Search
  • Follow NativePlanet
Share
ಮುಖಪುಟ » ಸ್ಥಳಗಳು » ಮಧುಬನಿ » ಹವಾಮಾನ

ಮಧುಬನಿ ಹವಾಮಾನ

ಮಧುಬನಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳ ನಡುವಿನ ಅವಧಿಯು ಅತ್ಯುತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ಆರ್ದ್ರತೆಯು ಕಡಿಮೆಯಾಗಿರುತ್ತದೆ, ಹಾಗು ಸ್ಥಳ ವೀಕ್ಷಣೆ ಮಾಡಲು ಆಹ್ಲಾದಕರವಾದ ವಾತಾವರಣ ಇಲ್ಲಿರುತ್ತದೆ.

ಬೇಸಿಗೆಗಾಲ

ಮಧುಬನಿಯಲ್ಲಿ ಮಾರ್ಚ್ ನಿಂದ ಆರಂಭವಾಗಿ ಮೇ ತಿಂಗಳಿನವರೆಗೆ ಬೇಸಿಗೆ ಇರುತ್ತದೆ. ಈ ಮೂರು ತಿಂಗಳುಗಳಲ್ಲಿ ಇಲ್ಲಿನ ಉಷ್ಣಾಂಶವು 35 ಡಿಗ್ರಿಯಿಂದ 45 ಡಿಗ್ರಿ ಸೆಲ್ಶಿಯಸ್‍ವರೆಗೆ ಇರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಇಲ್ಲಿ ವಿಪರೀತವಾದ ಮಳೆ ಬೀಳುತ್ತದೆ. ಮಧುಬನಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳ ನಡುವಿನ ಕಾಲವು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಮಳೆಯು ಕಡಿಮೆಯಾಗಿರುತ್ತದೆ ಮತ್ತು ಆರ್ದ್ರತೆಯು ಸಹ ಹೆಚ್ಚಾಗಿರುವುದಿಲ್ಲ. ಹಾಗಾಗಿ ಇಲ್ಲಿಗೆ ಭೇಟಿ ನೀಡಲು ಇದೇ ಸರಿಯಾದ ಸಮಯವಾಗಿರುತ್ತದೆ.

ಚಳಿಗಾಲ

ಚಳಿಗಾಲವು ಮಧುಬನಿಯಲ್ಲಿ ಜನವರಿಯಿಂದ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು 5 ರಿಂದ 10 ಡಿಗ್ರಿ ಸೆಲ್ಶಿಯಸ್‍ವರೆಗೆ ಇರುತ್ತದೆ. ಮಧುಬನಿಗೆ ಭೇಟಿ ನೀಡಲು ಚಳಿಗಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಆದರೆ ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವವರು ಚಳಿ ತಡೆಯಲು ಅವಶ್ಯಕವಾಗಿರುವ ಉಣ್ಣೆ ಬಟ್ಟೆಗಳನ್ನು ತರುವುದು ಉತ್ತಮ.