Search
  • Follow NativePlanet
Share
ಮುಖಪುಟ » ಸ್ಥಳಗಳು» ಬೋಕಾರೊ

ಬೋಕಾರೊ : ಕೈಗಾರಿಕಾ ನಗರ

22

1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ ನಗರವು ಹೆಸರುವಾಸಿಯಾಗಿರುವುದು ಕಣಿವೆ ಮತ್ತು ನೀರಿನ ಧಾರೆಗಳಿಗೆ. ಬೋಕಾರೋವನ್ನು ಭಾರತದ ದೊಡ್ದ ಕೈಗಾರಿಕಾ ನಗರವೆನ್ನ ಬಹುದು. ಬೋಕಾರೋದಲ್ಲಿ 2011ರ ಜನಗಣತಿಯಂತೆ ಸುಮಾರು ಎರಡು ಮಿಲಿಯನ್ ಜನಸಂಖ್ಯೆಯಿದೆ.

ಬೋಕಾರೋದ ಪ್ರಾಮುಖ್ಯತೆಯೆಂದರೆ ಸ್ಟೀಲ್ ಪ್ಲಾಂಟ್, ಇದು ಏಷ್ಯಾದಲ್ಲೇ ಅತಿದೊಡ್ಡ ಸ್ಟೀಲ್ ಪ್ಲಾಂಟ್. ಪ್ರಮುಖ ಪ್ರವಾಸೋದ್ಯಮದ ಸ್ಥಳದ ಜೊತೆಗೆ ಬೋಕಾರೋದಲ್ಲಿ ಪ್ರಮುಖ ಕಂಪೆನಿಗಳಾದ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ, ಭಾರತ್ ರಿಫ್ರಾಕ್ಟರ್ಸ್, ಹಿಂದೂಸ್ಥಾನ್ ಸ್ಟೀಲ್ ವರ್ಕ್ಸ್ ಕನ್ಸ್ಟ್ರಕ್ಷನ್, ದಾಮೋದರ ವಾಲಿ ಕಾರ್ಪೋರೇಶನ್ ಮುಂತಾದವುಗಳಿದ. ಇದರ ಜೊತೆ ಬೋಕಾರೋ ಶೈಕ್ಷಣಿಕವಾಗಿಯೂ ಹೆಸರುವಾಸಿಯಾಗಿದೆ.

ಬೋಕಾರೋ ವಾತಾವರಣ

ದಾಮೋದರ ನದಿಯ ದಕ್ಷಿಣಕ್ಕಿರುವ ಇದು ಆಹ್ಲಾದಕರ ಮತ್ತು ಪರಿಶುದ್ದ ವಾತಾವರಣವನ್ನು ಹೊಂದಿದೆ. ಬೋಕಾರೋ ನಗರದಲ್ಲಿ ಪ್ರಶಾಂತ್ ಬೆಟ್ಟವಿದೆ, ಗರ್ಗಾ ನದಿ ಮತ್ತು ಸತಾನಪುರ ಪರ್ವತ ಶ್ರೇಣಿಗಳೂ ಇವೆ. ಬೋಕರೋ ದಲ್ಲಿ ಸೆಖೆ ಮತ್ತು ಚಳಿ ಎರಡೂ ವಿಪರಿಮಿತವಾಗಿರುತ್ತದೆ, ತಾಪಾಂಸ ಚಳಿಗಾಲದಲ್ಲಿ ಎರಡು ಡಿಗ್ರಿಯಿಂದ ಬೇಸಿಗೆಯಲ್ಲಿ 45ಡಿಗ್ರಿಯವರೆಗೆ ಸಾಗುತ್ತದೆ. ಪ್ರವಾಸಿಗರು ಒಂದು ವಿಷಯ ಗಮನದಲ್ಲಿ ಇಟ್ಟುಕೊಳ್ಳ ಬೇಕೆಂದರೆ ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಚಳಿಯ ವಾತಾವರಣ ಮತ್ತು ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಸೆಖೆಯ ವಾತಾವರಣವಿರುತ್ತದೆ, ಮಳೆಗಾಲ ಬೋಕಾರೋದಲ್ಲಿ ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ವರೆಗಿರುತ್ತದೆ.

ಬೋಕಾರೋ ತಲುಪುವುದು ಹೇಗೆ

ಬೋಕಾರೋ ನಗರಕ್ಕೆ ದೇಶದ ಇತರ ಭಾಗಗಳಿಂದ ಉತ್ತಮ ಸಂಪರ್ಕದಲ್ಲಿದೆ, ಇಲ್ಲಿಗೆ ಪ್ರವಾಸ ಮಾಡುವುದು ಸುಲಭ. ಕೊಲ್ಕತ್ತಾ, ದುರ್ಗ್, ಕೊಯಂಬತ್ತೂರು, ನವದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ, ಲಕ್ನೋ, ಗುವಹಾಟಿ, ಅಮೃತಸರ, ಪಟ್ನಾ, ವಾರಣಾಸಿ, ವಿಶಾಖಪಟ್ಟಣಂ ಮುಂತಾದ ನಗರಗಳಿಂದ ಬೋಕಾರೋಗೆ ಉತ್ತಮ ರೈಲು ಸಂಪರ್ಕವಿದೆ. ಪ್ರಮುಖ ರೈಲು ನಿಲ್ದಾಣ ಬೋಕಾರೋದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ಎಕ್ಸ್ ಪ್ರೆಸ್ ಮತ್ತು ಮೇಲ್ ರೈಲುಗಳ ಸಂಚಾರ ತುಂಬಾವಿದೆ. ಪ್ರವಾಸಿಗರು ಬೋಕಾರೋ ನಗರವನ್ನು ಬಸ್ಸಿನ ಮೂಲಕವೂ ತಲುಪ ಬಹುದಾಗಿದೆ. ನಯಾ ಮೋರ್ ನಿಲ್ದಾಣ ಬೋಕಾರೋದ ಪ್ರಮುಖ ಬಸ್ ನಿಲ್ದಾಣ, ಇತರ ಎರಡು ನಿಲ್ದಾಣವೆಂದರೆ ಸೆಕ್ಟರ್ 9ರಲ್ಲಿರುವ ಬಸಂತಿ ಮೋರ್ ಮತ್ತು ಚಾಸ್ ನಲ್ಲಿರುವ ಧರ್ಮಶಾಲಾ.

ಬೋಕಾರೋ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಬೋಕಾರೋ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಈ ನಗರವು ಅತ್ಯಂತ ಸೂಕ್ತವಾಗಿದೆ, ನೋಡ ಬೇಕಾಗಿರುವ ಸ್ಥಳಗಳು ಇಲ್ಲಿದ್ದು ಅದರಲ್ಲಿ ಪ್ರಮುಖವಾಗಿ ಬೋಕಾರೋ ಸ್ಟೀಲ್ ಪ್ಲಾಂಟ್ ಇದು ಕೈಗಾರಿಕಾ ನಗರಕ್ಕೆ ಸೂಕ್ತವಾಗಿ ನವೀಕರಿಸಲಾಗಿದೆ. ಬೋಕಾರೋ ಸುತ್ತಮುತ್ತಲಿರುವ ಸ್ಥಳಗಳೆಂದರೆ ಗರ್ಗ ಅಣೆಕಟ್ಟು ಅತ್ಯಾಕರ್ಷಕವಾಗಿದ್ದು ಪಿಕ್ನಿಕ್ ಗೆ ಸೂಕ್ತ ಪ್ರದೇಶವಾಗಿದೆ, ಇದು ಬೋಕಾರೋ ಕೈಗಾರಿಕೆ ನೀರು ಸರಬರಾಜು ಮಾಡುತ್ತದೆ, ಬೋಕಾರೋ ಇಸ್ಪಾಟ್ ಪುಸ್ತಕಾಲಾಯ - ಪ್ರಶಾಂತ ಲೈಬ್ರೆರಿ, ಜವಹರ್ ಲಾಲ್ ನೆಹ್ರೂ ಜೀವಶಾಸ್ತ್ರ ಪಾರ್ಕ್, ಪುಪುಂಕಿ ಆಶ್ರಮ, ನಗರ ಕೇಂದ್ರ - ಜನನಿಬಿಡ ಮಾರುಕಟ್ಟೆ ಪ್ರದೇಶ, ರಾಮ್ ಮಂದಿರ ಸಿಟಿ ಪಾರ್ಕ್, ಬೋಕಾರೋ ಉಷ್ಣ ವಿದ್ಯುತ್ ಸ್ಥಾವರ ಮುಂತಾದವು.

ಬೋಕಾರೊ ಪ್ರಸಿದ್ಧವಾಗಿದೆ

ಬೋಕಾರೊ ಹವಾಮಾನ

ಉತ್ತಮ ಸಮಯ ಬೋಕಾರೊ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬೋಕಾರೊ

  • ರಸ್ತೆಯ ಮೂಲಕ
    ಬೋಕಾರೊ ಪ್ರಮುಖ ನಗರಗಳು ಹಾಗು ಪಟ್ಟಣಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬೋಕಾರೊ ಪ್ರಮುಖ ನಗರಗಳು ಹಾಗು ಪಟ್ಟಣಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಂಚಿಯಲ್ಲಿರುವ ವಿಮಾನ ನಿಲ್ದಾಣವು ಬೋಕಾರೊಗೆ ಹತ್ತಿರದಲ್ಲಿದೆ (120 ಕಿ.ಮೀ).
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat