Search
  • Follow NativePlanet
Share

ನಾವಡಾ - ಕೌತುಕದ ಮನೆ / ಕುತೂಹಲಗಳ ಔತಣಕೂಟ

11

ನಾವಡಾ, ದಕ್ಷಿಣ ಬಿಹಾರದಲ್ಲಿರುವ ಜಿಲ್ಲೆ. ಮೊದಲು ಇದು ಗಯಾ ಜಿಲ್ಲೆಯ ಭಾಗವಾಗಿತ್ತು. ಬೃಹದ್ರಥ, ಮೌರ್ಯ, ಕನ್ಹ, ಹಾಗು ಗುಪ್ತರಂತಹ ಘಟಾನುಘಟಿಗಳಿಂದ ಆಳಿಸಿಕೊಂಡ ಪ್ರಾಂತ್ಯವಿದು. ಪಾಲರ ಕಾಲದಲ್ಲಂತೂ ಹಿಂದೂಗಳ ಧಾರ್ಮಿಕ ಕೇಂದ್ರವಾಗಿ ಮೆರೆದಿದೆ ಈ ನವಾಡ.

ನಾವಡಾ ಪ್ರವಾಸ ಎಂದರೆ, ಕಣ್ತುಂಬುವ ನಿಸರ್ಗದ ಮಡಿಲಲ್ಲಿ ನೂರಾರು ದೇಗುಲಗಳನ್ನು ಒಳಗೊಂಡಿರುವ ಅಪೂರ್ವ ತಾಣದ ಪ್ರವಾಸ ಎಂದು ಹೇಳಬಹುದು. ಇನ್ನು, ಇಲ್ಲಿನ ನೋಡತಕ್ಕ ಸ್ಥಳಗಳ ಬಗ್ಗೆ ಹೇಳಬೇಕೆಂದರೆ, ಶೋಭನಾಥ, ಸಂಕಟ ಮೋಚನ ಹಾಗು ಗುಣವ ಜಲ್ ಮಂದಿರಗಳು ಪ್ರಮುಖವಾದವುಗಳು.

ಗುಣವ ದೇವಾಲಯ, ಪವನಪುರಿ - ತಿರ್ಥಂಕರ (ಮಹಾವೀರನು ನಿರ್ವಾಣ ಹೊಂದಿದ ಸ್ಥಳ), ಜಲ್ ಮಂದಿರಗಳಂತಹ ಪವಿತ್ರ ಸ್ಥಳಗಳಿರುವದರಿಂದ ನವಾಡವು ಜೈನರಿಗೂ ಪವಿತ್ರ ತಾಣವಾಗಿದೆ.

ಕಾಕೊಲತ್ ಬೆಟ್ಟಗಳಲ್ಲಿ ಹುಟ್ಟಿ ಧುಮುಕುವ  ಕಾಕೊಲತ್ ಜಲಪಾತವು ನವಾಡದ ಇನ್ನೊಂದು ಆಕರ್ಷಣೆ. ಭಗವಾನ ಕೃಷ್ಣನು ತನ್ನ ರಾಣಿಯರೊಂದಿಗೆ ಈ ಜಲಪಾತಕ್ಕೆ ಸ್ನಾನಕ್ಕೆ ತೆರಳುತ್ತಿದ್ದನು ಎಂದು ಇಲ್ಲಿನ ಜನಪದರ ನಂಬಿಕೆ. ನವಾಡ ವಸ್ತುಸಂಗ್ರಹಾಲಯ, ತನ್ನ ಚಿತ್ರ ಸದೃಶ ದೃಷ್ಯಾವಳಿಗಳಿಗೆ ಹೆಸರಾದ ರಜೌಲಿ, ತೆಲೈಯ ಆಣೇಕಟ್ತಿರುವ ರಾನಿಘಡ..... ಇಂತಹ ಅದ್ಭುತ ತಾಣವನ್ನು ಒಳಗೊಂಡಿರುವ ನವಾಡ ಪ್ರವಾಸವನ್ನು ಯಾರು ತಾನೇ ತಪ್ಪಿಸಿಕೊಳ್ಳ ಬಯಸುವರು?

ನಾವಡಾದ ವಾಯುಗುಣದಲ್ಲಿ ಎಲ್ಲವೂ ತುಸು ಹೆಚ್ಚಾಗೇ ಇರುತ್ತವೆ. ಸುಡುವ ಬೇಸಿಗೆ, ಕೊರೆಯುವ ಚಳಿ ಹಾಗು ಸದಾ ಸುರಿಯುವ ಮಳೆ. ಇದು ನಾವಡಾದ ವಾಯು ಚಿತ್ರಣ. ಸೆಪ್ಟಂಬರ ಮತ್ತು ಮಾರ್ಚ ತಿಂಗಳ ನಡುವಿನ ದಿನಗಳು ನವಾಡ ಪ್ರವಾಸಕ್ಕೆ ಉತ್ತಮ ಕಾಲವೆಂದು ಪರಿಗಣಿಸಲಾಗಿದೆ. ಆದರೆ ಕಾಕೊಲತ್ ಬೆಟ್ಟದ ಬೆಡಗನ್ನು ಸವಿಯುವ ಉದ್ದೇಶದಿಂದ ಜನರು ಬೇಸಿಗೆಯಲ್ಲೂ ನವಾಡ ಪ್ರವಾಸ ಕೈಗೊಳ್ಳುವರು.  

ಹಬ್ಬಗಳು

ನಾವಡಾದಲ್ಲಿ ನೀವು ಹಲವಾರ ಉತ್ಸವಗಳನ್ನು ಕಣ್ತುಂಬಿಕೊಳ್ಳಬಹುದು. ಮಹಾವೀರ ಜಯಂತಿಯ ಅಂಗವಾಗಿ ನಡೆಯುವ ಗಾಲಾ ಉತ್ಸವ, ಜನ್ಮಾಷ್ಠಮಿ ಹಾಗು ಛಟ್ ಪೂಜಾಗಳು ಅವುಗಳಲ್ಲಿ ಕೆಲವು.

ನಾವಡಾವು ಸುಸಜ್ಜಿತ ರಸ್ತೆ ಹಾಗು ರೈಲು ಸಂಪರ್ಕವನ್ನು ಹೊಂದಿದ್ದು, ಪ್ರವಾಸಿಗರು ತಮ್ಮ  ಅನುಕೂಲದಂತೆ ರಸ್ತೆ-ರೈಲು ಸಂಚಾರ ಕೈಗೊಳ್ಳಬಹುದು.

ನಾವಡಾ ಪ್ರಸಿದ್ಧವಾಗಿದೆ

ನಾವಡಾ ಹವಾಮಾನ

ಉತ್ತಮ ಸಮಯ ನಾವಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಾವಡಾ

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 31, ನಾವಡಾದಿಂದ ಹಾದುಹೋಗುತ್ತಿದ್ದು, ರಾಂಚಿ , ಜಮ್ಶೆಡ್ಪುರ , ಬೊಕಾರೊ , ಧನಬಾದ್ , ಪಾಟ್ನಾ ಮತ್ತು ಬಿಹಾರ್ ಶರೀಫ್ ನಂತಹ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ . ಈ ನಗರಗಳಿಂದ ಪ್ರತಿ ಅರ್ಧ ಗಂಟೆಯಲ್ಲಿ , ಒಂದು ಡೀಲಕ್ಸ್ ಬಸ್ ನಾವಡಾಕ್ಕೆ ಹೋಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗಯಾ ಮತ್ತು ಕಿಯೊಲ್ ಗಳನ್ನು ಸಂಪರ್ಕಿಸುವ ರೈಲುಮಾರ್ಗವು ನಾವಡಾ ಮಾರ್ಗವಾಗಿ ಹೋಗುತ್ತವೆ. ಗಯಾ - ಕಿಯೊಲ್ ಮಾರ್ಗದಲ್ಲಿ ಅನೇಕ ಎಕ್ಸ್ಪ್ರೆಸ್ ರೈಲುಗಳು ಮತ್ತು ಸ್ಥಳೀಯ ರೈಲುಗಳು ಚಲಿಸುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    There is no air port available in ನಾವಡಾ
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun