ಮುಂಗೇರ್ ಪ್ರವಾಸೋದ್ಯಮ: ಚೇತೋಹಾರಿ ಪ್ರವಾಸದ ಅನುಭವ

ಮುಂಗೇರ್ ನಗರವು ಬಿಹಾರದ ಆಕರ್ಷಣೀಯ ನಗರಗಳಲ್ಲಿ ಒಂದು. ಪ್ರವಾಸಿಗರಿಗೆ ಮುದ ನೀಡುವ ವಿಷಯದಲ್ಲಿ ಮುಂಗೇರ್ ನಗರ ಮುಂಚೂಣಿಯಲ್ಲಿದೆ. ಈ ನಗರಕ್ಕೆ ಐತಿಹಾಸಿಕ ಮಹತ್ವವಿದ್ದು ಇದು ಕಾಸಿಂ ಅಲಿ ಖಾನ್ನ ಆಳ್ವಿಕೆಯ ಕಾಲ ಅಂದರೆ 1762ರಲ್ಲಿ ಬಂಗಾಳದ ರಾಜಧಾನಿಯಾಗಿತ್ತು. ಈ ನಗರವು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಮುಂಗೇರ್ ಪಟ್ಟಣದಲ್ಲಿ ಬಂದೂಕುಗಳನ್ನು ತಯಾರಿಸಲಾಗಿತ್ತು. 1962ರ ಭಾರತ-ಚೀನಾ ಯುದ್ಧ ಸಂದರ್ಭದಲ್ಲಿ ಕೂಡ ಮುಂಗೇರು ಬಂದೂಕು ಕಾರ್ಖಾನೆಯು ಮಹತ್ವದ ಪಾತ್ರವನ್ನು ವಹಿಸಿತ್ತು. ಮುಂಗೇರು ನಗರವು ಗಂಗಾ ತೀರದಲ್ಲಿದ್ದು ಬೆಟ್ಟ ಶ್ರೇಣಿಗಳು ಇದರ ಸಮೀಪದಲ್ಲಿದೆ. ಇದು ನಗರದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿದೆ.

ಇಲ್ಲಿ ನೋಡಬೇಕಾದ ಮುಖ್ಯ ಸ್ಥಳಗಳೆಂದರೆ ಮುಂಗೇರ್ ಕೋಟೆ, ಬಿಹಾರದ ಯೋಗಶಾಲೆ, ಸೀತಾ ಕುಂಡ, ಖಗರ್ಪುಂರ ಸರೋವರ, ಪೀರ್ ಷಾ ನಫಾ ಗೋಪುರ, ಭೀಮಬಂದ್ ವನ್ಯಜೀವಿಧಾಮ, ಶ್ರೀ ಕೃಷ್ಣ ವಾಟಿಕ, ಶಾ ಮುಸ್ತಾಫ ಸೂಫಿ ಸಮಾಧಿ ಮತ್ತು ದಿಲ್ವಾಪುರ್. ಮುಂಗೇರ್ ನಗರದಲ್ಲಿ ಹಲವು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿವೆ. ಇವುಗಳನ್ನು ನೋಡುವುದೇ ವಿಶಿಷ್ಟ ಅನುಭವ.

ಮುಂಗೇರು ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆ ಇಲ್ಲಿರುವ ಕೋಟೆ. ಇದನ್ನು ಮಧ್ಯಕಾಲೀನ ಯುಗದಲ್ಲಿ ಕಟ್ಟಲಾಗಿದೆ. ಬಿಹಾರದ ಯೋಗಶಾಲೆಯು ಪ್ರಪಂಚದಾದ್ಯಂತ ಯೋಗ ತರಬೇತಿಗೆ ಹೆಸರುವಾಸಿಯಾಗಿದೆ. ಈ ಶಾಲೆಯ ಪ್ರಮುಖ ಧ್ಯೇಯ ಯೋಗದ ಮೂಲಕ ಮನುಷ್ಯನ ವ್ಯಕ್ತಿತ್ವವನ್ನು ವಿಕಸನಗೊಳಿಸುವುದು. ಸೀತಾಕುಂಡ, ಖಗರ್ಪುರ ಸರೋವರ, ಪೀರ್ ಷಾ ನಫಾ ಗೋಪುರ, ರಾಮೇಶ್ವರ ಕುಂಡ ಇತ್ಯಾದಿಗಳು ಇಲ್ಲಿನ ಧಾರ್ಮಿಕ ಸ್ಥಳಗಳು.

ಮುಂಗೇರಿನಲ್ಲಿ ಬೇಸಗೆಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರುತ್ತದೆ ಮತ್ತು ಚಳಿಗಾಲದಲ್ಲಿ ಚಳಿ ಹೆಚ್ಚಿರುತ್ತದೆ. ಮತ್ತು ಮಳೆಗಾಲದಲ್ಲಿ ಒಳ್ಳೆಯ ಮಳೆಯಾಗುತ್ತದೆ. ಆದ್ದರಿಂದ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಸೆಪ್ಟಂಬರ್-ಮಾರ್ಚ್.

ಮುಂಗೇರು ನಗರವು ಕಬ್ಬಿಣದ ಕೆಲಸಗಳು ಮತ್ತು ಕಬ್ಬಿಣದಿಂದ ತಯಾರಾಗುವ ವಸ್ತುಗಳು ಮತ್ತು ಕಬ್ಬಿಣದಿಂದ ತಯಾರಾಗುವ ಕಲಾತ್ಮಕ ವಸ್ತುಗಳ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದಿದೆ. ಇಲ್ಲಿನ ಪ್ರಮುಖ ಹಬ್ಬಗಳೆಂದರೆ ಛತ್ ಪೂಜಾ, ದುರ್ಗಾ ಪೂಜಾ, ರಕ್ಷಾ ಬಂಧನ ಮತ್ತು ಕ್ರಿಸ್ಮಸ್. ಈ ನಗರವು ಉತ್ತಮ ರಸ್ತೆ, ರೈಲು ಮತ್ತು ವಾಯು ಸೌಲಭ್ಯವನ್ನು ಹೊಂದಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ಮುಂಗೇರಿಗೆ ಭೇಟಿ ನೀಡಲು ಸೂಕ್ತ ಸಮಯ ಸೆಪ್ಟಂಬರ್-ಮಾರ್ಚ್

ಹೋಗುವುದು ಹೇಗೆ?

ಮುಂಗೇರು ಪಟ್ಟಣಕ್ಕೆ ಉತ್ತಮ ರಸ್ತೆ ಮತ್ತು ರೈಲು ಸೌಲಭ್ಯವಿದೆ.

 

Please Wait while comments are loading...