ದಿಯೋಘರ್- ಶಿವನ ಪವಿತ್ರ ಭೂಮಿ

ದಿಯೋಘರ್ ಬೈದ್ಯನಾಥ ಧಾಮ ಎಂದು ಪ್ರಸಿದ್ಧವಾಗಿರುವ ಹಿಂದೂ ಯಾತ್ರಾಸ್ಥಳ. ಇದು ಆರೋಗ್ಯ ರೆಸಾರ್ಟ್ ಆಗಿ ಕೂಡ ಹೆಸರುವಾಸಿಯಾಗಿದೆ. ದಿಯೋಘರ್ ಸಣ್ಣ ಸಣ್ಣ ಬೆಟ್ಟಸಾಲುಗಳಿಂದ ಮತ್ತು ಅರಣ್ಯಗಳಿಂದ ಆವೃತವಾಗಿದೆ. ಇಲ್ಲಿನ ಮುಖ್ಯ ದೇವಾಲಯದ ಸಂಕೀರ್ಣದಲ್ಲಿ 22 ದೇವಾಲಯಗಳಿವೆ. ಇದು ಭಾರತದ 12 ಜೋರ್ತಿಲಿಂಗಗಳಲ್ಲಿ ಮುಖ್ಯವಾದುದು.

ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತರು ಇಲ್ಲಿನ ಪುರಾತನ ಬಾಬಾ ಬೈದ್ಯನಾಥ ದೇವಾಲಯಕ್ಕೆ ಶಿವನ ಪೂಜೆಗಾಗಿ ಬರುತ್ತಾರೆ. ಹಲವು ಮಂದಿ ಭಕ್ತಾದಿಗಳು ಸುಲ್ತಾನ್ ಗಂಜ್ ನಿಂದ 100 ಕಿಮೀ ದೂರದ ದೇಗುಲಕ್ಕೆ ಕಾಲ್ನಡಿಗೆಯಲ್ಲೆ ಸಾಗುತ್ತಾರೆ. ಬಸುಖಿನಾಥನನ್ನು ಸಂದರ್ಶಿಸುವಲ್ಲಿಗೆ ಅವರ ಯಾತ್ರೆ ಪೂರ್ಣಗೊಳ್ಳುತ್ತದೆ. ಹಿಂದೂ ಭಕ್ತಾದಿಗಳಲ್ಲಿ ಜ್ಯೋರ್ತಿಲಿಂಗಕ್ಕೆ ವಿಶೇಷ ಮಹತ್ವವಿದೆ. ದಿಯೋಘರ್ ಪ್ರದೇಶವನ್ನು ದೇವತೆಗಳ ಆವಾಸಸ್ಥಾನ ಎಂದು ಕೂಡ ಕರೆಯಲಾಗುತ್ತದೆ.

ಯಮುನಜೊರ್ ಮತ್ತು ಧಾರುವಾ ನದಿಗಳು ದಿಯೋಘರಿನ ಸಮೀಪ ಹರಿಯುತ್ತದೆ. ದಿಯೋಘರ್ ದೇಗುಲಗಳ ಪಟ್ಟಣ ಹಾಗು ಒಂದು ಪ್ರಸಿದ್ಧ ಪ್ರವಾಸಿ ತಾಣ. ಆರೋಗ್ಯ ಪ್ರವಾಸೋದ್ಯಮದ ದೃಷ್ಟಿಯಿಂದ ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಉತ್ತಮ ಹವಾಮಾನದ ಕಾರಣದಿಂದ ಇದು ಪ್ರಸಿದ್ಧಿಯನ್ನು ಪಡೆದಿದೆ.

ದಿಯೋಘರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಇಲ್ಲಿನ ಪ್ರಮುಖ ಆಕರ್ಷಣೆ ಬೈದ್ಯನಾಥ ದೇವಾಲಯ. ಇನ್ನುಳಿದ ತಾಣಗಳೆಂದರೆ ವಿದ್ಯಾಪೀಠದ ರಾಮಕೃಷ್ಣ ಮಿಷನ್, ತ್ರಿಕೂಟ್, ಸತ್ಸಂಗ ಆಶ್ರಮ, ನವಲಖಾ ದೇಗುಲ, ಶ್ರಾವಣೀ ಮೇಳ, ಶಿವಗಂಗಾ, ದೇವಸಂಘ ಮಠ. ಇಲ್ಲಿನ ಸುಂದರ ಬೆಟ್ಟಸಾಲನ್ನು ನಂದನ ಪಹಾರ್ ಎಂದು ಕರೆಯುತ್ತಾರೆ. ಇಲ್ಲಿ ನಂದಿಯ ದೇವಾಲಯವಿದೆ.

ತಲುಪುವುದು ಹೇಗೆ

ದಿಯೋಘರ್ ಗೆ ತಲುಪಲು ಉತ್ತಮ ರಸ್ತೆ, ರೈಲು ಮತ್ತು ವಾಯು ಸಂಪರ್ಕವಿದೆ.

ಹವಾಮಾನ

ದಿಯೋಘರ್ನಲ್ಲಿ ಒಣಹವೆಯಿರುತ್ತದೆ.

Please Wait while comments are loading...