ಸಮಸ್ತಿಪುರ್:  ಸಂಪನ್ನ, ಸಮೃದ್ಧ ನೆಲದ ಮಹದಾನಂದವನ್ನು ಅನುಭವಿಸಿರಿ.

ಬಿಹಾರ ರಾಜ್ಯದ ಸಮಸ್ತಿಪುರ್ ನಗರವು ಹಿಂದೆ ದರ್ಭಂಗಾ ಜಿಲ್ಲೆಯ ಉಪವಿಭಾಗವಾಗಿದ್ದು, ಇದು ಬುಧಿ ಗಂಡಕ್ ನದಿಯ ದಂಡೆಯ ಮೇಲಿದೆ.  ಸಮಷ್ಟಿಪುರ್ ನ ಪ್ರಮುಖವಾದ ಹಬ್ಬಗಳೆಂದರೆ; ಛತ್, ಹನುಮಾನ್ ಜಯಂತಿ, ಈದ್, ಮೊಹರ್ರಂ, ದುರ್ಗಾ ಪೂಜಾ, ದೀಪಾವಳಿ, ಮತ್ತು ಸರಸ್ವತಿ ಪೂಜೆಗಳಾಗಿವೆ.   ಸಮಸ್ತಿಪುರ್ ನ ಪುಸಾ ಬ್ಲಾಕ್, ಅಲ್ಲಿರುವ ರಾಜೇಂದ್ರ ಕೃಷಿ ವಿಶ್ವವಿದ್ಯಾಲಯದ ಕಾರಣದಿಂದ ಜಗತ್ಪ್ರಸಿದ್ಧವಾಗಿದೆ.  ಇತರ ಪ್ರಮುಖ ಸಂಶೋಧನಾ ಕೇಂದ್ರಗಳೆಂದರೆ, ಕೇಂದ್ರೀಯ ತಂಬಾಕು ಸಂಶೋಧನಾ ಸಂಸ್ಥೆ ಮತ್ತು ಕೇಂದ್ರೀಯ ಕಬ್ಬು ಸಂಶೋಧನಾ ಸಂಸ್ಥೆಗಳಾಗಿವೆ.  

ಈ ನಗರವು ಅನೇಕ ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರ ಜನ್ಮಸ್ಥಳವಾಗಿದೆ. ನಗರದಲ್ಲಿ ಅನೇಕ ಸಣ್ಣ ಪ್ರಮಾಣದ ಮತ್ತು ಭಾರಿ ಪ್ರಮಾಣದ ಕೈಗಾರಿಕೆಗಳಿರುವುದರಿಂದ, ನಗರವು ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿದೆ ಎಂಬುದು ಉಲ್ಲೇಖಾರ್ಹವಾಗಿದೆ.  ಇಲ್ಲಿ ಬೆಳೆಯುವ ಮಾವು ಮತ್ತು ಲಿಚಿ ಇವೇ ಮೊದಲಾದ ಹಣ್ಣುಗಳ ಅಪರಿಮಿತ ಲಭ್ಯತೆಯ ಕಾರಣಕ್ಕಾಗಿ, ಸಮಸ್ತಿಪುರ್ ನ ಪ್ರವಾಸವನ್ನು ಆನಂದಿಸಬಹುದು.  ಸಮಸ್ತಿಪುರವು ಇಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳಾದ ತಂಬಾಕು, ಕಬ್ಬು, ಮೆಣಸು, ಅರಿಶಿನ ಮತ್ತು ಬೇರೆ ಬೇರೆ ವಿಧದ ತರಕಾರಿಗಳಾದ ಕಾಲಿಫ್ಲವರ್, ಆಲೂಗಡ್ಡೆ, ಹಾಗಲಕಾಯಿ ಇವೇ ಮೊದಲಾದ ವಾಣಿಜ್ಯ ಬೆಳೆಗಳ ಉತ್ಪಾದನೆಯ ಕಾರಣದಿಂದಾಗಿ, ಈ ನಗರವು ವ್ಯಾಪಾರೀ ದೃಷ್ಟಿಯಿಂದಲೂ ಸಹ ಮುಂಚೂಣಿಯಲ್ಲಿದೆ.

ನಗರದಲ್ಲಿ ಹರಿಯುವ ಸುಂದರವಾದ ನದಿಗಳ ಕಾರಣದಿಂದಾಗಿಯೂ ಸಹ ಸಮಸ್ತಿಪುರ್ ನ ಪ್ರವಾಸೋದ್ಯಮವು ಜನಪ್ರಿಯವಾಗಿದೆ ಮತ್ತು ಇಲ್ಲಿ ಹರಿಯುವ ಸೊಗಸಾದ ನದಿಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.  ಮಾಗರ್ದಹಿ ಘಾಟ್ ನಲ್ಲಿ ಒಂದು ಮತ್ತು ಹಸನ್  ಪುರ್ ನಲ್ಲಿರುವ ಮತ್ತೊಂದು, ಹೀಗೆ ನಗರದಲ್ಲಿರುವ ಒಟ್ಟು 2 ಕಬ್ಬು ಸಂಸ್ಕರಣಾ ಕೈಗಾರಿಕೆಗಳೂ ಸಹ ಜನರನ್ನು ನಗರದತ್ತ ಆಕರ್ಷಿಸುತ್ತವೆ.  ಸಮಸ್ತಿಪುರ್ ಪ್ರವಾಸೋದ್ಯಮವನ್ನು ಕೈಬಿಡಲಾಗದಂತೆ ಮಾಡುವ ಸ್ಥಳಗಳೆಂದರೆ; ಮೊರ್ವರ (Morwara), ಖಾರಹಿಯ (Kharahia), ವಿದ್ಯಾಪತಿ ನಗರ್ (Vidyapati Nagar), ಪುಸ (Pusa), ಮಹಮದ (Mahamada), ಭಸೌರಿ (Basuari), ಕರಿಯನ್ (Kariyan), ಥಾನೇಶ್ವರ್ ದೇವಾಲಯ (Thaneshwar temple), ಶಿವಾಜಿ ನಗರ ಬ್ಲಾಕ್ (Shivaji Nagar block) ಇತ್ಯಾದಿ.

ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಹಬ್ಬಗಳಾದ ಈದ್, ಛತ್ ಪರ್ವ್, ದುರ್ಗಾ ಪೂಜಾ, ಹೋಳಿ, ದೀಪಾವಳಿ, ಸರಸ್ವತಿ ಪೂಜಾ, ಮಕರಸಂಕ್ರಾಂತಿ, ವಿಶ್ವಕರ್ಮ ಪೂಜಾ, ಹನುಮಾನ್ ಜಯಂತಿ, ಮತ್ತು ಮೊಹರ್ರಂ ನoತಹ ಹಬ್ಬಗಳಿಂದಾಗಿ, ಸಮಷ್ಟಿಪುರದ ಪ್ರವಾಸೋದ್ಯಮವು ಅಮಿತೋತ್ಸಾಹದ ಕಲೆಯನ್ನು ಪಡೆಯುತ್ತದೆ.    ಛತ್ ಪರ್ವ್ ಹಬ್ಬವು ಬುಧಿ ಗಂಡಕ್ ಘಾಟ್ ನಲ್ಲಿ ಆಚರಿಸಲ್ಪಡುತ್ತದೆ.   ಸಮಷ್ಟಿಪುರ್ ಪ್ರವಾಸೋದ್ಯಮದ ಧಾರ್ಮಿಕ ಮಹತ್ವವು, 1943 ರಲ್ಲಿ ಸ್ಥಾಪಿತವಾದ ಪೆಂಟೆಕೊಸ್ಟಲ್ ಚರ್ಚ್ "ಆರಾಧನಾ ಘರ್" ನಲ್ಲಿ ಪ್ರಮಾಣೀಕೃತವಾಗಿದೆ.  

ಈ ಚರ್ಚ್ ನ ಕಾರಣಕ್ಕಾಗಿಯೂ ನಗರವು ಆರಾಧ್ಯವಾಗಿದೆ.  ಈ ಪ್ರದೇಶವು ಯಾವುದೇ ಅರಣ್ಯವನ್ನು ಹೊಂದಿಲ್ಲವಾದ್ದರಿಂದ, ಇಲ್ಲಿನ ಜನರು ಕೃಷಿಯನ್ನು ತೀವ್ರವಾಗಿ ಅವಲಂಭಿಸಿದ್ದಾರೆ ಮತ್ತು ಇಲ್ಲಿನ ಜನರು ತಮ್ಮ ಕಠಿಣ ದುಡಿಮೆಯ ಕಾರಣಕ್ಕಾಗಿ ಪ್ರಸಿದ್ಧರಾಗಿದ್ದಾರೆ.  ಸಮಷ್ಟಿಪುರವು ರೈಲುಗಳು ಮತ್ತು ಹೆದ್ದಾರಿಗಳ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಪಟ್ನಾ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿದೆ.  ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗಿನ ಅವಧಿಯು ಸಮಷ್ಟಿಪುರಕ್ಕೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದ್ದು, ಈ ಅವಧಿಯಲ್ಲಿ ಹವಾಮಾನವು ಪ್ರವಾಸಿಗರಿಗೆ ಸಂದರ್ಶಿಸಲು ಅತಿ ಅನುಕೂಲಕರವಾಗಿರುತ್ತದೆ.

ತಲುಪುವ ಬಗೆ

ಸಮಸ್ತಿಪುರವನ್ನು, ಆದಷ್ಟು ನೇರವಾಗಿ ಅಲ್ಲಿಗೇ ತಲುಪಲು, ರೈಲ್ವೆ ಮಾರ್ಗವು ಅತ್ಯುತ್ತಮ ಮಾರ್ಗವಾಗಿದೆ, ತದನಂತರ ರಸ್ತೆಯ ಪ್ರಯಾಣವು ಸೂಕ್ತ.   ವಿಮಾನದಲ್ಲಿ ಆಗಮಿಸುವ ಪ್ರವಾಸಿಗರು ಪಾಟ್ನಾ ವಿಮಾನನಿಲ್ದಾಣಕ್ಕೆ ತಲುಪಬೇಕು ಮತ್ತು ಅಲ್ಲಿಂದ ಸಮಷ್ಟಿಪುರಕ್ಕೆ ರೈಲ್ವೆ ಮಾರ್ಗ ಅಥವಾ ಹೆದ್ದಾರಿಗಳ ಮೂಲಕ ತೆರಳಬೇಕಾಗುತ್ತದೆ.

ವಿಮಾನದಲ್ಲಿ ಆಗಮಿಸುವ ಪ್ರವಾಸಿಗರು ಪಾಟ್ನಾ ವಿಮಾನನಿಲ್ದಾಣಕ್ಕೆ ತಲುಪಬೇಕು ಮತ್ತು ಅಲ್ಲಿಂದ ಸಮಷ್ಟಿಪುರಕ್ಕೆ ರೈಲ್ವೆ ಮಾರ್ಗ ಅಥವಾ ಹೆದ್ದಾರಿಗಳ ಮೂಲಕ ತೆರಳಬೇಕಾಗುತ್ತದೆ.

Please Wait while comments are loading...