Search
 • Follow NativePlanet
Share
ಮುಖಪುಟ » ಸ್ಥಳಗಳು» ಪಾಕುಡ್

ಪಾಕುಡ್ - ಸಾಹಸ ಮತ್ತು ಧಾರ್ಮಿಕ ಸ್ಥಳಗಳಿಗೆ ಹೆಸರುವಾಸಿ

8

ಪಾಕುಡ್,   ಜಾರ್ಖಂಡ್ ನ ಒಂದು ಜಿಲ್ಲೆಯಾಗಿದ್ದು ಬೀಡಿ ತಯಾರಿಕೆಗೆ ಹೆಸರುವಾಸಿಯಾಗಿದೆ. ಇದು ಜಾರ್ಖಂಡ್ ನ ಪ್ರಮುಖ ಆದಾಯ ಮೂಲ ಎಂದು ಪರಿಗಣಿಸಲಾಗುತ್ತದೆ. ಇದು 1994 ರಲ್ಲಿ ಜಿಲ್ಲೆಯಾಗಿ ಮೇಲ್ದರ್ಜೆಗೇರಿಸುವ  ತನಕ  ಸಾಹಿಬ್ ಗಂಜ್ ನ ಒಂದು ಉಪವಿಭಾಗವಾಗಿತ್ತು. ಇದು ಉತ್ತರದಲ್ಲಿ ಸಾಹಿಬ್ ಗಂಜ್ ಜಿಲ್ಲೆ, ದಕ್ಷಿಣದಲ್ಲಿ ಪಶ್ಚಿಮ ಬಂಗಾಳದ ಬಿರ್ ಭೂಮ್ ಜಿಲ್ಲೆ, ಪೂರ್ವದಲ್ಲಿ ಪಶ್ಚಿಮ ಬಂಗಾಳದ ಬಿರ್ ಭೂಮ್ ಜಿಲ್ಲೆಯ ಒಂದು ಭಾಗ ಹಾಗು ಮುರ್ಷಿದಾಬಾದ್ ಮತ್ತು ಪಶ್ಚಿಮದಲ್ಲಿ ಮತ್ತು ದುಮ್ಕಾ & ಗುಡ್ಡಾ ಜಿಲ್ಲೆಗಳಿಂದ ಸುತ್ತುವರೆದಿದೆ.  ಈ ಜಿಲ್ಲೆಯು ದಪ್ಪ ಮತ್ತು ವಿಶಾಲ ವನಗಳಿಗೆ ಹೆಸರುವಾಸಿಯಾಗಿದೆ.

ಒಂದೊಮ್ಮೆ ದಟ್ಟವಾದ ಅರಣ್ಯ ಸಂಪತ್ತಿನಿಂದ ಕೂಡಿದ್ದ ಈ ಜಿಲ್ಲೆಯು ಪ್ರಸ್ತುತ ಬಹುಭಾಗವನ್ನು ಕಳೆದುಕೊಂಡಿದೆ. ಔಷಧಿ ಸಸ್ಯಗಳಾದ ಸರ್ಪಗಂಧ, ರೈಗ್ಮಿ ಅಥವಾ ಧಮಿ, ಖಜ್ವಾ, ಚಿರೈತಾ ಮೊದಲಾದವುಗಳು ಈಗ ನಾಶಗೊಂಡಿವೆ ಎಂತಲೆ ಹೇಳಬಹುದು. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿನ ಕಾಡುಗಳ ಭಾರೀ ವಿನಾಶಕ್ಕೆ ತುತ್ತಾಗಿವೆ. ಈ ಜಿಲ್ಲೆಯಲ್ಲಿ ಪ್ರಮುಖ ಮೂರು ನದಿಗಳಿವೆ ಅವುಗಳೆಂದರೆ ಬನ್ಸ್ ಲೋಯ್, ತೊರೈ ಮತ್ತು ಬ್ರಾಹ್ಮಿಣಿ ನದಿಗಳು. ಬನ್ಸ್ ಲೋಯ್ ಮತ್ತು ತೊರೈ ನದಿಗಳು ಜಿಲ್ಲೆಯ ಮಧ್ಯ ಭಾಗದಲ್ಲಿ ಹರಿದಿದ್ದರೆ, ಬ್ರಾಹ್ಮಿಣಿ ನದಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹರಿಯುತ್ತದೆ.

ಪಾಕುಡ್ ಜಿಲ್ಲೆಯ ಇತಿಹಾಸ

ಈ ಪ್ರದೇಶದ ಅಧಿಕೃತ ಇತಿಹಾಸ  ಮಧ್ಯಕಾಲೀನ ಅವಧಿಗಿಂತ ಮೊದಲಿನದು ಎಂದು ಹೇಳಲಾಗುತ್ತದೆ. ಮೂಲತಃ ಇಲ್ಲಿ ಪಾಕುಡ್ ರಾಜ್ ಮತ್ತು ಮಹೇಶ್ಪುರ್ ರಾಜ್ ಎಂಬ ಎರಡು ಸಣ್ಣ ಪ್ರದೇಶಗಳು ಅಸ್ತಿತ್ವದಲ್ಲಿದ್ದವು. ಈ ಎರಡೂ ಪ್ರದೇಶಗಳ ಜಮೀನ್ದಾರರು ಮುಘಲ್ ಆಡಳಿತದೊಂದಿಗೆ ಸಂಬಂಧ ಹೊಂದಿದ್ದರು ಮತ್ತು 'ಪಹರಿಯಾ' ಎಂಬ ಜಾಗದ ಆರೈಕೆ ಮತ್ತು ಪೋಷಣೆಯು ಇವರದೆ ಜವಾಬ್ದಾರಿಯಾಗಿತ್ತು. ನಂತರ ಪ್ಲಾಸಿ ಕದನದಲ್ಲಿ  ಜಯವನ್ನು ಗಳಿಸಿದ ಬ್ರಿಟಿಷರು ಪಶ್ಚಿಮ ಬಂಗಾಳದ ಬಿರ್ ಭೂಮ್ ಜಿಲ್ಲೆಯ ಮೂಲಕ ಈ ಪ್ರದೇಶವನ್ನು ನಿಯಂತ್ರಿಸಲು ತಮ್ಮ ಆಡಳಿತ ಜಾಲವನ್ನು ಅಭಿವೃದ್ಧಿಪಡಿಸಿದರು.

ಕ್ಯಾಪ್ಟನ್ ಬೊರೊನೈ, ಈ ಪ್ರದೇಶದ ನಿಜವಾದ ನಿವಾಸಿಗಳಾದ ಪಹಾರಿಯಾಗಳನ್ನು ಗೆಲ್ಲಲು ಒಂದು ಯೋಜನೆ ರೂಪಿಸಿದ ಮೊದಲ ಬ್ರಿಟಿಷ್ ಅಧಿಕಾರಿಯಾಗಿದ್ದರು. ಇದೊಂದು ಪ್ರತ್ಯೇಕವಾದ ಭಾಗವಾಗಿದ್ದರು ಕೂಡ ತಾಂತ್ರಿಕವಾಗಿ ರಾಜ್ ಮಹಲ್ ಬೆಟ್ಟಗಳಿಂದ ರಕ್ಷಣಾತ್ಮಕವಾಗಿ ನಿಯಂತ್ರಿಸಲ್ಪಡುತ್ತಿತ್ತು. ಸಿಧು, ಕಾನ್ಹೂ ಚಂದ್ ಹಾಗೂ ಭೈರವರಂತಹ ಸಂತಾಲ್ ವೀರರ ಕೊಡುಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತದ್ದು ಅವರ ಅಮರ ನೆನಪು ಸಂತಲ್ ಪರ್ಗಾನದ ವಿಭಾಗದ ವಿವಿಧ ಸ್ಥಳದಲ್ಲಿ ಕಾಣಬಹುದು.

ಪಾಕುಡ್ ಒಳಗೆ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಪಾಕುಡ್ ಧಾರ್ಮಿಕ ಮತ್ತು ಸಾಹಸ ಪ್ರಿಯ ಪ್ರವಾಸಿಗರಿಗೆ ಇಷ್ಟವಾಗುವಂತಹ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೀಯ ಸ್ಥಳವಾಗಿದೆ. ಪಾಕುಡ್ ನ ಕೆಲವು  ಮುಖ್ಯ ಆಕರ್ಷಣೆಗಳೆಂದರೆ ಸಿದ್ಧು ಕನ್ಹಾ ಪಾರ್ಕ್  ಮತ್ತು ಪಾಕುಡ್ ಪ್ರವಾಸಿಗರಿಂದ ಹೆಚ್ಚು ಭೇಟಿ ಮಾಡಲ್ಪಡುವ ನಿತ್ಯಕಾಳಿ ಮಂದಿರ. ಆಸಕ್ತಿದಾಯಕವಾದ ಇತರ ಸ್ಥಳವೆಂದರೆ ಬಿಸಿ ನೀರಿನ ಬುಗ್ಗೆ ಹೊಂದಿರುವ, ಭಕ್ತಾದಿಗಳ ಪವಿತ್ರ ಸ್ನಾನದ ಕೊಳ ಧರಣೀ ಪಹಾರ್.

ಪಾಕುಡ್ ತಲುಪಲು ಉತ್ತಮ ಸಮಯ

ಚಳಿಗಾಲವು ಪಾಕುಡ್ ಸ್ಥಳ ವೀಕ್ಷಣೆಗೆ ಅತ್ಯುತ್ತಮವಾದ ಸಮಯ. ಈ ಸಮಯದಲ್ಲಿ ತಾಪಮಾನ ಆಹ್ಲಾದಕರವಾಗಿದ್ದು, ಪ್ರಯಾಣೀಕರು ಚಳಿಯಿಂದ ರಕ್ಷಣೆಗಾಗಿ ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು ಒಳಿತು.

ಪಾಕುಡ್ ತಲುಪುವುದು ಹೇಗೆ?

ಪಾಕುಡ್ ಅನ್ನು ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಸುಲಭವಾಗಿ ತಲುಪಬಹುದು. ಇಲ್ಲಿಂದ ಟ್ಯಾಕ್ಸಿಗಳು ಮತ್ತು ಬಸ್ಸುಗಳ ಮೂಲಕ ಗಮ್ಯಸ್ಥಾನವನ್ನು ತಲುಪಬಹುದು.  ಪಾಕುಡ್ ಒಂದು ರೈಲು ನಿಲ್ದಾಣವನ್ನು ಕೂಡ ಹೊಂದಿದೆ ಮತ್ತು ರೈಲುಗಳು ಇಲ್ಲಿನ ಸಾರಿಗೆ ಪದ್ಧತಿಯಲ್ಲಿ ಪ್ರಸಿದ್ಧವಾಗಿದೆ.

ಪಾಕುಡ್ ಪ್ರಸಿದ್ಧವಾಗಿದೆ

ಪಾಕುಡ್ ಹವಾಮಾನ

ಪಾಕುಡ್
34oC / 93oF
 • Haze
 • Wind: WSW 9 km/h

ಉತ್ತಮ ಸಮಯ ಪಾಕುಡ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಾಕುಡ್

 • ರಸ್ತೆಯ ಮೂಲಕ
  ರಾಂಚಿಯ ಮೂಲಕ ಸುಲಭವಾಗಿ ಪಾಕುಡ್ ಸ್ಥಳವನ್ನು ತಲುಪಬಹುದು. ಹಾಗೂ ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಸೌಲಭ್ಯಗಳನ್ನು ಕೂಡ ಪಡೆಯಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಾಕುಡ್ ಜಂಕ್ಷನ್ ಉತ್ತಮ ಸಂಪರ್ಕ ಮಾರ್ಗವಾಗಿದೆ ಮತ್ತು ಕೋಲ್ಕತಾ, ರಾಂಚಿ, ದಿಬ್ರುಘಢ್, ಗೌಹಾತಿ ಮತ್ತು ವಾರಣಾಸಿ ಮ್ದಲಾದ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ರೈಲು ಸಾರಿಗೆಯ ಜನಪ್ರಿಯ ಕ್ರಮವಾಗಿದ್ದು ಮುಂಚಿತವಾಗಿ ಟಿಕೇಟುಗಳನ್ನು ಕಾಯ್ದಿರಿಸುವುದು ಒಳ್ಳೆಯದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರಾಂಚಿ ನಗರವು ರಾಜ್ಯದ ಏಕೈಕ ವಿಮಾನ ನಿಲ್ದಾಣವಾಗಿದೆ. ಮತ್ತು ಈ ವಿಮಾನದ ಮೂಲಕ ಬರುವ ಪ್ರಯಾಣಿಕರಿಗೆ ಅತ್ಯುತ್ತಮ ಮಾರ್ಗವಾಗಿದೆ. ಇದು ದೇಶೀಯ ವಿಮಾನ ನಿಲ್ದಾಣವಾಗಿದೆ. ಮತ್ತು ಮುಂಬೈ, ದೆಹಲಿ ಮತ್ತು ಕೋಲ್ಕತಾ ಸ್ಥಳಗಳಿಂದ ಆಗಾಗ ವಿಮಾನ ಸೇವೆಗಳನ್ನು ಹೊಂದಿದೆ. ಹಾಗೆಯೇ ಇದು ವಿಮಾನಗಳನ್ನು ಸಂಪರ್ಕಿಸಲು ಆದರ್ಶ ಸ್ಥಳವಾಗಿದೆ. ಟ್ಯಾಕ್ಸಿಗಳು ವಿಮಾನ ನಿಲ್ದಾಣದಿಂದ ಲಭ್ಯವಿವೆ ಮತ್ತು ಇದು ಪಾಕುಡ್ ತಲುಪಲು ಉತ್ತಮ ಮಾರ್ಗವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Pakur
  34 OC
  93 OF
  UV Index: 8
  Haze
 • Tomorrow
  Pakur
  28 OC
  82 OF
  UV Index: 8
  Sunny
 • Day After
  Pakur
  30 OC
  86 OF
  UV Index: 9
  Sunny

Near by City