವು ಧಾರ್ಮಿಕ ಸ್ಥಳಗಳು ಕೂಡ ಇವೆ. ರೊಹ್ತಾಸ್ಗರ್ನಲ್ಲಿ ಕೆಲವು ದೇವಾಲಯಗಳು ಮತ್ತು ಮಸೀದಿಯಿದೆ. ಇಲ್ಲಿ ಚಾಚಾ ಫಗ್ಮುಲ್ ಶಹಿಬ್ಜೀಯ ಗುರುದ್ವಾರವಿದೆ. ಇದಲ್ಲದೆ ಅಕ್ಬರಪುರ್, ರೆಹಲ್ ,ದಿಯೊ ಮರ್ಕಾಂಡೆ, ಬಹಲುನಿ ಅಣೆಕಟ್ಟು, ಅಕ್ಹೊರಿಗೊಲ ಮತ್ತು ಧ್ರುವನ್ ಕುಂಡ ಮತ್ತು ಗುಪ್ತ ಅಣೆಕಟ್ಟಿದೆ. ರೊಹ್ತಾಸ್ನಲ್ಲಿರುವ ಸ್ಥಳಗಳು ಅದ್ಭುತವಾದದ್ದು.

ರೊಹ್ತಾಸ್ನಲ್ಲಿ ಅಕ್ಟೋಬರ್-ಮೇವರೆಗೆ ಆಹ್ಲಾದಕರ ವಾತಾವರಣವಿರುತ್ತದೆ.

ಹಬ್ಬಗಳು, ಕಲೆ ಮತ್ತಿತರವು ರೊಹ್ತಾಸ್ ಪ್ರವಾಸೋದ್ಯಮದ ಆಕರ್ಷಣೆಗಳು. ಹಬ್ಬದ ಸಂದರ್ಭದಲ್ಲಿನ ಇಲ್ಲಿನ ವಾತಾವರಣ ನೋಡಲು ತಕ್ಕದಾಗಿರುತ್ತೆ. ಇಲ್ಲಿನ ಬಹುದೊಡ್ಡ ಹಬ್ಬವೆಂದರೆ ಛತ್ತ ಪೂಜೆ. ಇನ್ನಿತರ ಹಬ್ಬಗಳೆಂದರೆ ದಸರಾ, ಹೋಲಿ, ದುರ್ಗಾಪೂಜಾ, ಚಿತ್ರಗುಪ್ತ ಪೂಜಾ, ಮಿಲದ್ ಉಲ್ ನಾಬಿ, ತೀಜ್, ಭಾಯಿದೂಜ್, ದಿವಾಲಿ ಮತ್ತು ವತ್ ಸಾವಿತ್ರಿ ಪೂಜಾ. ಈ ಹಬ್ಬಗಳನ್ನು ಇಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಹಬ್ಬಗಳ ಸಂದರ್ಭದಲ್ಲಿ ಭಾವೈಕತಾ ವಾತಾವರಣವಿರುತ್ತದೆ. 1342 ಚದರ ಕಿಮೀ ವಿಸ್ತೀರ್ಣದ 1982ರಲ್ಲಿ ಸ್ಥಾಪಿತವಾದ ಕೈಮುರ್ ವನ್ಯಜೀವಿಧಾಮವು ರೊಹ್ತಾಸ್ನ ಪ್ರಸಿದ್ಧ ಪ್ರವಾಸಿ ತಾಣ.

ರೊಹ್ತಾಸ್ ಪ್ರವಾಸದ ಅನುಭವವನ್ನು ಪಡೆಯಲು ರಸ್ತೆ ಮತ್ತು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.

ಪ್ರವಾಸಕ್ಕೆ ಸೂಕ್ತ ಸಮಯ

ಅಕ್ಟೋಬರ್-ಮೇ ಪ್ರವಾಸಕ್ಕೆ ಸೂಕ್ತ ಸಮಯ. ಈ ಸಮಯದಲ್ಲಿ ಪ್ರಯಾಣಕ್ಕೆ ಸುತ್ತಾಟಕ್ಕೆ ಸೂಕ್ತವಾದ ವಾತಾವರಣವಿರುತ್ತದೆ.

ತಲುಪುವುದು ಹೇಗೆ?

ರೊಹ್ತಾಸ್ ತಲುಪಲು ರಸ್ತೆ ಅಥವ ರೈಲು ಮಾರ್ಗ ಉತ್ತಮ ಆಯ್ಕೆ.

Please Wait while comments are loading...