ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ  ಕೇಂದ್ರ.

ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ.  ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ ಪೂರ್ವದಲ್ಲಿ ದಿಯೋಘರ್ ಮತ್ತು ಜಾಂತಾಡ ಜಿಲ್ಲೆಗಳು, ಪಶ್ಚಿಮದಲ್ಲಿ ಹಜ಼ಾರಿಬಾಗ್ ಮತ್ತು ಕೋಡರ್ಮಾ ಜಿಲ್ಲೆಗಳು, ದಕ್ಷಿಣದಲ್ಲಿ ಧನ್ಬಾದ್ ಮತ್ತು ಬೊಕಾರೋ ಜಿಲ್ಲೆಗಳಿವೆ. ಇದು ಒಂದು ಬೆಟ್ಟಗಳ ಮಧ್ಯೆ ಸುಂದರವಾದ ಪ್ರದೇಶವಾಗಿದ್ದು ನೆರೆರಾಜ್ಯಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತದೆ.  

ಹಿಂದೆ ಹಜಾರಿಬಾಗ್ ಜಿಲ್ಲೆಯಲ್ಲಿದ್ದು 1972 ಇಸವಿಯಲ್ಲಿ ಗಿರಿಡೀಹ್ ಜಿಲ್ಲೆಯು ಹೊಸದಾಗಿ ರೂಪುಗೊಂಡಿತು.  4853.56 ಚ.ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಗಿರಿಡೀಹ್ ಜಿಲ್ಲೆಯು ಕೆಂಪು ಅಭ್ರಕ (Ruby mica) ಮತ್ತು ಕಲ್ಲಿದ್ದಲುಗಳ ಒಂದು ಭಂಡಾರವೇ ಆಗಿದೆ. ಗಿರಿಡೀಹ್ ಎಂದರೆ ಬೆಟ್ಟಗುಡ್ಡಗಳ ಪ್ರದೇಶವಾಗಿದ್ದು ಗಮನಹರಿಸುವ ಮಲೆನಾಡಿನ ಪ್ರದೇಶವಾಗಿದೆ. ವಿಶಾಲವಾದ ಅರಣ್ಯಗಳು ಜಿಲ್ಲೆಯ ಬಹುಭಾಗವನ್ನು ಆವರಿಸಿಕೊಂಡಿದೆ. ಇಲ್ಲಿ ಹೆಚ್ಚಾಗಿ ಕಾಣುವ ಸಾಲ್ ಮರಗಳಲ್ಲದೆ ಬಿದಿರು, ಸೇಮಲ್ (Red-silk cotton tree), ಮಹೂವಾ(Mahua) ಮತ್ತು ಪಲಶ್(Palash) ಮರಗಳನ್ನು ಕಾಣಬಹುದು. ಗಿರಿಡೀಹ್ ಪ್ರದೇಶವು ಕೆಂಪು ಅಭ್ರಕವಲ್ಲದೆ ಸಮೃದ್ಧ ಖಣಿಜಗಳ ಮೂಲವಾಗಿದೆ.

ಬರಾಕರ್ ಮತ್ತು ಸಾಕ್ರಿ ಎರಡು ಮುಖ್ಯವಾದ ನದಿಗಳು ಈ ಜಿಲ್ಲೆಯ ಮೂಲಕ ಹರಿಯುತ್ತದೆ. ಉಸ್ರಿ ಜಲಪಾತ ಮತ್ತೊಂದು ಪ್ರವಾಸೀ ಆಕರ್ಷಣೆ. ಇದು 13 ಕಿ.ಮೀ. ದೂರದಲ್ಲಿದ್ದು ನದಿಯು 40 ಅಡಿ ಎತ್ತರದಿಂದ ಬೀಳುವುದು ಇಲ್ಲಿಂದ ಕಾಣುತ್ತದೆ.

ಖಂಡೋಲೀ ಅಣೆಕಟ್ಟು ಒಂದು ಆಕರ್ಷಕ ನೀರಿನ ಜಲಾಶಯವಾಗಿದೆ. ಇದು ಪಕ್ಷಿ ಅಭಿಮಾನಿಗಳಿಗೆ ಮತ್ತು ದೋಣಿವಿಹಾರ, ಬಂಡೆ ಏರುವವರಿಗೆ(Rock climbing), ದೋಣಿಯಹಿಂದೆ ಎಳೆಸಿಕೊಂಡು ತೇಲುವುದು ಮತ್ತು ಪೆಡಲ್ಮಾಡುವ ದೋಣಿಯಲ್ಲಿ ಸಾಹಸಗಳನ್ನು ಮಾಡುವ ಉತ್ಸಾಹಿಗಳಿಗೆ ಒಂದು ತಕ್ಕ ಸ್ಥಳ.  ಆನೆ ಮತ್ತು ಒಂಟೆ ಸಫಾರಿಗಳ ಜೊತೆಯಲ್ಲಿ ಇಲ್ಲಿ ಜಲಕ್ರೀಡೆಗಳನ್ನು ಆನಂದದಿಂದ ಅನುಭವಿಸಬಹುದು.

ಹರಿಹರ ಧಾಮ ಒಂದು ತೀರ್ಥಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ಭಾರತದ ಅತ್ಯಂತ ದೊಡ್ಡ ಶಿವಲಿಂಗವು ಇಲ್ಲಿ ಸ್ಥಾಪಿತವಾಗಿದೆ. ದುಖಿಯಾ ಮಹಾದೇವ ದೇವಾಲಯ ಮತ್ತು ಜಾರ್ಖಂಡ್ ಧಾಮ ಕೆಲವು ಇತರ ಯಾತ್ರಾ ಕೇಂದ್ರಗಳಾಗಿವೆ.  ಜಮುಆ ಪಟ್ಟಣವು ಗಿರಿಡೀಹ್ನಿಂದ 35 ಕಿ.ಮೀ. ದೂರದಲ್ಲಿದೆ ಮತ್ತು ಇದು ತನ್ನ ಸುತ್ತಲಿರುವ ಸುಂದರ ಪ್ರಕೃತಿ ದೃಶ್ಯಗಳ ಮತ್ತು ಹಸಿರುವನರಾಶಿಗೆ ಪ್ರಸಿದ್ಧವಾಗಿದೆ.  

ಗಿರಿಡೀಹ್ ತಲಪುವುದು ಹೇಗೆ?

ರೈಲು ಮತ್ತು ರಸ್ತೆಸಾರಿಗೆ ಗಿರಿಡೀಹ್ ಸೇರಲು ಪ್ರಮುಖ ಸಾಧನಗಳಾಗಿವೆ. ಈ ಸ್ಥಳಕ್ಕೆ ಪಶ್ಚಿಮಬಂಗಾಳ ಮತ್ತು ಬಿಹಾರದ ಪ್ರಮುಖ ಸ್ಥಳಗಳೊಂದಿಗೆ ಒಳ್ಳೆಯ ಸಂಪರ್ಕ ಇದೆ.

ಹವಾಮಾನ

ಗಿರಿಡೀಹ್ನಲ್ಲಿ ಸಾಧಾರಣವಾಗಿ ಒಣ ಹವೆಯಿರುತ್ತದೆ. ತೀವ್ರಬೇಸಿಗೆ ಮತ್ತು ಚಳಿಗಾಲ ಸಹಿಸುದಕ್ಕೆ ಆಗುವುದಿಲ್ಲ. ಮಳೆಗಾಲದ ಹವಾಮಾನವು ಅನುಭವಿಸಲು ಚೆನ್ನಾಗಿರುತ್ತದೆ. ಗಿರಿಡೀಹ್ನಲ್ಲಿ ಒಣ ಹವಾಮಾನವು ಪ್ರಧಾನವಾಗಿದ್ದು ಚಳಿಗಾಲದಲ್ಲಿ ಶೀತ ಮತ್ತು ಹಿತಕರವಾದ ಹವಾಮಾನವಿರುತ್ತದೆ.

Please Wait while comments are loading...