ಮಧುಬನಿ : ಬಣ್ಣ ಬಣ್ಣಗಳಲ್ಲಿ ಅಡಗಿದೆ ಜೀವನ ಸಾರ

ಮಧುಬನಿಯ ಹೆಸರನ್ನು ಕೇಳಿದ ಕೂಡಲೆ ಮಧುಬನಿ ಕಲೆಯಿಂದ ಮೂಡಿದ ಬಣ್ಣ ಬಣ್ಣದ ಚಿತ್ರಗಳು ಕಣ್ಮುಂದೆ ಬರುತ್ತವೆ. ಈ ಕಲೆಗಾಗಿಯೇ ದರ್ಬಾಂಗ ವಿಭಾಗದ ಮಧುಬನಿ ಗ್ರಾಮವು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ.

ಮಧುಬನಿಯಲ್ಲಿ ಜೈನಗರ್, ಸೌರತ್, ಕಪಿಲೇಶ್ವರ್ ಸ್ಥಾನ್, ಭವಾನಿಪುರ್, ಜಂಜಃರ್ ಪುರ್ ಮತ್ತು ಫುಲ್ಲಹಾರ್ ಗಳು ಪ್ರಸಿದ್ಧ ಯಾತ್ರಾಸ್ಥಳಗಳಾಗಿವೆ.

ಮಧುಬನಿಯ ಮೂಲವು 1972ರಲ್ಲಿ ದರ್ಬಂಗ ಜಿಲ್ಲೆಯು ಉದಯವಾದಾಗಿನಿಂದ ದೊರೆಯುತ್ತದೆ. ಹಲವಾರು ಸಾಹಿತ್ಯ ಪ್ರತಿಭೆಗಳು ಇಲ್ಲಿ ಜನ್ಮ ತಾಳಿದ್ದಾರೆ. ನಿಜ ಹೇಳ ಬೇಕೆಂದರೆ ಮಧುಬನಿಯು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಎರಡನೆ ನಗರವಾಗಿದೆ.  ಮಧುಬನಿ ಎಂಬ ಪದವು ಮಧು ಎಂದರೆ ಸಿಹಿ ಮತ್ತು ವಾಣಿ/ಬನಿ ಎಂದರೆ ಧ್ವನಿ ಎಂಬ ಎರಡು ಪದಗಳಿಂದ ಉಂಟಾಗಿದೆ. ಇಲ್ಲಿನ ಜನರಲ್ಲಿ ಮಧುರವಾದ ಕಂಠವಿರುವುದು ಇದಕ್ಕೆ ಕಾರಣವಿರಬಹುದು. ಇಲ್ಲಿ ಮಾತನಾಡುವ ಸ್ಥಳೀಯ ಭಾಷೆಯನ್ನು ಮಿಥಿಲಾ ಎಂದು ಕರೆಯುತ್ತಾರೆ. ಆದರೂ ಇಲ್ಲಿ ಹಿಂದಿ, ಇಂಗ್ಲೀಷ್ ಮತ್ತು ಉರ್ದು ಭಾಷೆಗಳನ್ನು ಮಾತನಾಡುತ್ತಾರೆ. ಈ ಸ್ಥಳವು ಸಮುದ್ರ ಮಟ್ಟದಿಂದ ಆರೆಂಟು ಕಿ.ಮಿಗಳಷ್ಟು ಎತ್ತರದಲ್ಲಿದೆ. ಪ್ರಾಚ್ಯವಸ್ತುಗಳ ಆಗರ ಮತ್ತು ಧಾರ್ಮಿಕ ಕೇಂದ್ರಗಳ ಶ್ರೀಮಂತಿಕೆಯನ್ನು ನಾವು ಮಧುಬನಿಯಲ್ಲಿ ಕಾಣಬಹುದು.

ಮಧುಬನಿಗೆ ಪ್ರವಾಸಿಗರು ವರ್ಷಪೂರ್ತಿ ಆಗಮಿಸುತ್ತಿರುತ್ತಾರೆ. ಇಲ್ಲಿಗೆ ಭೇಟಿ ನೀದಿದಾಗ ಪ್ರವಾಸಿಗರು ಮಧ್ಯಕಾಲೀನ ಯುಗದ ಪಳೆಯುಳಿಕೆಗಳನ್ನು ವೀಕ್ಷಿಸಬಹುದು. ಮಧುಬನಿಯ ಆರ್ಥಿಕತೆಯು ಇತ್ತೀಚೆಗೆ ದಿನೇ ದಿನೇ ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ. ಶಾಲೆಗೆ ಹೋಗುವ ಗಂಡು- ಹೆಣ್ಣುಗಳ ಸಂಖ್ಯೆಯಲ್ಲಿ ಸಹ ತೀವ್ರ ಏರಿಕೆ ಕಂಡುಬಂದಿದೆ. ಮಧುಬನಿಯ ಹವಾಮಾನವು ಸಮಶೀತೋಷ್ಣವಲಯದ ಗುಣವನ್ನು ಹೊಂದಿದೆ. ಮಧುಬನಿಯು ಆಹಾರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿಗೆ ಭೇಟಿ ನೀಡಿದಾಗ ನೀವು ಇಲ್ಲಿನ ಸಿಹಿನೀರು ಕೊಳದ ಮೀನುಗಳ ಮತ್ತು ಮಖಾನವನ್ನು ಸವಿಯಲೇ ಬೇಕು. ಛಾತ್ ಇಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬವಾಗಿದೆ.

ಮಗ್ಗ ಮತ್ತು ನೇಯುವಿಕೆಯು ಮಿಥಿಲಾದ ಪ್ರಮುಖ ಕೆಲಸಗಳಾಗಿವೆ. ಇಲ್ಲಿ ತಯಾರಾಗುವ ಕರಕುಶಲ ವಸ್ತುಗಳಿಗೆ ದೇಶದೆಲ್ಲೆಡೆ ಬೇಡಿಕೆಯಿದೆ. ಇದರ ಜೊತೆಗೆ ಇಲ್ಲಿನ ಕೈಮಗ್ಗದ ಉತ್ಪನ್ನಗಳಿಗು ಸಹ ಈ ಊರು ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ಮಧುಬನಿಯು ಪ್ರಾಚ್ಯ ವಸ್ತುಗಳ ಭಂಡಾರವನ್ನು ಹೊಂದಿದೆ.

ಮಧುಬನಿ ವರ್ಣಚಿತ್ರವನ್ನು ತರಕಾರಿಗಳ ಬಣ್ಣದಿಂದ ರಚಿಸಲಾಗುತ್ತದೆ. ಇದಕ್ಕೆ ದೀಪದ ಕಪ್ಪು ಮತ್ತು ಕ್ಯಾನ್ವಸ್ ಅಥವಾ ಕೆಲವೊಮ್ಮೆ ಪೇಪರುಗಳನ್ನು ಬಳಸಲಾಗುತ್ತದೆ. ಮಧುಬನಿ ಲೋಕ್‍ಗೀತ್ ಸಹ ಈ ಪ್ರಾಂತ್ಯದಲ್ಲಿ ಭಾರೀ ಖ್ಯತಿಯನ್ನು ಪಡೆದಿದೆ. ಮಧುಬನಿಯಲ್ಲಿರುವ ಪ್ರವಾಸಿಗರ ಸ್ನೇಹಿ ಸ್ಥಳಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿನ ಪ್ರವಾಸಿ ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೆ ಬೇಕು.ಭಗವತಿ ಮತ್ತು ಉಗರ್ ನಾಥ್ ದೇವಾಲಯಗಳು ಇಲ್ಲಿ ಭೇಟಿ ನೀಡಲೆ ಬೇಕಾದ ಮಂದಿರಗಳಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಮಧುಬನಿಯು ಅತ್ಯಂತ ಪ್ರಸಿದ್ಧ ಯಾತ್ರಾಸ್ಥಳವಾಗಿದೆ.

ತಲುಪುವುದು ಹೇಗೆ

ಮಧುಬನಿಗೆ ತಲುಪಲು ಹಲವಾರು ಮಾರ್ಗಗಳಿವೆ. ಮಧುಬನಿಗೆ ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ತಲುಪಬಹುದು. ಇದರಲ್ಲಿ ಯಾವುದರಲ್ಲಿ ಇಲ್ಲಿಗೆ ತಲುಪಬೇಕೆಂಬುದು ಅವರವರ ಆರ್ಥಿಕ ಅನುಕೂಲಗಳಿಗೆ ಸಂಬಂಧಪಟ್ಟಿರುತ್ತದೆ.

ಭೇಟಿ ನೀಡಲು ಅತ್ಯುತ್ತಮ ಅವಧಿ

ಮಧುಬನಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳ ನಡುವಿನ ಅವಧಿಯು ಅತ್ಯುತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ಆರ್ದ್ರತೆಯು ಕಡಿಮೆಯಾಗಿರುತ್ತದೆ, ಹಾಗು ಸ್ಥಳ ವೀಕ್ಷಣೆ ಮಾಡಲು ಆಹ್ಲಾದಕರವಾದ ವಾತಾವರಣ ಇಲ್ಲಿರುತ್ತದೆ.

Please Wait while comments are loading...