Search
  • Follow NativePlanet
Share
ಮುಖಪುಟ » ಸ್ಥಳಗಳು » ನಾವಡಾ » ಆಕರ್ಷಣೆಗಳು » ಕಾಕೊಲತ್ ಜಲಧಾರೆ

ಕಾಕೊಲತ್ ಜಲಧಾರೆ, ನಾವಡಾ

1

ಕಾಕೊಲತ್ ಜಲಪಾತವು ಭಾರತದಲ್ಲಿನ ನೊಡಲೇಬೇಕಾದ ಮೈನವಿರೇಳಿಸುವಂತಹ ಜಲಪಾತಗಳಲ್ಲೊಂದು. ಹಸಿರು ರಾಶಿಯ ನಡುವೆ ಮೊಸರು ಚೆಲ್ಲುತ್ತಿರುವಂತೆ ಭಾಸವಾಗುವ ಈ ಜಲಧಾರೆ ಪ್ರವಾಸಿಗರ ಆಕರ್ಷಣಾ ಕೇಂದ್ರವಾಗಿದೆ. ಈ ಜಲಪಾತವು ಕಾಕೊಲತ್ ಬೆಟ್ಟಗಳಿಂದ ಸುಮಾರು 160 ಅಡಿ ಎತ್ತರದಿಂದ  ಧುಮುಕುತ್ತದೆ. ತನ್ನ ಪೂರ್ವ ಕರ್ಮಗಳಿಂದ ಶಾಪಕ್ಕೊಳಗಾಗಿದ್ದ ರಾಜನೊಬ್ಬ ಸರ್ಪವಾಗಿ ಮಾರ್ಪಟ್ಟಿದ್ದು ಅವನು ಈ ಜಲಪಾತದಲ್ಲೇ ವಾಸಿಸುತ್ತಿದ್ದನೆಂಬ ಪೌರಾಣಿಕ ಹಿನ್ನೆಲೆಯೂ ಈ ಜಲಧಾರೆಗಿದೆ.

ಕಾಕೊಲತ್ ಜಲಪಾತದ ನೀರು ವರ್ಷದ ಎಲ್ಲಾ ತಿಂಗಳೂ ತಂಪಾಗಿರುತ್ತದೆ. ನಾವಡಾದಂತಹ ಚುರುಕು ಬೇಸಿಗೆಯುಳ್ಳ ದಿನಗಳಲೂ ಈ ನೀರು ತಂಪಾಗಿರುತ್ತದೆ ಎಂದರೆ ವಿಚಿತ್ರವೆನಿಸುವುದು. ಆದರೂ ಇದು ಸತ್ಯ. ನಿಮ್ಮ ಬೇಸಿಗೆಯ ಬಿಸಿ ದಿನಗಳನ್ನು ತಂಪಾಗಿಸಬಲ್ಲ ಜಲಧಾರೆಯೊಂದಿಗೆ ರಜೆ ಕಳೆಯುವುದು ತುಂಬಾ ಮಜವಾಗಿರುತ್ತದೆ. ಅಲ್ಲವೇ?

ಪಾಂಡವರು ಬೇಟಿನೀಡಿದ್ದ ಈ ಜಲಪಾತದ ತಳವು ಸ್ವಾಭಾವಿಕವಾಗೇ ಬುಟ್ಟಿಯಾಕಾರವಾಗಿದೆ. ಸ್ಥಳಿಯರಿಗಾಗಲೀ ಅಥವಾ ಪ್ರವಾಸಿಗರಿಗಾಗಲಿ ಈ ತಾಣವು ಒಂದು ಅದ್ಭುತ ವಿಹಾರಿತಾಣವೆಂಬುದರಲ್ಲಿ ಎರಡುಮಾತಿಲ್ಲ. ಅಷ್ಟೆ ಅಲ್ಲದೇ ಅನೇಕರು, ಛಟ್ ಪೂಜಾ ಅಥವಾ ಬೈಸಾಕಿ ಸಂಕ್ರಾಂತಿಯ ಆಚರಣೆಯನ್ನೂ  ಇಲ್ಲಿ ಮಾಡುವರು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed