ದರ್ಭಂಗಾ : ಬಂಗಾಳದ ಪ್ರವೇಶದ್ವಾರ!

ದರ್ಭಂಗಾ ಒಂದು ಸುಂದರ ಪ್ರವಾಸಿ ತಾಣವಾಗಿದ್ದು ಬಿಹಾರ ರಾಜ್ಯದಲ್ಲಿದೆ. ಇದು ಉತ್ತರ ಬಿಹಾರದ ಮುಖ್ಯ ನಗರಗಳಲ್ಲೊಂದು. ಮಿಥಿಲಾಂಚಲದ ಹೃದಯಭಾಗದಲ್ಲಿದೆ. ದರ್ಭಂಗಾ ನೇಪಾಳದಿಂದ ಕೇವಲ 50 ಕಿಮೀ ದೂರದಲ್ಲಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಿದೆ.

ದರ್ಭಂಗಾ ವನ್ನು ಬಿಹಾರದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ದರ್ಭಂಗಾವು ಶತಮಾನಗಳಿಂದಲೂ ಸಂಗೀತ, ಜಾನಪದ ಕಲೆ ಮತ್ತು ಸಂಪ್ರದಾಯಗಳಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಹಲವು ವಾಸ್ತುಶಿಲ್ಪ ಕಲೆಯ ಅದ್ಭುತ ತಾಣಗಳು ಮತ್ತು ಧಾರ್ಮಿಕ ಸ್ಥಳಗಳೂ ಇವೆ. ದರ್ಭಂಗಾ ಕೋಟೆ, ಶ್ಯಾಮ ಕಾಳಿ ದೇವಾಲಯ, ಮಖದೂಮ್ ಬಾಬಾನ ಮಜ಼ರ್, ಪವಿತ್ರ ರೊಸರಿ ಚರ್ಚ್, ಚಂದ್ರಧಾರಿ ಸಂಗ್ರಹಾಲಯ ಮತ್ತು ಹರಾಹಿ ಕೊಳ ಇಲ್ಲಿನ ಮುಖ್ಯ ಪ್ರವಾಸಿ ತಾಣಗಳು.

ದರ್ಭಂಗಾ ಪ್ರವಾಸೋದ್ಯಮವು ಮುಖ್ಯವಾಗಿ ಸಾಂಪ್ರದಾಯಿಕ ಜಾನಪದ ಕಲೆಗೆ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ಮುಖ್ಯವಾದದ್ದು ಮಿಥಿಲ ಚಿತ್ರಕಲೆ. ಮಿಥಿಲೆಯ ಸಾಂಪ್ರದಾಯಿಕ ಜಾನಪದ ನಾಟಕ ಶೈಲಿ ಕೂಡ ಪ್ರಸಿದ್ಧವಾದದ್ದು. ಇದರಲ್ಲಿ ಮುಖ್ಯವಾದದ್ದು ನೌಟಂಕಿ, ನಟೌ ನಾಚ್ ಮತ್ತು ಸಾಮ ಚಕೆವ, ಮಧುಶ್ರಾವಣಿ (ಹೊಸ ಮದುಮಗಳು). ಜಿಲ್ಲೆಯ ಹಲವು ಭಾಗಗಳಲ್ಲಿ ಹಲ ಬಗೆಯ ಜಾತ್ರೆಗಳನ್ನು ಮತ್ತು ಮೇಳಗಳನ್ನು ಆಯೋಜಿಸಲಾಗುತ್ತದೆ. ಕಾರ್ತಿಕ ಪೂರ್ಣಿಮ ಮೇಳ, ದುಸೆಹರ ಮೇಳ, ಜನ್ಮಾಷ್ಟಮಿ ಮೇಳ ಮತ್ತು ದಿವಾಳಿ ಮೇಳ ಇವುಗಳಲ್ಲಿ ಪ್ರಸಿದ್ಧವಾದದ್ದು.

ದರ್ಭಂಗಾ ಎನ್ನುವ ಹೆಸರು “ದ್ವಾರ-ಭಂಗ” ಎನ್ನುವ ಎರಡು ಪದಗಳು ಸೇರಿ ಆಗಿವೆ. “ದ್ವಾರ” ಎಂದರೆ ಬಾಗಿಲು ಮತ್ತು “ಬಂಗ” ಎಂದರೆ ಬಂಗಾಳ ಎಂದರ್ಥ. ಅಂದರೆ “ಬಂಗಾಳದ ಪ್ರವೇಶದ್ವಾರ” ಎಂದು. ಹಿಂದಿನ ಕಾಲದಲ್ಲಿ ಮಿಥಿಲ ನಗರವೇ ದರ್ಭಂಗಾ ನಗರವಾಗಿತ್ತು. ಗಂಗಾ ನದಿ ಮತ್ತು ಹಿಮಾಲಯದ ಕೆಳ ಶ್ರೇಣಿಗಳಲ್ಲಿರುವ ಈ ಸ್ಥಳವು ಉತ್ತರ ಭಾರತದ ಸಾಂಸ್ಕೃತಿಕ ಕೇಂದ್ರವಾಗಿತ್ತು.

ಹಿಮಾಲಯದಲ್ಲಿ ಹುಟ್ಟುವ ಅಸಂಖ್ಯ ನದಿಗಳು ಈ ಜಿಲ್ಲೆಗೆ ನೀರು ಒದಗಿಸುತ್ತದೆಯಾದರೂ ಅವುಗಳಲ್ಲಿ ನಾಲ್ಕು ಮುಖ್ಯವಾದವು. ದರ್ಭಂಗಾನಲ್ಲಿ ಉಪೋಷ್ಣವಲಯದ ಹವಾಮಾನವನ್ನು ಕಾಣಬಹುದಾಗಿದೆ. ಬೇಸಿಗೆಯಲ್ಲಿ ಹೆಚ್ಚಿನ ಉಷ್ಣತೆ ಮತ್ತು ಸಾಧಾರಣ ಚಳಿಗಾಲವನ್ನು ಕಾಣಬಹುದು. ದರ್ಭಂಗಾ ಪ್ರದೇಶವು ಮಾವಿನ ಹಣ್ಣು ಮೊದಲಾದ ಹಣ್ಣುಗಳಿಗೆ ಪ್ರಸಿದ್ಧವಾಗಿದೆ.

ಹವಾಮಾನ

ಈ ಜಿಲ್ಲೆಯಲ್ಲಿ ಒಣಹವೆ ಮತ್ತು ಉಷ್ಣವಲಯದ ಹವಾಮಾನವನ್ನು ಕಾಣಬಹುದಾಗಿದೆ.

ಪ್ರವಾಸಕ್ಕೆ ತಕ್ಕ ಸಮಯ

ಅಕ್ಟೋಬರ್-ಮಾರ್ಚ್ ವರೆಗಿನ ಚಳಿಗಾಲದ ತಿಂಗಳುಗಳು ಪ್ರವಾಸಕ್ಕೆ ಸೂಕ್ತವಾದದ್ದು.

Please Wait while comments are loading...