ಮೊತಿಹಾರಿ: ರಜೆಯ ಮೋಜು!

ಮೊತಿಹಾರಿಯು ಬಿಹಾರ ರಾಜ್ಯದಲ್ಲಿದೆ. ಇದು ಯಾತ್ರಾರ್ಥಿಗಳು ಮತ್ತು ಪ್ರವಾಸ ಪ್ರಿಯರ ನೆಚ್ಚನ ತಾಣ. ಮೊತಿಹಾರಿಯು ಪಟ್ನಾದಿಂದ 120 ಕಿಮೀ ದೂರದಲ್ಲಿದೆ. ಮೊತಿಹಾರಿ ಪ್ರವಾಸೋದ್ಯಮವು ತನ್ನಲ್ಲಿನ ಐತಿಹಾಸಿಕ ಮಹತ್ವದ ಸ್ಥಳಗಳಿಗಾಗಿ ಹೆಸರುವಾಸಿಯಾಗಿದೆ. ಮೊತಿಹಾರಿ ಜಿಲ್ಲೆಯಲ್ಲಿಯೇ ಮಹಾತ್ಮ ಗಾಂಧಿಯವರು ಮೊದಲಬಾರಿಗೆ ಬ್ರಿಟೀಷರ ಆಳ್ವಿಕೆಯ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿದರು. ಈ ಪ್ರದೇಶದ ಐತಿಹಾಸಿಕ ಮಹತ್ವದ ಕಾರಣದಿಂದಾಗಿಯೇ ಇದು ಸಂದರ್ಶಿಸಲೇಬೇಕಾದ ಪ್ರವಾಸಿ ತಾಣವಾಗಿ ಉಳಿದಿದೆ.

ಮೊತಿಹಾರಿಯಲ್ಲಿ ಶಾಲೆಯನ್ನು ತೆರೆಯಲು ಸ್ಥಳೀಯರಿಗೆ ನೆರವು ನೀಡುವುದರೊಂದಿಗೆ ಮಹಾತ್ಮ ಗಾಂಧಿಯವರು ಇಲ್ಲಿ ಶಿಕ್ಷಣದ ಬೀಜಗಳನ್ನು ಬಿತ್ತಲು ಕಾರಣರಾದರು. ಇಲ್ಲಿ ಬುದ್ಧ ಸ್ತೂಪವೊಂದಿದೆ. ಹಾಗಾಗಿ ಇಲ್ಲಿಗೆ ಬುದ್ಧ ಪ್ರವಾಸಿಗರು ವರ್ಷ ಪೂರಾ ಭೇಟಿ ನೀಡುತ್ತಾರೆ. ಇದು 104 ಅಡಿ ಎತ್ತರದ ಸ್ತೂಪ. ಇದನ್ನು ಮೊತಿಹಾರಿ ಸ್ತೂಪ ಎಂದು ಕರೆಯುತ್ತಾರೆ. ಹಲವರ ನಂಬಿಕೆಯ ಪ್ರಕಾರ ಈಗಿರುವ ಸ್ತೂಪವು ಹಿಂದೆ ಇದ್ದ ಇನ್ನೂ ಎತ್ತರದ ಸ್ತೂಪದ ಪಳೆಯುಳಿಕೆ.

ಪ್ರಸಿದ್ಧ ಲೇಖಕ ಜಾರ್ಜ್ ಆರ್ವೆಲ್ ಹುಟ್ಟಿದ್ದು ಮೋತಿಹಾರಿಯಲ್ಲಿಯೇ. ಇಲ್ಲಿಗೆ ಬಂದವರು ಜಾರ್ಜ್ ಆರ್ವೆಲ್ಲನ ಸ್ಮಾರಕಕ್ಕೆ ಭೇಟಿ ನಿಡಲೇಬೇಕು. ಮಹಾತ್ಮ ಗಾಂಧಿ ಸಂಗ್ರಹಾಲಯ ಮತ್ತು ಕಲ್ಲಿನ ಸ್ತಂಭ ಇಲ್ಲಿನ ಪ್ರವಾಸಿ ಆಕರ್ಷಣೆಗಳಲ್ಲಿ ಸೇರಿವೆ.

ಮೊತಿಹಾರಿಯಲ್ಲಿ ಹಲವು ಸಣ್ಣಕೈಗಾರಿಕೆಗಳಿವೆ. ಕಾಗದ, ಸಕ್ಕರೆ ಮುಂತಾದ ಕಾರ್ಖಾನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮೊತಿಹಾರಿಯಲ್ಲಿ ಬಿಹಾರದಲ್ಲೇ ದೊಡ್ಡದಾದ ಸಕ್ಕರೆ ಕಾರ್ಖಾನೆಯಿದೆ. ಮೊತಿಹಾರಿಯು ಉತ್ತಮ ರಸ್ತೆ ಮತ್ತು ರೈಲು ಸಾರಿಗೆ ಸೌಲಭ್ಯವನ್ನು ಹೊಂದಿದೆ. ಮೊತಿಹಾರಿಯು ಎಲ್ಲ ಮೆಟ್ರೋಪಾಲಿಟನ್ ನಗರಗಳು ಮತ್ತು ರಾಜಧಾನಿಗಳೊಂದಿಗೆ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿ ಶಿಕ್ಷಣ ಸಂಸ್ಥೆಗಳಿವೆ, ಕೈಗಾರಿಕೆಗಳಿವೆ, ಐತಿಹಾಸಿಕ ಸ್ಥಳಗಳಿವೆ.

ಗಾಂಧಿ ಸಂಗ್ರಹಾಲಯ, ಜೀಲ್, ಗಾಂಧಿ ಮೈದಾನ ಇವು ಮತ್ತು ಸುಂದರ ಭೂಪ್ರದೇಶ ಮತ್ತು ಹಿಮಾಲಯದ ತಪ್ಪಲು ಮೋತಿಹಾರಿಯನ್ನು ಪ್ರಮುಖ ಪ್ರವಾಸಿ ತಾಣವಾಗಿಸಿದೆ. ಮೊತಿಹಾರಿಯು ಲಿಚಿ ಮತ್ತು ಸಿಹಿ ಆಲೂಗಡ್ಡೆಗಳಿಗಾಗಿ ಪ್ರಸಿದ್ಧವಾದುದು. ಮೊತಿಹಾರಿಯಲ್ಲಿ ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಿರುತ್ತದೆ ಮತ್ತು ಚಳಿಗಾಲದಲ್ಲಿ ತೀವ್ರ ಚಳಿಯಿರುತ್ತದೆ. ಮಳೆಗಾಲಕ್ಕೂ ಮುನ್ನ ಮೊತಿಹಾರಿಗೆ ಭೇಟಿ ನೀಡುವುದು ಉತ್ತಮ.

ಹವಾಮಾನ:

ಮೊತಿಹಾರಿಯಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಧಗೆಯಿರುತ್ತದೆ ಮತ್ತು ಚಳಿಗಾಲದಲ್ಲಿ ಹೆಚ್ಚಿನ ಚಳಿಯಿರುತ್ತದೆ. ಮೊತಿಹಾರಿಗೆ ಹೋಗಲಿಚ್ಛಿಸುವವರು ಮಳೆಗಾಲದ ನಂತರ ಹೋಗುವುದು ಉತ್ತಮ.

ಪ್ರವಾಸಕ್ಕೆ ಸೂಕ್ತ ಸಮಯ:

ಮಳೆಗಾಲದ ನಂತರ ಮೊತಿಹಾರಿಗೆ ಭೇಟಿ ನೀಡುವುದು ಸೂಕ್ತ. ಈ ಸಮಯದಲ್ಲಿ ಪ್ರಯಾಣ ಮತ್ತು ಸುತ್ತಾಟಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಮಳೆಗಾಲದ ನಂತರ ಸುತ್ತಲ ಪ್ರಕೃತಿ ಇನ್ನಷ್ಟು ಸೌಂದರ್ಯದಿಂದ ನಳನಳಿಸುತ್ತದೆ.

Please Wait while comments are loading...