Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರಿಡೀಹ್ » ಹವಾಮಾನ

ಗಿರಿಡೀಹ್ ಹವಾಮಾನ

ಗಿರಿಡೀಹ್ನಲ್ಲಿ ಸಾಧಾರಣವಾಗಿ ಒಣ ಹವೆಯಿರುತ್ತದೆ. ತೀವ್ರಬೇಸಿಗೆ ಮತ್ತು ಚಳಿಗಾಲ ಸಹಿಸುದಕ್ಕೆ ಆಗುವುದಿಲ್ಲ. ಮಳೆಗಾಲದ ಹವಾಮಾನವು ಅನುಭವಿಸಲು ಚೆನ್ನಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯು ಗಿರಿಡೀಹ್ನಲ್ಲಿ ಏಪ್ರಿಲ್ ತಿಂಗಳಿಂದ ಪ್ರಾರಂಭವಾಗುತ್ತದೆ. ಹವಾಮಾನವು ಈ ಸಮಯದಲ್ಲಿ ವಿಶೇಷವಾಗಿ ಬಿಸಿಯಾಗಿರುತ್ತದೆ. ಮೇ ತಿಂಗಳಿನಲ್ಲಿ ಸುಡುವಬಿಸಿಲಿದ್ದು ಅತ್ಯಂತ ಶಾಖವನ್ನು ಸಹಿಸಲಾಗುವುದಿಲ್ಲ. ತಾಪಮಾನವು 47 ಡಿಗ್ರಿ ಸೆಲ್ಸಿಯುಸ್ವರೆಗೆ ಏರಿ, ತೇವಾಂಶ ಮಟ್ಟವು ಮುಂಗಾರುಮಳೆಯ ತಿಂಗಳಾದ ಜೂನ್ವರೆಗೆ ಹೆಚ್ಚಾಗುತ್ತದೆ.

ಮಳೆಗಾಲ

ಮಳೆಗಾಲ ಜೂನ್ ಕೊನೆಯಲ್ಲಿ ಆರಂಭಿಸುತ್ತದೆ ಮತ್ತು ಅಕ್ಟೋಬರ್ ಮಧ್ಯದವರೆಗೆ ಮುಂದುವರೆಯುತ್ತದೆ.  ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಇಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತದೆ.

ಚಳಿಗಾಲ

ಚಳಿಗಾಲಗಳು ಅಸಾಧಾರಣವಾಗಿ ತಣ್ಣಗಿರುತ್ತದೆ. ತಾಪಮಾನವು 20 ರಿಂದ ಮೈನಸ್ 5 ಡಿಗ್ರಿಯ ವ್ಯಾಪ್ತಿಯಲ್ಲಿರುತ್ತದೆ. ಅಕ್ಟೊಬರ್ನಿಂದ ಫೆಬ್ರವರಿವರೆಗೆ ಉಣ್ಣೆಬಟ್ಟೆಗಳಿಲ್ಲದೆ ಇಲ್ಲಿ ಇರಲು ಅಸಾಧ್ಯ. ಗಿರಿಡೀಹ್ನ ಎಲ್ಲಾ ಚಳಿಗಾಲದಲ್ಲಿ ಪಿಕ್ನಿಕ್ಗಳ ಸಾಮಾನ್ಯ ದೃಶ್ಯಗಳಿರುತ್ತವೆ.