Search
 • Follow NativePlanet
Share
ಮುಖಪುಟ » ಸ್ಥಳಗಳು» ರಾಮಗಡ್-ಜಾರ್ಖಂಡ್

ರಾಮಗಡ್ - ಪ್ರಾಶಂತವಾದ ಯಾತ್ರಾಸ್ಥಳ

12

ಜಾರ್ಖಂಡ್ ನ 24 ಜಿಲ್ಲೆಗಳಲ್ಲಿ ಒಂದಾದ ರಾಮಗಡ್ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಈ ಜಿಲ್ಲೆ 2007 ಸೆಪ್ಟೆಂಬರ್ 12 ರಂದು ಹಜಾರಿಬಾಗ್ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾಯಿತು. ರಾಮಗಡ್ ಎಂದರೆ 'ರಾಮನ ಕೋಟೆ'ಎಂದರ್ಥ.

ಈ ಜಿಲ್ಲೆ ರಾಮಗಡ್, ಪತ್ರಾಟು, ಗೋಲ, ಮಂಡು ಚಿತಾರ್ಪುರ್ ಮತ್ತು ದುಲ್ಮಿ ಎಂಬ 6 ಭಾಗಗಳನ್ನು ಹೊಂದಿದೆ. ಇತಿಹಾಸದ ಪ್ರಕಾರ ರಾಮಗಡ್ ಶಿಲಾಯುಗದ ಇತಿಹಾಸವನ್ನು ಹೊಂದಿದೆ. ರಾಮಗಡ್ ದಲ್ಲಿ ಗುಪ್ತ ಸಾಮ್ರಾಜ್ಯ, ಮುಸ್ಲಿಂ ಕಾಲ ಮತ್ತು ಬ್ರಿಟಿಷರ ಆಳ್ವಿಕೆಯ ಕುರುಹುಗಳು ಇಂದಿಗೂ ಇವೆ.

ರಾಮಗಡದಲ್ಲಿ ಕಲ್ಲಿದ್ದಲು ಖನಿಜ ಮುಖ್ಯವಾಗಿದ್ದು ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಸಹಾಯಕವಾಗಿದೆ. ರಾಮಗಡ ಜಿಲ್ಲೆಯ ಪತ್ರಾಟು ಎಂಬಲ್ಲಿ 60 ರ ದಶಕದಲ್ಲಿ ಪ್ರಾರಂಭಿಸಲಾದ ಮುಖ್ಯ ಥರ್ಮಲ್ ವಿದ್ಯುತ್ ಸ್ಟೇಷನ್ ಇದೆ. ನಲ್ಕಾರಿ ಬಾರ್ಕಿ ನದಿಗೆ ಕಟ್ಟಲಾದ ನಲ್ಕಾರಿ ಅಣೆಕಟ್ಟಿಗೆ ಕೂಡ ರಾಮಗಡ ಹೆಸರುವಾಸಿಯಾಗಿದೆ. ಈ ಜಿಲ್ಲೆ ಪ್ರಾಣಿ ಮತ್ತು ಸಸ್ಯಗಳನ್ನು ಕೂಡ ಅಗಾಧ ಪ್ರಮಾಣದಲ್ಲಿ ಹೊಂದಿದೆ.

ರಾಮಗಡದ ಸುತ್ತಮುತ್ತಲ ಪ್ರವಾಸಿ ಸ್ಥಳಗಳು:

ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಟೂಟಿ ಜರ್ನಾ ದೇವಾಲಯ, ಮತ್ಯಾತುಂಗ್ರಿ ದೇವಾಲಯ, ರಾಜ್ರಪ್ಪಾ ದೇವಾಲಯ, ಜೊತೆಗೆ ನೈಸರ್ಗಿಕ ಆಕರ್ಷಣೆಗಳಾದ ಧುರ್ - ಧುರಿಯಾ ಜಲಪಾತ, ಆಮ್ - ಜಾರಿಯಾ ಫಾಲ್ಸ್,ಗಂದೌನಿಯ(ಬಿಸಿನೀರಿನ ಬುಗ್ಗೆಗಳು), ಬಂಕೆಟ್ಟ(ಗುಹೆ) ಇವುಗಳು ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳು. ರಾಮಗಡ್ ಕ್ಕೆ ಭೇಟಿ ನೀಡಿದವರು ಈ ಸ್ಥಳಗಳಿಗೆ ಭೇಟಿ ನೀಡಲೇಬೇಕು.

ರಾಮಗಡದಲ್ಲಿ ಐತಿಹಾಸಿಕ ಆಕರ್ಷಣೆಗಳಾದ ಮಹಾತ್ಮ ಗಾಂಧೀ ಸಮಾದಿ ಸ್ಥಳ, 1940 ರಲ್ಲಿ ಮಹಾತ್ಮಾ ಗಾಂಧೀ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಯೋಜನೆಗೆ ರಾಮಗಡಕ್ಕೆ ಆಗಮಿಸಿದ್ದರು. ಗಾಂಧಿಯ ಮರಣಾ ನಂತರ ಅವರ ಅವಶೇಷದ ಕೆಲವು ಭಾಗಗಳನ್ನು ಇಲ್ಲಿ ಸಮಾಧಿ ಮಾಡಲಾಯಿತು. ಈ ಸಮಾಧಿ 2 ನೇ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಹಸಿವಿನಿಂದ ಮತ್ತು ಹಾವಿನ ಕಡಿತದಿಂದ ಸತ್ತ ಎಲ್ಲಾ ಸೈನಿಕರ ಸಂಯೋಜಿತ ಸ್ಮಶಾನವಾಗಿದೆ.ಇಲ್ಲಿ ಸುಮಾರು 667 ಸಮಾಧಿಗಳಿದ್ದು, ಜೊತೆಗೆ ಬುದ್ಧನ ದೇವಾಲಯ ಮತ್ತು ಸ್ಮಾರಕವನ್ನು ಕೂಡ ಕಾಣಬಹುದು.

ರಾಮಗಡ ಹವಾಮಾನ:

ರಾಮಗಡ ಛೋಟಾ ನಾಗಪುರದ ಬಳಿಯಿದ್ದು ಉಪ ಉಷ್ಣವಲಯ ಹವಾಮಾನ ಹೊಂದಿದೆ. ಇಲ್ಲಿನ ತಾಪಮಾನ ಅರೆ ಪರಮಾವಧಿ ಎನ್ನಬಹುದು. ರಾಮಗಡ ನವೆಂಬರ್ ನಿಂದ ಫೆಬ್ರವರಿ ವರೆಗೆ ಚಳಿಗಾಲವನ್ನು, ಮಾರ್ಚ್ ನಿಂದ ಮೇ ವರೆಗೆ ಬೇಸಿಗೆ ಕಾಲವನ್ನು ಮತ್ತು ಜೂನ್ ನಿಂದ ಅಕ್ಟೋಬರ್ ಮಳೆಗಾಲವನ್ನು ಹೊಂದಿದೆ.

ರಾಮಗಡದ ಶ್ರೀಮಂತ ಸಂಸ್ಕೃತಿ:

ರಾಮಗಡ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಇಲ್ಲಿನ ಸ್ಥಳೀಯರಿಂದ ಕೆಲವು ಹಬ್ಬಗಳು ಮತ್ತು ಜಾತ್ರೆಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯ ಹಬ್ಬಗಳೆಂದರೆ ದೀಪಾವಳಿ, ಹೋಳಿ, ದಸರಾ,ರಾಮನವಮಿ, ಈದ್, ಮಕರ ಸಂಕ್ರಾಂತಿ ಇನ್ನೂ ಮುಂತಾದವು. ಈ ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಮತ್ತು ಗಣಿ ಗಳಿರುವುದರಿಂದ ವಿಸ್ಕರ್ಮ ಪೂಜೆ ಕೂಡ ಮುಖ್ಯವಾದ ಆಚರಣೆಯಾಗಿದೆ. ರಾಜ್ರಪ್ಪ ಮಂದಿರ ಮತ್ತು ಟೂತೋ ಜಾರ್ನಾ ಮಂದಿರಗಳಲ್ಲಿ ಮದುವೆಗಳು ಕೂಡ ನಡೆಯುತ್ತವೆ.

ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ದುಸ್ಕ ಮತ್ತು ವಡ ಎಂಬ ತಿನಿಸುಗಳನ್ನು ಸವಿಯಬಹುದು. ಇಲ್ಲಿನ ಖಾದ್ಯಗಳಿಗೆ ಸಾಕಷ್ಟು ಎಲೆಗಳು ಮತ್ತು ಹೂವುಗಳನ್ನು ಕೂಡ ಬಳಸುತ್ತಾರೆ. ರಾಜ್ರಪ್ಪ ಮಂದಿರವು ಸಿಹಿ ತಿನಿಸಾದ ಕೋಯಾವನ್ನು ಕೂಡ ತಯಾರಿಸುತ್ತದೆ.

ರಾಮಗಡ ತಲುಪುವುದು ಹೇಗೆ?

ರಾಮಗಡ ಸಾರಿಗೆ  ಸಂಪರ್ಕ ಹೊಂದಿದ್ದು ಸುಲಭವಾಗಿ ತಲುಪಬಹುದು. ಇಲ್ಲಿ ರೈಲ್ವೇ ನಿಲ್ದಾಣ ಸಂಪರ್ಕಗಳಿದ್ದು ಪೂರ್ವ ಕೇಂದ್ರ  ರೈಲ್ವೆ ಮತ್ತು ದಕ್ಷಿಣ ಪೂರ್ವ ರೈಲ್ವೇ ಎಂದು ವಿಭಾಗಿಸಲಾಗಿದೆ. ಜೊತೆಗೆ ಮುಖ್ಯ ನಗರಗಳಿಂದ ಸಂಪರ್ಕ ಹೊಂದುವ ರಾಷ್ಟ್ರೀಯ ಹೆದ್ದಾರಿ ಕೂಡ ಇದೆ. ಹತ್ತಿರದ ರೈಲ್ವೇ ನಿಲ್ದಾಣವೆಂದರೆ ರಾಂಚಿಯ ಬೀಸ್ರಾ ಮುಂಡಾ ವಿಮಾನ ನಿಲ್ದಾಣ ಇದು ಡೆಲ್ಲಿ, ಮುಂಬೈ, ಕೋಲ್ಕತ್ತಾ ಮತ್ತು ಪಾಟ್ನಾ ಕ್ಕೆ ಸಂಪರ್ಕ ಹೊಂದಿದೆ.

ರಾಮಗಡ್-ಜಾರ್ಖಂಡ್ ಪ್ರಸಿದ್ಧವಾಗಿದೆ

ರಾಮಗಡ್-ಜಾರ್ಖಂಡ್ ಹವಾಮಾನ

ರಾಮಗಡ್-ಜಾರ್ಖಂಡ್
34oC / 93oF
 • Haze
 • Wind: WSW 9 km/h

ಉತ್ತಮ ಸಮಯ ರಾಮಗಡ್-ಜಾರ್ಖಂಡ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರಾಮಗಡ್-ಜಾರ್ಖಂಡ್

 • ರಸ್ತೆಯ ಮೂಲಕ
  ಜಾರ್ಖಂಡ ಮತ್ತು ಬಿಹಾರದ ಮುಖ್ಯ ನಗರಗಳಿಂದ ರಾಮನಗರದ ಬಸ್ಸು ನಿಲ್ದಾಣಕ್ಕೆ ಸಾಕಷ್ಟು ಬಸ್ಸಿನ ಸಂಚಾರವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹತ್ತಿರದ ರೈಲು ನಿಲ್ದಾಣಗಳು - ರಾಮನಗರ ಜಂಕ್ಷನ್ (28),ರಾಂಚಿರಸ್ತೆ(28),ಬಾರ್ಕಕಾನ(33),ಕೊಡೆರ್ಮ(135).
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  70 ಕಿ ಮೀ ಅಂತರದಲ್ಲಿರುವ ರಾಂಚಿ ಹತ್ತಿರದ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Ramgarh-Jharkhand
  34 OC
  93 OF
  UV Index: 8
  Haze
 • Tomorrow
  Ramgarh-Jharkhand
  28 OC
  82 OF
  UV Index: 8
  Sunny
 • Day After
  Ramgarh-Jharkhand
  30 OC
  86 OF
  UV Index: 9
  Sunny