Search
  • Follow NativePlanet
Share

ಗಯಾ : ಪವಿತ್ರ ಯಾತ್ರಾ ತೋರಣ

14

ಎಲ್ಲರಿಗೂ ತಿಳಿದಿರುವಂತೆ ಭೌದ್ಧ ಧರ್ಮದ ಸ್ಥಾಪಕನಾದ ಭಗವಾನ ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ಸ್ಥಳವೇ ಈ ಗಯಾ. ಅಂದಿನಿಂದ ಗಯಾ ಮತ್ತು ಬಿಹಾರ ರಾಜ್ಯವು ವಿಶ್ವ ಪ್ರಸಿದ್ಧಿಯನ್ನು ಪಡೆದಿದ್ದು, ಬುದ್ಧರ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದು ಪ್ರಮುಖವಾದ ಸ್ಥಾನವನ್ನು ಪಡೆದಿದೆ.

ಈ ಹಿಂದೆ ಗಯಾ ನಗರವು ಮಗಧ ರಾಜ್ಯದ ಭಾಗವಾಗಿತ್ತು. ಮತ್ತು ದಕ್ಷಿಣ ಪಾಟ್ನಾ ದಿಂದ 100 ಕೀಲೊ ಮೀಟರ ದೂರದಲ್ಲಿತ್ತು. ಇದು ಎಲ್ಲ ಧರ್ಮಗಳ ಮೂಲಕ ಪಾವನಗೊಂಡ ಸ್ಥಳವಾಗಿದೆ. ಗಯಾ ನಗರದ ಪೂರ್ವ, ಉತ್ತರ ಮತ್ತು ದಕ್ಷಿಣ ಮೂರು ಕಡೆ ಸುತ್ತಲೂ ಸಣ್ಣ ಸಸ್ಯಗಳಿಂದ ಕೂಡಿದ ಬೆಟ್ಟಗಳಿದ್ದು, ಅವಗಳ ಹೆಸರು ಇಂತಿವೆ: ಮಂಗಳ ಗೌರಿ, ಶ್ರೀ ರಂಗ - ಸ್ಥಾನ, ರಾಮ ಶೀಲ ಮತ್ತು ಬ್ರಹ್ಮಯೋಹಿನಿ.ಮತ್ತು ಪಶ್ವಿಮ  ಭಾಗದಲ್ಲಿ ಫಲಗು ಎಂಬ ನದಿ ಹರಿಯುತ್ತಿದೆ. ಗಯಾ ನಗರವು ಉತ್ತರದ ದಿಕ್ಕಿನಲ್ಲಿ ಜೆಹನಬಾದ ಎಂಬ ಜಿಲ್ಲೆ, ದಕ್ಷಿಣದಲ್ಲಿ ಜಾರ್ಖಂಡ ರಾಜ್ಯದ ಚಾತ್ರಾ ಎಂಬ ಜಿಲ್ಲೆ ಮತ್ತು ಪೂರ್ವದಲ್ಲಿ ನಾವಡಾ ಜಿಲ್ಲೆ ಮತ್ತು ಪಶ್ಚಿಮದಲ್ಲಿ ಔರಂಗಬಾದ ಎಂಬ ಜಿಲ್ಲೆಗಳಿಂದ ಸುತ್ತುವರೆದಿದೆ.

ಗಯಾ ಪ್ರವಾಸೋದ್ಯಮವು ನಿಮಗೆ ಗಯಾದ ಅಪೂರ್ವ ಧಾರ್ಮಿಕ ತಾಣಗಳ ದರ್ಶನವನ್ನು ಒದಗಿಸುತ್ತದೆ. ಇವುಗಳನ್ನು ನೋಡಿದ ಯಾರೇ ಆಗಲಿ ಮೂಕವಿಸ್ಮಿತ ರಾಗದೇ ಇರಲು ಸಾಧ್ಯವಿಲ್ಲ. ಈ ಸ್ಥಳದ ಪ್ರಶಾಂತತೆ ಮತ್ತು ಶಾಂತತೆಯು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಆನಂದವನ್ನು ಉಂಟು ಮಾಡುತ್ತವೆ. ಮಹಾ ಭೋಧಿ ದೇವಸ್ಥಾನವು ಗಯಾ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ಗಯಾದ ಹೃದಯ ಮತ್ತು ಆತ್ಮ ಎಂದರೂ ತಪ್ಪಿಲ್ಲ.

ಜಗತ್ತಿನಾದ್ಯಂತ ಇರುವ ಭೌದ್ದ ಸಂನ್ಯಾಸಿಗಳು ಇಲ್ಲಿಗೆ ಬಂದು ಬುದ್ಧನ ಕೆತ್ತಿದ ಆಗಾಧವಾದ ಪ್ರತಿಮೆಯ ಕೆಳಗಡೆ ಕುಳಿತು ಧ್ಯಾನ ಮಗ್ನರಾದ ದೃಶ್ಯವನ್ನು ನೋಡುವುದೇ ಒಂದು ಆನಂದ. ಗಯಾದ ಪ್ರವಾಸೋದ್ಯಮವು ಇಲ್ಲಿನ ಬೆಟ್ಟಗಳಾದ ಬ್ರಹ್ಮ ಯೋನಿ, ರಾಮಶೀಲಾ, ಪ್ರೀತಿ ಶೀಲಾ ಮತ್ತು ದೇವ ಬಾರಾಬರ ಗುಹೆಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಜೊತೆಗೆ ಇಲ್ಲಿ ತಯಾರಿಸಲ್ಪಡುವ ಪಾವಪುರಿಯು ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ. ಪವಿತ್ರ ಫಲಗು ನದಿಯ ತೀರದ ಉದ್ದಕ್ಕೂ ಘಾಟ ಮತ್ತು ದೇವಸ್ಥಾನಗಳು ಸಾಲಾಗಿ ಇವೆ. ಇಲ್ಲಿ ಇರುವ ಎಲ್ಲ ಸ್ಥಳಗಳು ಆಧ್ಯಾತ್ಮಿಕ ಉನ್ನತಿಕರಣಕ್ಕಾಗಿ ಸಹಾಯವನ್ನು ಮಾಡುತ್ತವೆ. ಗಯಾ ಪ್ರವಾಸೋದ್ಯಮವು ಧಾರ್ಮಿಕ ಮತ್ತು ವಾಸ್ತುಶಿಲ್ಪ ಅದ್ಭುತಗಳ  ಮೂಲಕ ಅಲಂಕೃತಗೊಂಡಿದೆ. ಉದಾಹರಣೆಗೆ : ಜಾಮಾ ಮಸೀದಿ, ಮಂಗಳ ಗೌರಿ ಮಂದಿರ ಮತ್ತು ವಿಷ್ಣು ಪಾದ ದೇವಸ್ಥಾನ.

ಗಯಾದ ಪ್ರವಾಸೋದ್ಯಮದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಇಲ್ಲಿಯ ಸಾಂಪ್ರದಾಯಿಕ ತಿಂಡಿಗಳು. ತಿನ್ನಲು ಬಲು ರುಚಿಕರ. ಲಿಟ್ಟಿ ಚೋಖಾ, ಪಿಟ್ಟಾ, ಪುವಾ, ಮರುವಾ – ಕಾ – ರೋಟಿ, ಸಟ್ಟು – ಕಾ – ರೋಟಿ ಮುಂತಾದ ರುಚಿಕರ ತಿಂಡಿಗಳನ್ನು ತಿಂದು ಪ್ರವಾಸಿಗರು ಆನಂದಿಸಬಹುದು. ಗಯಾ ನಗರವು ಸಿಹಿ ತಿಂಡಿಗಳಿಗೂ ಪ್ರಸಿದ್ಧಿಯನ್ನು ಪಡೆದಿದೆ. ರಮಣ ರಸ್ತೆ ಮತ್ತು ಟೇಕರಿ ರಸ್ತೆಯಲ್ಲಿ ಸಿಗುವ ತಿಲಕುಟ್, ಕೇಸರಿಯಾ ಪೇಡ ಮತ್ತು ಅಂಸರ ಸಿಹಿ ತಿಂಡಿಗಳು ತುಂಬಾ ಜನಪ್ರಿಯ. ಗಯಾದ ಒಂದು ಪವಿತ್ರ ಹಬ್ಬವಾದ ಗಯಾ ಪಿತೃಪಕ್ಷ ಮೇಳವು ಬುದ್ಧನು ಇಲ್ಲಿ ನೀಡಿದ ಎನ್ನಲಾದ ಪ್ರಥಮ ಪಿಂಡದಾದ ವಿಷಯದೊಂದಿಗೆ ಸಂಬಂಧಿಸಿದೆ.

ಬುದ್ಧ ಜಯಂತಿಯನ್ನು ಪ್ರತಿ ವೈಶಾಖ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ವಿಮಾನ, ರೇಲ್ವೆ ಮತ್ತು ಬಸ್ಸುಗಳ ಮೂಲಕ ಗಯಾವನ್ನು ತಲುಪಬಹುದು. ಇಲ್ಲಿಗೆ ಭೇಟಿ ನೀಡುವ ಯೋಗ್ಯವಾದ ಸಮಯ ಎಂದರೆ ನವಂಬರ ಮತ್ತು ಫೆಬ್ರುವರಿ ತಿಂಗಳುಗಳ ಮಧ್ಯದ ತಿಂಗಳುಗಳು. ಈ ಸಮಯದಲ್ಲಿ ಇರುವ ಹವಾಮಾನವು ಆಹ್ಲಾದಕರವಾಗಿದ್ದು ಪ್ರವಾಸಕ್ಕೆ ಯೋಗ್ಯವಾಗಿರುತ್ತವೆ. ಉಳಿದ ತಿಂಗಳುಗಳಲ್ಲಿ ಅತಿಯಾದ ಉಷ್ಣಾಂಶ, ಸೂರ್ಯನ ಉರಿ ಬಿಸಿಲು ಇಲ್ಲವೇ ಭಾರಿ ಮಳೆ ಇರುತ್ತದೆ. ಗಯಾದಲ್ಲಿರುವ ಪ್ರಮುಖ ಶಾಪಿಂಗ ಸೆಂಟರ ಅಂದರೆ ಜಿ.ಬಿ ರಸ್ತೆ. ಇಲ್ಲಿರುವ ಸ್ವದೇಶಿ ವಸ್ತ್ರಾಲಯ , ಕಲಾ ಮಂದಿರ , ಪ್ಲಾಜಾ ಮತ್ತು ಗ್ಯಾನಿ ಮಾರುಕಟ್ಟೆ ಇಲ್ಲಿನ ಪ್ರಮುಖ ಶಾಪಿಂಗ ಕೇಂದ್ರಗಳಾಗಿವೆ.

ಗಯಾ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ

ಗಯಾ ನಗರಕ್ಕೆ ಹೋಗಲು ಇರುವ ಯೋಗ್ಯವಾದ ಸಮಯ ಎಂದರೆ ಸಪ್ಟಂಬರ. ಈ ತಿಂಗಳಲ್ಲಿ ಗಯಾ ನಗರಕ್ಕೆ ಹೋಗಲು ಯೋಜನೆಯನ್ನು ಹಾಕಿಕೊಂಡರೆ ಒಳ್ಳೆಯದು. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸಿಗರು ಬರಲು ಆರಂಭಿಸುತ್ತಾರೆ. ಜನೇವರಿ ತಿಂಗಳಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಗಯಾ ನಗರಕ್ಕೆ ಭೇಟಿ ನೀಡಲು ಅತ್ಯಂತ ಯೋಗ್ಯವಾದ ಸಮಯ ಎಂದರೆ ನವಂಬರ ಮತ್ತು ಫೆಬ್ರುವರಿ ತಿಂಗಳುಗಳು. ಗಯಾ ನಗರವು ಬುದ್ಧ ಜಯಂತಿಯಂದು ಅಸಂಖ್ಯಾತ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬುದ್ಧ ಜಯಂತಿಯನ್ನು ಸಾಮಾನ್ಯವಾಗಿ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ.

ತಲುಪುವುದು ಹೇಗೆ?

ಗಯಾ ನಗರಕ್ಕೆ ಪ್ರಯಾಣವನ್ನು ವಿಮಾನ, ರೇಲ್ವೆ ಮತ್ತು ಬಸ್ಸುಗಳ ಮೂಲಕ ಕೈಗೊಳ್ಳಬಹುದು.

ಗಯಾ ಪ್ರಸಿದ್ಧವಾಗಿದೆ

ಗಯಾ ಹವಾಮಾನ

ಉತ್ತಮ ಸಮಯ ಗಯಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗಯಾ

  • ರಸ್ತೆಯ ಮೂಲಕ
    ಗ್ರಾಂಡ ಟ್ರಂಕ ರಸ್ತೆಯು ( ರಾಷ್ಟ್ರೀಯ ಹೆದ್ದಾರಿ – 2 ಸುವರ್ಣ ಚತುಷ್ಪಥ ರಸ್ತೆ ಯೋಜನೆ ಅಡಿಯಲ್ಲಿ ಇಲ್ಲಿ ಭಾರಿ ಪುನಶ್ಚೇತನ ಕಾಮಗಾರಿ ನಡೆಯುತ್ತಿದೆ) ಗಯಾ ನಗರದಿಂದ 30 ಕೀಲೊ ಮೀಟರ ದೂರದಲ್ಲಿದೆ. ಆದ್ದರಿಂದ ಗಯಾ ನಗರವು ಕಲ್ಕತ್ತಾ, ವಾರಣಾಸಿ, ಅಲಹಾಬಾದ, ಕಾನಪುರ, ದೆಹಲಿ ಮತ್ತು ಅಮೃತಸರ ನಗರಗಳಿಗೆ ಉತ್ತಮ ರಸ್ತೆ ಸಾರಿಗೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗಯಾ ನಗರದಲ್ಲಿ ರೇಲ್ವೆ ಜಂಕ್ಷನವಿದ್ದು, ಇದು ಮೂರು ಪ್ರಮುಖ ಮಹಾ ನಗರಗಳಾದ ನವದೆಹಲಿ, ಮುಂಬಯಿ ಮತ್ತು ಕೋಲ್ಕತ್ತಾಗಳೊಂದಿಗೆ ಪ್ರಮುಖ ಬ್ರಾಡ ಗೇಜ ಮಾರ್ಗಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಗಯಾ ನಗರದಲ್ಲಿ ನೇರ ತಡೆ ರಹಿತ ರೇಲ್ವೆ ಮಹಾ ಭೋಧಿ ಎಕ್ಸಪ್ರೆಸ್ಸ ಇದ್ದು, ದಿನವೂ ಇದು ನವದೆಹಲಿ ಮತ್ತು ಗಯಾ ಮಾರ್ಗವಾಗಿ ಚಲಿಸುತ್ತದೆ. ಭಾರತದ ಅನೇಕ ಪ್ರಮುಖ ನಗರಗಳಿಗೆ ಗಯಾದಿಂದ ನೇರ ರೇಲ್ವೆ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊನೆಗೆ ನೀವು ಗಯಾ ನಗರಕ್ಕೆ ವಿಮಾನದ ಮೂಲಕ ಪ್ರಯಾಣವನ್ನು ಕೈಗೊಳ್ಳಲು ಬಯಸಿದರೆ ನಿಮಗೆ ಅದರ ಅನುಕೂಲವು ಇಲ್ಲಿ ಉಂಟು. ಗಯಾ ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ಬಿಹಾರ ಮತ್ತು ಜಾರ್ಖಂಡ ರಾಜ್ಯಗಳ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಕೋಲಂಬೊ ಮತ್ತು ಬ್ಯಾಂಕಾಕ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಅಷ್ಟೇ ಅಲ್ಲ ಭಾರತದ ಪ್ರಮುಖ ನಗರಗಳೊಂದಿಗೂ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat