ಈ ದೇವಾಲಯ ರಾಮಗಡದಿಂದ 28 ಕಿ ಮೀ ಅಂತರದಲ್ಲಿರುವ ಚಿನ್ಮಾಸ್ಟಿಕ ದೇವಿಯ ದೇವಾಲಯವಾಗಿದೆ. ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಈ ದೇವಾಲಯವನ್ನು 'ಶಕ್ತಿ ಪೀಠ'ಎಂದು ಕೂಡ ಕರೆಯುತ್ತಾರೆ. ಈ ದೇವಾಲಯದ ಆಕರ್ಷಣೆ ಎಂದರೆ ಕಮಲದ ಮೇಲೆ ಕುಳಿತಿರುವ ತಲೆಯ ಭಾಗ ಇಲ್ಲದಿರುವ ಚಿನ್ಮಾಸ್ಟಿಕ ದೇವಿಯ ವಿಗ್ರಹ ಮತ್ತು ಪಕ್ಕದಲ್ಲಿ ಕಾಮದೇವ ಮತ್ತು ರತಿಯ ವಿಗ್ರಹವಿದೆ. ಈ ದೇವಾಲಯ ದಾಮೋದರ ಮತ್ತು ಭಾರವಿ ನದಿಗಳ ಸಂಗಮ ಸ್ಥಾನದಲ್ಲಿದ್ದು, ಶಿವ ಮತ್ತು ಶಕ್ತಿ ದೇವಿಯ ಪವಿತ್ರ ಸಂಗಮದ ಸ್ಥಳ ಎನ್ನಲಾಗಿದೆ. ಇಲ್ಲಿ ಸಾಕಷ್ಟು ಹಬ್ಬಗಳು ಮತ್ತು ಮದುವೆಗಳು ನಡೆಯುತ್ತವೆ.