Search
 • Follow NativePlanet
Share
ಮುಖಪುಟ » ಸ್ಥಳಗಳು» ಬೋಧಗಯಾ

ಬೋಧಗಯಾ : ಧಾರ್ಮಿಕ ಪರಂಪರೆಯ ಕಲ್ಪನಾ ವಿಹಾರ

34

ಬಿಹಾರದಲ್ಲಿರುವ ಬೋಧಗಯಾವನ್ನು ಐತಿಹಾಸಿಕವಾಗಿ ಉರುವೆಲಾ, ಸಂಬೋಧಿ, ವಜ್ರಾಸನ ಅಥವಾ ಮಹಾಬೋಧಿ ಎಂದು ಕರೆಯಲಾಗುತ್ತಿತ್ತು. ಬೋಧಗಯಾ ಪ್ರವಾಸೋದ್ಯಮ ತನ್ನಲ್ಲಿರುವ ವಾಸುಶಿಲ್ಪದ ಶ್ರೇಷ್ಟತೆ ಹಾಗೂ ಆಧ್ಯಾತ್ಮಿಕ ಅನುಭವವನ್ನು ಪ್ರವಾಸಿಗರಿಗೆ ನೀಡುವುದರಲ್ಲಿ ಎರಡು ಮಾತಿಲ್ಲ. ಬಿಹಾರದಲ್ಲಿ ಸಾಕಷ್ಟು ಸಂಖ್ಯೆಯ ಬೌದ್ಧ ಮಂದಿರಗಳನ್ನು ಕಾಣಬಹುದಾದರೂ ವಿಹಾರ ದಿಂದ ಈ ಮಂದಿರಗಳು ಎಂಬ ಹೆಸರು ಪಡೆಯಲಾಗಿದೆ.

ಬೌದ್ಧ ಧರ್ಮ ಮತ್ತು ಧಾರ್ಮಿಕತೆಯ ಕಾರಣದಿಂದಾಗಿ ಬೋಧಗಯಾದ ಶ್ರೇಷ್ಟತೆಯನ್ನು ಅಲ್ಲಗಳೆಯುವಂತಿಲ್ಲ. ಬೋಧಗಯಾ ಅತೀ ಹೆಚ್ಚು ಮಹತ್ವದ ಮತ್ತು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದ ಹಲವು ಬೌದ್ಧ ಹಾಗೂ ಇತರ ಧರ್ಮಗಳ ಕೇಂದ್ರಗಳನ್ನು ಹೊಂದಿದೆ. ಬೌದ್ಧ ಧರ್ಮದ ಪ್ರವಾಸಿ ಕೇಂದ್ರಗಳಲ್ಲಿ ಬೋಧಗಯಾ ಬಹಳ ಪ್ರಮುಖ ಸ್ಥಾನವನ್ನು ಹೊಂದಿದೆ. ಇದಕ್ಕೆ ಬೇರೆ ಸ್ಥಳಗಳ ನೆರವಿಲ್ಲದೆ ತನ್ನಲ್ಲೇ ತಾನು ಒಂದು ಪ್ರಮುಖ ಸ್ಥಳವಾಗಿದೆ ಹಾಗೂ ಶಾಂತಿಯುತವಾದ ಮತ್ತು ಆಕರ್ಷಕ ತಾಣವೂ ಹೌದು.

ಇಲ್ಲಿನ ವಾತಾವರಣದಲ್ಲಿರುವ ಶಾಂತತೆಯನ್ನು ಯಾರೊಬ್ಬ ಪ್ರವಾಸಿಯೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಬೌದ್ಧ ಧರ್ಮದ ಗ್ರಂಥಗಳ ಪ್ರಕಾರ ಗೌತಮ ಬುದ್ಧನು ಫಾಗ್ಲು ನದಿಯ ದಡದಲ್ಲಿ ಬಂದು ಬೋಧಿ ವೃಕ್ಷದ ಕೆಳಗೆ ಕುಳಿತುಕೊಂಡು ತನ್ನ ಧ್ಯಾನವನ್ನು ಆರಂಭಿಸಿದ್ದನು. ಇದೇ ಸ್ಥಳದಲ್ಲಿ ಬುದ್ಧನು ತನ್ನ ಧ್ಯಾನವನ್ನು ಕೊನೆಗೊಳಿಸಿದ್ದನು ಹಾಗೂ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದನು. ಹಾಗೂ ಜ್ಞಾನೋದಯವನ್ನು  ಹೊಂದಿದ್ದನು.

ಇವುಗಳನ್ನು ಇತಿಹಾಸದಾದ್ಯಂತ ನಾವು ಕಾಣಬಹುದಾಗಿದೆ ಹಾಗೂ ಚೀನಾದ ಪ್ರವಾಸಿಗಳಾದ ಪಾಹಿಯಾನ್ ಮತ್ತು ಹ್ಯೂಯೆತ್ಸಾಂಗನ ಬರಹಗಳಲ್ಲೂ ಈ ಸ್ಥಳದ ಉಲ್ಲೇಖವನ್ನು ಕಾಣಬಹುದಾಗಿದೆ. ಈ ಸ್ಥಳವು ಬೌದ್ಧ ಧರ್ಮೀಯರಿಗೆ ಬಹಳ ವರ್ಷಗಳ ಕಾಲ ಮಹತ್ವದ ಸ್ಥಳವಾಗಿತ್ತು ಆದರೆ ನಂತರ ಟರ್ಕೀಯರ ಆಕ್ರಮಣದ ನಂತರ ಈ ಮಹತ್ವವನ್ನು ಕಳೆದುಕೊಂಡಿತು. ಈ ಎಲ್ಲಾ ಪ್ರಾಮುಖ್ಯತೆಯ ಕಾರಣದಿಂದಾಗಿ ಪ್ರವಾಸಿಗಳು ಈ ಸ್ಥಳವನ್ನು ಕಡೆಗಣಿಸದಂತೆ ಮಾಡಿದೆ.

ಬುದ್ಧನ ಮರಣದ ಹಲವು ವರ್ಷಗಳ ನಂತರ ಮೌರ್ಯರ ಚಕ್ರವರ್ತಿ ಆಶೋಕ ಇಲ್ಲಿ ಹಲವು ವಿಹಾರಗಳನ್ನು ನಿರ್ಮಿಸಿದ್ದನು. ಬರಾಬರ್ ಗುಹೆಯ ವಾಸ್ತುಶಿಲ್ಪದ ಶ್ರೇಷ್ಟತೆಗೆ ಯಾವುದೂ ಸರಿಸಾಟಿಯಲ್ಲ. ಬರಾಬರ್ ಬೆಟ್ಟದಲ್ಲಿರುವ ಈ ಗುಹೆಗಳು ಎರಡನೇ ಎತ್ತರವಾದ ಗುಹೆಗಳಾಗಿವೆ ಹಾಗೂ ಆ ಕಾಲದ ಶ್ರೇಷ್ಟ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಬೋಧಗಯಾ ಪ್ರವಾಸೋದ್ಯಮದ ಇನ್ನಿತರ ಪ್ರಮುಖ ಸ್ಥಳಗಳೆಂದರೆ ಮಹಾಬೋಧಿ ದೇವಾಲಯ, ವಿಷ್ಣುಪಾದ ದೇವಾಲಯ, ಬೋಧಿ ವೃಕ್ಷ, ದುಂಗೇಶ್ವರಿ ಗುಹಾ ದೇವಾಲಯ ಹಾಗೂ ಜಾಮಾ ಮಸೀದಿ.

ಈ ಎಲ್ಲಾ ಪ್ರಸಿದ್ಧ ಸ್ಥಳಗಳನ್ನು ಹೊರತು ಪಡಿಸಿ ಬೋಧಗಯಾ ಪ್ರವಾಸೋದ್ಯಮದ ಇನ್ನಿತರ ವಿಶೇಷತೆಗಳೆಂದರೆ 80 ಅಡಿ ಎತ್ತರದ ಬುದ್ಧನ ವಿಗ್ರಹ, ಕಮಲ ಸರೋವರ, ಬುದ್ಧ ಕುಂಡ, ಚೈನಾ ದೇವಾಲಯ ಮತ್ತು ವಿಹಾರಗಳು, ಬರ್ಮಾದ ದೇವಾಲಯ, ಭೂತಾನ್ ನ ಬೌದ್ಧ ವಿಹಾರಗಳು, ರಾಜಯಾತನ, ಬ್ರಹ್ಮ ಯೋನಿ, ಅಂತರ ರಾಷ್ಟ್ರೀಯ ಬೌದ್ಧ ಗೃಹಗಳು ಹಾಗೂ ಜಪಾನೀ ದೇವಾಲಯಗಳು, ಥಾಯಿ ದೇವಾಲಯಗಳು ಹಾಗೂ ವಿಹಾರಗಳು, ಟಿಬೇಟಿಯನ್ ಮಂದಿರಗಳು ಹಾಗೂ ಪುರಾತತ್ವ ವಸ್ತು ಸಂಗ್ರಹಾಲಯ. ಈ ಎಲ್ಲಾ ಆಕರ್ಷಣೆಗಳು ಬೋಧಗಯಾದ ಬೆಳವಣಿಗೆ ಬಗ್ಗೆ ಕತೆಗಳನ್ನು ಹೇಳುತ್ತವೆ. ಜಗತ್ತಿನ ನಾನಾ ಭಾಗದ ಬೌದ್ಧ ಭಿಕ್ಷುಗಳು ಇಲ್ಲಿ ಬಂದು ಧ್ಯಾನಾಸಕ್ತರಾಗಿ ಬೌದ್ಧ ಧರ್ಮಗ್ರಂಥಗಳನ್ನು ಪಠಿಸುವುದನ್ನು ನಾವಿಲ್ಲಿ ಕಾಣಬಹುದು.

ಬುದ್ಧನ ಜನ್ಮ ದಿನಾಚರಣೆ ಬುದ್ಧ ಜಯಂತಿ ಇಲ್ಲಿ ಅತೀ ಹೆಚ್ಚು ಸಂಭ್ರಮದಿಂದ ಆಚರಿಸಲಾಗುವ ಹಬ್ಬವಾಗಿದೆ. ಇದನ್ನು ಮೇ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಇನ್ನಿತರ ಪ್ರಮುಖ ಉತ್ಸವವಗಳೆಂದರೆ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಬುದ್ಧ ಮಹೋತ್ಸವ ಇದಲ್ಲದೆ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಇಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆ ಮಾಡುವಂತೆ ಮಾಡಲು ಮೊನಾಲಮ್ ಕೆನ್ಮೋ ಮತ್ತು ನ್ಯಿಂಗ್ಮಾ ಮೊನಾಲಮ್ ಕೆನ್ಮೋ ಎಂಬ ಧಾರ್ಮಿಕ ಪ್ರಾರ್ಥನೆಯ ಉತ್ಸವಗಳನ್ನು ಆಚರಿಸಲಾಗುತ್ತದೆ.

ಹೊಸ ವರ್ಷಕ್ಕೆ ಹಿಂದಿನ ಹಲವು ದಿನಗಳಲ್ಲಿ ಇಲ್ಲಿ ಮಹಾ ಕಾಲ ಪೂಜೆಯನ್ನು ಆಯೋಜಿಸಲಾಗುತ್ತದೆ. ಈ ಪೂಜೆಯನ್ನು ಪಾವಿತ್ರ್ಯತೆ ಪಡೆಯುವ ಉದ್ದೇಶದಿಂದ ನಡೆಸಲಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ ತನಕ ಅವಧಿಯು ಬೋಧಗಯಾದ ಭೇಟಿಗೆ ಅತ್ಯುತ್ತಮವಾದ ಅವಧಿ. ಇದನ್ನು ಬಿಟ್ಟು ಉತ್ಸವಗಳನ್ನು ಕಾಣುವುದು ಮುಖ್ಯ ಉದ್ದೇಶವಾದಲ್ಲಿ ಆಯಾ ಉತ್ಸವಗಳು ಮತ್ತು ಹಬ್ಬಗಳು ಇರುವ ಸಮಯದಲ್ಲಿ ಪ್ರವಾಸಿಗಳು ತಮ್ಮ  ಭೇಟಿಯನ್ನು ಯೋಜಿಸಬಹುದಾಗಿದೆ.

ಬೋಧಗಯಾವು ರಸ್ತೆ ಮಾರ್ಗದ ಮೂಲಕ ಸಮರ್ಪಕವಾಗಿ ಸಂಪರ್ಕಿಸುತ್ತದೆ ಹಾಗೂ ಗಯಾದಲ್ಲಿ ರೈಲ್ವೆ ಮತ್ತು ವಿಮಾನ ನಿಲ್ದಾಣಗಳೂ ಇವೆ. ಬುದ್ಧನು ತನ್ನ ಉಪದೇಶಗಳನ್ನು ನೀಡಿದ ರಾಜ್ ಗಿರ್ ಪ್ರದೇಶವು ಇಲ್ಲಿಂದ ಕೇವಲ 75 ಕಿ.ಮೀಗಳ ದೂರದಲ್ಲಿದೆ ಹಾಗೂ ಬೋಧಗಾಯಾದಿಂದ ಸುಲಭವಾಗಿ ತಲುಪಬಹುದಾದ ಕಾರಣ ಇಲ್ಲಿಗೂ ಭೇಟಿ ನೀಡಬಹುದಾಗಿದೆ. ಗ್ರಿಧಕೂಟ ಎಂಬ ಬೌದ್ಧ ಧರ್ಮೀಯರಿಗೆ ಪ್ರಮುಖವಾದ ಸ್ಥಳವೂ ರಾಜ್ ಗಿರ್ ಗೆ ಹೋಗುವ ದಾರಿಯಲ್ಲೇ ಇದೆ. ಇಲ್ಲಿಂದ ಕಾಣುವ ಕೆಳಗಿನ ಪ್ರದೇಶಗಳ ಮನಮೋಹಕ ನೋಟ ನಿಮ್ಮನ್ನು ಬೆರಗಾಗಿಸದೇ ಇರದು. ಇಲ್ಲಿ ಬಂದಾಗ ರಾಜ್ ಗಿರ್ ಬೆಟ್ಟಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿ ಬಿಸಿನೀರ್ರಿನ ಚಿಲುಮೆ ಇದ್ದು ಇದು ಔಷಧೀಯ ಮೌಲ್ಯಗಳನ್ನು ಹೊಂದಿದೆ ಎಂದು ನಂಬಲಾಗಿದೆ ಹಾಗೂ ಇಲ್ಲಿ ಪುರುಷ ಮತ್ತು ಮಹಿಳೆಯರಿಗೆ ವಿಶೇಷವಾದ ಸ್ನಾನ ಗೃಹಗಳಿವೆ.

ಹೀಗೆ ಬೋಧಗಯಾ ಪ್ರವಾಸ ನಿಮ್ಮನ್ನು ಬೆರಗುಗೊಳಿಸುವ ಹಾಗೂ ಸಂತೋಷಗೊಳಿಸುವ ಹತ್ತು ಹಲವು ವಿಷಯಗಳನ್ನು ಹೊಂದಿದೆ. ಇಲ್ಲಿನ ಪ್ರಶಾಂತ ವಾತಾವರಣ ಮತ್ತು ಇತಿಹಾಸ ಪ್ರಸಿದ್ಧ ವಿಷಯಗಳು ನಿಮ್ಮನ್ನು ಬೆರಗಾಗಿಸದೇ ಬಿಡವು.

ಭೇಟಿ ನೀಡಲು ಅತ್ಯುತ್ತಮವಾದ ಅವಧಿ

ಅಕ್ಟೋಬರ್ ನಿಂದ ಮಾರ್ಚ್ ತನಕದ ಅವಧಿ ಇಲ್ಲಿನ ಭೇಟಿಗೆ ಅತ್ಯುತ್ತಮವಾದ ಅವಧಿಯಾಗಿದೆ. ಸಣ್ಣ ಅವಧಿಯ ದೇವಾಲಯಗಳ ಭೇಟಿಗೆ ನಿಮ್ಮ ಪ್ರವಾಸ ಸೀಮಿತವಾಗಿದ್ದಲ್ಲಿ ಜೂನ್ ನಿಂದ ಸೆಪ್ಟೆಂಬರ್ ತನಕದ ಅವಧಿಯೂ ಉತ್ತಮವಾಗಿದೆ.

ಬೋಧಗಯಾ ಪ್ರಸಿದ್ಧವಾಗಿದೆ

ಬೋಧಗಯಾ ಹವಾಮಾನ

ಉತ್ತಮ ಸಮಯ ಬೋಧಗಯಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬೋಧಗಯಾ

 • ರಸ್ತೆಯ ಮೂಲಕ
  ಫಲ್ಗು ನದಿಯ ಮೇಲಿರುವ ಸುಜಾತಾ ಸೇತುವೆಯ ಬಳಿಯಲ್ಲಿ ನಗರದ ಮುಖ್ಯ ಬಸ್ ನಿಲ್ದಾಣವಿದೆ. ಸಮೀಪದ ಸಂಪರ್ಕ ನಗರ ಎಂದರೆ ಗಯಾ ಇದನ್ನು ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಗಯಾ, ಪಟ್ನಾ ಮತ್ತಿತರ ಪ್ರಮುಖ ನಗರಗಳಿಂದ ಇಲ್ಲಿಗೆ ನಿರಂತರ ಬಸ್ ಸೌಲಭ್ಯ ಇದೆ. ಗಯಾ ದಿಂದ ಬೋಧಗಯಾ ನಗರದ ನಡುವೆ ಕೇವಲ 12 ಕಿ.ಮೀ ಗಳ ಅಂತರವಿದೆ ಹಾಗೂ ಇದನ್ನು ರಾ.ಹೆ. 83 ರ ಮೂಲಕ ಕ್ರಮಿಸಬಹುದಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಲ್ಲಿಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವೆಂದರೆ ಗಯಾ ಮತ್ತು ಇಲ್ಲಿಗೆ ಪ್ರಮುಖ ನಗರಗಳಿಂದ ರೈಲ್ವೆ ಸಂಚಾರವಿದೆ. ಬುದ್ಧ ಪರಿಕ್ರಮ ರೈಲು ವಿಶೇಷವಾಗಿ ಬೌದ್ಧ ಧರ್ಮೀಯರಿಗಾಗಿ ಇದ್ದು ಎಲ್ಲಾ ಪ್ರಮುಖ ಬೌದ್ಧ ಧರ್ಮದ ತಾಣಗಳನ್ನು ಸಂಪರ್ಕಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬೋಧಗಯಾ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುವ ಗಯಾ ವಿಮಾನ ನಿಲ್ದಾಣ 7 ಕಿ.ಮೀ ದೂರದಲ್ಲಿದೆ ಇದು ಗಯಾ ರೈಲ್ವೆ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿದೆ. ಇದು ಬಿಹಾರದಲ್ಲಿರುವ ಏಕಮಾತ್ರ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಏಷ್ಯಾದ ದೇಶಗಳಾದ ಚೀನಾ, ಜಪಾನ್, ಶ್ರೀಲಂಕಾ ಮತ್ತಿತರ ದೇಶಗಳನ್ನು ಹಾಗೂ ಭಾರತದ ಎಲ್ಲಾ ಪ್ರಮುಖ ನಗರಗಳನ್ನು ಸಮರ್ಪಕವಾಗಿ ಸಂಪರ್ಕಿಸುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Jun,Sun
Return On
21 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jun,Sun
Check Out
21 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jun,Sun
Return On
21 Jun,Mon