Search
 • Follow NativePlanet
Share
ಮುಖಪುಟ » ಸ್ಥಳಗಳು» ಬಿಗುಸರಾಯ್

ಬಿಗುಸರಾಯ್ : ಪುರಾತನ ರಾಜತಾಣ

11

ಭಾರತವು ಅಪಾರ ಪ್ರಾಕೃತಿಕ ಸಂಪತ್ತನ್ನು ಹೊಂದಿರುವಂತಹ ರಾಜ್ಯ. ದೇಶದ ಪ್ರತಿಯೊಂದು ರಾಜ್ಯಗಳು ಕೂಡಾ ಭಿನ್ನವಿಭಿನ್ನ ಸಂಸ್ಕೃತಿ, ಆಚಾರ ವಿಚಾರ, ಪ್ರಾಕೃತಿಕ ತಾಣಗಳನ್ನು ಹೊಂದಿದೆ. ಹೀಗೆ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಬಿಹಾರ್ ಕೂಡಾ ಒಂದು. ಬಿಹಾರ್‌ನಲ್ಲಿರುವ ಪ್ರವಾಸಿ ನಗರಗಳ ಪೈಕಿ ಅಗ್ರಸ್ಥಾನದಲ್ಲಿರುವುದು ’ಬಿಗುಸರಾಯ್ ನಗರ’.

’ಬಿಗುಸರಾಯ್’ ಭಾರತದ ಪ್ರಮುಖ ರಾಜ್ಯಗಳ ಪೈಕಿ ಪ್ರಮುಖವಾದ ಬಿಹಾರ್‌ನ ಪ್ರಮುಖ ಜಿಲ್ಲಾಕೇಂದ್ರ. ಉತ್ತರ ಭಾರತದಲ್ಲಿ ಹರಿಯುತ್ತಿರುವಂತಹ ಪವಿತ್ರ ನದಿಯಾದ ಗಂಗೆಯ ಉತ್ತರತಟದಲ್ಲಿ ಬಿಗುಸರಾಯ್ ನಗರವು ತಲೆಯೆತ್ತಿ ನಿಂತಿದೆ. ಈ ನಗರದ ಹೆಸರು ಬಹಳ ವಿಶಿಷ್ಟವಾದುದು. ಅಂದಹಾಗೆ ಈ ನಗರದ ಹೆಸರು ಎರಡು ಅರ್ಥಗಳನ್ನು ಒಳಗೊಂಡ ಪದಗಳ ಸಂಯುಕ್ತರೂಪ.

ಸ್ಥಳೀಯ ಭಾಷೆಯ ಬೇಗಮ್ ಮತ್ತು ಸರಾಯ್ ಎಂಬ ಎರಡು ಪದಗಳ ಮಿಶ್ರರೂಪವೇ ಈ ಬಿಗುಸರಾಯ್. ಇಲ್ಲಿ ಬೇಗಮ್ ಅಂದರೆ ರಾಣಿ ಅನ್ನುವ ಅರ್ಥ ಮತ್ತು ಸರಾಯ್ ಎಂದರೆ ಒಂದು ತಾಣ. ಇದಕ್ಕೂ ಒಂದು ಹಿನ್ನೆಲೆಯಿದೆ. ಸ್ಥಳೀಯ ಆಸ್ಥಾನದ ರಾಣಿಯೋರ್ವರು ಈ ಪ್ರದೇಶದಲ್ಲಿ ಗಂಗಾನದಿಯ ತಟದಲ್ಲಿರುವ  ಪವಿತ್ರ ತಾಣ ’ಸಿಮಾರಿಯಾ ಘಾಟ್’ನಲ್ಲಿ ಸುಮಾರು ಒಂದು ತಿಂಗಳ ಕಾಲ ತಂಗಿದ್ದರಂತೆ. ಆ ಬಳಿಕ ಇದು ರಾಣಿಯ ತಾಣ ಅಂದರೆ ರಾಣಿಯ ಏಕಾಂತ ತಾಣ ಎಂಬ ಪರ್ಯಾಯ ಹೆಸರನ್ನುಪಡೆದುಕೊಂಡಿತು. ಅದು ಕಾಲ ಕ್ರಮೇಣ ಬಿಗುಸರಾಯ್ ಎನ್ನುವ ಸಂಕ್ಷಿಪ್ತ ರೂಪವನ್ನು ಪಡೆದುಕೊಂಡು, ಪ್ರಸ್ತುತ ಅದೇ ಹೆಸರಿನಿಂದ ಕರೆಸಿಕೊಳ್ಳುತ್ತಿದೆ.

ಬಿಗುಸರಾಯ್ ಮುಗರ್ ಜಿಲ್ಲೆಯ ಒಂದು ಭಾಗವಾಗಿದ್ದು, ತನ್ನದೇ ಆದ ಸ್ವಂತಿಕೆಯನ್ನು ಹೊಂದಿದೆ. ಖ್ಯಾತ ಹಿಂದಿ ಕವಿಯಾದ ರಾಷ್ಟ್ರಕವಿ ರಾಮ್‌ಧಾರಿ ಸಿಂಗ್ ಮತ್ತು ಮತ್ತು ಖ್ಯಾತ ಇತಿಹಾಸತಜ್ಞ ರಾಮ್ ಶರಣ್ ಶರ್ಮಾ ಅವರನ್ನು ಪ್ರಪಂಚಕ್ಕೆ ನೀಡಿದ ಹಿರಿಮೆ ಈ ಬಿಗುಸರಾಯ್ ನಗರದ್ದಾಗಿದೆ. ಇದು ಪಾರಂಪರಿಕವಾಗಿ ಕಮ್ಯುನಿಸ್ಟ್‌ವಾದದ ತವರಾಗಿದ್ದು, ಈ ನಗರವು ಮೊದಲು ’ ಬಿಹಾರದ ಲೆನಿನ್‌ಗ್ರಾಂಡ್’ ಎಂದೇ ಪ್ರಖ್ಯಾತಿಯನ್ನು ಪಡೆದಿತ್ತು.

ಬಿಗುಸರಾಯ್ ಪಟ್ಟಣವು ಇಷ್ಟೊಂದು ಮುಂದುವರೆದಿದೆ ಎಂದಮೇಲೆ ಇಲ್ಲಿ ಸಾಕಷ್ಟು ಪ್ರವಾಸಿತಾಣಗಳು ಕೂಡಾ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಹೌದು, ಇಲ್ಲಿ ಹಲವಾರು ಪ್ರವಾಸಿತಾಣಗಳಿದ್ದು, ಪ್ರವಾಸಿಗರಿಗೆ ಮುದ ನೀಡುತ್ತಿವೆ. ಇಲ್ಲಿರುವ ಪ್ರಮುಖ ಪ್ರವಾಸಿತಾಣಗಳೆಂದರೆ ಕನ್ವಾರ್ ಸರೋವರದ ಪಕ್ಷಿಧಾಮ ಮತ್ತು ನೌಲಾ ಘರ್.

ಹವಾಮಾನ

ಗಂಗಾನದಿಯ ತಟದಲ್ಲಿದ್ದರೂ ಇಲ್ಲಿಯ ಯಾವುದೇ ರೀತಿಯಲ್ಲೂ ಹವಾಮಾನ ವೈಪರೀತ್ಯಗಳು ಕಂಡುಬರುವುದಿಲ್ಲ. ಕ್ರಮಬದ್ಧವಾಗಿ ಋತುಗಳು ಬದಲಾಗುತ್ತಾ ಇರುತ್ತವೆ.

ತಲುಪುವ ಬಗೆ

ಬಿಗುಸರಾಯ್ ನಗರಕ್ಕೆ ತೆರಳಲು ಕಷ್ಟವೇನೂ ಇಲ್ಲ. ಬಿಹಾರದ ಎಲ್ಲಾ ನಗರಗಳಿಗೂ ಬಿಗುಸರಾಯ್‌ನಿಂದ ಸಂಪರ್ಕವಿದೆ. ಹೀಗಾಗಿ ರೈಲು ಮತ್ತು ರಸ್ತೆಮಾರ್ಗದ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದು.

ಬಿಗುಸರಾಯ್ ಪ್ರಸಿದ್ಧವಾಗಿದೆ

ಬಿಗುಸರಾಯ್ ಹವಾಮಾನ

ಬಿಗುಸರಾಯ್
36oC / 97oF
 • Sunny
 • Wind: SSW 9 km/h

ಉತ್ತಮ ಸಮಯ ಬಿಗುಸರಾಯ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಿಗುಸರಾಯ್

 • ರಸ್ತೆಯ ಮೂಲಕ
  ರಸ್ತೆ ಮಾರ್ಗದ ಮೂಲಕ ಬಿಗುಸರಾಯ್‌ಗೆ ತೆರಳುವುದಾದರೆ ರಾಷ್ಟ್ರೀಯ ಹೆದ್ದಾರಿಗಳಾದ ೨೮ ಮತ್ತು 31 ಗಳು ಅಲ್ಲಿಗೆ ನೇರ ಸಂಪರ್ಕ ಕಲ್ಪಿಸುತ್ತವೆ. ಜಿಲ್ಲೆಯ ಒಳರಸ್ತೆಗಳು ಕೂಡಾ ಪ್ರಮುಖ ರಸ್ತೆಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೈಲುಯಾನದ ಮೂಲಕ ಇಲ್ಲಿಗೆ ತೆರಳಬಯಸುವ ಪ್ರವಾಸಿಗರು ನವದೆಹಲಿ-ಗುವಾಹಟಿ ರೈಲು ಬಿಗುಸರಾಯ್‌ನ ಮೂಲಕವೇ ಹಾದುಹೋಗುತ್ತದೆ. ಬರೌನಿ ರೈಲ್ವೇ ನಿಲ್ದಾಣವು ಬಿಗುಸರಾಯ್‌ಗೆ ಅತ್ಯಂತ ಹತ್ತಿರದ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಾದ ದೆಹಲಿ, ಗುವಾಹಟಿ, ಅಮೃತ್‌ಸರ್, ವಾರಣಾಸಿ, ಲಕ್ನೋ, ಮುಂಬೈ, ಚೆನ್ನೈಗೆ ನೇರ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬಿಗುಸರಾಯ್ ನಗರದಲ್ಲಿ ಯಾವುದೇ ವಿಮಾನ ನಿಲ್ದಾಣ ಇಲ್ಲದೇ ಇರುವುದು ವಿಮಾನದ ಮೂಲಕ ಇಲ್ಲಿಗೆ ಬರಲು ಬಯಸುವ ಪ್ರವಾಸಿಗರಿಗೆ ಸ್ವಲ್ಪ ತೊಡಕನ್ನುಂಟು ಮಾಡುತ್ತದೆ. ಒಟ್ಟಿನಲ್ಲಿ ಉತ್ತರ ಭಾರತದ ಪ್ರವಾಸಿ ತಾಣಗಳ ಪೈಕಿ ಒಂದಾದ ಈ ಬಿಗುಸರಾಯ್ ನಗರವು ಪ್ರವಾಸಿಗರಿಗೆ ಮುದ ನೀಡುವಂತಹ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಉತ್ತರ ಭಾರತದ ಕಡೆ ಪ್ರವಾಸ ಬಯಸುವ ಪ್ರವಾಸಿಗರು ಇತ್ತ ಕಡೆ ಕೂಡಾ ಗಮನಹರಿಸಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Begusarai
  36 OC
  97 OF
  UV Index: 9
  Sunny
 • Tomorrow
  Begusarai
  29 OC
  84 OF
  UV Index: 9
  Sunny
 • Day After
  Begusarai
  30 OC
  86 OF
  UV Index: 9
  Sunny